#ಮದುಸೂದನ್_ಬೇಕಲ್
ಕೃಷ್ಣ ಸ್ಟೋರ್ ಮಾಲಿಕರು
ಆನಂದಪುರಂ
ಹೆಸರು ಪ್ರಚಾರಕ್ಕೆ ಆಸೆ ಪಡದ
ನಿಸ್ವಾರ್ಥಿ ದೈವ ಭಕ್ತ
#Anandapuram #sagar #shivamogga #bakal #kerala #Kumble #kasaragodnews #kasaragod #ayyappaswamy #shabarimala #temple
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಹೊಸನಗರ ರಸ್ತೆಯಲ್ಲಿರುವ ಯಡೇಹಳ್ಳಿ ಎಂಬ ನಮ್ಮೂರ ಪುರದೈವ ವರಸಿದ್ಧಿ ವಿನಾಯಕ ಸ್ವಾಮಿಯ ಹಿಂದಿನ ವರ್ಷದ ರಥೋತ್ಸವದ ಒಂದು ಬೆಳಗಿನ ಫೋಟೋ ನೋಡಿ.
ಇಲ್ಲಿನ ರಥ ಬೀದಿಯಲ್ಲಿ ಕಸ ಗುಡಿಸುತ್ತಿರುವವರು,ಉದ್ದನಾದ ಕಸಬರಿಗೆ ಹಿಡಿದುಕೊಂಡಿರುವವರೇ ಮಧುಸೂದನ್ ಬೇಕಲ್.
ಆನಂದಪುರಂನ ಶ್ರೀಮಂತ ಸುಸಂಸ್ಕೃತ ವ್ಯಾಪಾರಿ ಮನೆತನದ ಕಾಸರಗೋಡು ಮೂಲದ ದಿವಂಗತ ಜಲ ಕೃಷ್ಣಣ್ಣರ ಜೇಷ್ಠ ಪುತ್ರ ಇವರು.
60ರ ದಶಕದಲ್ಲಿ ಇವರ ತಂದೆ ಆನಂದಪುರಂಗೆ ಬಂದು ಪ್ರಾರಂಬಿಸಿದ ಕೃಷ್ಣ ಸ್ಟೋರ್ ಎಂಬ ದಿನಸಿ ಅಂಗಡಿ ಇಡೀ ಆನಂದಪುರಂಗೆ ಹೆಸರುವಾಸಿ ಆಯಿತು.
ಈ ಅಂಗಡಿ ಈಗಲೂ ಮುಂದುವರೆದಿದೆ, ಮೂಲ ಮಾಲೀಕರಾದ ಇವರ ತಂದೆ ಬೇಕಲ್ ಜಲಕೃಷ್ಣಣ್ಣ ಈಗಿಲ್ಲ ಅವರು ಮತ್ತು ಅವರ ಹೆಂಡತಿಯ ತಮ್ಮ ಕೊರಗಣ್ಣ ಈ ಅಂಗಡಿ ಖ್ಯಾತಿಗೆ ಕಾರಣರಾಗಿದ್ದರು.
ಈಗ ಈ ಅಂಗಡಿಯನ್ನು ಮಧುಸೂದನ್ ಬೇಕಲ್ ನಡೆಸಿಕೊಂಡು ಹೋಗುತ್ತಿದ್ದಾರೆ.
