ಹನುಮಾನ್_ಅಂಶ್_ಸಿನಿಮಾ_ಅಭೂತಪೂವ೯_ಯಶಸ್ಸನಲ್ಲಿ
ನೀಮ್_ಕರೋಲಿಬಾಬಾ_ಪವಾಡ...
ನೀಮ್ ಕರೋಲಿ ಬಾಬಾ ಅವರ ಶಿಷ್ಯರು ವಿಶ್ವ ವಿಖ್ಯಾತರಾದ
#ಸ್ಟೀವ್_ಜಾಬ್ಸ್ (Apple),
#ಮಾರ್ಕ್_ಜುಕರ್‌ಬರ್ಗ್
#ವಿರಾಟ್_ಕೊಹ್ಲಿ ಮತ್ತು ಅವರ ಪತ್ನಿ #ಅನುಷ್ಕಾ_ಶರ್ಮಾ ಮುಂತಾದವರು.
ಈಗ ಪವಾಡದಂತೆ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಆಗಿರುವ #ಹನುಮಾನ್_ಅಂಶ್ ನೀಮ್ ಕರೋಲಿ ಭಾಬಾರದ್ದೇ ಆತ್ಮಕಥೆ.
Hanuman Ansh ಹಿಂದಿ ಸಿನಿಮಾದ ಪ್ರಮುಖ ನಿರ್ಮಾಪಕಿ #ರಾಗಿಣಿ_ಸೋನಾ ಇವರೊಂದಿಗೆ ಅನುಪ್ರಿಯಾ ನಗರ್ ಮತ್ತು ನಮ್ರತಾ ಜಿ. ಸಿಂಗ್ ಕೂಡ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ.
ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ, ಆಧ್ಯಾತ್ಮಿಕ ಗುರು #ನೀಮ್_ಕರೋಲಿ_ಬಾಬಾ ಅವರ ಜೀವನ ಆಧಾರಿತ ಈ ಹಿಂದಿ ಚಲನಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡು 360 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ದಾಖಲೆ ಬರೆದಿದೆ.
21 ವರ್ಷದ ಯುವತಿ ರಾಗಿಣಿ ಸೋನಾ ಅವರು ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ಈ ಚಿತ್ರವನ್ನು ನಿರ್ಮಿಸಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.
ಈ ಯಶಸ್ವಿ ಚಿತ್ರವನ್ನು #ವಿಶಾಲ್_ಚತುರ್ವೇದಿ ಅವರು ನಿರ್ದೇಶಿಸಿದ್ದಾರೆ.
ನೀಮ್ ಕರೋಲಿ ಬಾಬಾರನ್ನು ಭಕ್ತರು ಪ್ರೀತಿಯಿಂದ 'ಮಹಾರಾಜ್ ಜಿ' ಎಂದು ಕರೆಯುತ್ತಾರೆ, 20ನೇ ಶತಮಾನದ ಭಾರತದ ಅತ್ಯಂತ ಶ್ರೇಷ್ಠ ಹಾಗೂ ಜಾಗತಿಕವಾಗಿ ಪ್ರಭಾವ ಬೀರಿದ ಆಧ್ಯಾತ್ಮಿಕ ಸಂತರಲ್ಲಿ ಒಬ್ಬರು.
ಇವರ ಮೂಲ ಹೆಸರು #ಲಕ್ಷ್ಮೀ_ನಾರಾಯಣ್_ಶರ್ಮಾ,
ಜನ್ಮಸ್ಥಳ ಅಕ್ಬರ್‌ಪುರ, ಫಿರೋಜಾಬಾದ್ ಜಿಲ್ಲೆ, ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 11 ರಂದು ಜನಿಸಿದ್ದರು ಮತ್ತು 1973 ವೃಂದಾವನದಲ್ಲಿ ಸಮಾದಿ ಆದರು.
ಉತ್ತರ ಪ್ರದೇಶದ ಫರೂಖಾಬಾದ್ ಬಳಿಯ 'ನೀಬ್ ಕರೋರಿ' (Neeb Karori) ಎಂಬ ಗ್ರಾಮದಲ್ಲಿ ದೀರ್ಘಕಾಲ ತಪಸ್ಸು ಮಾಡಿದರು.
ಇದರಿಂದಾಗಿ ಅವರಿಗೆ '#ನೀಮ್_ಕರೋಲಿ_ಬಾಬಾ' ಎಂಬ ಹೆಸರು ಬಂತು.
ಉತ್ತರಾಖಂಡದ ಕೈಂಚಿ ಧಾಮ್, ನೈನಿತಾಲ್ ಬಳಿ 1964ರಂದು ಆಶ್ರಮ ಸ್ಥಾಪನೆ 1964ರಂದು ಮಾಡಿದ್ದರು.
