#ಮಂಗ
ನಾನು ಒಂದು ಮಂಗ ಸಾಕಿದ್ದೆ ಅದಕ್ಕೆ ಅಂಜಲಿ ಅಂತ ಹೆಸರೂ ಇಟ್ಟಿದ್ದೆ.
ಆ ಮಂಗ ಕೊಟ್ಟವರು ನಮ್ಮೂರಿನ ನನ್ನ ಹಳೆಯ ಶಿಷ್ಯ ಅಮೀರ್ ಸಾಹೇಬರು.
ಅದು ಅವರ ಮನೆ ಹತ್ತಿರ ಎಲ್ಲಿಂದಲೋ ಬಂದು ಒಡಾಡುತ್ತಿತ್ತು
ಅದರ ನಡುವಳಿಕೆ ನೋಡಿದರೆ ಅದು ಜನ ಬಳಕೆಯ ಮಂಗನ ರೀತಿ ಕಂಡಿದೆ,ಅದು ಅವರ ಮಕ್ಕಳು ಹಣ್ಣು- ಕಾಳು ಇತ್ಯಾದಿ ನೀಡಿದರೆ ಬಂದು ಕೈಯಲ್ಲೇ ತೆಗೆದುಕೊಂಡು ಹೋಗುವುದು, ಲಾಗ ಹಾಕುವುದು ಇತ್ಯಾದಿ ಮಾಡುವುದು ನೋಡಿದ ಅವರಿಗೆ ಅದು ಯಾರೋ ಸಾಕಿದ ಮಂಗ ತಪ್ಪಿಸಿಕೊಂಡು ಬಂದಿದೆ ಎಂದು ತಿಳಿದಿದ್ದಾರೆ.
ನಂತರ ಆ ಮಂಗ ಅವರ ಮನೆ ಸೇರಿದೆ ಆದರೆ ಅದರ ತುಂಟಾಟ ಸಂಬಾಳಿಸುವುದು ಅವರಿಗೆ ಕಷ್ಟವಾಗಿತ್ತು.
ಆದ್ದರಿಂದ ನನಗೆ ಕೇಳಿದರು ಮಂಗ ಸಾಕುತ್ತೀರಾ? ಅಂತ ನನಗೂ ಉಮೇದಿ ಇತ್ತ, ಮಂಗ ಅವರೆಗೂ ಸಾಕಿರಲಿಲ್ಲ ಆದನ್ನು ಒಂದು ಅನುಭವ ಪಡೆಯೋಣ ಎಂದು ಒಪ್ಪಿಕೊಂಡೆ.
ಅವರ ಮಗ ತಂದುಕೊಟ್ಟ ಮಂಗದ ಕುತ್ತಿಗೆಗೆ ದೊಡ್ಡ ಚೈನ್ ಹಾಕಿದ್ದರು, ಬಹಳ ಬೇಗ ಅದರ ಜೊತೆ ನನ್ನ ಗೆಳೆತನ ಆಯಿತು.
ಅದರ ಮೈ-ತಲೆ- ಕೈ- ಕಾಲು ಎಲ್ಲಾ ಸವರಿ ನಾನು ಸೈ ಎನಿಸಿಕೊಂಡೆ,
ಇದು ಹೆಣ್ಣು ಮಂಗ ಆದ್ದರಿಂದ ಇದಕ್ಕೊಂದು ಸೂಕ್ತ ಹೆಸರು ನಾಮಕರಣ ಮಾಡಬೇಕು ಅಂತಾಯ್ತು.
ಅಂತಿಮವಾಗಿ ಅಂಜಲಿ ಎಂಬ ಹೆಸರಿನ ನಾಮಕರಣ ಮಾಡಿದೆವು ಅಂಜಲಿ ಎಂದೆ ಕರೆದೆವು.
