ಇವತ್ತು ಎಲ್ಲಾ ಸುದ್ದಿ ಮಾಧ್ಯಮದಲ್ಲಿ ಹೆಬ್ರಿ ಸಮೀಪದ ಪೋಲಿಸ್ ಎನ್ ಕೌಂಟರ್ ನಲ್ಲಿ ಹತರಾದ ನಕ್ಸಲ್ ಹೋರಾಟಗಾರ ವಿಕ್ರಂ ಗೌಡರ ಸುದ್ದಿ ತುಂಬಿದೆ ಈ ನಕ್ಸಲ್ ಚಟುವಟಿಕೆ ಪ್ರಾರಂಭ ಇತ್ಯಾದಿ ಮಾಹಿತಿ ಗೂಗಲ್ ನಲ್ಲಿ
(google) ಹೆಕ್ಕಿ ತೆಗೆದಿದ್ದು ಇಲ್ಲಿದೆ ಓದಿ
#karnataka #ನಕ್ಸಲೈಟ್ #cmsiddaramaiah #ಕರ್ನಾಟಕದಲ್ಲಿ_ನಕ್ಸಲ್_ಚಟುವಟಿಕೆ #naxalbaryvillage #police #shivamogga #udupi
#ಕರ್ನಾಟಕದಲ್ಲಿ_ನಕ್ಸಲ್_ಚಟುವಟಿಕೆ
ಕರ್ನಾಟಕ ರಾಜ್ಯದಲ್ಲಿ ಈ ಚಳವಳಿ ಬೆಳೆಸಲು ಕಾರಣರಾದ ಪಾರ್ವತಿ, ಹಾಜಿಮಾ ಅವರಿಗೂ ರಕ್ತರಂಜಿತವಾಗಿದ್ದ ಆ ದಿನಗಳಲ್ಲಿ ಶಿವಲಿಂಗು, ಉಮೇಶ್, ಅಜಿತ್, ಚನ್ನಪ್ಪ, ಮನೋಹರ್, ದಿನಕರ್, ಆನಂದ್... ಹೀಗೆ ಸಾಲು, ಸಾಲು ನಕ್ಸಲೀಯರು ಪೊಲೀಸರ ಗುಂಡಿಗೆ ಬಲಿಯಾದರು.
ಪ್ರತೀಕಾರದ ಹೋರಾಟಗಳಿಂದ ನಕ್ಸಲೀಯರೂ ಸದ್ದು ಮಾಡಿದರು. ಪೊಲೀಸರಿಗೆ ಮಾಹಿತಿಕೊಟ್ಟ ಶೇಷಯ್ಯ ಎಂಬುವರನ್ನು ಅವರ ಕುಟುಂಬದ ಸದಸ್ಯರ ಎದುರೇ ಹತ್ಯೆ ಮಾಡಿದರು. ನಂತರದ ದಿನಗಳಲ್ಲಿ ಶಸ್ತ್ರ ಕೆಳಗಿಟ್ಟು ಹಲವರು ಮುಖ್ಯವಾಹಿನಿಗೆ ಬಂದರೆ, ಉಳಿದವರು ಬೇರೆ ನೆಲೆಗಳನ್ನು ಕಂಡುಕೊಂಡರು.
ಡಿಸೆಂಬರ್ 8, 2014 ರಂದು ಕರ್ನಾಟಕದ ಚಿಕ್ಕಮಗಳೂರುನಲ್ಲಿ ಎರಡು ಪ್ರಮುಖ ನಕ್ಸಲ್ ನಾಯಕರು ಸಿರಿಮಾನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಚಳವಳಿಗಳ ಮುಖ್ಯವಾಹಿನಿಗೆ ಮರಳಿ ಬಂದರು.
#ಕಾನೂನು_ಬಾಹಿರ_ಸಂಸ್ಥೆ
ನಕ್ಸಲೈಟ್ ಸಂಸ್ಥೆಗಳ ಎಲ್ಲಾ ರೂಪಗಳನ್ನು “ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಭಾರತದ ಆಕ್ಟ್ (1967)”ರ ಅಡಿಯಲ್ಲಿ “ಭಯೋತ್ಪಾದಕ ಸಂಘಟನೆಗಳು” ಕಾನೂನು ಬಾಹಿರ ಸಂಸ್ಥೆ ಎಂದು ಘೋಷಿಸಲಾಗಿದೆ.
ಭಾರತ ಸರ್ಕಾರವು ಜುಲೈ 2011 ರ ಪ್ರಕಾರ, 10 ರಾಜ್ಯದುದ್ದಕ್ಕೂ 83 ಜಿಲ್ಲೆಗಳಲ್ಲಿ ಎಡಪಂಥೀಯ ಉಗ್ರಗಾಮಿತ್ವದ ಪರಿಣಾಮದ ಕಾರಣ ಈ ಘೋಷಣೆ ಮಾಡಲಾಗಿದೆ. (ಈ ಅಂಕಿಯು ಅದರಲ್ಲಿ ಉದ್ದೇಶಿತ 20 ಜಿಲ್ಲೆಗಳನ್ನು ಒಳಗೊಂಡಿದೆ) [9] [10] 2009 ರಲ್ಲಿ 180 ಜಿಲ್ಲೆಗಳಷ್ಟಿತ್ತು.[೮]
#ನಕ್ಸಲೈಟ್
"ನಕ್ಸಲೈಟ್" ಪದ ಭಾರತದ ಮಾವೊವಾದಿ ಚಳವಳಿಯು ಶುರುವಾದ ಪಶ್ಚಿಮ-ಬಂಗಾಳ ಪಟ್ಟಣದ ಹೆಸರು ಹುಟ್ಟಿಕೊಂಡಿದೆ. 1960 ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಭಾರತದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ತರುವ ಬಗೆ ಹೇಗೆ ಎಂದು ವಿಭಿನ್ನ ಯೋಜನೆ ಹೊಂದಿತ್ತು.
