Skip to main content

Blog number 2320. ಭಾಗ -1 ಅಡಿಕೆ ಬೆಳೆಗಾರರ ಸಮಾವೇಶ

#ಅಡಿಕೆ_ವಿಶೇಷ

#ಅಡಿಕೆ_ಬೆಳೆಗಾರರ_ಸಮಾವೇಶ

ಸಾಗರದಲ್ಲಿ ಇದೇ 8 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-1.


Campco ಅಡಿಕೆ ಬೆಳೆಗಾರರ ಹಿತ ಕಾಪಾಡುವ ಸಂಸ್ಥೆ ಆದರೆ...

ಕೆಂಪ್ಕೋ( Campco)ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಅದರ ಅಡಿಕೆ ಉತ್ಪನ್ನದ ಮೇಲೆ ಅಡಿಕೆ ಸೇವನೆ ಹಾನಿಕಾರಕ ಎಂದು ಬರೆದಿರುವುದು.

#arecanut #worldhealthorganization #WorldHealthOrganizationWHO #banareca #CancerPrevention #govtofindia #govtofkarnataka #BJPGovernment #BJP4IND 
#CongressParty #macOS #camco #ಅಡಿಕೆ #gutka 

#ಕುಮಾರ್_ಕುಂಟಿಕಾನ್_ಮಠ

ಅವರು ಯುಕೆಯ ಹ್ಯಾಂಪ್ ಶೈರನಿನ ಪ್ಲೀಟ್ ಟವನ್ ಮಾಜಿ ಕೌನ್ಸಿಲರ್

ಇವರ ತಂದೆ ಕುಂಟಿಕಾನಮಠ ಬಾಲಕೃಷ್ಣ ಭಟ್ಟರು ಬರೆದ ಶ್ರೀರಾಮ ಕಥಾಮಂಜರಿ ಮತ್ತು ಶ್ರೀಕೃಷ್ಣ ಕಥಾಮಂಜರಿ ಪ್ರಸಿದ್ಧ ಬೃಹತ್ ಗ್ರಂಥಗಳು.

ಅಡಿಕೆ ಬಗ್ಗೆ ಅವರು ಬರೆದ ಲೇಖನ ಓದಿ...
***    ***    ***     ***     ***    ***    ***

2014 ರಲ್ಲಿ ನಾವು ಲಂಡನ್ನಿನಲ್ಲಿ ಶ್ರೀ ಅರುಣ್ ಜೈಟ್ಲೇಯವರಿಗೆ ಅಡಿಕೆ ಮೇಲೆ ವಿಶ್ವ ಅರೋಗ್ಯ ಸಂಸ್ಥೆಯ ಅಂತರ್ಜಾಲದಲ್ಲಿ ಕಾನ್ಸರ್ ಕಾರಕ ಎಂಬ ಆಪಾದನೆ ಇದೆ ..ಇದು ಸುಮಾರು ರೂ ೪೦೦೦೦ ಕೋಟಿ ಮೌಲ್ಯ ಇರುವ ಅಡಿಕೆ ಬೆಳೆಗಾರರಿಗೆ ಹೊಡೆತ ಇದೆ ..ಇದನ್ನು ಇಲ್ಲವಾಗಿಸಲು ಒಂದು ಅಂತಾರಾಷ್ಟ್ರೀಯ ಕ್ಲಿನಿಕಲ್ ಟ್ರಯಲ್ ಮಾಡೋಣ ಎಂದು ಹೇಳಿದ್ದೆವು.

ಆಗ ಅವರು ನೀವು ಅಡಿಕೆಗೆ ಸಂಬಂಧ ಪಟ್ಟ ಒಂದು ಸಂಸ್ಥೆಯೊಂದಿಗೆ ಸಹಭಾಗಿತ್ವ ಮಾಡಿಕೊಂಡರೆ ಕೇಂದ್ರದಿಂದ ಕ್ಲಿನಿಕಲ್ ಟ್ರಯಲ್ ಗೆ ಆರ್ಥಿಕ ಸಹಕಾರವನ್ನು ಕೊಡಿಸುತ್ತೇನೆ ಎಂದು ಹೇಳಿದರು.

ಹಾಗೆ ನಾವು ಕೇಂದ್ರದ ಅಂದಿನ ರೈಲ್ವೆ ಮಂತ್ರಿ ಶ್ರೀ ಸದಾನಂದ ಗೌಡರನ್ನು ದೆಹಲಿಯಲ್ಲಿ ಭೇಟಿಯಾಗಿ ಅವರ ಕೈಯಿಂದ ಕಾಗದವನ್ನು ತೆಗೆದುಕೊಂಡು CAMPCO  ಸಂಸ್ಥೆಯ ಪದಾಧಿಕಾರಿಗಳನ್ನು ಭೇಟಿ ಮಾಡಿದ್ದೆವು.

ಸುಮಾರು ಒಂದು ವರುಷಗಳ ಕಾಲ ಹಲವು ಸುತ್ತಿನ ಮಾತು ಕಥೆ ನಡೆದರು ಕ್ಯಾಂಪ್ ಕೊದಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ಸಿಗಲಿಲ್ಲ,ಆಮೇಲೆ ಹಾಗೆಯೆ ಇದು ನೆನೆಗುದಿಗೆ ಬಿತ್ತು.

