Skip to main content

Posts

Showing posts from July, 2018

# ಇದೊಂದು ರೈತ ಸ್ನೇಹಿ ಕೃಷಿ ವಿದ್ಯಾಲಯ#

# ಪ್ಯಾಚ್ ಬಡ್ಡಿOಗ್ ಮಾಡುವ ಈ ಇಂಜಿನೀಯರ್ ಪಾರಂ ಒಂದು ಕೃಷಿ ವಿಶ್ವವಿದ್ಯಾಲಯ#   ಕಳೆದ ಬಾನುವಾರ ರಿಪ್ಪನ್ ಪೇಟಿಯ ಅಂಕುರ್ ನಸ೯ರಿಗೆ ಹಣ್ಣಿನ ಗಿಡ ತರಲು ಹೋಗಿದ್ದೆ, ಇದು ಹಿಂದೆ ವಿದ್ಯುತ್ ಇಲಾಖೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ ಆಗಿದ್ದ ಶ್ರೀ ಅನಂತ ಮೂತಿ೯ ಜವಳಿಯವರದ್ದು (ಬ್ರಷ್ಟಾಚಾರ, ಲಂಚ ವಿರೋದಿ ಆಗಿದ್ದ ಇವರು ಕೆಲಸಕ್ಕೆ ರಾಜಿನಾಮೆ ನೀಡಿ ಕೃಷಿ ಪ್ರಾರಂಬಿಸಿದ್ದಾರೆ), ಇಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯದ ಪಾಠ ಮತ್ತು ಪ್ರಾತ್ಯಕ್ಷಿಕೆ ನೋಡಬಹುದು.   ಇಡಿ ಪಾರಂ ಸಾವಯವ, ಒಂದಿOಚು ಜಾಗವು ಹಾಳು ಬಿಟ್ಟಿಲ್ಲ, ಈ ಇಂಜಿನಿಯರ್ ಕೈಯಲ್ಲಿ ಹತ್ತಾರು ಸಾವಿರ ಕಸಿ ಗಿಡಗಳು ಪ್ರತಿ ವಷ೯ ತಯಾರು ಆಗುತ್ತದೆ.    ಸಣ್ಣ ಹಲಸಿನ ಕಡ್ಡಿಯಿಂದ ಏಳೆಂಟು ಹಲಸಿನ ಗಿಡ ಪ್ಯಾಚ್ ಬಡ್ಡಿOಗ್ ಮೂಲಕ ಮಾಡುವ ವಿದಾನವನ್ನ ವಿಡಿಯೋ ಮಾಡಿದೆ ವೀಕ್ಷಿಸಿ, ಇವರ ಸಂಪಕ೯ ವಿಳಾಸ ಶ್ರೀ ಅನಂತಕುಮಾರ್ ಜವಳಿ   ಅಂಕುರ್ ನಸ೯ರಿ   ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ. ಇವರ ಸೆಲ್ ನಂ94485 54514.          ಕೃಷಿ ಬಗ್ಗೆ ಮಾಹಿತಿಗಾಗಿಯೇ ಪ್ರತಿ ತಿಂಗಳೂ ನೂರಾರು ಜನ ಬರುತ್ತಾರೆ.   ವಾರಂತ್ಯದ ರಜೆಯಲ್ಲಿ ಒಮ್ಮೆ ಇಲ್ಲಿಗೆ ಬೇಟಿ ಮಾಡಿ ನೋಡಿ.