ಇವರ ಸಹೋದರ ಸಂತೋಷ್ ಬೇಕಲ್ ಮತ್ತು ಗಿರೀಶ್ ಬೇಕಲ್ ಪ್ರತ್ಯೇಕವಾಗಿದ್ದಾರೆ ಮೂವರು ಸಹೋದರಿಯರು ವಿವಾಹವಾಗಿ ಅವರವರ ಪತಿಯ ಮನೆಗಳಲ್ಲಿ ಇದ್ದಾರೆ
ಒಬ್ಬ ಸಹೋದರ ಸಂತೋಷ್ ಬೇಕಲ್ ಮಂಗಳೂರಲ್ಲಿ ವಿದ್ಯುತ್ ಗುತ್ತಿಗೆದಾರನಾಗಿ ಮುಂದುವರೆದರೆ ಇನ್ನೊಬ್ಬ ಸಹೋದರ ಗಿರೀಶ್ ಬೇಕಲ್ ಆನಂದಪುರಂನಲ್ಲೇ ನೆಲೆಸಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಲೀಡಿಂಗ್ ಎಲ್ಐಸಿ ಪ್ರತಿನಿಧಿ ಎಂಬ ಖ್ಯಾತಿ ಪಡೆದಿದಾರೆ.
ಕೇರಳದ ಕಾಸರಗೋಡು ಕುಂಬಳೆ ಸಮೀಪದ ಬೇಕಲ್ ಇವರ ಸ್ವಂತ ಊರು.
ಇವತ್ತು ಅಲ್ಲಿನ ಬೇಕಲ್ ಕೋಟೆ ವಿಶ್ವವಿಖ್ಯಾತ,ಅದನ್ನು ನಿರ್ಮಿಸಿದವರು ಕೆಳದಿ ಅರಸರು.
ರಾಮಕ್ಷತ್ರಿಯರು ಕೆಳದಿ ಅರಸರಿಗೆ ಕೋಟೆಕಾರರಾಗಿ, ಗೆರಿಲ್ಲಾ ಯುದ್ದ ತಂತ್ರಜ್ಞಾನ, ಟಂಕಸಾಲೆ ಮತ್ತು ರಾಜರ ದರ್ಬಾರುಗಳ ಸಭೆ, ಸಮಾರಂಭಗಳ ಪ್ರೋಟೋಕಾಲ್ ನೋಡುತ್ತಿದ್ದವರು.
ಮಹಾರಾಷ್ಟ್ರದ ವಿಜಯ ದುರ್ಗದ ಅರಸ ಅಪ್ರತಿಮ ಸಾಹಸಿ ಆತ ಅಯೋಧ್ಯದಲ್ಲಿ ಶ್ರೀರಾಮ ವನವಾಸಕ್ಕೆ ಹೋದಾಗ ಅಯೋದ್ಯೆ ಮೇಲೆ ದಂಡೆತ್ತಿ ಹೋಗುತ್ತಾರೆ ಭರತನಿಂದ ಸೋತಾಗ ಅಯೋಧ್ಯೆಯ ಸೈನ್ಯ ವಿಜಯ ದುರ್ಗ ಕೋಟೆ ವಶ ಪಡೆಯುತ್ತದೆ.
ಅಯೋಧ್ಯೆಯಿಂದ ಮಹಾರಾಷ್ಟ್ರದ ರತ್ನಗಿರಿ ಸಮೀಪದ ವಿಜಯದುರ್ಗ ಕೋಟೆಗೆ ಬಂದು ಆಡಳಿತ ನಡೆಸಿದ ಶ್ರೀ ರಾಮನ ಸೈನ್ಯದ ಯೋದರಾದ್ದರಿಂದ ಸ್ಥಳಿಯ ಕ್ಷತ್ರಿಯರು ಇವರನ್ನ ರಾಮಕ್ಷತ್ರಿಯರೆಂದು ಕರೆದರು.
ಇವರು ಕೋಟೆ ನಿರ್ಮಾಣದಲ್ಲಿ ಇವರದ್ದು ಎತ್ತಿದ ಕೈ ಆದ್ದರಿಂದ ಕೋಟೆಕಾರರೆಂದು ಕರೆಯುತ್ತಾರೆ.
ಪೋರ್ಚುಗೀಸರ ದಾಳಿ ಮತ್ತು ಮತಾಂತರದ ಪ್ರಯತ್ನ ವಿರೋದಿಸಿ ರಾಮಕ್ಷತ್ರಿಯರು ಗೋವಾದಿಂದ ವಿಜಯನಗರ ಸಂಸ್ಥಾನಕ್ಕೆ ಆಸರೆ ಕೇಳಿ ಬಂದ ಯೋದರು.
