#ಮಂಗನ_ಕಾಯಿಲೆ
ಕೆ.ಎಫ್ ಡಿ. -ಕ್ಯಾಸನೂರು ಪಾರೆಸ್ಟ್ ಡಿಸೀಸ್
ನಮ್ಮ_ಜಿಲ್ಲೆ_ಶಿವಮೊಗ್ಗದಲ್ಲಿ_ಕ್ಯಾಸನೂರು_ಪಾರೆಸ್ಟ್_ಡಿಸೀಸ್
ಮಂಗನ_ಕಾಯಿಲೆಗೆ_ವ್ಯಾಕ್ಸಿನ್_ಇದಿಯಾ?
ಅದು_ಪರಿಣಾಮಕಾರಿಯಾ?
ಪರಿಕ್ಷಾ_ಕೇಂದ್ರ_RTPCRಲ್ಯಾಬ್_ಎಲ್ಲಿದೆ?
#ಮಂಗನಕಾಯಿಲೆ #casanuruforestdeseas #kfd #RTPCRlab #malenadu #westernghatsofindia #HealthMinister #DineshGunduRao #sagar
#Aralagodu #kargal #jogfalls #ShivamoggaNews #govtofkarnataka #congressgovernment #CongressParty
2024 ರ ಕೊನೆಯಲ್ಲಿ ರಾಜ್ಯ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಸಾಗರಕ್ಕೆ ಮಂಗನ ಕಾಯಿಲೆ ಬಗ್ಗೆ ಆಗಮಿಸುತ್ತಿರುವುದು ಸ್ವಾಗತಾರ್ಹ ಈ ಸಂದರ್ಭದಲ್ಲಿ ಮಂಗನ ಕಾಯಿಲೆ ಬಗ್ಗೆ ಹಿಂದಿನ ಲೇಖನಗಳು ಮಲೆನಾಡ ಆಸಕ್ತರ ಅವಾಗಾಹನೆಗಾಗಿ.
2024 ರ ಹೊಸ ವರ್ಷದ ಮೊದಲ ತಿಂಗಳಲ್ಲೇ ಮಂಗನಕಾಯಿಲೆ / ಕ್ಯಾಸನೂರು ಪಾರೆಸ್ಟ್ ಡಿಸೀಸ್ / ಕೆ.ಎಪ್.ಡಿ. ಎಂಬ ಕಾಯಿಲೆಗೆ ಮೊದಲ ಬಲಿ ಆಗಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯಿತಿನ ಒಪ್ಪನು ಮನೆ ಗ್ರಾಮದ 18 ವರ್ಷದ ಅನನ್ಯ.
2019 ರ ಜನವರಿ 5ರಂದು ಸಾಗರ ತಾಲೂಕಿನ ಅರಲು ಗೋಡು ಗ್ರಾಮ ಪಂಚಾಯಿತಿ ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಕೇವಲ 5-6 ಕಿ.ಮೀ. ವ್ಯಾಪ್ತಿಯಲ್ಲಿದೆ ಅಲ್ಲಿನ ಕಾಲೇಜು ವಿದ್ಯಾರ್ಥಿನಿ ಶ್ವೇತ ಕಾಲೇಜಿನ ರಜಾ ದಿನದಲ್ಲಿ ತಮ್ಮ ಅಡಿಕೆ ತೋಟದಲ್ಲಿ ಬಿದ್ದ ಅಡಿಕೆ ಸಂಗ್ರಹಿಸುವಾಗ ಈ ಮಂಗನ ಕಾಯಿಲೆಗೆ ತುತ್ತಾಗಿದ್ದು ನಂತರ ಸುಮಾರು 25 ಕ್ಕೂ ಅಧಿಕ ಜನರು ಇದಕ್ಕೆ ಬಲಿಯಾದರು.
2022 ರಲ್ಲಿ ಇದೇ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಸ್ವಾಮಿ ಕರುಮನೆ ಬಲಿಯಾದರು.