#ಮಂಗನ ಬೋನು ಮಾಡುವ ಮಾಹಿತಿ ಇವರಲ್ಲಿದೆ#

#ಮಂಗನ ಕಾಟ ಪರಿಹಾರ ಸುಲಭ ಸಾಧ್ಯವಲ್ಲ# ಯಾವುದೇ ಸಾಕುಪ್ರಾಣಿ, ಕಾಡು ಪ್ರಾಣಿ ಕಾಟವನ್ನ ತಡೆಯ ಬಹುದು ಆದರೆ ಮಂಗನ ಕಾಟವಿದೆಯಲ್ಲ ಅದು ಅನುಭವಿಸಿದವರಿಗೆ ಗೊತ್ತು, ಅವುಗಳ ದಾಳಿಯಿಂದ ತತ್ತರಿಸಿ ಹತಾಶರಾಗುತ್ತಾರೆ, ಅವುಗಳ ಕೈಗೆ ಸಿಕ್ಕಿದ್ದೆಲ್ಲ ಖಲಾಸ್!    ಮಂಗನಿಗೆ ಹಿಂಸೆ ನೀಡಿದರೆ ಶಾಪಗ್ರಸ್ತರಾಗುವ ಭಯ, ಸಿಡಿ ಮದ್ದು ಸಿಡಿಸಿದರೆ ಆ ಕ್ಷಣದಲ್ಲಿ ಪರಾರಿ ಆದರೂ ಮತ್ತೊ೦ದು ಕ್ಷಣದಲ್ಲಿ ಪ್ರತ್ಯಕ್ಷ.   ಇಂತಹ ಕಾಟ ಕೊಡುವ ಮಂಗಗಳ ಹಿಡಿಯಲು ರಿಪ್ಪನ್ ಪೇಟೆಯ ಕೃಷಿ ವಿಜ್ಞಾನಿ ಅನಂತಮೂತಿ೯ ಜವಳಿ ಒಂದು ಬೋನು ಮಾಡಿದ್ದಾರೆ ಅವರ ಪಾರಂಗೆ ನುಗ್ಗಿ ದಾಂದಲೆ ಮಾಡುವ ಮಂಗಗಳನ್ನ ಹಿಡಿದು ಆಗುಂಬೆ, ಬಾಳೆಬರೆ ಅಥವ ಹುಲಿಕಲ್ ಫಾಟಿಗಳಲ್ಲಿ ಬಿಡುತ್ತಾರೆ ಆ ಬೋನು ಮಾಡಿ ಮಂಗನ ಕಾಟದಿಂದ ಪರಿಹಾರ ಕ೦ಡುಹಿಡಿಯಲು ಆಸಕ್ತರು ಇವರನ್ನ ಬೇಟಿ ಮಾಡಿ ಮಾಹಿತಿ ಪಡೆಯಬಹುದು.   ಇವರ ವಿಳಾಸ   ಶ್ರೀ ಅನಂತ ಮೂತಿ೯ ಜವಳಿ ಅಂಕುರ್ ನಸ೯ರಿ ರಿಪ್ಪನ್ ಪೇಟೆ ಹೊಸನಗರ ತಾII, ಶಿವಮೊಗ್ಗ ಜಿಲ್ಲೆ.

