ನಾನು ಈ ಮಠದ ಬಗ್ಗೆ ಬಹಳ ಕೇಳಿದ್ದರೂ ಹೋಗಿರಲಿಲ್ಲ, ಒಮ್ಮೆ ಒಬ್ಬ ಇಂಜಿನಿಯರ್ ಪರಿಚಯ ಆಗಿತ್ತು ಅವರು ಈ ಮಠಕ್ಕೆ ಯಾವಾಗಲೂ ಹಣ ಕಳಿಸುತ್ತಿದ್ದರು ಯಾಕೆಂದು ವಿಚಾರಿಸಿದಾಗ ಅವರ ವಿದ್ಯಾಭ್ಯಾಸ ಇಲ್ಲೆ ಆಗಿದ್ದು ಎಂದು ತಿಳಿಯಿತು, ಒಂದು ಬಾರಿ ರಾಯಚೂರಿ೦ದ ಬೆಂಗಳೂರಿಗೆ ಬರುವ ರೈಲಿನಲ್ಲಿ ಒಂದೆರೆಡು ವಿದ್ಯಾಥಿ೯ಗಳು ಸಿಕ್ಕಿದ್ದರು ಅವರೂ ಅಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು ಮತ್ತು ಅವರ ಪೋಷಕರು ವಷ೯ಕೊಮ್ಮೆ ತಮ್ಮ ಹೊಲದಲ್ಲಿ ಬೆಳೆದ ಕಾಳುಕಡಿ ಮಠಕ್ಕೆ ನೀಡುವುದು ಬಿಟ್ಟು ಬೇರೆ ಏನೂ ಇಲ್ಲ ಅಂದಿದ್ದರು.
20O2ರಲ್ಲಿ ಈ ಮಠಕ್ಕೆ ಭೇಟಿ ಮಾಡಿ ಅಡುಗೆ ಮನೆ ವೀಕ್ಷಣೆ ಮಾಡಿದ್ದೆ, ಸಾಮೂಹಿಕ ಪ್ರಾಥ೯ನೆ ನೋಡಿದ್ದೆ, ಅಲ್ಲಿನ ಕೆಲ ವಿದ್ಯಾಥಿ೯ಗಳನ್ನ ವಿಚಾರಿಸಿದಾಗ ಅವರೆಲ್ಲ ವಿದ್ಯೆಗಾಗಿ ದೂರದ ಊರಿ೦ದ ಬ೦ದ ಬಡ ಕುಟುಂಬದವರಾಗಿದ್ದರು ಮತ್ತು ಅವರು ಹಾಲು ಕುರುಬರು ಅಂದಿದ್ದರು (ಜಾತಿ ಕೇಳಬಾರದು ಆದರೆ ನನಗೆ ಇಲ್ಲಿ ಲಿಂಗಾಯಿತರಿಗೆ ಮಾತ್ರ ಅವಕಾಶ ಎನ್ನುವ ತಪ್ಪು ಕಲ್ಪನೆ ಇತ್ತು ಮೊದಲು)
ಸ್ವಾಮಿಗಳ ಚರಿತ್ರೆಯ ಓದಿದಾಗ ಅವರು ಕೂಡ ಜಾತಿ ಮೀರಿದವರೆಂದು ಗೊತ್ತಾಯಿತು.
ನಿಜಕ್ಕೂ ಈ ಮಠ ಬಿನ್ನವಾಗಿದೆ ಇತ್ತೀಚೆಗೆ ರಾಜ ಕಾರಿಣಿಗಳು ಇಲ್ಲಿಗೆ ಹೆಚ್ಚು ಠಳಾಯಿಸುತ್ತಾರೆ ಮತ್ತು ಯಡೂರಪ್ಪಾ ಜೈಲಿಗೆ ಹೋದಾಗ ಈ ಸ್ವಾಮಿಗಳನ್ನ ಮಂತ್ರಿ ಸೋಮಣ್ಣ ಜೈಲಿಗೆ ಕರೆದೊಯ್ದಿದ್ದು ಮಾತ್ರ ನನಗೆ ಅಭಾಸ ಅನ್ನಿಸಿತು ಬಹುಶಃ ಅವರ ವಯೋಸಹಜ ತೊಂದರೆಯೂ ಇರಬಹುದು, ಏನೇ ಆಗಲಿ ಇದೊಂದು ಅಕ್ಷರ ಬ್ರಹ್ಮ ಮಂದಿರವೇ ಸರಿ ಆದರೆ ಇವರ ನಂತರ ಈ ವ್ಯವಸ್ಥೆ ಉಳಿಯುವುದು ಅನುಮಾನ ಬಕ ಪಕ್ಷಿಗಳು ಕಾದಿರುವ ಅನುಭವ ಆಯಿತು.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ
Comments
Post a Comment