ಇವತ್ತು 2024 ರ ಪ್ರಾರಂಬದಲ್ಲಿ ಅನನ್ಯ ಹೀಗೆ ನಮ್ಮ ಜಿಲ್ಲೆಯಾದ ಶಿವಮೊಗ್ಗದ ಮಂಗನ ಕಾಯಿಲೆ ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ 6000 ಚ.ಕಿ. ಪ್ರದೇಶದಲ್ಲಿ ಯಾವತ್ತಾದರೂ ಯಾರನ್ನಾದರೂ ಬಲಿ ಪಡೆಯಲು ಕಾಯುತ್ತಿದೆ.
ಇದಕ್ಕೆ ಔಷದಿ ಕಂಡು ಹಿಡಿದಿದ್ದಾರಾ? ಲ್ಯಾಬ್ ಇದಿಯಾ? ಚಿಕಿತ್ಸೆ ಇದೀಯಾ? ಇದೆಲ್ಲ ಚರ್ಚೆ ಇಲ್ಲಿ ಅನಗತ್ಯ ಮಳೆ ಕಡಿಮೆ, ವಿಪರೀತ ತಾಪ ಮಾನದ ಬೇಸಿಗೆ, ಮಂಗನಿಂದ ಹರಡುವ ಉಗುಣಗಳು ಕಾಡಿಗೆ ಉರವಲು, ಜಮೀನಿನ ಬೇಲಿಗೆ ಬೇಕಾದ ಗೂಟ - ಮುಳ್ಳು ಸಂಗ್ರಹಿಸಲು ಹೋಗುವವರಿಗೆ, ಕಾಡಿಗೆ ಮೇಯಲು ಹೋಗುವ ಜಾನುವಾರುಗಳಿಂದ ಈ ಕಾಯಿಲೆ ಹರಡುತ್ತದೆ.
ಈ ಮಂಗನ ಕಾಯಿಲೆ ಮತ್ತು ಕೆ.ಎಫ್.ಡಿ/ ಕ್ಯಾಸನೂರು ಪಾರೆಸ್ಟ್ ಡಿಸೀಸ್ ಹರಡುವ ಸಂಕೇತ ಮಂಗಗಳ ಸರಣಿ ಸಾವುಗಳು.
ಮಲೆನಾಡಿನ ಹಂದಿಗೋಡು ಕಾಯಿಲೆ ಮತ್ತು ಮಂಗನ ಕಾಯಿಲೆ ಬಗ್ಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸರ್ಕಾರಗಳು ಯಾವ ಕ್ರಮ , ಸಂಶೋಧನೆ ಮತ್ತು ಪರಿಹಾರ ನೀಡಿದೆ ಎಂಬುದು ಕೂಡ ನಿಗೂಡವಾಗಿದೆ.
12-June-2019 ವಿಜಯ ಕರ್ನಾಟಕ ಪತ್ರಿಕೆ ವರದಿ ಹೀಗಿದೆ ಓದಿ...
ಶಿವಮೊಗ್ಗ : ಮಂಗನ ಕಾಯಿಲೆ ಸೇರಿದಂತೆ ಎಚ್1 ಎನ್1, ಡೆಂಗೆ ಮತ್ತಿತರ ಕಾಯಿಲೆಗಳನ್ನು ರಕ್ತ ಪರೀಕ್ಷೆ ಮೂಲಕ ದೃಢೀಕರಿಸುವ ರಾಜ್ಯ ಸರಕಾರಿ ಸ್ವಾಮ್ಯದ ಏಕೈಕ ಆರ್‌ಟಿಪಿಸಿಆರ್(ರಾರಯಪಿಡ್ ಟೆಸ್ಟ್ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್) ಪ್ರಯೋಗಾಲಯವನ್ನು ಶಿವಮೊಗ್ಗದಲ್ಲಿ ಅಳವಡಿಸಿದ ಬಳಿಕ ಎರಡು ವರ್ಷ ನಿಷ್ಕ್ರಿಯವಾಗಿದ್ದು ಏಕೆ?