ಇದಕ್ಕೊಂದು ಬೋನು ತಯಾರು ಮಾಡಿದೆವು, ರಾತ್ರಿ ಎಲ್ಲಾ ಬೋನಿನಲ್ಲಿ ಅಂಜಲಿ ಬೋನಿನಲ್ಲಿ ಇರುತ್ತಿದ್ದಳು ಹಗಲಿನಲ್ಲಿ ಉದ್ದ ಹಗ್ಗ ಅದರ ಸೊಂಟಕ್ಕೆ ಹಾಕಿ ಹೊರಗೆ ಬಿಡುತ್ತಿದ್ದೆ.
ಅಂಜಲಿ ನಮ್ಮ ಕಾಟೇಜಿನ ಸುತ್ತಲಿನ ಎಲ್ಲಾ ಮರಗಳ ಮೇಲೆ ಹತ್ತಿ ಇಳಿಯುತ್ತಿತ್ತು ಅದರ ಆಟಗಳು, ಲತಾ ಹೊಡೆಯುವುದು, ಕೂಗುವುದು, ಹಣ್ಣು ತರಕಾರಿ ತಿನ್ನುವುದು, ಶೇಂಗಾ ಬೀಜದ ಸಿಪ್ಪೆ ತೆಗೆದು ಕಾಳು ಮಾತ್ರ ತಿಂದು ಸಿಪ್ಪೆ ಒಗೆಯುವುದು ಇದೆಲ್ಲ ನೋಡಲು ಚೆಂದ ಆಗಿತ್ತು.
ನಮ್ಮ ಸಂಸ್ಥೆಯ ಕೆಲಸದಾಕೆ ಮಂಜುಳಮ್ಮನಿಗೆ ಅಂಜಲಿ ಕಂಡರೆ ಅಷ್ಟಕಷ್ಟೇ ಯಾವಾಗಲೂ ಬೋನಿನ ಒಳಗೆ ಇರುತ್ತಿದ್ದ ಅಂಜಲಿಗೆ ಚುಡಾಯಿಸುವುದು, ಗೇಲಿ ಮಾಡುವುದು, ಬಯ್ಯುವುದು, ಕೈಯಲ್ಲಿ ಕೋಲು ಹಿಡಿದು ಬೋನಿನ ಒಳಗಿನ ಅಂಜಲಿಗೆ ಹೆದರಿಸುವುದು ಮಾಡುತ್ತಿದ್ದಳು.
ಒಂದು ದಿನ ಬೆಳಿಗ್ಗೆ ಅಂಜಲಿ ವೈಲ್ಡ್ ಆಗಿದ್ದಳು, ಬೋನಿನಿಂದ ತಪ್ಪಿಸಿಕೊಂಡು ಎಲ್ಲೆಂದರಲ್ಲಿ ಕ್ಷಣಮಾತ್ರದಲ್ಲಿ ಹಾರುತ್ತಾ ಮರವೇರುತ್ತಾ ಕುಣಿಯಲು ಶುರು ಮಾಡಿದಳು.
ನಾನು ಕರೆದರೆ ಮಾತ್ರ ಹತ್ತಿರ ಬರುತ್ತಿದ್ದಳು ತಲೆ ಸವರಿದರೆ ಸವರಿಸಿಕೊಳ್ಳುತ್ತಿದ್ದಳು ಆದರೆ ಅವಳನ್ನು ಹಿಡಿದು ಬೋನಿಗೆ ಹಾಕಲು ಹೋದರೆ ಒಪ್ಪುತ್ತಿರಲಿಲ್ಲ, ಬೇರೆಯವರಿಗೆ ಅವಳ ಹಲ್ಲು ತೋರಿಸಿ ಹೆದರಿಸಲು ಪ್ರಾರಂಬಿಸಿದರಿಂದ ಹಾಗೆ ಹೊರಗೇ ಬಿಟ್ಟಿದ್ದೆ.
