Skip to main content

Posts

Showing posts with the label Family history of Anandapuram landlord Ramakrishna iyangar family

ಆನಂದಪುರಂ ಇತಿಹಾಸ ಭಾಗ-4. ಆನಂದಪುರ೦ ಕೊಡುಗೈ ದಾನಿ ರಾಮಕೃಷ್ಣ ಅಯ್ಯಂಗಾರ್ ಕುಟುಂಬ ಪರಿಚಯ

ಆನಂದಪುರಂ ಇತಿಹಾಸ ಭಾಗ_4 ಆನಂದಪುರಂನ ಕೊಡುಗೈ ದಾನಿ, ಇನಾಮುದಾರರು, ಸಮಾಜ ಸೇವಾ ನಿರತ ರಾಮಕೃಷ್ಣ ಅಯ್ಕಂಗಾರ್ ಆನಂದಪುರದ_ಅಯ್ಯಂಗಾರ್_ಕುಟುಂಬದ_ವಿವರ    ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.  ಮೊದಲ ಪತ್ನಿ ಕನಕಮ್ಮಾಳ್ ಮೃತರಾದಾಗ ರಾಮಕೃಷ್ಣ ಅಯ್ಯಂಗಾರರು ಇನ್ನೊಂದು ವಿವಾಹ ಆಗುತ್ತಾರೆ, ಸುಂದರಮ್ಮ ಅವರ ಹೆಸರು, ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.      ರಾಮಕೃಷ್ಣ ಅಯ್ಯಂಗಾರ್ ಮತ್ತು ಕನಕಮ್ಮಾಳ್ ದಂಪತಿಗಳ ಮೊದಲ ಪುತ್ರ ಜಗನ್ನಾಥ ಅಯ್ಯಂಗಾರರು  ಮೃತರಾಗುತ್ತಾರೆ, ಇವರ ಸ್ಮರಣಾರ್ಥವಾಗಿ ಆನಂದಪುರಂನಲ್ಲಿ ಪಶುವೈದ್ಯ ಶಾಲೆ ನಿಮಿ೯ಸಿದ್ದಾರೆ.   ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಹೆಣ್ಣು ಮಕ್ಕಳು.     ವೆಂಕಟಾಚ...