ಸಿದ್ದಗOಗಾ ಸ್ವಾಮಿಗಳ ಬೇಟಿ ಆದ ಅನುಭವಗಳು

ನಾನು ಈ ಮಠದ ಬಗ್ಗೆ ಬಹಳ ಕೇಳಿದ್ದರೂ ಹೋಗಿರಲಿಲ್ಲ, ಒಮ್ಮೆ ಒಬ್ಬ ಇಂಜಿನಿಯರ್ ಪರಿಚಯ ಆಗಿತ್ತು ಅವರು ಈ ಮಠಕ್ಕೆ ಯಾವಾಗಲೂ ಹಣ ಕಳಿಸುತ್ತಿದ್ದರು ಯಾಕೆಂದು ವಿಚಾರಿಸಿದಾಗ ಅವರ ವಿದ್ಯಾಭ್ಯಾಸ ಇಲ್ಲೆ ಆಗಿದ್ದು ಎಂದು ತಿಳಿಯಿತು, ಒಂದು ಬಾರಿ ರಾಯಚೂರಿ೦ದ ಬೆಂಗಳೂರಿಗೆ ಬರುವ ರೈಲಿನಲ್ಲಿ ಒಂದೆರೆಡು ವಿದ್ಯಾಥಿ೯ಗಳು ಸಿಕ್ಕಿದ್ದರು ಅವರೂ ಅಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು ಮತ್ತು ಅವರ ಪೋಷಕರು ವಷ೯ಕೊಮ್ಮೆ ತಮ್ಮ ಹೊಲದಲ್ಲಿ ಬೆಳೆದ ಕಾಳುಕಡಿ ಮಠಕ್ಕೆ ನೀಡುವುದು ಬಿಟ್ಟು ಬೇರೆ ಏನೂ ಇಲ್ಲ ಅಂದಿದ್ದರು. 20O2ರಲ್ಲಿ ಈ ಮಠಕ್ಕೆ ಭೇಟಿ ಮಾಡಿ ಅಡುಗೆ ಮನೆ ವೀಕ್ಷಣೆ ಮಾಡಿದ್ದೆ, ಸಾಮೂಹಿಕ ಪ್ರಾಥ೯ನೆ ನೋಡಿದ್ದೆ, ಅಲ್ಲಿನ ಕೆಲ ವಿದ್ಯಾಥಿ೯ಗಳನ್ನ ವಿಚಾರಿಸಿದಾಗ ಅವರೆಲ್ಲ ವಿದ್ಯೆಗಾಗಿ ದೂರದ ಊರಿ೦ದ ಬ೦ದ ಬಡ ಕುಟುಂಬದವರಾಗಿದ್ದರು ಮತ್ತು ಅವರು ಹಾಲು ಕುರುಬರು ಅಂದಿದ್ದರು (ಜಾತಿ ಕೇಳಬಾರದು ಆದರೆ ನನಗೆ ಇಲ್ಲಿ ಲಿಂಗಾಯಿತರಿಗೆ ಮಾತ್ರ ಅವಕಾಶ ಎನ್ನುವ ತಪ್ಪು ಕಲ್ಪನೆ ಇತ್ತು ಮೊದಲು) ಸ್ವಾಮಿಗಳ ಚರಿತ್ರೆಯ ಓದಿದಾಗ ಅವರು ಕೂಡ ಜಾತಿ ಮೀರಿದವರೆಂದು ಗೊತ್ತಾಯಿತು.   ನಿಜಕ್ಕೂ ಈ ಮಠ ಬಿನ್ನವಾಗಿದೆ ಇತ್ತೀಚೆಗೆ ರಾಜ ಕಾರಿಣಿಗಳು ಇಲ್ಲಿಗೆ ಹೆಚ್ಚು ಠಳಾಯಿಸುತ್ತಾರೆ ಮತ್ತು ಯಡೂರಪ್ಪಾ ಜೈಲಿಗೆ ಹೋದಾಗ ಈ ಸ್ವಾಮಿಗಳನ್ನ ಮಂತ್ರಿ ಸೋಮಣ್ಣ ಜೈಲಿಗೆ ಕರೆದೊಯ್ದಿದ್ದು ಮಾತ್ರ ನನಗೆ ಅಭಾಸ ಅನ್ನಿಸಿತು ಬಹುಶಃ ಅವರ ವಯೋಸಹಜ ತೊಂದರೆಯ

ರಾಮಚಂದ್ರಪುರದ ಮಠದ ಸ್ವಾಮಿಗಳ ಮೇಲಿನ ಆಪಾದನೆ ಸತ್ಯವೊ? ಮಿಥೈಯೋ?

