Skip to main content

Blog number 2309, ಸಿಗಂದೂರು ಸೇತುವೆಗಾಗಿ ನನ್ನ 2004ರ ಪಾದಯಾತ್ರೆ

#ಸಿಗಂದೂರು_ಸೇತುವೆ

 ಸಿಗಂದೂರು/ ತುಮರಿ ಸೇತುವೆಗಾಗಿ ನಡೆದ ಪಾದಯಾತ್ರೆ

  ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರೆ

#sigandurubridge #kalasavalli #ತುಮರಿ #Tumari 
#sharavathiriver #malenadu #jogfalls #BYRaghavendra #BSYadyurappa #govtofindia #Gadkari #sagar #kollur 

   21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಈವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ.

  ಸುಮಾರು 360 ಕಿ.ಮಿ. ಆನಂದಪುರಂನ ಮೂರುಘ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈ ದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆ ರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.

   ಈ ಪಾದ ಯಾತ್ರೆಗೆ ಪ್ರೇರಣೆ ಮಾಜಿ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆಯವರು ಒಮ್ಮೆ ಅವರ ಮನೆಯಲ್ಲಿ ಅವರನ್ನ ಬೇಟಿ ಆದಾಗ ಅವರು ಅವರ ಹದಿ ವಯಸಲ್ಲಿ ಸಾಗರ ತಾಲ್ಲೂಕಿನ ಆಧ್ಯOತ ಪಾದ ಯಾತ್ರೆ ಮಾಡುವ ಆಸೆ ಪಟ್ಟಿದ್ದು ಈಡೇರಲಿಲ್ಲ ಈಗ ವಯಸ್ಸು ಆಯಿತು ಸಾಧ್ಯವಿಲ್ಲ ನಿಮಗೆ ಪ್ರಾಯ ಇದೆ ಒಂದು ಪಾದಯಾತ್ರೆ ಮಾಡಿ ಬಿಡಿ ಎಂದದ್ದು ಈ ಪಾದಯಾತ್ರೆಗೆ ಕಾರಣ.

  ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪಾರ ಮಾಗ೯ದಶ೯ನದಲ್ಲಿ ರೈತ ಸಂಘದ ವಸಂತ ಕುಮಾರರ ಸಹಕಾರದೊಂದಿಗೆ ಸುಮಾರು ನೂರು ಜನ ಗೆಳೆಯರ ತಂಡದೊಂದಿಗೆ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.

ಈ ಪಾದಯಾತ್ರೆಯಲ್ಲಿ ಹೆಚ್.ಡಿ.ಕೋಟೆಯ ರೈತ ಮುಖಂಡ ಮಹೇಂದ್ರ ಕುಮಾರ್ ಕೂಡ ನಮ್ಮ ಜೊತೆ ಭಾಗವಹಿಸಿದ್ದರು.

  ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಹಾಡುಗಾರರಾದ ಮೆಣಸಿನಸರದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಆನಂದಪುರಂನ ಬಿ.ಡಿ.ರವಿಯವರಿ೦ದ (ಈಗ ಪತ್ರಕತ೯ರು) ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ.

 ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ಯಾರು ನೋಡಿಲ್ಲ? ಅಂತ ಕೇಳಿದಾಗ ಎಲ್ಲರೂ ಮೌನ, ಯಾರೆಲ್ಲ ನೋಡಿದಿರಿ ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು, ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅನ್ನುತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾರ೦ಭ ಆಗುತ್ತಿತ್ತು 