ಭಕ್ತರು ಇವರನ್ನು ಸಾಕ್ಷಾತ್ ಹನುಮಂತನ ಅವತಾರವೆಂದೇ ನಂಬುತ್ತಾರೆ, ಉತ್ತರ ಭಾರತದಾದ್ಯಂತ ಇವರು ನೂರಕ್ಕೂ ಹೆಚ್ಚು ಭವ್ಯ ಹನುಮಾನ್ ಮಂದಿರಗಳನ್ನು ನಿರ್ಮಿಸಿದರು.
ಯಾವುದೇ ಆಡಂಬರ, ಪಾಂಡಿತ್ಯ ಪ್ರದರ್ಶನ ಅಥವಾ ಕಠಿಣ ಉಪದೇಶಗಳನ್ನು ನೀಡದ ಬಾಬಾ, ಯಾವಾಗಲೂ ಮೈಮೇಲೊಂದು ಸರಳ ಕಂಬಳಿ ಹೊದ್ದು ಕುಳಿತಿರುತ್ತಿದ್ದರು.
ಅವರ ಮುಖ್ಯ ಸಂದೇಶ ಕೇವಲ ಮೂರು ಮಾತುಗಳಲ್ಲಿತ್ತು...
"ಸಬ್ಕೋ ಪ್ಯಾರ್ ಕರೋ, ಸಬ್ಕೋ ಖಿಲಾವೋ, ಸತ್ಯ ಬೋಲೋ" ಅಂದರೆ ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಅನ್ನ ನೀಡಿ, ಸತ್ಯವನ್ನೇ ನುಡಿಯಿರಿ ಎಂಬುದು.
ಜಾಗತಿಕ ಖ್ಯಾತಿ ಮತ್ತು ಪಾಶ್ಚಿಮಾತ್ಯ ಗಣ್ಯರ ಭೇಟಿ
1960 ಮತ್ತು 70ರ ದಶಕದಲ್ಲಿ ಅಮೆರಿಕದ ಪ್ರೊಫೆಸರ್ #ರಿಚರ್ಡ್_ಆಲ್ಪರ್ಟ್ ನಂತರ ಬಾಬಾ ರಾಮ್ ದಾಸ್ ಎಂದು ಪ್ರಸಿದ್ಧರಾದರು ಅವರು ಭಾರತಕ್ಕೆ ಬಂದು ಬಾಬಾರ ಶಿಷ್ಯರಾದರು.
ಅವರು ಬರೆದ '#ಬಿ_ಹಿಯರ್_ನೌ' (Be Here Now) ಪುಸ್ತಕದ ಮೂಲಕ ಬಾಬಾರ ಖ್ಯಾತಿ ವಿಶ್ವದಾದ್ಯಂತ ಹರಡಿತು.
'ಬೀ ಹಿಯರ್ ನೌ' (Be Here Now) ಎಂಬುದು 1971ರಲ್ಲಿ ಪ್ರಕಟವಾದ ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯ ಯೋಗ, ಭಕ್ತಿ ಮತ್ತು ಆಧ್ಯಾತ್ಮಿಕತೆಯನ್ನು ಪರಿಚಯಿಸಿದ ಅತ್ಯಂತ ಪ್ರಭಾವಶಾಲಿ ಪುಸ್ತಕ.
ಇದರ ಲೇಖಕರು ಬಾಬಾ ರಾಮ್ ದಾಸ್ (ರಿಚರ್ಡ್ ಆಲ್ಪರ್ಟ್) ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ಮನಸ್ಸಿನ ಶಾಂತಿ ಮತ್ತು ಸತ್ಯವನ್ನು ಹುಡುಕುತ್ತಾ ಅವರು 1967ರಲ್ಲಿ ಭಾರತಕ್ಕೆ ಬಂದವರು
ನೀಮ್ ಕರೋಲಿ ಬಾಬಾರನ್ನ ಭೇಟಿ ಆದರು.
ಬಾಬಾರ ಅಪಾರ ಕರುಣೆ, ಪವಾಡಸದೃಶ ದಿವ್ಯಜ್ಞಾನ ಮತ್ತು ನಿಷ್ಕಲ್ಮಶ ಪ್ರೇಮಕ್ಕೆ ಮಾರುಹೋದ ಅವರು ಬಾಬಾರ ಶಿಷ್ಯರಾದರು.
ಬಾಬಾರವರು ಅವರಿಗೆ 'ರಾಮ್ ದಾಸ್' (ರಾಮನ ಸೇವಕ) ಎಂದು ನಾಮಕರಣ ಮಾಡಿದರು.
ನಂತರ ಅಮೆರಿಕಕ್ಕೆ ಹಿಂದಿರುಗಿದ ರಾಮ್ ದಾಸ್ ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಈ ಪುಸ್ತಕದ ರೂಪದಲ್ಲಿ ಹೊರತಂದರು.
