Skip to main content

Posts

Showing posts with the label 25 km

Blog number 1875. ನನ್ನ ಮೊದಲ ಪಾದಯಾತ್ರೆ 12 ವಯಸ್ಸಲ್ಲಿ ಸಾಗರ ಟೂ ಆನಂದಪುರಂ 25 ಕಿ.ಮಿ.

#ನನ್ನ_ಮೊದಲ_ಪಾದಯಾತ್ರೆ_ಸಾಗರ_ಟೂ_ನಮ್ಮ_ಊರು #ಇ೦ದಿರಾಗಾಂಧಿ_ಬಂದಿಸಿದ_ಆ_ದಿನ. #ಸಾಗರದಿಂದ_ಆನಂದಪುರಂಗೆ_25_ಕಿಮಿ_ನಡೆದು_ಬಂದಿದ್ದೆ. #ಕಾ೦ಗ್ರೇಸ್_ಇಡೀ_ಸಾಗರ_ಪೇಟೆ_ಬಂದ್_ಮಾಡಿಸಿತ್ತು #ಕಾಗೋಡು_ನೇತೃತ್ವದಲ್ಲಿ_ಬಂದ್_ವಿರೋದಿಸಿ_ಮೆರವಣಿಗೆ #ಲಾಠಿ_ಚಾಜ್೯_ಕಾಗೋಡರ_ಕೈಯಿಗೆ_ಪೋಲಿಸರ_ಲಾಠಿಯಿಂದ_ಹಲ್ಲೆ_ಎಂಬ_ಸುದ್ದಿ. #ಆಗ_ಸಾಗರದ_ಶಾಸಕರು_ಕಾಗೋಡು_ತಿಮ್ಮಪ್ಪನವರು. #ಸಂಜಯ್_ಗಾಂಧಿ_ಯಂಗ್_ಬ್ರಿಗೇಡ್_ಪಡವಗೋಡು_ಸುಬ್ರಾವ್ #ಅವರ_ಘೋಷಣೆ_ಆದಾ_ರೋಟಿ_ಕಾಯೇoಗೆ_ಇಂದಿರಾ_ಗಾಂಧಿ_ಬಚಾಯೆಂಗೆ.    ಪ್ರತಿದಿನ 5 ನೇ ತರಗತಿಯಿಂದ 7 ನೇ ತರಗತಿಗೆ ನಮ್ಮ ಮನೆ ಯಡೇಹಳ್ಳಿಯಿಂದ ದಾಸಕೊಪ್ಪದ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಅಂದಾಜು 2 ಕಿ.ಮಿ. ನಡೆದು ಹೋಗುತ್ತಿದ್ದೆವು ಮಧ್ಯಾಹ್ನ ಊಟದ ಬೆಲ್ ಹೊಡೆದಾಗ 2 ಕಿ.ಮಿ. ಓಡಿ ಮನೆ ಸೇರಿ ಊಟ ಮಾಡಿ ತಿರುಗಿ ಓಡಿ ಶಾಲೆ ಸೇರಿ ಸಂಜೆ ಶಾಲೆ ಮುಗಿದ ಮೇಲೆ 2 ಕಿ.ಮಿ. ವಾಪಾಸು ಬರುವುದು ನಮ್ಮ ಎಲ್ಲಾ ಆಗಿನ ಗೆಳೆಯರ ಅಭ್ಯಾಸ ಸುಮಾರು 8 ಕಿ.ಮಿ. ಸಲೀಸಾಗಿ ಓಡಿ ನಡೆದು ಕ್ರಮಿಸುವ ಪಿಟ್ ನೆಸ್ ನಮ್ಮದು.  ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 600 ಅ೦ಕಕ್ಕೆ 520 ಅಂಕ ಪಡೆದದ್ದರಿಂದ ನಮ್ಮ ತಂದೆ ನನ್ನನ್ನು 8 ನೇ ತರಗತಿಗೆ ಇಂಗ್ಲೀಷ್ ಮೀಡಿಯಂಗೆ ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಸೇರಿಸಿದ್ದರು.   ಆನಂದಪುರಂನಿಂದ ಪ್ರತಿ ನಿತ್ಯ ರೈಲಿನ ಪ್ರಯಾಣ...