https://youtube.com/shorts/R1kSOjm-2Ck?feature=shared
#ಆಗ್ರಾ_ಪೇಠಾ_ಆನಂದಪುರಂನಲ್ಲಿ.
#ವಿಶ್ವವಿಖ್ಯಾತ_ತಾಜ್_ಮಹಲು_ನೋಡಲು_ಬರುವವರಿಗಾಗಿ_ಸಿಹಿ_ಮಿಟಾಯಿ
#ಆಗ್ರಾದಲ್ಲಿ_ದೊಡ್ಡ_ಪ್ರಮಾಣದಲ್ಲಿ_ಪೇಠಾ_ತಯಾರಾಗುತ್ತೆ
#ಮಲೆನಾಡಿನ_ಬೂದುಗುಂಬಳ_ಸಕ್ಕರೆ_ಸೇರಿದ_ಮಿಟಾಯಿಗೆ_ಪೇಠಾ_ಎಂಬ_ಹೆಸರು.
#ಇವತ್ತು_ನನ್ನ_ಮಗ_ತಯಾರಿಸಿದ_ಪೇಠಾ_ನೋಡಿ.
1973-74 ರಲ್ಲಿ ನಮ್ಮ ಊರಿನ ಜಗದೀಶಣ್ಣ (ಈಗ ಆನಂದಪುರ೦ನ ಬಸ್ ನಿಲ್ದಾಣದ ಎದುರು ಭಾರತ್ ಕೆಫೆ ಹೋಟೆಲ್ ಮಾಲಿಕರು) ದೈಹಿಕ ಶಿಕ್ಷಕರಾಗಿದ್ದ ಶಿಸ್ತಿನ ಸಿಪಾಯಿ ಎಸ್. ಆರ್.ಕೃಷ್ಣಪ್ಪರ ಶಿಷ್ಯರಾಗಿದ್ದರು,
ಅವರು ಬೆಂಗಳೂರಿನ ಸೇವಾದಳದ ರಾಮರಾವ್ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಶರಣಾಗತರಾಗಿದ್ದ ಚಂಬಲ್ ಕಣಿವೆ ಡಕಾಯಿತರ ಪುನರ್ವಸತಿಗಾಗಿ ಪ್ರಾರಂಬಿಸಿದ್ದ ಗಾಂಧೀ ಆಶ್ರಮದಲ್ಲಿ ಸೇವೆ ಮಾಡಲು ಜಗದೀಶಣ್ಣರನ್ನ ಕಳಿಸಿದ್ದರು.
ಅವರು ರಜೆಗೆ ಊರಿಗೆ ಬಂದಾಗ ಈ ತಿಂಡಿ ತಂದು ನಮ್ಮ ತಾಯಿಗೆ ನೀಡಿದ್ದು ನನಗೆ ನೆನಪಿದೆ.
ಅವತ್ತು ನನ್ನ ತಾಯಿಯ ಗೆಳತಿಯರಾದ ಬೀಬಕ್ಕ,ಗುಲಾಬಿ, ಕ್ರಿಸ್ತಿನಕ್ಕ ಮತ್ತು ಅವರ ಮಗಳು ರೀತಕ್ಕ ಎಲ್ಲಾ ಸೇರಿಕೊಂಡು ಕವಡೆ ಮಣೆ ಆಡುತ್ತಿದ್ದರು, ಎಲ್ಲರೂ ಅದೇ ಮೊದಲ ಬಾರಿ ಈರೀತಿಯ ಸಿಹಿ ತಿಂಡಿ ನೋಡಿದ್ದು ಮತ್ತು ತಿಂದಿದ್ದು.
ಜಗದೀಶಣ್ಣ ಒಂದು ಪ್ರಶ್ನೆ ಕೇಳಿದರು ಇದು ಯಾವುದರಲ್ಲಿ ಮಾಡಿದ್ದು ಹೇಳಿ? ಅಂತ ಅವರ್ಯಾರಿಗೂ ಉತ್ತರ ಹೊಳೆಯಲೇ ಇಲ್ಲ ಆಗ ನನಗೆ 8 ರಿಂದ 9 ವರ್ಷ ಇರಬಹುದು ನಾನು ನಿಖರವಾಗಿ ಬೂದುಗುಂಬಳ ಅಂದಿದ್ದೆ ಅದು ಸರಿ ಉತ್ತರವೂ ಆಗಿತ್ತು ಇದು ಎಲ್ಲರಿಗೂ ಆಶ್ವಯ೯ ಮತ್ತು ನನ್ನ ತಾಯಿಗೆ ಹೆಮ್ಮೆಯ ಘಟನೆ ಆಗಿತ್ತು.
ಅನೇಕ ಬಾರಿ ಆಗ್ರಾ ಹೋದವನು ಈ ಪೇಠಾ ತಿಂದಿದ್ದೆ ಮತ್ತು ಮನೆಗೆ ತಂದಿದ್ದೆ.
ಮೊನ್ನೆ ಶಿವಮೊಗ್ಗದಿಂದ ಹಲದಿರಾಮ್ ಸಂಸ್ಥೆಯ ಪೇಠಾ ತಂದಿದ್ದೆ ಇದು ನನ್ನ ಮಗನಿಗೆ ಪೇಠಾ ತಯಾರಿಸಲು ಪ್ರೇರಣೆ ಆಗಿರಬೇಕು.
ನನ್ನ ಮಗ ನನ್ನ ರೀತಿಯೇ ಅನೇಕ ಹೊಸ ರುಚಿಯ ಅಡಿಗೆ
ಶೇಕಡಾ 90 ಪೇಠಾ ಸರಿಯಾಗಿ ಮಾಡಿದ್ದಾನೆ, ಇನ್ನೊಮ್ಮೆ ಮಾಡುವಾಗ ಪೇಠಾದ ಬಣ್ಣ ಆಕೃತಿ ಅವನಿಗೆ ಹೆಚ್ಚಿನ ನಿಖರತೆಯನ್ನು ತರುತ್ತದೆ.
ಉರ್ದು ಮತ್ತು ಹಿಂದಿ ಭಾಷೆಯವರು ಬೂದುಗುಂಬಳಕ್ಕೆ ಪೇಠಾ ಎನ್ನುತ್ತಾರೆ ಆದ್ದರಿಂದ ಈ ಬೂದುಗುಂಬಳ ಮತ್ತು ಸಕ್ಕರೆಯಲ್ಲಿ ತಯಾರಿಸುವ ಈ ಮಿಠಾಯಿಗೆ ಪೇಠಾ ಅಂತನೇ ಹೆಸರಾಗಿದೆ ವಿಶ್ವ ವಿಖ್ಯಾತ ತಾಜ್ ಮಹಲ್ ಊರಾದ ಆಗ್ರಾದಲ್ಲಿ ಈ ಪೇಠಾ ಮಾರುಕಟ್ಟೆ ಕಂಡುಕೊಂಡಿದ್ದರಿಂದ ಆಗ್ರಾ ಪೇಠಾ ಎಂದೇ ಪ್ರಸಿದ್ದಿ ಪಡೆದಿದೆ.
Comments
Post a Comment