ಅಲ್ಲಿಂದ ನಂತರ ಯಾವುದೇ ಕ್ಲಿನಿಕಲ್ ಟ್ರಯಲ್ ಮಾಡಿ ಅಡಿಕೆ ಹಾನಿಕಾರಕವಲ್ಲ ಎಂದು ಇಲ್ಲಿಯವರೆಗೆ ಪ್ರೋವ್ ಯಾರು ಮಾಡಲಿಲ್ಲ 

ಇಲ್ಲಿ ಯೋಚಿಸಬೇಕಾದ್ದು ಎರಡು ವಿಚಾರ ಇದೆ.

ಕೆಂಪ್ಕೋ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಅಡಿಕೆ ಉತ್ಪನ್ನದ ಮೇಲೆ ..ಅಡಿಕೆ ಸೇವನೆ ಹಾನಿಕಾರಕ ಎಂದು ಬರೆದಿರುವುದು.

ಇನ್ನು ಹೊಸ ಸ್ವಯಂಸೇವಕರ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಲು ಅಡಿಕೆಯಲ್ಲಿರುವ  ಅರೆಕೋಲಿನ್ ಎಂಬ ಹಾನಿಕಾರಕ ಅಂಶವಿರುವ ಕಾರಣ ರಿಸರ್ಚ್ ಎಥಿಕ್ಸ್ ಸಮಿತಿ ಸಂಶೋಧನೆ ಮಾಡಲು ಒಪ್ಪುವುದಿಲ್ಲಹಾಗಾಗಿ ಮತ್ತೊಂದು ಸಮಸ್ಯೆ.

ಹೀಗೆ ಮುಂದುವರಿಯುತ್ತಾ ಹೋದರೆ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ನಿಯಂತ್ರಣ ಅಡಿಕೆ ಬೆಳೆಯ ಮೇಲೆ ಬರುತ್ತದೆ ಕಂಟ್ರೋಲ್ಡ್ ಡ್ರಗ್ಸ್ ಕೆಟಗರಿ ಯಲ್ಲಿ ಸೇರಿದರೆ ಅಡಿಕೆ ಬೆಳೆ ತನ್ನ ಕಮರ್ಷಿಯಲ್ ವ್ಯಾಲ್ಯೂ ಕಳೆದುಕೊಳ್ಳುತ್ತದೆ.

ಕೆಂಪ್ಕೋ ಸಂಸ್ಥೆಯ ಪದಾಧಿಕಾರಿಗಳು ಆತಂಕ ಬೇಡ ಅನ್ನುತ್ತಾರೆ,ಅಡಿಕೆ ಹಾನಿಕಾರಕ ಅಲ್ಲ ಅನ್ನುತ್ತಾರೆ.ಆದರೆ ತಾವೇ ಮಾರುಕಟ್ಟೆಗೆ ಬಿಟ್ಟಿರುವ ಅಡಿಕೆ ಉತ್ಪನ್ನದ ಮೇಲೆ ಹಾನಿಕಾರಕ ಎಂದು ಬರೆಯುತ್ತಾರೆ.

.ಭಾರತದ ಔಷಧ ನಿಯಂತ್ರಣ ಸಂಸ್ಥೆಗೆ ಅಡಿಕೆ ಹಾನಿಕಾರಕವಲ್ಲ ಎಂಬ ವಿಚಾರವನ್ನು ಮುಟ್ಟಿಸುವಲ್ಲಿ ವಿಫಲವಾಗಿರುವ ಇವರು ವಿಶ್ವ ಅರೋಗ್ಯ ಸಂಸ್ಥೆಗೆ ಹೇಗೆ ವಿಚಾರವನ್ನು ಮುಟ್ಟಿಸಬಹುದಾ? ಇದು ಅಡಿಕೆ ಬೆಳೆಗಾರ ಸಂಘಟನೆಗಳು ಯೋಚಿಸ ಬೇಕಾದ ಗಂಭೀರ ವಿಚಾರ.

  ಇತ್ತೀಚಿಗೆ ಪುನಃ ಸಂಶೋಧನೆ ಮಾಡುವ ಕುರಿತಾಗಿ ಸಹಕಾರವನ್ನು ನಾವು ಕೇಳಿದ್ದೇವೆ ಅದಕ್ಕೂ ನಕಾರಾತ್ಮಕವಾದ ಉತ್ತರ ಅಡಿಕೆ ಬೆಳೆಗಾರರ ಕುಟುಂಬದಿಂದ ಬಂದ,ಕಾಂಪ್ಕೋ ಸದಸ್ಯರ ಕುಟುಂಬದಿಂದ ಬಂದ ನಮಗೆ ಬೇಸರ ತಂದಿದೆ.

 ಕಡೆ ಪಕ್ಷ ನಿಮ್ಮ ಸಂಶೋಧನೆಗೆ ನಮ್ಮ ಬೆಂಬಲವಿದೆ ಆ ಕುರಿತಾಗಿ ಮಾತುಕತೆಗೆ ಬನ್ನಿ ಎಂದು ಕರೆಯ ಬೇಕಿತ್ತು.

ಏನೆ ಇರಲಿ ನಾವು ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದ ಸಂಶೋಧನೆಯನ್ನು ಮುಂದುವರಿಸುತ್ತೇವೆ ಅಡಿಕೆ ಬೆಳೆಗಾರರರು ,ಇತರ ಸಂಘ ಸಂಸ್ಥೆಗಳು  ಮತ್ತು ಸರಕಾರ ಬೆಂಬಲ ಕೊಡುತ್ತಾರೆಂಬ ಭರವಸೆ ಇದೆ 🙏🏼

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...