4103. ಇದು ನಾನು ಬರೆದ #ನಾಥಪಂಥದ_ಬಾರಾ_ಪಂಥ್_ಯಾತ್ರೆ ಪುಸ್ತಕದ್ದು, ಈ ಪುಸ್ತಕ ಮುದ್ರಣವಾಗಿ 2027 ರ ಶಿವರಾತ್ರಿಗೆ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಯೋಚನೆ.
ಲೇಖಕನ_ಮಾತು ...
ಇದು ನಾನು ಬರೆದ #ನಾಥಪಂಥದ_ಬಾರಾ_ಪಂಥ್_ಯಾತ್ರೆ ಪುಸ್ತಕದ್ದು, ಈ ಪುಸ್ತಕ ಮುದ್ರಣವಾಗಿ 2027 ರ ಶಿವರಾತ್ರಿಗೆ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಯೋಚನೆ.
ಈ ಪುಸ್ತಕ ನಾನು ಸಮರ್ಪಣೆ ಮಾಡಿದ #ಶ್ರೀ_ಫೀರ್_ಯೋಗಿ _ಸೋಮನಾಥ_ಜೀ ಜೊತೆ ನನ್ನ ಸತ್ಸಂಗದ ನೆನಪುಗಳು.
ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಗೋರಕ್ ಪುರದ ನಾಥಪಂತದ ಕೇಂದ್ರದ ಅಧ್ಯಕ್ಷರು.
ಅದರ ಒಂದು ಉಪಶಾಖಾ ಮಠವೇ ಶ್ರೀಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠ,
ಇದು ಕರ್ನಾಟಕದ ಕೊಡಚಾದ್ರಿ ಶೃಂಗ ಶ್ರೇಣಿಯ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಸಮೀಪದ ಯಡಮೊಗೆ ಎಂಬ ಹಳ್ಳಿಯಲ್ಲಿದೆ.
ದೀರ್ಘ ಕಾಲ ಇಲ್ಲಿನ ಪೀಠದಲ್ಲಿದ್ದವರು ಶ್ರೀ ಫೀರ್ ಯೋಗಿ ಸೋಮನಾಥ ಬಾವೋಜಿ .
ಶ್ರೀ ಪೀರ್ ಯೋಗಿ ಸೋಮನಾಥ ಜೀ ಮೂಲ ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು.
ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಉತ್ತರ ಪ್ರದೇಶದ ಗೋರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.
ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬ ಮೇಳದ ನಂತರ ತ್ರ್ಯಂಬಕೇಶ್ವರದಿಂದ ಹೊರಡುವ ಬಾರಾ ಪಂಥ ಝು೦ಡಿ ಪಾದಯಾತ್ರೆ ಮಂಗಳೂರಿನ ಕದ್ರಿ ಯೋಗೇಶ್ವರನಾಥ ಜೋಗಿ ಮಠಕ್ಕೆ ನಡೆದು ಬರುವಾಗ ಪಶ್ಚಿಮ ಘಟ್ಟ ಇಳಿದು ಕರಾವಳಿ ತಲುಪಿದಾಗ ಬಂದು ತಂಗುವುದು ಇದೇ ಹಲವರಿ ಮರಕ್ಕೆ.
ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಅವರಿಗೆ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ,ಆಗದಿದ್ದರೆ ತಮ್ಮ ಜೊತೆ ಬಂದ ಇನ್ನೊಬ್ಬ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸುತ್ತಾರೆ.
ಇಲ್ಲಿನ ಮಠಾದೀಶರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ಯುತ್ತಾರೆ.
1980 ರಲ್ಲಿ ಬಂದ ಝಾ೦ಡಿ ಯಾತ್ರೆಯಲ್ಲಿ ಶ್ರೀಸೋಮನಾಥಜಿ ಇಲ್ಲಿಗೆ ಬಂದವರು, ಒಂದು ವಿಶೇಷ ಅಂದರೆ ಈ ಬಾರಾ ಪಂಥ್ ಯಾತ್ರೆ ಸಾಗರಕ್ಕೆ ಆಗಮಿಸುವಾಗ ನನಗೆ ನೋಡಲು ಅವಕಾಶ ಸಿಕ್ಕಿತ್ತು ಆಗ ನಾನು ಸಾಗರಕ್ಕೆ ನಮ್ಮೂರು ಆನಂದಪುರಂನಿಂದ ನಿತ್ಯ ರೈಲು ಪ್ರಯಾಣ ಮಾಡುತ್ತಿದ್ದೆ.