" ರಾಜ್ಯದ ವಿದ್ಯುತಗಾಗಿ ಶರಾವತಿ ನದಿಗೆ ಹಿರೇಬಾಸ್ಕರ ಎ೦ಬಲ್ಲಿ ಮೊದಲ ಆಣೆಕಟ್ಟು ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ಇದರಿಂದ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಅತಿ ಕಡಿಮೆ ವೆಚ್ಚದಲ್ಲಿ, ಇದಕ್ಕಾಗಿ ಹೊಸನಗರ ಮತ್ತು ಸಾಗರ ತಾಲ್ಲೂಕಿನ ಲಕ್ಷಾ೦ತರ ಎಕರೆ ಕಾಡು, ಜಮೀನು ಮುಳುಗಡೆ, ನಿರಾಶ್ರೀತರಿಗೆ ಸರಿಯಾದ ಪರಿಹಾರ ಸಿಗಲಿಲ್ಲ, ಇಲ್ಲಿ ಮುಳುಗಡೆಯಿಂದ ಆ ಭಾಗದ ಎರೆಡು ಹೋಬಳಿ ಕರೂರು, ಭಾರಂಗಿಗೆ ರಸ್ತೆ ಸಂಪಕ೯ ಕಳೆದು ಕೊಂಡಿದ್ದು ನಂತರ ಸಕಾ೯ರ ತಾತ್ಕಾಲಿಕವಾಗಿ ಲಾಂಚ್ ಒದಗಿಸಿದೆ.

 ಆದರೆ ಸಂಜೆ ಸೂಯ೯ ಮುಳುಗಿದ ನಂತರ ಲಾಂಚ್ ಸಾಗರದ ಕಡೆಯ ತೀರದಲ್ಲಿ ಬಂದು ನಿಂತರೆ ಮತ್ತೆ ಪ್ರಾರಂಭ ಆಗುವುದು ನಾಳೆ ಬೆಳಿಗ್ಗೆ ಅಷ್ಟರಲ್ಲಿ ಯಾರಿಗಾದರು ಕಾಯಿಲೆ ಆದರೆ ಅಥವ ಹೆಣ್ಣು ಮಗಳಿಗೆ ಹೆರಿಗೆ ನೋವು ಶುರುವಾದರೆ ಸಮೀಪದ ಸಾಗರಕ್ಕೆ ಹೋಗಲು ಕೊಗಾರು ಮಾಗ೯ವಾಗಿ ಕಾಗ೯ಲ್ ಮುಖಾಂತರ ಸಾಗರ ಆಸ್ಪತ್ರೆಗೆ 100 ಕಿ.ಮಿ. ಗಳನ್ನ 3 ಗಂಟೆ ಪ್ರಯಾಣ ಮಾಡಿ ತಲುಪ ಬೇಕು ಅಂದಾಗ ಜನ ತಮ್ಮ ಮೊಜು ಮಸ್ತಿನ ತುಮರಿ ಲಾಂಚ್ ಪ್ರಯಾಣದಿಂದ ಜನರ ಸಂಕಷ್ಟದ ಕಡೆ ಹೊರಳುತ್ತಿದ್ದರು .
   
  ಇದೇ ರೀತಿ ಹಂದಿಗೋಡು ಕಾಯಿಲೆ ಬಗ್ಗೆ, ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಜನ ಏಡ್ಸ್ ಅಂತಿದ್ದರು ಆಗ ಅವರಿಗೆ ವಿಶ್ವದಲ್ಲಿ ಮೊದಲ ಸಾರಿ ಸಾಗರ ತಾಲ್ಲೂಕಿನ ಹಂದಿಗೋಡಲ್ಲಿ ಕಂಡು ಬಂದ ನೀಗೂಡ ಕಾಯಿಲೆಯಿ೦ದ ಮನುಷ್ಯ ಅಂಗವಿಕಲನಾಗುತ್ತಾನೆ, ಸಂದಿಗಳ ಮೂಳೆ ಬೆಳೆದು ವಿಪರೀತ ನೋವು ಅನುಭವಿಸಿ ಕುಳ್ಳಾಗುತ್ತಾನೆ ಇದಕ್ಕೆ ಈ ವರೆಗೆ ಕಾರಣ ಕಂಡು ಹಿಡಿಯಲಾಗಲಿಲ್ಲ, ಔಷದಿಯೂ ಇಲ್ಲ ಅದರಿಂದ ಇದಕ್ಕೆ ಹಂದಿಗೋಡು ನಿಗೂಡ ಕಾಯಿಲೆ ಅಂತ ಹೆಸರು ಅಂದಾಗ ಸಭೆಯಲ್ಲಿ ನಿಶ್ಯಬ್ದ.

