Blog number 858.ತ್ಯಾಗರ್ತಿಯ ಇನಾಮುದಾರರು ಊರಿಗಾಗಿ ವಿವೇಕಾನಂದ ಪ್ರೌಡ ಶಾಲೆ ಕಟ್ಟಿಸಿಕೊಟ್ಟವರಾದ ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಇವತ್ತು ನಮ್ಮ ಅತಿಥಿಗಳು
#ಶ್ರೀಮತಿ_ಸುದಾಮಣಿವಿಶ್ವಪತಿ_ಶಾಸ್ತ್ರೀ.
#ನನ್ನ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನದಲ್ಲಿ_ಇವರ_ಕುಟುಂಬದ_ನಿಜ_ಕಥೆ_ಇದೆ.
#ಇನಾಂದಾರರ_ಮಂಚ_ಅಂತ.
#ಮಾನವೀಯ_ಅಂತಃಕರಣ_ಹೊಂದಿದ್ದ_ಸಜ್ಜನ_ಭೂಮಾಲಿಕರು.
#ಹೇರಂಬರಾಯರು_ನೀಚಡಿಬಾಪಟ್ಟರು_ಬಂಗಾರಪ್ಪ_ಶಿಕಾರಿ_ಮಾಡಿದ_ಹುಲಿ
#_ಎತ್ತಿನಗಾಡಿ_ಮೆರವಣಿಗೆ_ಮಾಡಿ_ಊರಿಗೆಲ್ಲ_ಬೆಲ್ಲ_ಹಂಚಿದ್ದರಂತೆ.
ತ್ಯಾಗರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ ಕೇಂದ್ರ, ಇಲ್ಲಿಗೆ ಸಮೀಪದಲ್ಲೇ ಇರುವ ಬೆಳಂದೂರು ಎಂಬಲ್ಲಿ ಜನರಿಗೆ ಕಂಟಕ ಆಗಿದ್ದ ನರಭಕ್ಷಕ ಹುಲಿಯನ್ನು ಪ್ರಖ್ಯಾತ ಶಿಕಾರಿಗಾರ ಕೆನತ್ ಆಂಡರ್ಸನ್ ಮತ್ತು ತ್ಯಾಗರ್ತಿ ಆಸ್ಪತ್ರೆಯ ವೈದ್ಯರು ಸೇರಿ ಶಿಕಾರಿ ಮಾಡಿದ #ಬೆಳ೦ದೂರಿನ_ನರಭಕ್ಷಕ ಪುಸ್ತಕ ತೇಜಸ್ವಿಯವರು ಅನುವಾದಿಸಿದ್ದಾರೆ.
ತ್ಯಾಗರ್ತಿಯ ಶ್ರೀಮಂತ ಜಮೀನ್ದಾರ್ ದೇವಪ್ಪನವರು ನಂತರ ಅವರ ಮಗ ರಂಗಪ್ಪರ ಇಬ್ಬರು ಪುತ್ರರಾದ ಹೇರಂಬ ರಾಯರು ಮತ್ತು ಗುರುಮೂರ್ತಿ ರಾಯರ ಕಾಲದಲ್ಲಿ ಸಾವಿರಾರು ಎಕರೆ ಜಮೀನು ಭೂ ಸುದಾರಣೆ ಕಾಲದಲ್ಲಿ ಕಳೆದುಕೊಂಡರು.
1966 ರಲ್ಲಿ ಶೃಂಗೇರಿ ಸ್ವಾಮಿಗಳು ಇವರ ಮನೆಯಲ್ಲಿ ಎರೆಡು ದಿನ ಮೊಕ್ಕಾಂ ಮಾಡಿದ್ದರು, ವರದಳ್ಳಿ ಶ್ರೀದರ ಸ್ವಾಮಿಗಳು ಇವರ ಮನೆಯಲ್ಲಿ ಅನೇಕ ಬಾರಿ ಬಿಕ್ಷೆ ಮಾಡಿದ್ದರು, ಶ್ರೀದರ ಸ್ವಾಮಿಗಳ ಭಕ್ತರಾಗಿದ್ದ ಇವರು ಅವರ ಹೆಸರಲ್ಲೆ ರೈಸ್ ಮಿಲ್ ಮಾಡಿ ಶ್ರೀಧರ ಸ್ವಾಮಿಗಳಿಂದಲೇ ಉದ್ಘಾಟನೆ ಮಾಡಿಸಿದ್ದರು.
ತ್ಯಾಗರ್ತಿಯ ಅಗ್ರಹಾರದಲ್ಲಿ 1826 ರಲ್ಲಿ ನಿರ್ಮಿಸಿದ್ದ ಬೃಹತ್ ಮೂರು ಅಂತಸ್ಥಿನ ಮನೆ ಅಂತದ್ದು ಆನಂದಪುರಂ ಹೋಬಳಿಯಲ್ಲಿ ಮತ್ತೊಂದು ಇರಲಿಲ್ಲ.
ಗುರುಮೂರ್ತಿ ರಾಯರ ಕೊನೆಯ ಪುತ್ರಿ ಶ್ರೀಮತಿ ಸುದಾಮಣಿ ವಿಶ್ವಪತಿ ಶಾಸ್ತ್ರೀಗಳು ಈಗ ಬೆಂಗಳೂರು ನಿವಾಸಿಗಳು, ನಿನ್ನೆ ನಮ್ಮಲ್ಲಿ ಅತಿಥಿಗಳಾಗಿ ತಂಗಿದ್ದರು ಆಗ ಅವರ ಜೊತೆ ಮಾತಾಡಿದ ವಿಡಿಯೋ ಇಲ್ಲಿದೆ.