ನನ್ನ ಅವರ ನೇರ ಸಂಪಕ೯ 1997ರ ನಂತರದ್ದು, ಶಿವಮೊಗ್ಗ ಜಿಲ್ಲೆಯ ಕುಣುಬಿ ಎಂಬ ಸಣ್ಣ ಗುಡ್ಡಗಾಡು ಜನಾಂಗದ ಸಂಘಟನೆ, ಅಭಿವೃದ್ಧಿಗಾಗಿ ಓಡಾಡುವಾಗ ಕುಣುಬಿ ಜನರಿಂದ ಫೀರ್ ಯೋಗಿ ಸೋಮನಾಧರ ಬಗ್ಗೆ ಮತ್ತು ಅವರ ನಾಥಪಂಥತ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಿತು.
ಕುಣುಬಿ ಜನಾಂಗದವರು ನಾಥ ಪಂಥದ ಕಟ್ಟಾ ಅನುಯಾಯಿಗಳು.
ಶ್ರೀ ಫೀರ್ ಯೋಗಿ ಸೋಮನಾಥಜೀ ಕೂಡ ನನ್ನ ಬಗ್ಗೆ ಈ ಜನರಿಂದ ತಿಳಿದುಕೊಂಡಿದ್ದರಂತೆ.
ಹಾಗೆ ಒಮ್ಮೆ ನನಗೆ ಅವರ ದರ್ಶನ ಭಾಗ್ಯ ದೊರೆಯಿತು, ಮುಂದೆ ಅವರು ನನ್ನ ಮನೆಗೆ ಅಚಾನಕ್ಕಾಗಿ ಬಂದರು ಅವತ್ತು ನನ್ನ ಮನೆಯ ದೇವರ ಕೋಣೆಯಲ್ಲಿ ಅವರು ಪೂಜೆ ನೆರವೇರಿಸಿದ್ದರು.
ಒಮ್ಮೆ ಅವರನ್ನ ನಮ್ಮ ಊರಿಂದ ಅವರ ಮಠಕ್ಕೆ ಬಿಡಲು ನನ್ನ ಕಾರಲ್ಲಿ ಕರೆದೊಯ್ಯುವ ಅವಕಾಶ ದೊರೆತಿತ್ತು.
2009 ರಲ್ಲಿ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 1008 ನಾರಿಕೇಳಾ ಯಂತ್ತೋದ್ದಾರ ಮಹಾಗಣ ಯಾಗ ಹಮ್ಮಿಕೊಂಡಿದ್ದೆವು ಆಗ ಸೋಂದಾದ ಸ್ವಣ್೯ವಲ್ಲಿ ಸ್ವಾಮೀಜಿ ಮತ್ತು ಇವರನ್ನ ಆಹ್ವಾನಿಸಿದ್ದೆ.
ಫೀರ್ ಯೋಗಿ ಸೋಮನಾಥ ಜೀ ಆ ವರ್ಷದ ರಥೋತ್ಸವ ಉದ್ಘಾಟಿಸಿದ್ದರು ಮತ್ತು ನಮ್ಮ ಶ್ರೀಕೃಷ್ಣಸರಸ ಕನ್ವೆನ್ಷನಲ್ ಹಾಲ್ ಕಲ್ಯಾಣ ಮಂಟಪದಲ್ಲಿ ತಂಗಿದ್ದರು.
ಇವರ ಜೊತೆಯ ಒಡನಾಟ ನನಗೆ ನಾಥಪಂಥದ ಸತ್ಸಂಗಕ್ಕೆ ಕಾರಣ ಆಯಿತು.
ಅನೇಕ ಬಾರಿ ಕುಂದಾಪುರ ಮಾಗ೯ದಲ್ಲಿ ಬರುವಾಗ ರಾತ್ರಿ ಇವರನ್ನ ಬೇಟಿ ಆಗುತ್ತಿದ್ದೆ.
