Skip to main content

Posts

Showing posts with the label Avakyi pickles really wonderful taste

Blog number 2069. ಮಲೆನಾಡಿನ ಅಪ್ಪೆ ಮಿಡಿ ಕೊರತೆ ಮತ್ತು ಆಂದ್ರ ಶೈಲಿಯ ಬೆಳೆದ ಗೊರಟಾದ ಮಾವಿನ ಕಾಯಿ ಅವಕಾಯಿ ಉಪ್ಪಿನ ಕಾಯಿ

#ಈ_ವರ್ಷ_ಅಪ್ಪೆಮಾವಿನ_ಮಿಡಿ_ಇಲ್ಲ. #ಮೊದ_ಮೊದಲು_ಬಂದ_ಮಿಡಿ_ಖರೀದಿಸಲಿಲ್ಲ #ಸ್ವಲ್ಪ_ದಿನದ_ನಂತರ_ಇನ್ನೂ_ಒಳ್ಳೆ_ಮಿಡಿ_ಬಂದಿತೆಂಬ_ನಿರೀಕ್ಷೆ #ಈ_ವರ್ಷದ_ವಿಪರೀತ_ಬಿಸಿಲು_ಉಷ್ಣಾಂಶಗಳು_ಮೊನ್ನೆ_ಬಂದ_ಗಾಳಿ_ಮಳೆ #ಉಪ್ಪಿನಕಾಯಿ_ಮಾವಿನಮಿಡಿ_ಮುಗಿದ_ಅಧ್ಯಾಯ #ಗಾಳಿ_ಮಳೆಗೆ_ಉದುರಿದ_ಗೊರಟು_ಆಗಿರುವ_ಬಲಿತ_ಮಾವಿನಕಾಯಿಂದ #ಆಂದ್ರ_ಸ್ಟೈಲ್_ಅವಕಾಯಿ_ತಯಾರು.   ಪಶ್ಚಿಮ ಘಟ್ಟದ ಮಲೆನಾಡಿನ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು, ಉಡುಪಿ ಮತ್ತು ಮಂಗಳೂರು ಜಿಲ್ಲೆಯವರಿಗೆ ಮಾತ್ರ ಅತ್ಯಂತ ಪ್ರಿಯವಾದ ಅಪ್ಪೆಮಿಡಿ (tender mango) ಉಪ್ಪಿನ ಕಾಯಿ ಬೇಕೇ ಬೇಕು.  ಬೇರೆ ಪ್ರದೇಶದವರಿಗೆ ಇದು ಇಷ್ಟವಿಲ್ಲ ಮತ್ತು ಅದರ ಬಳಕೆಯೂ ಇಲ್ಲ.   ಆದರೆ ಈ ಪ್ರದೇಶದವರು ಯಾವ ದೇಶದಲ್ಲಿದ್ದರೂ ಅವರಿಗೆ ಅಪ್ಪಟ ಅಪ್ಪೆಮಿಡಿ ಉಪ್ಪಿನಕಾಯಿ ಬೇಕೆ ಬೇಕು.   ಆಯಾ ಜಿಲ್ಲೆಯ ನಿರ್ದಿಷ್ಟ ಪ್ರದೇಶದ ಅಪ್ಪೆಮಿಡಿ ಮತ್ತು ಅದರಲ್ಲಿ ವಿವಿಧ ಸ್ವಾದದ್ದು ಅವರ ಆಯ್ಕೆ ಆಗಿದೆ.    ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿ ಮತ್ತು ಅದನ್ನು ಸಂರಕ್ಷಿಸಿ ವರ್ಷಪೂರ್ತಿ ಬಳಸುವುದು ಶ್ರಮದಾಯಕ ಮತ್ತು ಅದರ ತಯಾರಿಯ ಕೌಶಲ್ಯ ಗೊತ್ತಿರುವ ವೃತ್ತಿಪರರಿಗೆ ಮಾತ್ರ ಸಾಧ್ಯ.    ಅಪ್ಪೆ ಮಿಡಿ ಆಯ್ಕೆ, ಅದನ್ನು ಶುಭ್ರವಾಗಿ ಒರೆಸಿ ತೊಟ್ಟು ನಿವಾರಿಸಿ ಅದನ್ನ ಹುರಿದ ಹರಳು ಉಪ್ಪಿನಲ...