#ಕಾಫಿನಾಡು_ಚಂದು
ಜಾಲತಾಣದಲ್ಲಿ ಕಾಣುತ್ತಿಲ್ಲ ಏಕೆ?
ಇವರದ್ದೇ_ಸ್ಟೈಲ್_ಮತ್ತು_ಮ್ಯಾನರಿಸಂನಿಂದ_ಕರ್ನಾಟಕದ_ಸೆಲೆಬ್ರಿಟಿ.
#ಕಾಫಿನಾಡು #socialmedia #shivamogga #ShivamoggaNews #chickamagalore #mudigere #kannada #punithfans #punithrajkumar #shivarajkumarfans #punithrajkumarfans #cofinaduchandu
"ನಾನು ಪುನಿತಣ್ಣ ಶಿವಣ್ಣನವರ ಅಭಿಮಾನಿ ಕಾಫಿ ನಾಡು ಚಂದು" ..... ಎನ್ನುತ್ತಾ ತಮ್ಮದೇ ಶೈಲಿಯಿಂದ ಕರ್ನಾಟಕದ ಜನಪ್ರಿಯ ಸೆಲೆಬ್ರಿಟಿ ಆಗಿರುವ ಕಾಫಿನಾಡು ಚಂದು ಅವರನ್ನು ಅವತ್ತು ಅಂದರೆ ಇವತ್ತಿಗೆ ಎರಡು ವರ್ಷದ ಹಿಂದೆ ಇದೇ ದಿನ ದಿಡೀರಾಗಿ ನನ್ನ ಕಛೇರಿ ಒಳಗೆ ಕರೆ ತಂದವರು ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ಟ್ರಾವೆಲ್ಸ್ ನ ಶಿವಣ್ಣ.
ಕಾಫಿನಾಡು ಈ ಪರಿ ಜನಪ್ರಿಯತೆಗೆ ಕಾಫಿನಾಡು ಚಂದು ಅವರ ಸೋಷಿಯಲ್ ಮೀಡಿಯಾದ ನಿತ್ಯ ನೂರಾರು ವಿಡಿಯೋಗಳು.
ಪ್ರಾರಂಭದಿಂದ ಕಾಫಿನಾಡು ಚಂದುವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡುತ್ತಾ ಬಂದಿದ್ದೇನೆ ನಂತರ ಇವರು ವೈರಲ್ ಆದರು ಆಗ ಅನ್ನಿಸಿದ್ದು ಈ ಕಲಾವಿದ ಯಾವುದೋ ಉದ್ದೇಶದಿಂದ ದಿಡೀರ್ ಜನಪ್ರಿಯತೆಗಾಗಿ ಹೀಗೆಲ್ಲ ಮಾಡುತ್ತಿರಬಹುದೆನ್ನಿಸಿತು ಜೊತೆಗೆ ಮಾಧ್ಯಮಗಳು ವಿಪರೀತ ಪ್ರಚಾರ ನೀಡಿ ನಂತರ ಈ ಮುಗ್ದ ದುರಂತ ಮಾಡಿಕೊಂಡರೆ ಎಂಬ ಭಯ ಕೂಡ ಅನೇಕರಂತೆ ನಾನು ವ್ಯಕ್ತಪಡಿಸಿದ್ದೆ.
ಆದರೆ ಕಾಫಿನಾಡು ಚಂದು ಹೊಗಳಿಕೆಗೆ ಏರದೆ ತೆಗಳಿಕೆಗೆ ಕುಗ್ಗದೆ ಒಂದೇ ರೀತಿ ಇರುವುದು ಸಮಾದಾನ, ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸಮೀಪದ ಮಲಂದೂರು, ತಂದೆ ಬಸವರಾಜ್ ಮತ್ತು ತಾಯಿ ಮುದ್ದಮ್ಮ, ಕಡು ಬಡ ಕುಟುಂಬದಲ್ಲಿ ಜನಿಸಿದ ಕಾಫಿನಾಡು ಚಂದು ಓದಿ ಮುಂದೆ ಪೋಲೀಸಾಗಬೇಕೆಂಬ ಇವರ ತಾಯಿಯ ಆಸೆ ಈಡೇರಲಿಲ್ಲ ಕಾರಣ ಇವರು 9ನೇ ತರಗತಿಯಲ್ಲಿದ್ದಾಗಲೇ ಇವರ ತಾಯಿ ಕ್ಯಾನ್ಸರ್ ಗೆ ಬಲಿಯಾದರು ಚಂದು ವಿದ್ಯಾಬ್ಯಾಸ ಅಲ್ಲಿಗೆ ಮುಕ್ತಾಯವಾಯಿತು.
ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ ಇವರು, ಅವರಿಬ್ಬರ ಎಲ್ಲಾ ಸಿನಿಮಾ ನೋಡಿದ್ದಾರೆ ಅವರಿಬ್ಬರ ಹೆಸರಿಲ್ಲದೆ ಇವರ ಡಯಲಾಗ್ ಇರಲು ಸಾಧ್ಯವೇ ಇಲ್ಲ.
ಕಾಫಿನಾಡು ಚಂದುಗೆ ಈಗ 40 ರ ಹರೆಯ, ವಿವಾಹಿತರು ದೊಡ್ಡ ಮಗ ಪಿಯೂಸಿ ವ್ಯಾಸಂಗ ಮಾಡುತ್ತಿದ್ದಾನೆ, ಹೊಟ್ಟೆಪಾಡಿಗೆ ರಿಕ್ಷಾ ಚಾಲನೆ ಇವರ ವೃತ್ತಿ.
ಕಾಫಿನಾಡು ಚಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಿದ್ಧಿ ಪಡೆದ ನಂತರ ರಿಕ್ಷಾ ಚಾಲನೆ ಮಾಡಲು ಆಗುತ್ತಿಲ್ಲ, ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ನಿತ್ರಾಣರಾಗಿ ಬಂದಿದ್ದಾರೆ ನಾನು ಅವರಿಗೆ ಎಲ್ಲರಂತೆ ವಿಡಿಯೋ ಡಯಲಾಗಿಗೆ ಒತ್ತಾಯಿಸಲಿಲ್ಲ ಅವರ ನನ್ನ ಬೇಟಿಯ ನೆನಪಿಗಾಗಿ ನನ್ನ ಪುಸ್ತಕ ನೀಡಿ ಶುಭ ಹಾರೈಸಿದೆ.
ಸಾಗರದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಇವರನ್ನು ಆಹ್ವಾನಿಸಿದ್ದರಿಂದ ಹೋಗುತ್ತಿದ್ದರು ಮುಂದಿನ ದಿನದಲ್ಲಿ youtube channel ಮಾಡಿ ಆಮೂಲಕ ಗೂಗಲ್ ನಿಂದ ಆದಾಯ ಪಡೆಯುವ ಪ್ರಯತ್ನ ಮಾಡಲು ಸಲಹೆ ನೀಡಿದೆ, ಈ ಬಗ್ಗೆ ಹೆಚ್ಚಿನ ಸಲಹೆ ಮಾಹಿತಿಗೆ ಸಂಪರ್ಕಿಸುವುದಾಗಿ ಅದಕ್ಕಾಗಿ ನನ್ನ ವಿಸಿಟಿಂಗ್ ಕಾರ್ಡ್ ಪಡೆದು ಹೋದರು.
ಮುಖತಃ ಬೇಟಿಯಿಂದ ಮತ್ತು ಅವರ ಜೊತೆ ಮಾತಿನಲ್ಲಿ ನನಗೆ ಅನ್ನಿಸಿದ್ದು ಕಾಫಿನಾಡು ಚಂದು ಮುಗ್ದ ಮತ್ತು ಪ್ರಾಮಾಣಿಕ, ಈತನಲ್ಲಿ ಅಭಿನಯ, ಹಾಡುಗಳ ಮೂಲಕ ತನ್ನ ಭಾವನೆ ನಿಂತ ಸ್ಥಳದಲ್ಲೇ ಸುಂದರವಾದ ಶೈಲಿಯಲ್ಲಿ ಅರ್ಥಪೂರ್ಣವಾಗಿ ರಚಿಸಿ ಅಭಿನಯದ ಜೊತೆ ಹಾಡುತ್ತಾ ಸಾದರ ಪಡಿಸುವ ವಿಶೇಷ ಕಲೆ ಹುಟ್ಟಿನಿಂದ ಸಹಜವಾಗಿ ಬಂದಿರುವುದು ಆಶ್ಚರ್ಯವೇ ಆಗಿದೆ.
ರಾಜ್ಯದ ಮೂಲೆ ಮೂಲೆಗೂ ಕಾಫಿನಾಡು ಚಂದು ಪರಿಚಯ ಪ್ರಚಾರ ಪಡೆದು ಜನಪ್ರಿಯರಾಗಿದ್ದಾರೆ ನಾನೂ ಕಾಫಿನಾಡು ಚಂದು ಅಭಿಮಾನಿಯೆ ಆಗಿದ್ದೇನೆ.
Comments
Post a Comment