ಇವರ ಊರು ಮಧ್ಯ ಪ್ರದೇಶದ ಗ್ವಾಲಿಯರ್, ಸಂಸಾರಿಗಳಾಗಿ ಮಕ್ಕಳು ಹೊಂದಿದ ನಂತರ ಇವರಿಗೆ ಸಂನ್ಯಾಸದ ಮೇಲೆ ಮನಸಾಯಿತಂತೆ.
ಜಾತಿ, ದಮ೯, ಬಾಷೆ ಹಂಗಿಲ್ಲದ ನಾಥಪಂಥದಲ್ಲಿ ಆಸಕ್ತಿ ಉ೦ಟಾಗಿ ಅಲ್ಲೇ ಸನ್ಯಾಸ ತೆಗೆದುಕೊಂಡರು.
ಅನೇಕ ಜನ್ಮ ಸನ್ಯಾಸಿ ಆದವರಿಗೆ ಮಾತ್ರ ನಾಸಿಕದಿಂದ 12 ವಷ೯ಕ್ಕೆ ಒಮ್ಮೆ ಮಂಗಳೂರಿನ ಕದ್ರಿಗೆ ಬರುವ ಬಾರಾ ಪಂಥ ಝೋಂಡಿಗೆ ಅವಕಾಶ ಸಿಗುತ್ತೆ ಅನ್ನುವ ಬಲವಾದ ನಂಬಿಕೆ ನಾಥಪಂಥದಲ್ಲಿದೆ.
ಇವರಿಗೂ ಭಾಗವಹಿಸುವ ಅವಕಾಶ ಸಿಗುತ್ತದೆ ಹಾಗೆ ಬಂದ ಜೋOಡಿ ಯಾತ್ರೆ ಹಲವಾರಿ ಮಠ ತಲುಪಿದಾಗ ಇಲ್ಲಿ ಏನೂ ಇರಲಿಲ್ಲವಂತೆ.
ಹಿಂದೆ ನೇಮಿಸಿದ ಸ್ವಾಮಿಗಳು ಕಾಲವಾಗಿದ್ದರು ನಂತರ ಕರ್ನಾಟಕ ರಾಜ್ಯದ ಭೂಸುದಾರಣೆ ಕಾನೂನು ಲಾಭ ಪಡೆದ ಮಠದ ಭಕ್ತರು ಎಲ್ಲಾ ಜಮೀನು ಅವರ ವಶಪಡಿಸಿಕೊಂಡಿದ್ದರು.
ಕಾಲ ಬೈರವನ ಗುಡಿ ಪೂಜೆ ಇಲ್ಲದೆ ನಾಶವಾಗಿ ದೇವರ ಪೀಠ ಮಾತ್ರ ಉಳಿದಿತ್ತಂತೆ.
ಪೂಜೆ ಪುನಸ್ಕಾರಗಳು ಇರಲಿಲ್ಲ, ಹಳೆಯ ಸ್ವಾಮಿಗಳ ಸಮಾದಿ ಹಾಗೆ ಉಳಿದಿತ್ತು.
ಮರುದಿನ ಬಾರಾಪಂಥ್ ಯಾತ್ರೆ ಮಂಗಳೂರಿಗೆ ನಸುಕಿನಲ್ಲಿ ಹೊರಟಾಗ "ನನಗೆ ಮಹಾಂತರಿಂದ ಕರೆ ಬಂತು ನನ್ನನ್ನ ಅವರು ಅವತ್ತು ಈ ಮಠಕ್ಕೆ ಮಠಾದೀಶರಾಗಿ ನೇಮಕ ಮಾಡಿ ಆದೇಶ ನೀಡಿದರು, ಝೋಂಡಿ ಯಾತ್ರೆ ಹೊರಟು ಹೋದ ನಂತರ ಉಳಿದವನು ನಾನೊಬ್ಬನೆ" ಎಂದು ತಮ್ಮ ಆ ದಿನದ ನೆನಪುಗಳನ್ನ ನನಗೆ ಶ್ರೀ ಫೀರ್ ಯೋಗಿ ಸೋಮನಾಥಜೀ ಹೇಳುತ್ತಾ ಹೋದರು.