   1952ರಲ್ಲಿ ಕಾಗೋಡು ಸತ್ಯಾಗ್ರಹ ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ನಡೆಯಿತು "ಉಳುವವನೆ ಹೊಲದೊಡೆಯಾ" ಎ೦ಬ ಕಾನೂನು ಜಾರಿಗಾಗಿ ಆ ಚಳವಳಿಯಿ೦ದಲೆ ಇವತ್ತು ಗೇಣಿಜಮೀನು ಪಡೆಯಲು ಸಾಧ್ಯವಾಯಿತು.

   ಈ ಚಳವಳಿ ಬೆಂಬಲಿಸಿ ಸಮಾಜವಾದಿ ಪಾಟಿ೯ಯ ನೇತಾರ ಸಂಸದ ಸದಸ್ಯ ಡಾ|| ರಾಮಮನೋಹರ ಲೋಹಿಯ ಸಾಗರಕ್ಕೆ ರೈಲಿನಲ್ಲಿ ಬಂದು ಕಾಗೋಡಿಗೆ ಹೋಗಿ ಚಳವಳಿಗಾರರನ್ನ ಬೆಂಬಲಿಸಿ ಸಭೆಯಲ್ಲಿ ಮಾತಾಡಿ ಬಂದು  ಸಾಗರದ ರೈಲು ನಿಲ್ದಾಣದ ವಿಶ್ರOತಿ ಕೊಠಡಿಯಲ್ಲಿ ರಾತ್ರಿ ತಂಗಿದ್ದಾಗ ಅವರನ್ನ ಬಂದಿಸಲಾಗಿತ್ತು.

 1952ರಲ್ಲಿ ಹಾಗಾಗಿ ಹಾಲಿ ಸಾಗರ ಜOಬಗಾರು ಹೆಸರಿನ ಸಾಗರ ರೈಲು ನಿಲ್ದಾಣಕ್ಕೆ ಡಾII ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಅಂತ ಹೆಸರಿಡಬೇಕು ಇದಕ್ಕೆ NDA ಸಕಾ೯ರದಲ್ಲಿ ಉಪಪ್ರದಾನಿ ಆಗಿದ್ದ ಲಾಲ್ ಕೃಷ್ಣ ಅಡ್ವಾನಿಗೆ ಮನವಿ ನೀಡಿದ್ದು ಅವರು ಕನಾ೯ಟಕ ಸಕಾ೯ರ, ಶಿವಮೊಗ್ಗ ಜಿಲ್ಲಾಡಳಿತದ ಮತ್ತು ಸಾಗರ ನಗರಸಭೆಯ ಒಪ್ಪಿಗೆ ಪತ್ರದ ಪ್ರಕಾರ ಹೆಸರು ಬದಲಾವಣೆಗೆ ಕೇಂದ್ರ ಸಕಾ೯ರದ ಒಪ್ಪಿಗೆ ನೀಡಿದ್ದಾರೆ ರೈಲ್ವೆ ಇಲಾಖೆ ಈ ನಾಮಕರಣ ಮಾಡುವ ಕೆಲಸ ಬಾಕಿ ಇದೆ.