ಪುಸ್ತಕವನ್ನು ನಾಲ್ಕು ವಿಶಿಷ್ಟ ಭಾಗಗಳಾಗಿ ವಿನ್ಯಾಸಗೊಳಿಸಲಾಗಿದೆ,
ಮೊದಲ ಭಾಗ (ಪ್ರಯಾಣ) ಡಾ. ರಿಚರ್ಡ್ ಆಲ್ಪರ್ಟ್ ಹಾರ್ವರ್ಡ್ ಪ್ರೊಫೆಸರ್ ಹುದ್ದೆಯಿಂದ ಭಾರತಕ್ಕೆ ಬಂದು ನೀಮ್ ಕರೋಲಿ ಬಾಬಾರ ದರ್ಶನ ಪಡೆದು 'ಬಾಬಾ ರಾಮ್ ದಾಸ್' ಆಗಿ ರೂಪಾಂತರಗೊಂಡ ಕಥೆ.
ಎರಡನೇ ಭಾಗ (ಕೋರ್ ಭಾಗ) ಕಂದು ಬಣ್ಣದ ರಫ್ ಕಾಗದದ ಮೇಲೆ ವಿಶಿಷ್ಟ ಚಿತ್ರಗಳು ಮತ್ತು ಮುಕ್ತ ಕ್ಯಾಲಿಗ್ರಫಿ ಅಕ್ಷರಗಳ ಮೂಲಕ "ವರ್ತಮಾನದಲ್ಲಿ ಬದುಕುವುದು ಹೇಗೆ?" ಎಂಬುದನ್ನು ವಿವರಿಸುವ ಸಚಿತ್ರ ಆಧ್ಯಾತ್ಮಿಕ ಕಾವ್ಯ.
ಮೂರನೇ ಭಾಗ (ಕುಕ್‌ಬುಕ್ - ಸಾಧನಾ ಮಾರ್ಗದರ್ಶಿ), ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ಮಂತ್ರ ಜಪ, ಧ್ಯಾನ, ಆಹಾರ ನಿಯಮ ಮತ್ತು ಲೈಂಗಿಕ ಶಕ್ತಿಯ ಸಂಯಮವನ್ನು ಹೇಗೆ ಪಾಲಿಸಬೇಕೆಂದು ತಿಳಿಸುವ ಪ್ರಾಯೋಗಿಕ ಕೈಪಿಡಿ.
ನಾಲ್ಕನೇ ಭಾಗ ಭಾರತೀಯ ಆಧ್ಯಾತ್ಮಿಕ ಗ್ರಂಥಗಳು, ಗುರುಗಳು ಮತ್ತು ಪೂರಕ ಓದಿಗೆ ಉಪಯುಕ್ತ ಪುಸ್ತಕಗಳ ಪಟ್ಟಿ.
ಪುಸ್ತಕದ ಮುಖ್ಯ ಸಂದೇಶ
ವರ್ತಮಾನದಲ್ಲೇ ಇರು (Be Here Now),ಗತಕಾಲದ ನೆನಪುಗಳಲ್ಲಿ ಕೊರಗದೆ, ಭವಿಷ್ಯದ ಚಿಂತೆಯಲ್ಲಿ ಮುಳುಗದೆ, ಈ ಕ್ಷಣದಲ್ಲಿ (Present moment) ಪೂರ್ಣ ಪ್ರಜ್ಞೆಯಿಂದ ಬದುಕುವುದು.
ವ್ಯಕ್ತಿಯ ಬಾಹ್ಯ ಗುರುತು, ಪದವಿ, ಸಂಪತ್ತು ಮತ್ತು ಅಹಂಕಾರವನ್ನು ಕಳಚಿ ಆತ್ಮಸ್ವರೂಪವನ್ನು ಕಂಡುಕೊಳ್ಳುವುದು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪರಮಾತ್ಮನನ್ನು ಕಂಡು ನಿಸ್ವಾರ್ಥವಾಗಿ ಪ್ರೀತಿಸುವುದು ಮತ್ತು ಸೇವೆ ಮಾಡುವುದು.
#ಸ್ಟೀವ್_ಜಾಬ್ಸ್ (Apple) ತಮ್ಮ ಯೌವನದಲ್ಲಿ ಈ ಪುಸ್ತಕವನ್ನು ಓದಿದವರು ಆಳವಾಗಿ ಪ್ರಭಾವಿತರಾಗಿ 1974ರಲ್ಲಿ ನೀಮ್ ಕರೋಲಿ ಬಾಬಾರ ಆಶ್ರಮಕ್ಕೆ (ಕೈಂಚಿ ಧಾಮ್) ಭೇಟಿ ನೀಡಲು ಭಾರತಕ್ಕೆ ಬಂದಿದ್ದರು.