"ಆಗ ಇಲ್ಲಿ ಕಾಡು, ಕಾಡು ಪ್ರಾಣಿಗಳು ಹೆಚ್ಚಿತ್ತು, ರಸ್ತೆ, ವಿದ್ಯುತ್ ಮತ್ತು ಪೋನ್ ಸಂಪರ್ಕ ಇರಲಿಲ್ಲ, ಆಹಾರ ವ್ಯವಸ್ಥೆ, ಉಳಿಯಲು ಗುಡಿಸಲು ಕೂಡ ಇಲ್ಲಿ ಇರಲಿಲ್ಲ ಯಾವುದೇ ಒಬ್ಬ ಮನುಷ್ಯರು ಹತ್ತಿರ ಸುಳಿಯುತ್ತಿರಲಿಲ್ಲ, ಬೇಸಿಗೆಯ ಮುಕ್ತಾಯದ ಹಾಗೂ ಮಳೆಗಾಲ ಪ್ರಾರಂಭದ ಹತ್ತಿರದ ದಿನಗಳದು, ನಾಥಪಂಥದವರಿಗೆ ಕಠೋರವಾದ ಜೀವನ ಅಭ್ಯಾಸವಾಗಿರೋದರಿಂದ ನನಗೆ ಏನೂ ಅನ್ನಿಸಲಿಲ್ಲ, ಮುಂದಿನ 12 ವಷ೯ ನಾನಿಲ್ಲಿ ಇರಲೇ ಬೇಕು ಎಂದು ಗೋರಕನಾಥರೇ ತೀಮಾ೯ ನಿಸಿದ್ದಾರೆ ಅಂತ ಯೋಚಿಸುತ್ತಾ ಕುಳಿತಾಗಲೇ ಟಪ್ ಅಂತ ಒಂದು ಮಾವಿನ ಹಣ್ಣು ಮರದಿಂದ ಬಿತ್ತು, ಸುಮಾರು 3 ತಿಂಗಳ ಕಾಲ ನನಗೆ ಗುರುಗಳು ಈ ಮೂಲಕ ಆಹಾರ ನೀಡಿದರು " ಎಂದಿದ್ದರು.
"ಹೀಗೆ ಇರುವಾಗ ಒಂದು ದಿನ ಬೆಳಿಗ್ಗೆ ಒಬ್ಬ ಭಕ್ತ ಕಾಲ ಬೈರವ ನಿಗೆ ಪೂಜೆ ಸಲ್ಲಿಸಲು ಬಂದಾಗ ನನ್ನ ನೋಡಿ ಆಶ್ಚಯ೯ ಪಟ್ಟ ಸುಮಾರು ವಷ೯ದಿಂದ ಯಾರೂ ಮಠಕ್ಕೆ ಇರಲಿಲ್ಲ ಈಗ ಹೊಸ ಸ್ವಾಮಿ ಬಂದಿದ್ದಾರೆಂದು ಊರಿಗೆ ಹೋಗಿ ಅನೇಕ ಭಕ್ತರನ್ನ ಕರೆತಂದು ಗುಡಿಸಲು ಕಟ್ಟಿ ಕೊಟ್ಟರು, ಒಲೆ - ದಿನಸಿ -ಪಾತ್ರೆ -ಕಟ್ಟಿಗೆ ಹೀಗೆಲ್ಲ ವ್ಯವಸ್ಥೆ ಮಾಡಿದರು" ಎಂದು ತಮ್ಮ ಮಠದ ಆದಿನದ ಪರಿಸ್ಥಿತಿ ವಿವರಿಸಿದ್ದರು.
'ನಂತರ ದಿನೇ ದಿನೇ ಭಕ್ತರು ಸಂಪಕ೯ಕ್ಕೆ ಬಂದರು, ಮಠದ ಜಮೀನುಗಳೆಲ್ಲ ಭೂ ಸುಧಾರಣೆ ಕಾನೂನಿನಿOದ ಯಾರು ಯಾರದ್ದೋ ಪಾಲಾಗಿತ್ತು" ಅಂತ ಅವರ ಜೀವನದ ಒಂದು ಕಾಲದ ಕಥೆ ಹೇಳಿದ್ದರು.
