#ಕಣಜ_ಕಡಿದರೆ...
#ಬದುಕಿಗಾಗಿ_ಸುರಕ್ಷಿತ_ವಲಯ_ಹುಡುಕಾಟ.
#ಕಣಜ_ಮತ್ತು_ಜೇನು_ಬಿನ್ನ_ಜೀವನ.
https://youtube.com/shorts/SRunjs8O59A?feature=shared
ನಮ್ಮ ಸಂಸ್ಥೆಯ ವಿದ್ಯುತ್ ಟ್ರಾನ್ಸ್ ಪರ್ ಡಬ್ಬಿಯಿಂದ ಬರುವ ವಿದ್ಯುತ್ ಸಂಪರ್ಕ ಪ್ರತ್ಯೇಕ ವಿದ್ಯುತ್ ಕಂಬದಲ್ಲಿ ಅಳವಡಿಸಿರುವ ವಿದ್ಯುತ್ ಪ್ಯೂಸ್ ಗಳ ಬಾಕ್ಸ್ ನಿಂದ ಅಂಡರ್ ಗ್ರೌಂಡ್ ಕೇಬಲ್ ಮೂಲಕ ಭೂಮಿ ಒಳಗಿಂದ ನಮ್ಮ ಎಲೆಕ್ಟ್ರಿಕಲ್ ರೂಮಿಗೆ ಹೋಗಿದೆ.
ನಿನ್ನೆ ಬೆಳಿಗ್ಗೆ ಸಿಂಗಲ್ ಪ್ಯೂಸ್ ಸಂಪರ್ಕ ಆಗಿದ್ದರಿಂದ ಈ ಬಾಕ್ಸ್ ಬಾಗಿಲು ತೆರೆದು ಅಲ್ಲಿರುವ ಪ್ಯೂಸ್ ಗಳನ್ನು ಪರೀಕ್ಷಿಸಲು ನನ್ನ ಮಗ ಕೈ ಹಾಕಿದಾಗಲೇ ಅಲ್ಲಿ ಗೂಡು ಮಾಡಿಕೊಂಡಿದ್ದ ಕಣಜ ಒಂದು ಅವನ ಬಲ ಮುಂಗೈಗೆ ಕಡಿದಿದೆ ಉಳಿದ ಕಣಜಗಳು ಅಕ್ರಮಣ ಮಾಡುವ ಮೊದಲೇ ಅವನು ದೂರ ಬಂದಿದ್ದಾನೆ.
ಜೇನುಗಳು ಕಡಿದರೆ ಜೇನು ತನ್ನ ಕೊಂಡಿ ಕಳೆದುಕೊಂಡು ಸಾಯುತ್ತದೆ ಆದರೆ ಕಣಜದ ಕೊಂಡಿ ಕಳಚುವುದಿಲ್ಲ ಮತ್ತು ಅದು ಸಾಯುವುದಿಲ್ಲ.
ನಂತರ ನೋಡಿದರೆ ಈ ಬಾಕ್ಸಿನಲ್ಲಿ 5-6 ಕಣಜದ ಗೂಡುಗಳಿದೆ !!.. ಅದನ್ನು ಅಲ್ಲಿಂದ ನಿವಾರಿಸಲೇ ಬೇಕು ಯಾಕೆಂದರೆ ಫ್ಯೂಸ್ ಬಾಕ್ಸ್ ವಿದ್ಯುತ್ ಸಮಸ್ಯೆ ಆದಾಗ ದುರಸ್ತಿಗಾಗಿ ಕೈ ಆಡಿಸಲೇ ಬೇಕು.
ಈ ವಿದ್ಯುತ್ ಬಾಕ್ಸ್ ನ ಒಳಗೆ ಒಂದೇ ಕಣಜದ ಗೂಡಿದ್ದರೆ ಪ್ಲಾಸ್ಟಿಕ್ ಕವರ್ ನಿಂದ ಗೂಡು ಮುಚ್ಚಿ ನಂತರ ಗೂಡು ಕಿತ್ತು ದೂರ ಎಸೆಯುವ ಪರಿಣಿತರು ನಮ್ಮ ಸಿಬ್ಬಂದಿಗಳು ಆದರೆ ಬಾಕ್ಸ್ ಒಳಗೆ 5 - 6 ಕಣಜದ ಗೂಡಿರುವುದು ಅವರ ಪರಿಣಿತಿಯ ಪರಿದಿಯ ವ್ಯಾಪ್ತಿ ಆಚೆಯದ್ದಾದ್ದರಿಂದ ಅವರು ಅಸಹಾಯಕರು, ಬೆಂಕಿ ಹೊಗೆ ಇತ್ಯಾದಿ ವಿದ್ಯುತ್ ಸಂಬಂದಿತ ಈ ಪೆಟ್ಟಿಗೆಯಲ್ಲಿ ಸಾದ್ಯವಿಲ್ಲ.
ಅಂತಿಮವಾಗಿ ನಿನ್ನೆ ರಾತ್ರಿ HIT ಸ್ಟ್ರೇ ಮಾಡಿ ಪೆಟ್ಟಿಗೆ ಮುಚ್ಚಿದ್ದರು ಬೆಳಿಗ್ಗೆ ಕಣಜಗಳು ತಮ್ಮ ಗೂಡು ತೆರವು ಮಾಡಿ ಹೊರ ಹೋಗಿದ್ದರಿಂದ ಎಲ್ಲಾ ಕಣಜದ ಗೂಡುಗಳನ್ನು ತೆಗೆದು ಹಾಕಿದರು.
ಎಲ್ಲಾ ಜೀವ ಇರುವ ಪ್ರಾಣಿ,ಪಕ್ಷಿ, ಕೀಟಗಳು, ಸರಿಸೃಪಗಳು ಮನುಷ್ಯರಂತೆ ತಮ್ಮ ಸುರಕ್ಷಿತ ಜೀವನಕ್ಕಾಗಿ ಸುರಕ್ಷಿತ ಸ್ಥಳಗಳ ಹುಡುಕಾಡುತ್ತದೆ.
Comments
Post a Comment