#ವಿಷ್ಣು_ಸಹಸ್ರನಾಮ.
ನನಗೆ ತುಂಬಾ ಸಂತೃಪ್ತಿ ತಂದ ದಿನ ಇವತ್ತು.
ವಿಷ್ಣು ಸಹಸ್ರನಾಮ ಪಾರಾಯಣ ಎಂಬ ಈ ಆದ್ಯಾತ್ಮಿಕ ಅಭ್ಯಾಸಕ್ಕೆ ಇವತ್ತಿಗೆ 6 ವರ್ಷ ಮುಕ್ತಾಯವಾಗಿ 7ನೇ ವರ್ಷದ ಮೊದಲ ದಿನ ಪ್ರಾರಂಭವಾಯಿತು.
ನಿರಂತರ ಒಂದು ದಿನವೂ ತಪ್ಪದೇ ಪಠಣ ಮಾಡಿದೆ ಅನ್ನುವುದಕ್ಕಿಂತ ದೇವರ ಅನುಗ್ರಹದಿಂದ ಸಾಧ್ಯವಾಗಿದೆ.
#vishnu #VishnuSahasranama #jothishi #drnsvishwapathishastri #abhimaniprakashana
#venkatesh #drrajkumarroad #AdiShankaracharya #Ramanujacharya #madvacharya #harekrishna #arunprasad
ದಿನಾಂಕ 23- ನವೆಂಬರ್ -2018ರಿಂದ ವಿಷ್ಣು ಸಹಸ್ರನಾಮ ನಿತ್ಯ ಪಠಣ ಮಾಡುವ ಸಂಕಲ್ಪ ಮಾಡಿ ಪ್ರಾರಂಬಿಸಿದ್ದೆ.
ಈ ಪುಸ್ತಿಕೆ ತಂದು ಕೊಟ್ಟವರು ಖ್ಯಾತ ಜ್ಯೋತಿಷಿಗಳಾದ ಬೆಂಗಳೂರಿನ ವಿಜಯನಗರದ ಡಾ.ಎನ್.ಎಸ್. ವಿಶ್ವಪತಿ ಶಾಸ್ತ್ರೀಗಳು.
ಇದನ್ನು ಮುದ್ರಿಸಿದವರು ಬೆಂಗಳೂರಿನ ಡಾ.ರಾಜಕುಮಾರ್ ರಸ್ತೆಯ ಪ್ರಖ್ಯಾತ ಮುದ್ರಣ ಸಂಸ್ಥೆ ಅಭಿಮಾನಿ ಪ್ರಕಾಶನದ ವೆಂಕಟೇಶ್ ಅವರು.
ಪ್ರಾರಂಭದಲ್ಲಿ ಉಚ್ಚರಿಸಲು ಹೆಚ್ಚು ಶ್ರಮ ಪಡಬೇಕಾಯಿತು (ಸಂಸ್ಕೃತ ಉಚ್ಚಾರಣೆ) ಇದಕ್ಕೆ ಪತ್ನಿ ಗುರುವಾಗಿ ತಿದ್ದಿದ್ದರಿಂದ ಉಚ್ಚಾರಣೆ ಸರಿ ಆಯಿತು.
ಮಹಾ ಭಾರತ ಯುದ್ಧ ಕಾಲದಲ್ಲಿ ಮರಣ ಶಯ್ಯೆಯಲ್ಲಿದ್ದ ಬೀಷ್ಮರಿಗೆ ಯುದಿಷ್ಟರ ಕೇಳಿದ ಆರು ಪ್ರಶ್ನೆಗಳು ...
1. ಈ ಲೋಕದಲ್ಲಿ ಅದ್ವಿತಿಯನಾದ ದೇವರು ಯಾರು ?
2. ಇಡೀ ಲೋಕ ಯಾವ ದೇವನಾಮವನ್ನು ಏಕ ರೂಪವಾಗಿ ಪಾರಾಯಣ ಮಾಡುತ್ತದೆ?
3. ಶುಭವನ್ನು ಹೊಂದಲು ಯಾವ ದೇವರನ್ನು ಅಚಿ೯ಸಬೇಕು?
4. ಶ್ರೇಷ್ಠ ಧರ್ಮ ಯಾವುದು?
5, ಸರ್ವೋನ್ನತ ಸಿದ್ಧಿಗೆ ಯಾವ ಮಂತ್ರ ಮೂಲ ?
