Blog number 861, ಸಾಗರ ತಾಲ್ಲೂಕಿನ ಕುಗ್ರಾಮದ ಯುವಕ ಈಗ ದೇಶ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಪತ್ರಕರ್ತ, ಡಿ.ಪಿ. ಸತೀಶ್ ಇವತ್ತು ನನ್ನ ಕಛೇರಿಯಲ್ಲಿ ನನ್ನ ಅತಿಥಿ
#ಈಗ_TV18_ಬ್ರಾಡ್_ಕಾಸ್ಟ್_ಲಿಮಿಟೆಡ್_ದಕ್ಷಿಣಬಾರತದ_ಗ್ರೂಪ್_ಎಡಿಟೋರಿಯಲ್_ಅಡ್ವೈಸರ್_ಆಗಿರುವ
#ನಮ್ಮ_ಸಾಗರ_ತಾಲ್ಲೂಕಿನವರೇ_ಆದ_ಡಿಪಿ_ಸತೀಶ್_ಬೇಟಿ_ಇವತ್ತು.
ದೇಶದ ಪತ್ರಿಕೋದ್ಯಮದಲ್ಲಿ #ಡಿ_ಪಿ_ಸತೀಶ್ ರವರದ್ದು ದೊಡ್ಡ ಹೆಸರು, ತಮ್ಮ 24ನೇ ವಯಸ್ಸಲ್ಲಿ ಪಾರ್ಲಿಮೆಂಟ್ ನಲ್ಲಿ ವರದಿಗಾರರಾಗಿದ್ದವರು, ದೇಶದ ಪ್ರದಾನಮಂತ್ರಿ, ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಯಾವುದೇ ಸಂದರ್ಭದಲ್ಲೂ ಬೇಟಿ ಮಾಡುವಂತ ಪ್ರಬಾವಶೀಲ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಅಷ್ಟೆ ಅಲ್ಲ ಅವರ ಚಾನಲ್ ಗಳ ಶ್ರೀಲಂಕಾ, ಮಾರಿಷಸ್ ಗಳ ಉಸ್ತುವಾರಿಯೂ ಇವರದ್ದು.
CNN NEWS-18,IBN-7,CNBC TV -18, HISTORY TV-18,Forbes,HOME SHOP-18,Moneycontrol.com,FIRSTPOST.Viacom-18 ಮತ್ತು ಕಲರ್ TV ಕೂಡ ಇವರ ವೃತ್ತಿಯ ವ್ಯಾಪ್ತಿಯ ಭಾರತದ ಅತ್ಯಂತ ದೊಡ್ಡ ಉದ್ದಿಮೆದಾರರಾದ ರಿಲಯನ್ಸ್ ಗುಂಪಿಗೆ ಸೇರಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಶರಾವತಿ ಹಿನ್ನೀರಿನ ಕೊಳಚಗಾರು ಎಂಬ ಕುಗ್ರಾಮದ ಯುವಕ ತಾಳಗುಪ್ಪದ ನಲಂದಾ ವಿದ್ಯಾ ಸಂಸ್ಥೆ ನಂತರ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಒದಿದವರು ಇವರು ಶರಾವತಿ ಮುಳುಗಡೆ ಸಂತ್ರಸ್ಥರು ಅದೂ ಎರೆಡು ಸಾರಿ ಒಮ್ಮೆ ಹಿರೇ ಬಾಸ್ಕರ ಡ್ಯಾಮಿಗಾಗಿ ನಂತರ ಲಿಂಗನಮಕ್ಕಿ ಡ್ಯಾಮಿಗಾಗಿ ಜಮೀನು ಮನೆ ಕಳೆದುಕೊಂಡವರು.
2004ರಲ್ಲಿ ಇವರ ಊರ ಹತ್ತಿರವೇ ಸಣ್ಣದಾದ ನೆನಪಿನಲ್ಲಿ ಉಳಿಯದಂತ ಪರಿಚಯ ಆಗಿತ್ತು. ಆದರೆ ಪೇಸ್ ಬುಕ್ ಮುಖಾಂತರ ನಿಕಟತೆ ಉಂಟಾಗಿದೆ. ಕೆಲ ಬಾರಿ ಪೋನಿನಲ್ಲಿ ಮಾತಾಡಿದ್ದರು ಆದರೆ ಇವತ್ತು ನನ್ನ ಇವರ ಬೇಟಿಯ ಮಹೂರ್ತ ಆಯಿತು.
ನನ್ನ #ಆನಂದಪುರಂ_ಇತಿಹಾಸದ ಸರಣಿ ಲೇಖನ ಓದಿದ ಇವರು ಆನಂದಪುರಂ ಇತಿಹಾಸ ಪುಸ್ತಕವಾಗಿ ಪ್ರಕಟಿಸಲು ಸಲಹೆ ನೀಡಿದ್ದರು. ಇವತ್ತು ಇವರು ಬಂದಾಗ ನನ್ನ ಟೇಬಲ್ ಮೇಲೆ ಮುಂದಿನ ಪುಸ್ತಕ #ಆನಂದಪುರಂ_ಇತಿಹಾಸ ಪುಸ್ತಕದ ಕೆಲ ಪುಟಗಳ ಡಿಟಿಪಿ ಕರೆಕ್ಷನ್ ಗೆ ಇಟ್ಟುಕೊಂಡಿದ್ದೆ.