"ಅರುಣ್ ಪ್ರಸಾದ್ ಜೀ ಈ ಜೋOಡಿ ಯಾತ್ರೆ 20l 6ರಲ್ಲಿ ಬರುತ್ತೆ, ನೀವು ಕನಾ೯ಟಕದ ಜನತೆಗೆ ಈ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು" ಅಂದಿದ್ದರು.
ಗುರುಗಳೆ ಇದು ನನ್ನಿಂದ ಸಾಧ್ಯವೇ ಎಂದಾಗ? ಅವರು ಖಂಡಿತಾ ನಿಮ್ಮಿಂದ ಸಾಧ್ಯ ಕಾಲ ಬೈರವನ ಕೃಪೆ ನಿಮ್ಮ ಮೇಲಿದೆ ಎಂದಿದ್ದರು ಅದು ಪವಾಡದಂತೆ ಸಾಧ್ಯವಾಯಿತು.
ಬಾರಾ ಪಂಥ್ ಯಾತ್ರೆ 2016ರಲ್ಲಿ ಕರ್ನಾಟಕ ಪ್ರವೇಶ ಮಾಡಿದಾಗ ನಾನು ನನ್ನ ಪರಿಚಯದ ಎಲ್ಲಾ ಪತ್ರಕತ೯ರಿಗೂ ವಿನಂತಿಸಿದ್ದೆ ಆದರೆ ಬಾರಾ ಪಂಥ್ ಯಾತ್ರೆ ಪದಾಧಿಕಾರಿಗಳು ಪತ್ರಕತ೯ರನ್ನು ಹತ್ತಿರ ಬಿಟ್ಟುಕೊಳ್ಳಲೇ ಇಲ್ಲ.
ಶಿವಮೊಗ್ಗ ಜಿಲ್ಲೆಯ ಸಾಗರದ ಗಣಪತಿ ದೇವಾಲಯದಿಂದ ಹೊರಟು ಹೊಸನಗರ ತಾಲೂಕಿನ ಆಲಗೇರಿಮಂಡ್ರಿಯಲ್ಲಿ ತಂಗುವ ಬಾರಾಪಂಥ್ ಯಾತ್ರೆ ಮಾರ್ಗ ಮಧ್ಯದಲ್ಲಿ ಪುರಪ್ಪೆಮನೆ ಸಮೀಪದಲ್ಲಿ ಮದ್ಯಾಹ್ನದ ಬಿಸಿಲಲ್ಲಿ ಕೊಂಚ ಕಾಲ ವಿಶ್ರಮಿಸುವಾಗ ನಾನು ಮತ್ತು ನನ್ನಣ್ಣ ನಮ್ಮ ಮಕ್ಕಳ ಜೊತೆ ಪಾತ್ರ ದೇವತೆ ದರ್ಶನ ಮಾಡಿದೆವು.
ಭಂಡಾರ್ ಪ್ರಮುಖ್ ಆದ ಶ್ರೀ ಯೋಗಿ ಶಿವನಾಥ ಜೀ ಅವರ ದರ್ಶನ ಮಾಡಿ ಶಿವಮೊಗ್ಗದ ದೈನಿಕ ಜನ ಹೋರಾಟ ಪತ್ರಿಕೆಗೆ ಸಂದರ್ಶನಕ್ಕೆ ವಿನಂತಿಸಿದಾಗ ಅವರು ಸಂತೋಷದಿಂದ ಒಪ್ಪಿದ್ದು ಒಂದು ಪವಾಡ ಅನ್ನಿಸಿತ್ತು.
ಅದೇ ದಿನ ಸಂಜೆ ಆಲಗೇರಿ ಮಂಡ್ರಿಯಲ್ಲಿ ಬಾರಾಪಂಥ್ ದುನಿ ಪೂಜೆಗೆ ಹಾಯ್ ಬೆಂಗಳೂರು ಪತ್ರಿಕೆ ಮುಖ್ಯ ವರದಿಗಾರ ಶೃಂಗೇಶ್ ರನ್ನ ಕರೆದೊಯ್ದೆ ಅವರು ಅಲ್ಲಿಂದಲೇ ಸಂಪಾದಕರಾದ ರವಿ ಬೆಳಗೆರೆಗೆ ಕರೆ ಮಾಡಿ ವಿಚಾರ ತಿಳಿಸಿದರು.