ಶಿವಮೊಗ್ಗದ ಪರಿಮಾಣು ಕ್ರಿಮಿ ಪರಿಶೋಧನಾಲಯದಲ್ಲಿ 2017ರ ಆರಂಭದಲ್ಲಿ ಅಳವಡಿಸಲಾದ ಆರ್‌ಟಿಪಿಸಿಆರ್ ಲ್ಯಾಬ್‌ನ ಯಂತ್ರಗಳು ಎರಡು ವರ್ಷ ಕೆಲಸ ಮಾಡದೇ ಉಳಿದಿದ್ದವು. ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ(ಕೆಎಫ್‌ಡಿ) ಉಲ್ಬಣಗೊಂಡ ಬಳಿಕ ಜ.7ರಿಂದ ಬಳಕೆ ಮಾಡಲಾಗುತ್ತಿದೆ. ಲ್ಯಾಬ್ ಇದ್ದರೂ ಈ ಎರಡು ವರ್ಷದ ಅವಧಿಯಲ್ಲಿ ಪರೀಕ್ಷೆಗೆ ರಕ್ತದ ಮಾದರಿಗಳನ್ನು ಪುಣೆಗೆ ಕಳಿಸಿದ್ದೇಕೆ? ಲ್ಯಾಬ್ ನಿಷ್ಕ್ರಿಯವಾಗಿದ್ದೇಕೆ? ಎಂಬ ಒಳ ವಿಚಾರಗಳನ್ನು ಕೆದಕಿದಾಗ ಯಂತ್ರೋಪಕರಣಗಳ ಅಳವಡಿಕೆ ಹಿಂದೆ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಸಂಗತಿ ಬಯಲಿಗೆ ಬಂದಿದೆ.
ಆರ್‌ಟಿಪಿಸಿಆರ್ ಲ್ಯಾಬ್‌ಗೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಸಿಗುವ ಮತ್ತು ಯಾವುದೇ ಕಂಪನಿಯ ಡಿಎನ್‌ಎ/ಆರ್‌ಎನ್‌ಎ ಕೆಮಿಕಲ್ ಕಿಟ್ ಆದರೂ ಬಳಸಬಹುದಾದಂತಹ ಬಾರ್ ಕೋಡ್ ರಹಿತ ಯಂತ್ರೋಪಕರಣಗಳನ್ನು ಅಳವಡಿಕೆಗೆ ಶಿಫಾರಸು ಮಾಡಲಾಗಿತ್ತು. ಆದರೆ, ಯಂತ್ರಗಳ ಅಳವಡಿಕೆ ಸಂದರ್ಭದಲ್ಲಿ ಸ್ಥಳೀಯ ಮತ್ತು ರಾಜಧಾನಿಯ ಉನ್ನತಾಧಿಕಾರಿಗಳ ಜಾಣ ಮೌನದ ಪರಿಣಾಮ ಬಾರ್ ಕೋಡೆಡ್ ಯಂತ್ರಗಳನ್ನು ಅಳವಡಿಸಲಾಯಿತು.
ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಗುಣಮಟ್ಟದ ಡಿಎನ್‌ಎ/ಆರ್‌ಎನ್‌ಎ ಕೆಮಿಕಲ್ ಕಿಟ್ ಬದಲಿಗೆ ಆರ್‌ಟಿಪಿಸಿಆರ್ ಲ್ಯಾಬ್‌ನಲ್ಲಿ ಅಳವಡಿಸಿದ ಯಂತ್ರದ ಕಂಪನಿಯ ದುಬಾರಿ ಬೆಲೆಯ ಕೆಮಿಕಲ್ ಕಿಟ್ಟನ್ನೇ ಅನಿವಾರ್ಯವಾಗಿ ಬಳಸುವಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.