ಈ ಪುಸ್ತಕ ಮಾಡಲು ಸಲಹೆ ಮಾಡಿದ ಮತ್ತು ಪ್ರೇರೇಪಿಸಿದ ನೀವೇ ಮುನ್ನುಡಿ ಬರೆಯಬೇಕೆಂದೆ ಒಪ್ಪಿದ್ದಾರೆ. ದೆಹಲಿಯಿಂದ ನನಗಾಗಿ ತಂದ ಎರೆಡು ಪುಸ್ತಕ (ಡೆವಿಡ್ ಗಿಲ್ಮೊರ್ ಬರೆದ The British India ಮತ್ತು ಪೂನಮ್ ಸಕ್ಸೇನ ಅನುವಾದಿಸಿದ Greatest Hindi Stories Ever Told) ಬೇಟಿಯ ನೆನಪಿನ ಸಾಕ್ಷಿಯಾಗಿ ನನಗೆ ನೀಡಿದರು.
ನಾನು ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಇವರಿಗೆ ನೀಡಿದೆ (ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕ ಕಳೆದ ವರ್ಷ ಓದಿದ್ದಾರೆ).
ನನಗೆ ನಮ್ಮ ತಾಲ್ಲೂಕಿನ ಕುಗ್ರಾಮದ ಯುವಕ ಈ ಮಟ್ಟಕ್ಕೆ ಸ್ವಯಂ ಶಕ್ತಿಯಿಂದ ತಲುಪಿದ ಬಗೆ ತಿಳಿಯುವ ಕುತೂಹಲ ಇತ್ತು, ನಮ್ಮಿಬ್ಬರ ಸಂಭಾಷಣೆಯ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ಅವರ ಮಾತಿನಲ್ಲೇ ಇದಕ್ಕೆ ಉತ್ತರ ಕೇಳಬಹುದು.
ಪಿತ್ರಾರ್ಜಿತವಾಗಿ ಬಂದ ಜಮೀನು ತೋಟದಲ್ಲಿ ಸ್ವಂತಕ್ಕಾಗಿ ಕಾಟೇಜ್ ನಿರ್ಮಿಸಿದ್ದಾರಂತೆ, ಅದರಲ್ಲಿ ಮಳೆಗಾಲದಲ್ಲಿ ಕುಳಿತು ತುಂಬಿದ ಶರಾವತಿ ನದಿ ನೋಡುವುದು ಇವರಿಗೆ ಇಷ್ಟ, ತಿಂಗಳಿಗೊ ಎರೆಡು ತಿಂಗಳಿಗೋ ಒಮ್ಮೆ ಹಳ್ಳಿಗೆ ಬಂದು ಕೃಷಿ ಕೆಲಸ ಮಾಡಿಸಿ ವಾಪಾಸಾಗುತ್ತಾರೆ, ಹುಟ್ಟೂರಿನ ಸಂಬಂದ ಮತ್ತು ಕೃಷಿ ಸಂಬಂದದ ಕರಳು ಬಳ್ಳಿ ಉಳಿಸಿಕೊಂಡಿದ್ದಾರೆ (ಇದೇ ಸ್ಥಳಿಯ ಯುವಕರು ಉದ್ಯೋಗ ದೊರೆತೊಡನೆ ಹಳ್ಳಿಯ ಭೂಮಿ ಆಸ್ತಿ ಮಾರಾಟ ಮಾಡಿ ಪಟ್ಟಣ ಸೇರುವ ಈಗಿನ ಕಾಲದಲ್ಲಿ ಇವರು ಮಾತ್ರ ಬಿನ್ನರಾಗಿದ್ದಾರೆ.)
ಇವರ ಸಾಧನೆಯಿಂದ ನಮ್ಮ ಗ್ರಾಮೀಣ ಪ್ರದೇಶದ ಯುವ ಜನತೆಗೆ ಇವರೊಬ್ಬರು ಒಂದು ರೋಲ್ ಮಾಡೆಲ್ ಆಗಿದ್ದಾರೆ, ಇದು ನನಗೆ ಇವರ ಬಗ್ಗೆ ವಿಶೇಷ ಅಭಿಮಾನಕ್ಕೆ ಕಾರಣ.
ಹೆಚ್ಚು ಓದುವ ಹವ್ಯಾಸದ, ಹೆಚ್ಚು ಸ್ಮರಣ ಶಕ್ತಿಯಿರುವ ದೇಶ ವಿದೇಶಗಳ ಪ್ರತಿಷ್ಟಿತರ ಸಂಪರ್ಕದಲ್ಲಿರುವ ನೀವು,ನಿಮ್ಮ ಮುಂದಿನ ಗುರಿ ಏನು? ಅಂದೆ ಅದಕ್ಕೆ ಅವರ ಉತ್ತರ ಭವಿಷ್ಯದಲ್ಲಿ ಏನು ಎಂಬ ನಿರೀಕ್ಷೆ ನನಗೆ ಗೊತ್ತಿಲ್ಲ ಅಂದರು.
ತುಂಬಾ ಹೊತ್ತು ಕಾಫಿಯ ಜೊತೆ ಡಿ.ಪಿ. ಸತೀಶರ ಜೊತೆ ಕಾಲ ಕಳೆದದ್ದು ಗೊತ್ತಾಗಲೇ ಇಲ್ಲ.
Comments
Post a Comment