ಅವತ್ತು ಮಧ್ಯಾಹ್ನ ಮಂಜುಳಮ್ಮ ಲಾಡ್ಜ್ ನ ಕೆಲಸ ಮಾಡುವುದು ನೋಡಿ ದೂರದ ಮರದಿಂದ ಇಳಿದು ಓಡಿ ಬಂದ ಅಂಜಲಿ ಅವಳ ಕಾಲಿಗೇ ಕಚ್ಚಿ ಬಿಟ್ಟಿತು.
ಇದರಿಂದ ನಮ್ಮ ಸಿಬ್ಬಂದಿಗಳು ಎಲ್ಲರೂ ಹೆದರಿದರು ಆದರೆ
ಏನು ಮಾಡಿದರು ಬೋನು ಸೇರಲು ಅಂಜಲಿ ಒಪ್ಪುತ್ತಲೇ ಇರಲಿಲ್ಲ.
ನಾವು ಒಂದು ಪ್ಲಾನ್ ಮಾಡಿದೆ ಹಣ್ಣು ತರಕಾರಿಗಳನ್ನ ಬೋನಿನ ಒಳಗೆ ಅವಳಿಗೆ ಕಾಣುವಂತೆ ಇಟ್ಟು ಬೋನಿನ ಬಾಗಿಲಿಗೆ ಹಗ್ಗವನ್ನು ಕಟ್ಟಿ ನಾವು ಅದಕ್ಕೆ ಕಾಣದಂತೆ ಕುಳಿತುಕೊಂಡೆವು.
ಎಷ್ಟೋ ಹೊತ್ತು ಆಟವಾಡಿದ ಅಂಜಲಿ ಹಸಿವಾಗಿ ಬೋನಿನ ಹತ್ತಿರ ಬಂದು ಅನುಮಾನದಿಂದ ಸುತ್ತಲು ನೋಡಿತು ನಾವ್ಯಾರು ಇಲ್ಲದಿರುವುದು ನೋಡಿ ಬೋನಿನ ಒಳಗೆ ಹೋದಾಗ ನಾವು ಹಗ್ಗವನ್ನು ಎಳೆದು ಬೋನು ಲಾಕ್ ಮಾಡಿದೆವು
ಇದರಿಂದ ನಮಗೆ ಅಂಜಲಿ ಬಗ್ಗೆ ಅಸಮಾಧಾನ ಮತ್ತು ಭಯ ಉಂಟಾಯಿತು.
ಈ ಸಂದರ್ಭದಲ್ಲಿ ನಮ್ಮ ಊರಿನ ಯಡೇಹಳ್ಳಿ ವೃತ್ತಕ್ಕೆ ಸಿಸಿ ಕ್ಯಾಮೆರಾ ಅಳವಡಿಸಲು ಜನ ಜಾಗೃತಿ ಮಾಡಿಸಲು ಎ ಎಸ್ ಪಿ ನಿಶಾ ಜೇಮ್ಸ್ ಐಪಿಎಸ್ ಬಂದಿದ್ದರು.
ಅವರು ನಮ್ಮ ಸಂಸ್ಥೆಯಲ್ಲಿ ಸಿ ಸಿ ಕ್ಯಾಮೆರಾದ ಅವರ ಪೋಲಿಸ್ ಡಿವಿಡಿ ಮತ್ತು ಡಿಸ್ ಪ್ಲೈಇತ್ಯಾದಿ ಉಪಕರಣ ಇಡಲು ಸ್ಥಳಾವಕಾಶ ಮತ್ತು ವಿದ್ಯುತ್ ಸಂಪರ್ಕ ಕೇಳಿ ಬಂದಿದ್ದರು.
ಚಹಾ ಕುಡಿಯುವಾಗ ನಿಮ್ಮ ಹತ್ತಿರ ಯಾವ್ಯಾವ ಸಾಕು ಪ್ರಾಣಿ ಇದೆ ಎಂದು ಕೇಳಿದರು (ಅವರಿಗೆ ನಾನು ಮಂಗ ಸಾಕಿದ್ದು ಗೊತ್ತಾಗಿರಬೇಕು) ನಾನು ನಾಯಿ -ಬೆಕ್ಕು ಮತ್ತು ಮಂಗ ಒಂದು ಇರುವುದಾಗಿ ತಿಳಿಸಿದ್ದೆ.