6. ಯಾವ ಮಂತ್ರವನ್ನು ಜಪಿಸುತ್ತಾ ಮಾನವನು ಜನ್ಮ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ? ...
ಇದಕ್ಕೆ ಬೀಷ್ಮರ ಉತ್ತರ ಇಡೀ ಆಕಾಶ ನಕ್ಷತ್ರಗಳಿಗೆ ಒಬ್ಬನೇ ದೇವರು ಅವನೇ ವಿಷ್ಣು, ಈ ಒಬ್ಬನೇ ದೇವರಿಗೆ ಸಹಸ್ರ ನಾಮಗಳಿದೆ, ವಿಷ್ಣುವಿನ ಸಹಸ್ರ ನಾಮ ಪಠಿಸುವುದರಿಂದ ಮನುಕುಲದ ಎಲ್ಲಾ ದುಃಖಗಳು ಮುಕ್ತವಾಗುತ್ತದೆ ಎಂದು ಉತ್ತರಿಸುತ್ತಾರೆ.
ವಿಷ್ಣು ಸಹಸ್ರನಾಮ ಪಠನ ಲಿಂಗ ಬೇದವಿಲ್ಲದೆ, ಜಾತಿ ಬೇದವಿಲ್ಲದೆ ಯಾವುದೇ ಸಮಯದಲ್ಲಿ ಮಾಡಬಹುದು.
ಆಯುರ್ವೇದ ಶಾಸ್ತ್ರದ ಚರಕ ಸಂಹಿತೆಯಲ್ಲಿ ವಿಷ್ಣು ಸಹಸ್ರನಾಮಕ್ಕೆ ಎಲ್ಲಾ ರೋಗ ಗುಣಪಡಿಸುವ ಶಕ್ತಿ ಇರುವ ಉಲ್ಲೇಖವಿದೆ.
ವಿಷ್ಣುಸಹಸ್ರನಾಮದ ಬಗ್ಗೆ ಆದಿ ಶಂಕರರು, ರಾಮನುಜಾಚಾರ್ಯ, ಮಧ್ವಾಚಾರ್ಯರು, ಸ್ವಾಮಿ ನಾರಾಯಣರು, ಸ್ವಾಮಿ ಶಿವಾನಂದರು, ಸ್ವಾಮಿ ಪ್ರಭುಪಾದರು ಮತ್ತಿತರರ 15 ಕ್ಕೂ ಹೆಚ್ಚಿನ ಬಾಷ್ಯಗಳಿದೆ.
ನನ್ನ ಸಂಕಲ್ಪ ನಿರಂತರವಾಗಿ 6 ವರ್ಷ ಪೂರ್ತಿ ಒಂದು ದಿನವೂ ತಪ್ಪದೆ ಸಾಂಗವಾಗಿ ನೆರವೇರಿದ್ದು ನನಗೆ ಅತೀವ ಸಂತಸ ತಂದಿದೆ.
ದೂರ ಪ್ರಯಾಣದಲ್ಲಿ ಕೆಲವೊಮ್ಮೆ ರಾತ್ರಿ ಮೂರು ಗಂಟೆಗೆ ಎದ್ದು ತಯಾರಾಗಿ ವಿಷ್ಣು ಸಹಸ್ರನಾಮ ಪಠಿಸಿದೆ, ಸಣ್ಣ ಅನಾರೋಗ್ಯವಿದ್ದರೂ ಸಹಸ್ರನಾಮ ಮಾತ್ರ ನಿಲ್ಲಿಸಲಿಲ್ಲ.
ಬಹುಶಃ ನನ್ನ ಆರು ವರ್ಷಗಳ ಅವಧಿಯಲ್ಲಿ ನಿರಂತರ ಸಹಸ್ರನಾಮ ಪಠಣ ಸಾಂಗವಾಗಿ ನೆರವೇರಲು ನನ್ನ ಗುರು ಹಿರಿಯರ ಅನುಗ್ರಹ ಮತ್ತು ಆಶ್ರೀವಾದಗಳು ಕಾರಣ ಅಂತ ಬಾವಿಸಿದ್ದೇನೆ.
ಇದೇ ರೀತಿ ಮುಂದಿನ ದಿನಗಳಲ್ಲಿ ನಿರಂತರ ಸಹಸ್ರನಾಮ ಪಠಣ ಜೀವಿತಾವದಿ ಪೂಣ೯ ಮುಂದುವರಿಸಲು ದೇವರ ಕೃಪೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
Comments
Post a Comment