#Facebook
#Poke
ಪೇಸ್ ಬುಕ್ ಪೋಕ್ ಯಾಕೆ?
ಯಾವ ಉದ್ದೇಶ?
#FacebookPage #facebookviral #facebookreel #facebookvideo #facebookreelsvideo #facebookreelsviral #poke
ನನಗೂ ಮೊದಲಿಗೆ ಗೊತ್ತಿರಲಿಲ್ಲ ನಾನು ಅದನ್ನು ಬಳಸುತ್ತಿರಲಿಲ್ಲ, ಈಗ ಬಳಸುತ್ತೇನೆ ಕಾರಣ ಫೇಸ್ಬುಕ್ಕಿನ ಅನೇಕ ಗೆಳೆಯರು ನಿರಂತರ ಸಂಪರ್ಕ ಮತ್ತು ಕ್ರಿಯಾಶೀಲರಾಗಿದ್ದವರು ಇದ್ದಕ್ಕಿದ್ದಂತೆ ದೂರವಾದಂತೆ ಮಾಯವದಂತೆ ಕಾಣೆಯಾಗಿಬಿಡುತ್ತಾರೆ.
ಇದು ಉದ್ದೇಶಪೂರ್ವಕ ಏನಲ್ಲ ಆದರೆ ಫೇಸ್ಬುಕ್ ಟ್ರಾಫಿಕ್ ಜಾಮ್ ಆಗಿ ಪರಸ್ಪರ ಕಳೆದುಹೋಗುತ್ತೇವೆ ಆಗ ನಾವು ಈ ರೀತಿಯ Poke ಒತ್ತಿದರೆ ನಮ್ಮ ಅಂತಹ ಅಂತರ ಏರ್ಪಟ್ಟು ದೂರವಾಗಿರುವ - ಸಂಪರ್ಕ ಕಳೆದುಕೊಂಡಿರುವ ಗೆಳೆಯರಿಗೆ ತಕ್ಷಣ ತಲುಪುತ್ತದೆ.
ಅವರೂ ಕೂಡ ತಾವು ಕ್ರಿಯಾಶೀಲರಾಗಿದ್ದೇವೆ, ತಾತ್ಕಾಲಿಕವಾಗಿ ಫೇಸ್ಬುಕ್ ಟ್ರಾಫಿಕ್ ಜಾಮ್ ದೂರವಾಗಿದ್ದೇವೆ ಅನ್ನುವುದನ್ನು ಮರೆತು ಪುನರ್ ಸಂಪರ್ಕಕ್ಕಾಗಿ Pokeback ಒತ್ತುತ್ತಾರೆ ಇದರಿಂದ ಪುನಹ ಜೊತೆಯಾಗಿ ಸಂವಹನ ಪ್ರಾರಂಭ ಆಗುತ್ತದೆ.
ಈ ಪೋಕ್ ಕೇವಲ ಫೇಸ್ಬುಕ್ನಲ್ಲಿ ಮಾತ್ರ ಬಳಕೆಯಲ್ಲಿದೆ, ಕನ್ನಡದ ಅರ್ಥಕೋಶದಲ್ಲಿ ಇಂಗ್ಲೀಷ್ Poke ಗೆ ಕನ್ನಡದ ಅರ್ಥ ಚೂಪಾದ ವಸ್ತುವಿನಿಂದ ಇರಿಯುವುದು, ಚುಚ್ಚುವುದು ಮತ್ತು ಗೇಲಿ ಮಾಡುವುದು ಎಂಬ ಅರ್ಥ ಬರುತ್ತದೆ.
ಫೇಸ್ಬುಕ್ಕಿನಲ್ಲಿ ಈ Poke ಬಳಸುವ ಅರ್ಥ ಮತ್ತು ಉದ್ದೇಶ ಅಂತರ ಕಡಿಮೆ ಮಾಡುವುದು, ಸಂದೇಶ ಕಳಿಸಿ ಸಂಪರ್ಕ ನೆನಪಿಸುವುದು, ಇದೊಂದು ರೀತಿ ಹಲೋ ಹೇಳಿದಂತೆ ಅಥವ ಜೆಂಟಲ್ ರಿಮೈಂಡರ್ಸ್ ಆಗಿದೆ.
ಫೇಸ್ಬುಕ್ ಸ್ನೇಹಿತರು ಕ್ರಿಯಾಶೀಲರಾಗಿದ್ದಾರೋ - ಇಲ್ಲವೋ ಎಂಬ ಪರೀಕ್ಷೆ ಮಾಡುವ ಒಂದು ವಿಧಾನವು ಹೌದು, ಇನ್ನೊಂದು ಹಾಸ್ಯದ ಚುಡಾಯಿಸುವಿಕೆ ಮೂಲಕ ನನ್ನ ಕಡೆ ಗಮನಿಸು ನನ್ನ ಮರೆಯಬೇಡ, ನಾನು ಇಲ್ಲಿದ್ದೇನೆ ಎಂದು ಗುಂಪಿನಲ್ಲಿ ಕೈಯಾಡಿಸಿದಂತೆ.
ನೋಡಿ ನಿಮ್ಮ ಫೇಸ್ ಬುಕ್ ಗೆಳೆಯರು ಅನೇಕರು ಕಳೆದು ಹೋಗಿರಬಹುದು ಒಮ್ಮೆ ಅವರಿಗೆ ಪೋಕ್ ಮಾಡಿ.
Comments
Post a Comment