ಅವರ ಆ್ಯಪಲ್ ಉತ್ಪನ್ನಗಳ ಸರಳ ವಿನ್ಯಾಸದ (Minimalist design) ಮೇಲೆ ಈ ತತ್ವಗಳ ಪ್ರಭಾವವಿತ್ತು.
ಪಾಶ್ಚಿಮಾತ್ಯರಲ್ಲಿ ಭಾರತೀಯ ಅಧ್ಯಾತ್ಮದ ಅಲೆ ಸೃಷ್ಟಿಸಿದ ಬಾಬಾ ಅವರ ಈ ಪುಸ್ತಕವನ್ನು ಓದಿ ಯೋಗ, ಧ್ಯಾನ ಮತ್ತು ಹಿಂದೂ ಧರ್ಮದತ್ತ ಅನೇಕರು ಮುಖಮಾಡಿದರು.
#ಜಾರ್ಜ್_ಹ್ಯಾರಿಸನ್ (The Beatles ಬ್ಯಾಂಡ್ ಖ್ಯಾತಿ) ಈ ಪುಸ್ತಕದಿಂದ ಪ್ರೇರಿತರಾಗಿ 'Be Here Now' ಹೆಸರಿನ ಹಾಡನ್ನೇ ಸಂಯೋಜಿಸಿದರು.
#ಮಾರ್ಕ್_ಜುಕರ್‌ಬರ್ಗ್ (Mark Zuckerberg), ಫೇಸ್‌ಬುಕ್ ಪ್ರಾರಂಭದ ದಿನಗಳಲ್ಲಿ ಸಂಕಷ್ಟದಲ್ಲಿದ್ದಾಗ ಸ್ಟೀವ್ ಜಾಬ್ಸ್ ಅವರ ಸಲಹೆಯಂತೆ 2015ರಲ್ಲಿ ಕೈಂಚಿ ಧಾಮಕ್ಕೆ ಭೇಟಿ ನೀಡಿ ಧ್ಯಾನ ಮಾಡಿದ್ದರು.
#ಹಾಲಿವುಡ್_ನಟಿ_ಜೂಲಿಯಾ_ರಾಬರ್ಟ್ಸ್ ಬಾಬಾರ ಫೋಟೋ ನೋಡಿ ಪ್ರಭಾವಿತರಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದರು.
ಭಾರತೀಯ ಕ್ರಿಕೆಟಿಗ #ವಿರಾಟ್_ಕೊಹ್ಲಿ ಮತ್ತು ಪತ್ನಿ #ಅನುಷ್ಕಾ_ಶರ್ಮಾ ಕೂಡ ನಿಯಮಿತವಾಗಿ ಕೈಂಚಿ ಧಾಮಕ್ಕೆ ಭೇಟಿ ನೀಡುತ್ತಾರೆ.
ಅದ್ಭುತ ಪವಾಡಗಳಲ್ಲಿ ರೈಲು ಚಲಿಸದಂತೆ ನಿಲ್ಲಿಸಿದ್ದು, ಕೈಂಚಿ ಧಾಮದ ಭಂಡಾರದಲ್ಲಿ ತುಪ್ಪ ಮುಗಿದಾಗ ನದಿಯ ನೀರನ್ನೇ ತುಪ್ಪವಾಗಿ ಪರಿವರ್ತಿಸಿದ್ದು ಮತ್ತು ತಮ್ಮ ಭಕ್ತರ ಆಲೋಚನೆಗಳನ್ನು ಮೊದಲೇ ಗ್ರಹಿಸಿ ಸಂಕಷ್ಟಗಳಿಂದ ಪಾರುಮಾಡುತ್ತಿದ್ದ ಹಲವು ಪವಾಡಗಳ ಕಥೆಗಳು ಇಂದಿಗೂ ಪ್ರಸಿದ್ಧವಾಗಿವೆ.
ಬಿ ಹೀಯರ್ ನೌ' (Be Here Now) ಪುಸ್ತಕವನ್ನು ಬರೆದ ಪ್ರಸಿದ್ಧ ಲೇಖಕರು ರಾಮ್ ದಾಸ್ (Ram Dass) ಅವರ ಮೂಲ ಹೆಸರು ರಿಚರ್ಡ್ ಆಲ್ಪರ್ಟ್.
ಈ ಪುಸ್ತಕವು ಆಧ್ಯಾತ್ಮಿಕತೆ ಮತ್ತು ಯೋಗದ ಕುರಿತು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ.
#hanumanamsh #neembabakaroli #richardalbert #ramdas
#Virat Kohli #anushkasharma #behrarnow #juliarobert
#markjukarberk #stewjabs
Comments
Post a Comment