ಅವರು ಮಂಗ ಸಾಕುವುದು ಅಪರಾಧ ಯಾರಾದರು ದೂರು ಕೊಟ್ಟರೆ ನಿಮ್ಮ ಮೇಲೆ ಕೇಸ್ ದಾಖಲಾಗುತ್ತದೆ ಆದ್ದರಿಂದ ಮಂಗವನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡಿದ್ದರು.
ಇದಾಗಿ ಕೆಲವು ದಿನದಲ್ಲಿ ಬಳ್ಳಾರಿಯ ಸಂಸದರಾಗಿದ್ದ ಮಾಜಿ ಮಂತ್ರಿ ರಾಮುಲು ಅವರು ಬಂದಿದ್ದರು, ಅವರು ನಮ್ಮ ಕಾಟೇಜ್ ಎದುರಿನ ತೆರೆದ ಪ್ರದೇಶದಲ್ಲಿ ಅವರು ಅವರ ಗೆಳೆಯರು ಊಟಕ್ಕೆ ಕುಳಿತಾಗ ಅಂಜಲಿಯನ್ನು ನೋಡಿದ ಅವರು ಅದನ್ನು ಯಾಕೆ ಬಂದಿಸಿಟ್ಟಿದ್ದೀರಿ ಬಿಟ್ಟುಬಿಡಿ ಎಂದಿದ್ದರು.
ನಮಗೂ ಅಂಜಲಿ ಸುಧಾರಿಸುವುದು ಕಷ್ಟ ಅನ್ನಿಸಿತ್ತು ಅದಾಗಿ ಆ ವರ್ಷದ 15-ಆಗಸ್ಟ್-2016 ರ ಸ್ವಾತಂತ್ರ್ಯೋತ್ಸವ ದಿನ ಬೋನಿನ ಸಮೇತ ಅಂಜಲಿಯನ್ನು ವಾಹನ ಒಂದರಲ್ಲಿ ಹಾಕಿ ಸಾಗರ ಸಮೀಪದಲ್ಲಿಬಿಟ್ಟು ಬರಲು ಕಳಿಸಿದ್ದೆ.
ಬಿಟ್ಟು ಬರಲು ಹೋದವರು ಭಯದಿಂದ ಅಂಜಲಿಯ ಬೋನಿನ ಬಾಗಿಲು ತೆರೆದಿದ್ದಾರೆ... ಅಂಜಲಿ ಮಾತ್ರ ಅವರಾರಿಗೂ ಏನೂ ತೊಂದರೆ ಕೊಡದೆ ರಸ್ತೆಯಲ್ಲಿ ಬಂದನದಿಂದ ಸ್ವಾತಂತ್ರ ಪಡೆದು ಬಿಡುಗಡೆಯಾಗಿ ವೇಗವಾಗಿ ಓಡಿ ಹೋದಳಂತೆ.
ಆದರೆ ಅಂಜಲಿ ನೆನೆಪು ಮಾತ್ರ ಎಷ್ಟು ದಿನದಾದರೂ ಮರೆತಿಲ್ಲ ಅಂಜಲಿ ಎಲ್ಲೋ ಯಾರದೋ ಮನೆ ಸೇರಿರಬೇಕು ಎಂದು ಭಾವಿಸಿದ್ದೇನೆ.
ಇವತ್ತು ಹಳೆಯ ಅಂಜಲಿ ಫೋಟೋಗಳು ಅಕಸ್ಮಾತ್ ಸಿಕ್ಕಿತು ಇದೆಲ್ಲ ನೆನಪಾಯಿತು.
Comments
Post a Comment