ಸ್ವಾರಸ್ಯ ಎಂದರೆ ನನ್ನ ಕಥಾ ಸಂಕಲನದಲ್ಲಿನ ಒಂದು ಕಥೆ #ಇನಾಂದಾರರ_ಮಂಚ ಇವರ ಕುಟುಂಬದ ನಿಜ ಕಥೆ ಆ ಮಂಚ ಇವರ ಮುತ್ತಜ್ಜ ದೇವಪ್ಪನವರು ಮಲಗುತ್ತಿದ್ದದ್ದು, ಇದರ ನಾಲ್ಕು ಬೋಲ್ಟ್ ಗಳು ಬಂಗಾರದ್ದು ಅಂತ ಇವರಾರಿಗೂ ಗೊತ್ತಿರಲಿಲ್ಲ, ಹೇರಂಬ ರಾಯರ ಮೊಮ್ಮಗಳ ಮಗ ಕೇವಲ ನಾಲ್ಕು ಸಾವಿರಕ್ಕೆ ಮಾರಿಕೊಂಡಿದ್ದ, ಖರೀದಿಸಿದವರು ಅದೇ ಊರಿನ ಆಭರಣ ಕೆಲಸದ ಅಕ್ಕಸಾಲಿಗರು.
ಶ್ರೀಮಂತ ಜಮೀನ್ದಾರರಾಗಿದ್ದ ದೇವಪ್ಪನವರು 1826 ರಲ್ಲಿ ಅರಮನೆಯಂತ ಮನೆ ನಿರ್ಮಿಸಿದಾಗ ಬಂಗಾರದ ಬೋಲ್ಟ್ ಅಳವಡಿಸಿದ ಮಂಚ ಮಾಡಿಸಿರಬೇಕು, ಮುಂದಿನ ತಲೆಮಾರಿಗೆ ರಹಸ್ಯವಾಗಿಟ್ಟಿರಬೇಕು ಅಥವ ತಮ್ಮ ಅಂತ್ಯಕಾಲದಲ್ಲಿ ಇದನ್ನು ತಿಳಿಸಲಾಗದೇ ನಿರ್ಗಮಿಸಿರಬೇಕು ಅಥವ ಅವರ ಶ್ರೀಮಂತ ಜೀವನ ಶೈಲಿಗೆ ಇದೊಂದು ಅಲ್ಪ ಅನ್ನಿಸಿರಬೇಕು.
ಸುಮಾರು 200 ವರ್ಷದಲ್ಲಿ 2 kg ಬಂಗಾರದ ಬೋಲ್ಟ್ ಗೆ ಒಂದು ಕೋಟಿ ಆಗುತ್ತೆ ಅಂತ ಯಾರಿಗೆ ಗೊತ್ತು.
ತ್ಯಾಗರ್ತಿಯಲ್ಲಿ ಹೇರಂಬ ರಾಯರು, ನೀಚಡಿ ಬಾಪಟ್ಟರು, ಬಂಗಾರಪ್ಪ ಎಂಬ ರೈತರು ಜನ - ಜಾನುವಾರಿಗೆ ಕಂಟಕ ಆಗಿದ್ದ ಹುಲಿ ಶಿಕಾರಿ ಮಾಡಿ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ನೆರೆದವರಿಗೆಲ್ಲ ಬೆಲ್ಲ ಹಂಚಿದ್ದು ಸುದಾಮಣಿ ಶಾಸ್ತ್ರೀಯವರು 1958 ರಲ್ಲಿ ನೋಡಿದ್ದು ನೆನಪು ಮಾಡಿಕೊಂಡಿದ್ದಾರೆ.
ಇವರ ಪಿತ್ರಾರ್ಜಿತ ಆಸ್ತಿ ಉಳಿದ 5 ಎಕರೆ ಖುಷ್ಕಿ ಜಮೀನ ದುರಾಸೆಯ ಕೆಲವರು ಒತ್ತುವರಿ ಮಾಡಿಕೊಂಡು ಸತಾಯಿಸುತ್ತಿದ್ದಾರೆ ಅವರಿಗೆ ಬುದ್ಧಿ ಹೇಳಿ ತ್ಯಾಗರ್ತಿ ಊರು ಕಟ್ಟಿದ ಸಜ್ಜನರ ವ೦ಶಕ್ಕೆ ನ್ಯಾಯ ಕೊಡಿಸುವವರು ಇಲ್ಲ, ಇವರ ತಂದೆ ಹತ್ತು ಎಕರೆ ಭೂಮಿ ದಾನ ನೀಡಿ ಊರಿನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಪ್ರಾರಂಬಿಸಿದ ವಿವೇಕಾನಂದ ಪ್ರೌಡ ಶಾಲೆ, ಬರಗಾಲದಲ್ಲಿ ಇಡೀ ಊರಿಗೆ ತಮ್ಮ ಸಂಗ್ರಹದ ಬತ್ತ ದಾನ ಮಾಡಿದ್ದು ಎಲ್ಲಾ ಲಾಭ ಪಡೆದ ಕುಟುಂಬದ ಮು೦ದಿನ (ಈಗಿನ ) ತಲೆಮಾರುಗಳು ಮರೆತಿದೆ.
ಊರು ಉಪಕಾರ ನೆನೆಯುವುದಿಲ್ಲ.. ಹೆಣ ಸಿಂಗಾರ ನೆನೆಯುವುದಿಲ್ಲ ಎಂಬ ಗಾದೆ ಎಷ್ಟು ಸತ್ಯ ನೋಡಿ.
Comments
Post a Comment