ರವಿ ಬೆಳೆಗೆರೆ ಶೃಂಗೇಶರಿಗೆ ಅವತ್ತೇ ರಾತ್ರಿ ಬಾರಾ ಪಂಥ್ ಯಾತ್ರೆ ಸುದ್ದಿ ಪೋಟೋ ಕಳಿಸಲು ತಿಳಿಸಿ ಮರುದಿನ ಪ್ರಕಟ ಆಗುವ ಹಾಯ್ ಬೆಂಗಳೂರ್ ನಲ್ಲಿ ದೊಡ್ಡ ಸುದ್ದಿ ಮಾಡುವ ಉತ್ಸಾಹ ತೋರಿದರು.
ನಂತರ ನಡೆದಿದ್ದು ಇತಿಹಾಸ ಹಾಯ್ ಬೆಂಗಳೂರ್ ಬಾರಾ ಪಂಥ್ ಯಾತ್ರೆ ಚಿತ್ರ ಸಹಿತ ವರದಿ
ಪತ್ರಿಕೆ ಮುಖಪುಟದಲ್ಲಿ ಸುದ್ದಿ ಮಾಡಿತೋ ಆ ತಕ್ಷಣದಿಂದ ಈ ಯಾತ್ರೆ ನೋಡಲು ಜನ ಮುಗಿಬಿದ್ದರು, ಎಲ್ಲಾ ಟೀವಿ ಚಾನಲ್ ಮತ್ತು ರಾಜ್ಯದ ಎಲ್ಲಾ ಪತ್ರಿಕೆಗಳು ಸುದ್ದಿ ಮಾಡಿತು ಇದರಿಂದ ಬಾರಾ ಪಂಥ್ ಯಾತ್ರೆ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಜನ ಕದ್ರಿ ಮಠದಲ್ಲಿ ಸೇರಿದರು ಇದು ಶ್ರೀ ಫೀರ್ ಯೋಗಿ ಸೋಮನಾಥ ಜೀ ನನಗೆ ವಹಿಸಿದ ಕಾರ್ಯದ ಯಶಸ್ಸು ಮತ್ತು ಅವರ ತಪೋ ಶಕ್ತಿಯ ಪವಾಡ ಅಂತ ಅನ್ನಿಸಿತು ನನಗೆ.
ಕದ್ರಿ ರಾಜ ಯೋಗಿ ಪಟ್ಟಾಭಿಷೇಕ ನೋಡಲು ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಹೋಗ ಬೇಕು ಅನ್ನಿಸಿತು ಆದರೆ ಸಾಧ್ಯವಾಗಲಿಲ್ಲ ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ನಾಥಪಂಥದ ಮಹಾಂತರಾದ ಯೋಗಿ ಆದಿತ್ಯನಾಥರು ಭಾಗವಹಿಸಿದ್ದರು.
ಬಾರಾ ಪಂಥ್ ಯಾತ್ರೆ ಮುಗಿಸಿ ಹಾನಗಲ್ ಲೋಕೇಶ್ವರ ಮಠಕ್ಕೆ ಹೊರಟಿದ್ದ ಬಾರಾ ಪಂಥ್ ಅಖಾಡಾಗಳ ಮುಖ್ಯಸ್ಥರು ರಸ್ತೆ ತಪ್ಪಿ ನನ್ನ ಮನೆ ಎದುರು ಅವರನ್ನು ಬೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು .
ಈ ರೀತಿ ಆಕಸ್ಮಿಕ ಬೇಟಿಯಲ್ಲಿ ಅವರು ಕದ್ರಿ ಮಠದಲ್ಲಿ ನಡೆದ ಪಾತ್ರ ದೇವತೆ ಪ್ರಸಾದ ನನಗೆ ನೀಡಿದರು ಅವರಿಗೆ ನಾನು ಶ್ರೀ ಪೀರ್ ಯೋಗಿ ಸೋಮನಾಥ್ ಜೀ ನೀಡಿದ ಆದೇಶ ಅದು ಸಾಧ್ಯವಾದ ಬಗ್ಗೆ ಹೇಳಿದೆ ಅವರು ಹಾಯ್ ಬೆಂಗಳೂರ್ ಪತ್ರಿಕೆ ಅವರ ಜೊತೆ ತೆಗೆದುಕೊಂಡು ಹೋದರು ಮತ್ತು ಅವರು ಹೇಳಿದ್ದು ಪೀರ್ ಯೋಗಿ ಸೋಮನಾಥ್ ಜಿ ಅವರ ಹಾರೈಕೆಯೇ ನಮ್ಮ ನಿಮ್ಮ ಬೇಟಿಗೆ ಕಾರಣ ಆಗಿದೆ ಅದಕ್ಕಾಗಿಯೇ ನಮ್ಮ ಪ್ರಯಾಣದ ರಸ್ತೆ ತಪ್ಪಿ ನಿಮ್ಮಲ್ಲಿಗೆ ತಲುಪಿ ನಿಮ್ಮ ಬೇಟಿಗೆ ಕಾರಣ ಎಂದಾಗ ನನಗೆ ಆಶ್ವರ್ಯ ಆಗಿತ್ತು.
ಆದರೆ 2013ರಲ್ಲೆ (26- ಅಕ್ಟೋಬರ್ -2013) ಇಹಲೋಕ ಗುರುಗಳು ತ್ಯಜಿಸಿದ್ದರು ಅವರ ದೇಹವನ್ನ ಭಕ್ತರು ಮಠದ ಆವರಣದಲ್ಲೇ ಸಕ್ಕರೆಯಿಂದ ಸಮಾದಿ ಮಾಡಿದ್ದಾರೆ ಆದರೆ 2016 ರಲ್ಲಿ ಶ್ರೀ ಪೀರ್ ಯೋಗಿ ಸೋಮನಾಥ ಜೀ ಈ ರೀತಿ ನನಗೆ ದರ್ಶನ ಆಶ್ರೀವಾದ ಮಾಡಿದರು.
ಈಗ ಹೊಸ ಸ್ವಾಮೀಜಿ ಶ್ರೀ ಫೀರ್ ಯೋಗಿ ಜಗದೀಶ್ ಜೀ ಇದ್ದಾರೆ.
ಕುಂದಾಪುರದ ಸಿದ್ದಾಪುರದಿಂದ ಸುಮಾರು 10 ಕಿಮಿ ದೂರದಲ್ಲಿ ಎಡಮೊಗೆ ಇದೆ, ಕಮಲಶಿಲೆ ದೇವಸ್ಥಾನದಿಂದಲೂ ರಸ್ತೆ ಇದೆ.
ಈಗ ಇಲ್ಲಿಗೆ ರಸ್ತೆ, ನೀರು, ಕರೆಂಟ್ ಮತ್ತು ಪೋನ್ ಸಂಪಕ೯ವಿದೆ, ನಾಥಪಂಥದ ಬಗ್ಗೆ ಭಕ್ತಿ, ಆಸಕ್ತಿ ಇದ್ದವರು ಇಲ್ಲಿಗೆ ಬೇಟಿ ನೀಡಬಹುದು.
ಈ ಎಲ್ಲಾ ಹಿನ್ನೆಲೆಯಲ್ಲಿ ನನಗೆ 2028 ರಲ್ಲಿ ಇಲ್ಲಿಗೆ ತಲುಪುವ ಬಾರಾ ಪಂಥ್ ಯಾತ್ರೆ ಸಂದರ್ಭದಲ್ಲಿ ಈ ಪುಸ್ತಕ ಬರೆದು ಪ್ರಕಟಿಸುವ ಪ್ರೇರಣೆ 2016ರಲ್ಲೇ ಆಗಿತ್ತು.
ಶ್ರೀಕಾಲಬೈರವ ಮತ್ತು ಶ್ರೀಶಿವಗೋರಕ್ಷನಾಥರ ಅನುಗ್ರಹದಿಂದ ಇದು ಸಾಧ್ಯವಾಯಿತು.
#nathapanth #barapanth #jhoondi #UttarPradesh
#halawarimut #mangalore #kadri #triyambakeshwara #nasik
Comments
Post a Comment