ಆ ಪಕ್ಷವು ಎರಡು ಬಣಗಳಾಗಿ ಒಡೆಯಿತು ಒಂದು ಕಮ್ಯುನಿಸ್ಟ್ ಸರ್ಕಾರ ತರಲು ಚುನಾವಣೆಯ ಮೂಲಕ ಗಳಿಸಿದ ಶಕ್ತಿಯ ಪರವಾಗಿ ಮತ್ತೊಂದು ಆ ಪಕ್ಷದ ಒಂದು ದೊಡ್ಡ ನಗರ ದಂಗೆಯೇಳುವಂತೆ ಆವೇಗ ಒದಗಿಸಲು ಪ್ರಭಾವವನ್ನು ಬೀರುವುದು.
ಅದಕ್ಕೆ ದೇಶದ ದೊಡ್ಡ ರೈತ ವರ್ಗವನ್ನು ಬಳಸಿಕೊಂಡು ಸಶಸ್ತ್ರ ಬಂಡಾಯದ ಮೂಲಕ ಸರ್ಕಾರವನ್ನು ಉರುಳಿಸುವುದರ ಪರವಾಗಿ ಇತ್ತು ಈ ಎರಡನೇ ಗುಂಪಿನಲ್ಲಿದ್ದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಚಾರು ಮಜುಮ್ದಾರ್,ಅವರು .ಸ್ಥಳೀಯ ಗುಂಪಿನ ತೀವ್ರತರ ಚಿಂತನೆ ಮತ್ತು ಚರ್ಚೆಗಳಿಂದ ಹೈರಾಣಾಗಿದ್ದರು.
1967 ರಲ್ಲಿ ಅವರು ಸ್ವತಃ ಕ್ರಾಂತಿ ಆರಂಭಿಸಲು ಹೊರಟರು. . ನಕ್ಸಲ್ ಬರಿ ದಂಗೆ ಅಥವಾ ಕ್ರಾಂತಿಗಳು ಆ ಪ್ರಯತ್ನಗಳ ಫಲವಾಗಿತ್ತು.
ಮಜುಮ್ದಾರ್ ತನ್ನ ಹೊಸ ಚಳುವಳಿಗೆ " ಕಮ್ಯುನಿಸ್ಟ್ ಕ್ರಾಂತಿಕಾರರ ಆಲ್ ಇಂಡಿಯಾ ಸಹಯೋಗ ಸಮಿತಿ " ಎಂದು ಕರೆದರು. ಆದರೆ ಅನೇಕ ಭಾರತೀಯರು ಆ ಸಂಘವನ್ನು ಅದರ ಮೂಲ ಸ್ಥಳದ ಮೂಲಕ ಗರುತಿಸಿ. ನಕ್ಸಲ್ ರು , ಮತ್ತು ಮಾವೋವಾದಿ ಶೈಲಿಯ ಗೆರಿಲ್ಲಾಗಳು ಎಂದು ಕರೆಯಲು ಪ್ರಾರಂಭಿಸಿದರು.
"ನಕ್ಸಲೀಯರ." ಎಡಪಂಥೀಯ ಕಾಲೇಜು ವಿದ್ಯಾರ್ಥಿಗಳು (ಹೆಚ್ಚಾಗಿ ಕಲ್ಕತ್ತದಿಂದ) ಮತ್ತು ಕೆಳಮಟ್ಟದ ಬಡ ದಲಿತರು ಮತ್ತು ಆದಿವಾಸಿಗಳು ಬೆಂಬಲಿಸಿದರು ಅವರು 20ನೇ ಶತಮಾನದಲ್ಲಿ ಅನುಭವಿಸಿದ ಕೆಟ್ಟ ಬರಗಾಲದಲ್ಲಿ ಎಲುಬು – ಚರ್ಮವಷ್ಟೆ ಉಳಿಯುವುದರ ಮೂಲಕ ಬದುಕುಳಿದರು.
ಈ ಚಳುವಳಿಯನ್ನು ಮೇಲಿನ ಎರಡು ವಿಭಿನ್ನ ಗುಂಪುಗಳು ಬೆಂಬಲಿಸಿದವು, ಚೀನಾದಿಂದ ಏಕಪ್ರಕಾರವಾಗಿ ಬಂದ ನೆರವು ಯೋಜನೆಯ ಹರಿವು ಈ ಚಳುವಳಿಗೆ ಶಕ್ತಿ ನೀಡಿತು.
ಈ ನೆರವಿನ ಕಾರಣ ಇದು ನಕ್ಸಲ್ ಬರಿ ಪ್ರದೇಶ ಮೀರಿ ಹರಡಲು ಅವಕಾಶ ಆಂಧ್ರ ಪ್ರದೇಶ, ಚತ್ತೀಸ್ಗಡ ಮತ್ತು ಜಾರ್ಖಂಡ್ ಗಳಲ್ಲಿ ಗಟ್ಟಿಯಾಗಿ ಬೇರೂರಿ ಇನ್ನಷ್ಟು ಬಲಪಡೆಯಿತು[೧]
Comments
Post a Comment