Blog number 1666. ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರ ಆಗಿದೆ ಎಂಬ ಅಪಪ್ರಚಾರ ನಿವಾರಣೆ ಆಗಬೇಕಾಗಿದೆ ಹಾಗಾದರೆ ಅಕ್ಕಿ ರೂಪದ ಈ ಕೃತಕ ಅಕ್ಕಿ ಯಾವುದು?
#ಪಡಿತರ_ಅಕ್ಕಿಯಲ್ಲಿ_ಪ್ಲಾಸ್ಟಿಕ್_ಅಕ್ಕಿ_ಮಿಶ್ರಣ_ಎಂಬ_ತಪ್ಪು_ಮಾಹಿತಿ #ಹಾಗಾದರೆ_ಪಡಿತರ_ಅಕ್ಕಿಯಲ್ಲಿ_ಅಕ್ಕಿ_ಆಕೃತಿಯ_ವಸ್ತು_ಯಾವುದು? #ಇದು_ಬಡತನ_ರೇಖೆಗಿಂತ_ಕೆಳಗಿನ_ವರ್ಗದವರಿಗೆ_ರಕ್ತಹೀನತೆ_ನಿವಾರಿಸಲು_ಕೇಂದ್ರ_ಸರ್ಕಾರದ_ಬಲವರ್ದಿತ_ಅಕ್ಕಿ #FRK_Fortified_Rice_Kernel. ಎಲ್ಲಾ ದೇಶದ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹೆಚ್ಚು ಶಕ್ತಿ ನೀಡುವ, ಹಸಿವು ನೀಗಿಸುವ ಸಲುವಾಗಿ ಅನೇಕ ಕಾರ್ಯಕಮ ಹಮ್ಮಿಕೊಳ್ಳುತ್ತದೆ ಅದರಂತೆ ನಮ್ಮ ದೇಶದಲ್ಲಿ 2023ರ ಮಾರ್ಚ್ ಅಂತ್ಯದಲ್ಲಿ 291 ಜಿಲ್ಲೆಗಳಲ್ಲಿ ಪಡಿತರ ಅಕ್ಕಿ ಮತ್ತು ಗೋದಿಯಲ್ಲಿ ನಿಗದಿತ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ- 12 ಬಲವರ್ದಿತ (ಇಂಗ್ಲಿಷ್ ನಲ್ಲಿ Fortified) ಮಿಶ್ರಣದ ಪುಡಿ ಮಿಶ್ರ ಮಾಡಿ ವಿತರಿಸುತ್ತಿದೆ ಈ ಮೂಲಕ ಬಡವರಲ್ಲಿ ರಕ್ತ ಹೀನತೆ ನಿವಾರಿಸುವ ಯೋಜನೆ ಭಾರತ ಸರ್ಕಾರದ್ದು. ಸಾರ್ವಜನಿಕರಲ್ಲಿ ಇದು ಪಡಿತರ ಅಕ್ಕಿ ಮತ್ತು ಗೋದಿ ಹಾಳಾಗದಂತೆ ಮಿಶ್ರ ಮಾಡಿದ ಕೀಟನಾಶಕ ಪ್ರಡಿ ಎಂಬ ಅಪಪ್ರಚಾರವಾಗಿತ್ತು. ಇದರಿಂದ ಅಕ್ಕಿ ಗೋದಿ ಚೆನ್ನಾಗಿ ತೊಳೆದು ಬೇಯಿಸುವುದರಿಂದ ಬಲವರ್ದಿತ ಪುಡಿ ಜನರ ದೇಹ ಸೇರದೆ ಗಟಾರಕ್ಕೆ ಹರಿದು ಹೋಗಿರುವುದರಿಂದ (ಭಾರತೀಯರು ಅಕ್ಕಿ ತೊಳೆಯದೆ ಅನ್ನ ಮಾಡುವುದಿಲ್ಲ) ಸರ್ಕಾರ ಪಡಿತರ ಅಕ್ಕಿ ಉತ್ಪಾದನೆಯಲ್ಲಿ ಬರುವ ನುಚ್ಚು (Broken Ric...