   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿನ ಶ್ರೀ ರಾಮ ಚಂದ್ರಾಪುರ ಮಠ ಹವ್ಯಕ ಬ್ರಾಹ್ಮಣರ ಮಠ ಇಲ್ಲಿನ ಹಾಲಿ ಸ್ವಾಮಿಗಳ ಮೇಲೆ ಅಪಾದನೆಗಳು ಅನೇಕ, ನ್ಯಾಯಾಲಯಗಳಲ್ಲಿ ಪರ ವಿರೋದದ ಅನೇಕ ವ್ಯಾಜ್ಯಗಳಿವೆ.    ರಾಜ್ಯ ಮಟ್ಟದ ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ಈ ಮಠದ ಸ್ವಾಮಿಗಳ ಬಗ್ಗೆ ಅನೇಕ ವರದಿ ಪ್ರಕಟವಾಗಿದೆ, ಇಲ್ಲೂ ಪರ ವಿರೋದ ಗುಂಪುಗಾರಿಕೆ ಇದೆ.    ಭಕ್ತರಲ್ಲೂ ಪರ ವಿರೋದ ಜೊತೆ ಅನೇಕ ಶಂಕೆಗಳಿವೆ, ಇಷ್ಟೆಲ್ಲ ಅಪಾದನೆ ಸತ್ಯವೇ? ಸತ್ಯ ಆಗಿದ್ದಲ್ಲಿ ಪೀಠ ತ್ಯಾಗ ಮಾಡಲಿ ಎಂದು ಒಂದು ಗುಂಪು ಪ್ರತಿಪಾದಿಸಿದರೆ  ಇನ್ನೊಂದು ಇದೆಲ್ಲ ಸುಳ್ಳು ಅನ್ನುತ್ತೆ     ಸತ್ಯ ಶೋದ ಮಂಡಳಿ ಎಂಬ ಈ ಮಠದ ಭಕ್ತರು ಅನೇಕ ಸಾಕ್ಷಿ, ಪೋಟೋಗಳನ್ನ ಪೇಸ್ ಬುಕ್ ಗಳಲ್ಲಿ ಹಾಕಿದ್ದಾರೆ, ಒಂದು ಬ್ರಹ್ಮಚಾರಿ ಸ್ವಾಮಿಜಿ ಮಹಿಳೆಯರನ್ನ ಮೈ ಮುಟ್ಟುವುದು ಅಕ್ಷಮ್ಯ ಅಪರಾದ, ಇದರಿಂದ ಇವರು ಪೀಠದಲ್ಲಿ ಇರಲು ಅಹ೯ರಲ್ಲ ಎಂಬ ವಾದ ಮಂಡಿಸಿದ್ದಾರೆ.   ಅನೇಕ ಧಮ೯ ಗ್ರಂಥಗಳನ್ನ ಉಲ್ಲೇಖಿಸಿದ್ದಾರೆ, ಇವೆಲ್ಲ ವಾದ ವಿವಾದ ಹವ್ಯಕ ಬ್ರಾಹ್ಮಣರಲ್ಲೇ ಚಚೆ೯ ಆಗುತ್ತಿತ್ತು ಹಾಗಾಗಿ ಶೂದ್ರರಲ್ಲಿ ಸರಿಯಾದ ಮಾಹಿತಿ ಇರಲಿಲ್ಲ ಈಗ ಅನೇಕ ಶೂದ್ರರು ಈ ಬಗ್ಗೆ ಆಸಕ್ತಿ ವಹಿಸಿ ಏನು ಇಲ್ಲಿನ ವಿದ್ಯಾಮಾನ ಅನ್ನುವ ಕುತೂಹಲಿಗಳಿಗಾಗಿ ಇದನ್ನ ಬರೆಯಲಾಗಿದೆ, ವಿವಾದ ಸಾಕ್ಷಿಯಾಗಿ ಅವರುಗಳಲ್ಲಿ ಹರಿದಾಡುತ್ತಿರುವ ಪೋಟೋ ಇಲ್ಲಿದೆ.        ದೇವರಾದ ಶ್ರೀಕೃಷ್ಣನಿಗೂ ಅಪವಾದ ತಪ್ಪಿಲ್ಲ ಹಾಗಾ