Skip to main content

Posts

Showing posts with the label Where is cofee Nadu chandu?

Blog number 2308

#ಕಾಫಿನಾಡು_ಚಂದು ಜಾಲತಾಣದಲ್ಲಿ ಕಾಣುತ್ತಿಲ್ಲ ಏಕೆ? ಇವರದ್ದೇ_ಸ್ಟೈಲ್_ಮತ್ತು_ಮ್ಯಾನರಿಸಂನಿಂದ_ಕರ್ನಾಟಕದ_ಸೆಲೆಬ್ರಿಟಿ. #ಕಾಫಿನಾಡು #socialmedia #shivamogga #ShivamoggaNews #chickamagalore #mudigere #kannada #punithfans #punithrajkumar #shivarajkumarfans #punithrajkumarfans #cofinaduchandu     "ನಾನು ಪುನಿತಣ್ಣ ಶಿವಣ್ಣನವರ ಅಭಿಮಾನಿ ಕಾಫಿ ನಾಡು ಚಂದು" ..... ಎನ್ನುತ್ತಾ ತಮ್ಮದೇ ಶೈಲಿಯಿಂದ ಕರ್ನಾಟಕದ ಜನಪ್ರಿಯ ಸೆಲೆಬ್ರಿಟಿ ಆಗಿರುವ ಕಾಫಿನಾಡು ಚಂದು ಅವರನ್ನು ಅವತ್ತು ಅಂದರೆ ಇವತ್ತಿಗೆ ಎರಡು ವರ್ಷದ ಹಿಂದೆ ಇದೇ ದಿನ  ದಿಡೀರಾಗಿ ನನ್ನ ಕಛೇರಿ ಒಳಗೆ ಕರೆ ತಂದವರು ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ಟ್ರಾವೆಲ್ಸ್ ನ ಶಿವಣ್ಣ.    ಕಾಫಿನಾಡು ಈ ಪರಿ ಜನಪ್ರಿಯತೆಗೆ ಕಾಫಿನಾಡು ಚಂದು ಅವರ ಸೋಷಿಯಲ್ ಮೀಡಿಯಾದ ನಿತ್ಯ ನೂರಾರು ವಿಡಿಯೋಗಳು.    ಪ್ರಾರಂಭದಿಂದ ಕಾಫಿನಾಡು ಚಂದುವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡುತ್ತಾ ಬಂದಿದ್ದೇನೆ ನಂತರ ಇವರು ವೈರಲ್ ಆದರು ಆಗ ಅನ್ನಿಸಿದ್ದು ಈ ಕಲಾವಿದ ಯಾವುದೋ ಉದ್ದೇಶದಿಂದ ದಿಡೀರ್ ಜನಪ್ರಿಯತೆಗಾಗಿ ಹೀಗೆಲ್ಲ ಮಾಡುತ್ತಿರಬಹುದೆನ್ನಿಸಿತು ಜೊತೆಗೆ ಮಾಧ್ಯಮಗಳು ವಿಪರೀತ ಪ್ರಚಾರ ನೀಡಿ ನಂತರ ಈ ಮುಗ್ದ ದುರಂತ ಮಾಡಿಕೊಂಡರೆ ಎಂಬ ಭಯ ಕೂಡ ಅನೇಕರಂತೆ ನಾನು ವ್ಯಕ್ತಪಡಿಸಿದ್ದೆ.   ಆದರೆ ಕಾಫಿನಾಡ...