ವಿಜಯನಗರ ಅರಸರು ಅವರ ವ್ಯಾಪ್ತಿಯ ಅನೇಕ ರಾಜರುಗಳಿಗೆ ರಾಮಕ್ಷತ್ರಿಯ ಸೈನ್ಯದ ತುಕಡಿಗಳನ್ನು ಕಳಿಸಿಕೊಡುತ್ತಾರೆ.
ಈ ರೀತಿ ಕೆಳದಿ ಅರಸರ ಆಶ್ರಯ ಪಡೆದು ಕೆಳದಿ ರಾಜ್ಯ ವಿಸ್ತಾರಕ್ಕೆ ಕಾರಣರಾದವರು ಈ ರಾಮ ಕ್ಷತ್ರಿಯರು.
ರಾಮಕ್ಷತ್ರಿಯ ವಂಶಸ್ಥರಾದ ಬೇಕಲ್ ಮೂಲದ ಮಧುಸೂದನ್ ಬೇಕಲ್ ಆನಂದಪುರಂ ಹೋಬಳಿಯಲ್ಲಿ ತಮ್ಮ ವೃತ್ತಿಯ ಜೊತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಸಹಾಯ ಮಾಡುವ ದೈವ ಭಕ್ತರಾಗಿದ್ದಾರೆ.
ಅವರು ನಮ್ಮ ಊರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ ಮುಖ್ಯಸ್ಥರು ಹೌದು.
ಅಷ್ಟೇ ಅಲ್ಲ ಇವರು ಹಿಂದೂ ಧರ್ಮೀಯರ ರುದ್ರ ಭೂಮಿ ಸ್ಮಶಾನಗಳನ್ನು ಆಧುನಿಕರಣ ಗೊಳಿಸುವ ಕೆಲಸ ಪ್ರಾರಂಬಿಸಿದ್ದಾರೆ.
ಹಿಂದೂ ರುದ್ರಭೂಮಿಗಳು ಎಲ್ಲಾ ಊರಿನಲ್ಲೂ ನಿರ್ಲಕ್ಷಕ್ಕೆ ಒಳಗಾಗಿರುವುದು ಕೂಡ ಹೌದಾಗಿದೆ.
ಸುತ್ತಮುತ್ತಲಿನ ಯಾವುದೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಇದ್ದರೆ ಇವರು ಯಾವುದೇ ಆಹ್ವಾನ ಇಲ್ಲದೆ ಅಲ್ಲಿ ಪ್ರತ್ಯಕ್ಷರಾಗಿ ತಮ್ಮ ಸೇವೆಯನ್ನು ಮಾಡಿ ತೆರಳುತ್ತಾರೆ.
ಆದರೆ ಇವರ ಸಹಾಯ ಮತ್ತು ಇವರ ಕೆಲಸ ಮಾತ್ರ ಯಾರಿಗೂ ಗೊತ್ತಾಗದ ಹಾಗೆ ಪ್ರಚಾರವಿಲ್ಲದೆ ದೇವರಿಗೆ ಮಾತ್ರ ಸಲ್ಲಿಸುವ ಕೆಲಸ ಇವರು ಮಾಡುತ್ತಾರೆ.
ಆದ್ದರಿಂದಲೇ ಆನಂದಪುರಂನ ಜನ ಅತ್ಯಂತ ಹೆಚ್ಚು ಗೌರವ ಇವರಿಗೆ ನೀಡುತ್ತಾರೆ ಇವರೂ ಅದಕ್ಕೆ ಅಹ೯ರಾಗಿದ್ದಾರೆ.
ನೀವು ಅವರ ಫೋನ್ ನಂಬರ್ 99011 41900 ಕ್ಕೆ ಕರೆ ಮಾಡಿ ಅಭಿನಂದಿಸಬಹುದು.
Comments
Post a Comment