Skip to main content

Posts

Showing posts with the label Smt Sudamani vishwapathi shastri daughter of Tyagarthi Inamadar Gurumurthy rayaru today my guest

Blog number 858.ತ್ಯಾಗರ್ತಿಯ ಇನಾಮುದಾರರು ಊರಿಗಾಗಿ ವಿವೇಕಾನಂದ ಪ್ರೌಡ ಶಾಲೆ ಕಟ್ಟಿಸಿಕೊಟ್ಟವರಾದ ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಇವತ್ತು ನಮ್ಮ ಅತಿಥಿಗಳು

#ತ್ಯಾಗರ್ತಿ_ಇನಾಂದಾರ್_ಗುರುಮೂರ್ತಿ_ರಾಯರ_ಪುತ್ರಿ_ಬೆಂಗಳೂರಿಂದ_ಬಂದಿದ್ದರು. #ಶ್ರೀಮತಿ_ಸುದಾಮಣಿವಿಶ್ವಪತಿ_ಶಾಸ್ತ್ರೀ. #ನನ್ನ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನದಲ್ಲಿ_ಇವರ_ಕುಟುಂಬದ_ನಿಜ_ಕಥೆ_ಇದೆ. #ಇನಾಂದಾರರ_ಮಂಚ_ಅಂತ. #ಮಾನವೀಯ_ಅಂತಃಕರಣ_ಹೊಂದಿದ್ದ_ಸಜ್ಜನ_ಭೂಮಾಲಿಕರು. #ಹೇರಂಬರಾಯರು_ನೀಚಡಿಬಾಪಟ್ಟರು_ಬಂಗಾರಪ್ಪ_ಶಿಕಾರಿ_ಮಾಡಿದ_ಹುಲಿ #_ಎತ್ತಿನಗಾಡಿ_ಮೆರವಣಿಗೆ_ಮಾಡಿ_ಊರಿಗೆಲ್ಲ_ಬೆಲ್ಲ_ಹಂಚಿದ್ದರಂತೆ.     ತ್ಯಾಗರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ ಕೇಂದ್ರ, ಇಲ್ಲಿಗೆ ಸಮೀಪದಲ್ಲೇ ಇರುವ ಬೆಳಂದೂರು ಎಂಬಲ್ಲಿ ಜನರಿಗೆ ಕಂಟಕ ಆಗಿದ್ದ ನರಭಕ್ಷಕ ಹುಲಿಯನ್ನು ಪ್ರಖ್ಯಾತ ಶಿಕಾರಿಗಾರ ಕೆನತ್ ಆಂಡರ್ಸನ್ ಮತ್ತು ತ್ಯಾಗರ್ತಿ ಆಸ್ಪತ್ರೆಯ ವೈದ್ಯರು ಸೇರಿ ಶಿಕಾರಿ ಮಾಡಿದ #ಬೆಳ೦ದೂರಿನ_ನರಭಕ್ಷಕ ಪುಸ್ತಕ ತೇಜಸ್ವಿಯವರು ಅನುವಾದಿಸಿದ್ದಾರೆ.     ತ್ಯಾಗರ್ತಿಯ ಶ್ರೀಮಂತ ಜಮೀನ್ದಾರ್ ದೇವಪ್ಪನವರು ನಂತರ ಅವರ ಮಗ ರಂಗಪ್ಪರ ಇಬ್ಬರು ಪುತ್ರರಾದ ಹೇರಂಬ ರಾಯರು ಮತ್ತು ಗುರುಮೂರ್ತಿ ರಾಯರ ಕಾಲದಲ್ಲಿ ಸಾವಿರಾರು ಎಕರೆ ಜಮೀನು ಭೂ ಸುದಾರಣೆ ಕಾಲದಲ್ಲಿ ಕಳೆದುಕೊಂಡರು.   1966 ರಲ್ಲಿ ಶೃಂಗೇರಿ ಸ್ವಾಮಿಗಳು ಇವರ ಮನೆಯಲ್ಲಿ ಎರೆಡು ದಿನ ಮೊಕ್ಕಾಂ ಮಾಡಿದ್ದರು, ವರದಳ್ಳಿ ಶ್ರೀದರ ಸ್ವಾಮಿಗಳು ಇವರ ಮನೆಯಲ್ಲಿ ಅನೇಕ ಬಾರಿ ಬಿಕ್ಷೆ ಮಾಡಿದ್ದ...