ಮಾರುಕಟ್ಟೆಯಲ್ಲಿ ಡಿಎನ್‌ಎ/ಆರ್‌ಎನ್‌ಎ ಕೆಮಿಕಲ್ ಕಿಟ್ ಕೇವಲ 50 ಸಾವಿರ ರೂ.ಗೆ ಲಭ್ಯವಾಗುತ್ತಿದೆ. ಆದರೆ, ಬಾರ್ ಕೋಡ್ ಆದ ಯಂತ್ರದ ಕಂಪನಿಯ ಕೆಮಿಕಲ್ ಕಿಟ್‌ನ ಬೆಲೆ 2.50ಯಿಂದ 3 ಲಕ್ಷ ರೂ. ಇದೆ. ಅಂದರೆ 5ರಿಂದ 6ಪಟ್ಟು ಹೆಚ್ಚು. ಪ್ರತಿ ಕೆಮಿಕಲ್ ಕಿಟ್‌ಗೆ 2ರಿಂದ 2.50 ಲಕ್ಷ ರೂ. ಹೆಚ್ಚುವರಿ ಹಣ ತೆರಬೇಕಾಗಿದೆ.
ಲ್ಯಾಬ್ ಅಳವಡಿಕೆ ಸಂದರ್ಭದಲ್ಲಿ ಅಧಿಕಾರಿಗಳು ಪ್ರದರ್ಶಿಸಿದ ಕರಾಮತ್ತಿನ ಪರಿಣಾಮ ಸರಕಾರ ಪ್ರತಿಬಾರಿ ದುಬಾರಿ ಹಣ ತೆರಬೇಕಾಗಿದೆ. ಈ ಕಾರಣದಿಂದಲೆ ಉನ್ನತಾಧಿಕಾರಿಗಳು ಆರ್‌ಟಿಪಿಸಿಆರ್ ಲ್ಯಾಬ್‌ಗೆ ಕೆಮಿಕಲ್ ಕಿಟ್ ಖರೀದಿಗೆ ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸಾಗರದಲ್ಲಿ ಮಂಗನ ಕಾಯಿಲೆ ಉಲ್ಬಣಿಸಿ ಜನರಿಂದ ಒತ್ತಡ ಹೆಚ್ಚಾದ ಬಳಿಕವಷ್ಟೇ ಇಲಾಖೆ ಅಧಿಕಾರಿಗಳು 10 ಲಕ್ಷ ರೂ. ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಲಾಖೆ ಮಟ್ಟದಲ್ಲಿ ನಡೆದ ಟೆಂಡರ್ ಅನ್ವಯ ಆರ್‌ಟಿಪಿಸಿಆರ್ ಲ್ಯಾಬ್‌ಗೆ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಬಾರ್ ಕೋಡೆಡ್ ಯಂತ್ರೋಪಕರಣಗಳ ಕಿಮಿಕಲ್ ಕಿಟ್ ದುಬಾರಿ ಇರಬಹುದು. ಆದರೆ, ಇದು ಬಯೋ ಸೇಫ್ಟಿ ಲೆವೆಲ್ 4 ಹೈಟೆಕ್ ಮೆಷಿನ್. ಇಂತಹ ಯಂತ್ರ ಖಾಸಗಿ ಆಸ್ಪತ್ರೆಗಳಲ್ಲೂ ಇಲ್ಲ.
- ಡಾ.ರವಿಕುಮಾರ್, ಉಪ ನಿರ್ದೇಶಕ, ಪರಿಮಾಣ ಕ್ರಿಮಿ ಪರಿಶೋಧನಾ ಪ್ರಯೋಗಾಲಯ, ಶಿವಮೊಗ್ಗ. ( 12-June-2019 ವಿಜಯ ಕರ್ನಾಟಕ ಪತ್ರಿಕೆ ವರದಿ)
Comments
Post a Comment