   ಜೋಗ ಜಲಪಾತ ನೋಡುವವರು 1975ರ ನಂತರ ಕಡಿಮೆ ಆದರು ಈ ರೀತಿ ಪ್ರವಾಸಿಗಳು ಕಡಿಮೆ ಆಗಲು ಕಾರಣ ಇಲ್ಲಿನ ಮೂಲ ಸೌಕಯ೯ದ ಕೊರತೆ ವಿಶ್ವದ ಸುಂದರ ಜಲಪಾತ ನೋಡಲು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸಿದರೆ ಪ್ರವಾಸಿಗಳು ಹೆಚ್ಚಾದರೆ ರಾಜ್ಯಕ್ಕೆ, ಜಿಲ್ಲೆಗೆ ಮತ್ತು ನಮ್ಮ ತಾಲ್ಲೂಕಿನ ಆದಾಯಕ್ಕೆ ಅನುಕೂಲ ಹಾಗಾಗಿ ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು.

  ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ ಅನೇಕ ಕಡೆ ಎಲ್ಲಾ ಸರಿ ತುಮರಿ ಸೇತುವೆ ಸಾಧ್ಯವೇ ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.

   ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಆಗಿ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಮುಂದಿನ ಮೇ 2025ರ ಒಳಗೆ ಲೋಕಾರ್ಪಣೆ ಆಗಲಿದೆ ಎಂದು ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

  ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿ ಯೋಜನೆಯ ನೀಲಿ ನಕ್ಷೆ ತಯಾರಾಗಿದೆ, ಹಂದಿಗೋಡು ಸಕಾ೯ರದ ಗಮನ ಸೆಳೆದು ಹಿಂದೆ ಮುಖ್ಯಮ೦ತ್ರಿ ಆಗಿದ್ದ ಕುಮಾರಸ್ವಾಮಿ ಹಂದಿಗೋಡಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು ಇನ್ನು ಈ ಕಾಯಿಲೆಗೆ ಕಾರಣ ಸಂಶೋದನೆ ಆಗಬೇಕು, ಔಷದಿ ಕಂಡು ಹಿಡಿಯುವ ಕೆಲಸ ಆಗಬೇಕು.

  ಸಾಗರ ರೈಲು ನಿಲ್ದಾಣದ ನಾಮಕರಣ ಕಾರ್ಯರೂಪಕ್ಕೆ ಬರಬೇಕಾಗಿದೆ ಆದರೆ ಕಾಣದ ಕೈಗಳು ಅದನ್ನು ವಿಳಂಬ ಮಾಡುತ್ತಿದೆ.
 
  ಹೀಗೆ ಮಾಜಿ ಶಾಸಕರಾದ ಎಲ್.ಟಿ. ಹೆಗ್ಗಡೆಯವರ ಮಾತಿನ ಪ್ರಭಾವದಿ೦ದ ಅವತ್ತು ನಾನು ಮತ್ತು ನನ್ನ ಸಹಪಾಟಿಗಳು ಅನೇಕ ಪ್ರಗತಿ ಪರರ ಸಹಕಾರದಿಂದ ನಡೆಸಿದ ಪಾದಯಾತ್ರೆಯ ಜನ ಜಾಗೃತೆಯ ಪ್ರಮುಖ ಬೇಡಿಕೆಗಳು ಅನೂಷ್ಟಾನಗೊಳ್ಳುತ್ತಿರುವುದು ಸಂತೋಷ ತಂದಿದೆ.

  ಇದನ್ನ ಈ ಹಂತಕ್ಕೆ ತರಲು ಪ್ರಯತ್ನಿಸಿದ ಮತ್ತು ಮಂಜೂರುಗೊಳಿಸಿದ ಮಹನೀಯರೆಲ್ಲರಿಗೆ ಕೃತಜ್ಞತೆಗಳು.
 
  ಮುಂದಿನ ದಿನದಲ್ಲಿ ರಾಜಕೀಯದಲ್ಲಿ ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರು ಅವತ್ತಿನ ಇನ್ನೂ ಈಡೇರದ ಅನೇಕ ಬೇಡಿಕೆಗಳ ಮಂಜೂರಾತಿಗೆ ಪ್ರಯತ್ನಿಸಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...