Skip to main content

Posts

Showing posts with the label 2023 Year Calendar of Shimoga DCC BANK is excellent and contains historical places of district

Blog number 1150. ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ 2023ರಲ್ಲಿ ಆನಂದಪುರಂನ ಐತಿಹಾಸಿಕ ಸ್ಮಾರಕ ಚಂಪಕ ಸರಸ್ಸುವಿದೆ.ಪ್ರತಿ ತಿಂಗಳ ಪೋಟೋದಲ್ಲಿ ಶಿವಮೊಗ್ಗ ಜಿಲ್ಲೆಯ ಇತಿಹಾಸವಿದೆ ಸು೦ದರವಾಗಿ ಮುದ್ರಿಸಿದ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ಜಿಲ್ಲೆಯ ಇತಿಹಾಸ - ಪ್ರೇಕ್ಷಣೀಯ ಸ್ಥಳದ ಮಹತ್ತದ ದಾಖಲೆಯ ಕ್ಯಾಲೆಂಡರ್ ಆಗಿದೆ. ಕ್ಯಾಲೆಂಡರ್ ಗಳಿಗೆ ಪ್ರಶಸ್ತಿ ನೀಡುವುದಾದರೆ ಪ್ರಥಮ ಪ್ರಶಸ್ತಿ ಈ ಕ್ಯಾಲೆಂಡರ್ ಗೆ ನೀಡಲೇ ಬೇಕು

#ಹೊಸವರ್ಷದ_ಡಿಸಿಸಿ_ಬ್ಯಾಂಕ್_ಕ್ಯಾಲೆಂಡರ್ #ಸುಂದರವಾದ_ಶಿವಮೊಗ್ಗ_ಜಿಲ್ಲೆಯ_ಚಿತ್ರಗಳೊಂದಿಗೆ #ಇದರಲ್ಲಿ_ಆನಂದಪುರಂನ_ಚಂಪಕ_ಸರಸ್ಸು_ಚಿತ್ರವೂ_ಇದೆ. #ಅಭಿನಂದನೆಗಳು_ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಚನ್ನವೀರಪ್ಪನವರಿಗೆ #ಈ_ಕ್ಯಾಲೆಂಡರ್_ನಿಜಕ್ಕೂ_ಅದ್ಬುತವಾಗಿದೆ.      ಬಹಳಷ್ಟು ರಾಜಕಾರಣಿಗಳು ಅಧಿಕಾರ ಸಿಕ್ಕಾಗ ತಮ್ಮ ಊರು ಮತ್ತು ಹಳ್ಳಿಯನ್ನು ದೂರದ ದೇಶವಾದ ಸಿಂಗಾಪುರದಂತೆ ಮಾಡುವುದಾಗಿ ಹೇಳಿ ಬಿಡುತ್ತಾರೆ.   ಆದರೆ ತಮ್ಮ ಊರಿನ ಚರಿತ್ರೆ ಸಿಂಗಾಪುರಕ್ಕಿಂತ ಶ್ರೀಮಂತವಾಗಿತ್ತು ಎಂಬ ಜ್ಞಾನ ಇಲ್ಲದವರ ಮುಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಬಿನ್ನವಾಗಿ ಕಾಣುತ್ತಾರೆ ಅದಕ್ಕೆ ಉದಾಹರಣೆ ಮೊನ್ನೆ ಅವರು ಬಿಡುಗಡೆ ಮಾಡಿದ 2023ರ ಕ್ಯಾಲೆಂಡರ್ ಅವರ ಜಿಲ್ಲೆಯ ಇತಿಹಾಸದ ಕಾಳಜಿ ತೋರಿಸಿದೆ.   2023ರ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ನ ಜನವರಿ ಮಾಸ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕೇಂದ್ರ ಕಛೇರಿ ಚಿತ್ರವಿದೆ.   ಪೆಬ್ರವರಿ ಮಾಸ ಶಿಕಾರಿಪುರದ ಅಂಜನಾಪುರದ ರೈತರ ನಿರಾವರಿ ಆಣೆಕಟ್ಟಿನ ಚಿತ್ರವಿದೆ.    ಮಾರ್ಚ ಮಾಸ ಸಕ್ರೆಬೈಲು ಆನೆ ಬಿಡಾರದ ಸುಂದರ ಚಿತ್ರ ಹಾಕಿದ್ದಾರೆ.   ಏಪ್ರಿಲ್ ಮಾಸಕ್ಕೆ ಶಿವಮೊಗ್ಗದ ಕೆಳದಿ ಅರಸರ ಶಿವಪ್ಪ ನಾಯಕರ ಬೇಸಿಗೆ ಅರಮನೆ ಚಿತ್ರವಿದೆ.    ಮ...