#ಇದರ_ಹಣದ_ಮೂಲ_ಯಾವುದು?
#ಜನ_ಸ್ವಯಂ_ಪ್ರೇರಿತರಾಗಿ_ಸೇರುವ_ಕಾಲ_ಇದಲ್ಲ
#ಕೂಲಿ_ಕಾರ್ಯಕರ್ತರ_ಎದರು_ಕೋಣನ_ಮುಂದೆ_ಕಿನ್ನರಿ_ಭಾರಿಸಿದಂತೆ_ಪರಿಣಾಮ_ಶೂನ್ಯ.
ಬೇರೆ ದೇಶದಲ್ಲಿ ಟಿಕೇಟ್ ಖರೀದಿಸಿ ಭಾಷಣ ಕೇಳಲು ಸಭೆಗೆ ಹೋಗುತ್ತಾರಂತೆ !? ನಮ್ಮಲ್ಲಿ ಭಾಷಣ ಕೇಳುವವನಿಗೆ ಹಣ ನೀಡಬೇಕು!!
ಜಾರ್ಜ್ ಫರ್ನಾಂಡಿಸರು ಹೇಳಿದ್ದು ಕೇಳಿದ್ದೆ "ನಾನು ಬಿಹಾರದಲ್ಲಿ ಹಳ್ಳಿಗಳಲ್ಲಿ ಸಣ್ಣ ಸಣ್ಣ ಗುಂಪುಗಳ ಜನರ ಜೊತೆ ಚಾರ್ ಪಾಯ್ (ಅಲ್ಲಿನ ಸಂಪ್ರದಾಯಕ ಹಗ್ಗದ ಮಂಚ) ಮೇಲೆ ಕುಳಿತು ಮಾಡುತ್ತಿದ್ದ ಸಭೆ ಪರಿಣಾಮಕಾರಿ ಆಗುತ್ತಿತ್ತು, ನಾನು ಹೇಳುವ ವಿಷಯ ಅವರ ಮೆದುಳಿಗೆ ಹೋಗಿ ದಾಖಲಾಗುತ್ತಿತ್ತು, ಹತ್ತು ಜನರಲ್ಲಿ ಎಂಟು ಜನರಿಗಾದರೂ ತಲುಪಿತ್ತಿತ್ತು ಆದರೆ ಸಾವಿರಾರು ಜನ ಸೇರಿಸುವ ಸಭೆಗಳಲ್ಲಿ ವಿಚಾರ ಯಾರ ತಲೆಗೂ ತಲುಪುವುದಿಲ್ಲ" ಅಂತ. ನಾವೆಲ್ಲ ಸೇರಿ (ಐ.ಎಂ.ಜಯರಾಂ ಶೆಟ್ಟರು, ಹರಿ ಕೋಡೆ) ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ 2004 ರಲ್ಲಿ ಸಂಯುಕ್ತ ಜನತಾದಳ ಮತ್ತು ಕೋಡೆಯವರ ಪಾರ್ಟಿ ಸೇರಿಸಿ ಸಮಾವೇಶ ನಡೆಸುವ ನಮ್ಮ ಉದ್ದೇಶಕ್ಕಾಗಿ ಅವರನ್ನು ಆಹ್ವಾನಿಸುವ ಸಂದರ್ಭದಲ್ಲಿ.
ಇವತ್ತು #ಅರವಿಂದ_ಚೊಕ್ಕಾಡಿ ಯವರ ಪೋಸ್ಟಿನಲ್ಲಿ ಸಭೆ ಸಮಾವೇಷದ ಚರ್ಚೆ ನೋಡಿ ಇದನ್ನು ಬರೆಯುವ ಮನಸ್ಸಾಯಿತು, ಮುಂದಿನ ದಿನದಲ್ಲಿ ಬದಲಾದೀತಾ ಇದು?
ನಾನು ಭಾವಿಸುವುದು ಜನ ಸೇರಿಸಿ ಸಭೆ ಮಾಡುವ ಉದ್ದೇಶ outdated. ಯಾಕೆಂದರೆ ಆಗ ಜನರಿಗೆ ಟೀವಿ ಮೊಬೈಲ್ ಇರಲಿಲ್ಲ, ಅಕ್ಷರ ಜ್ಞಾನ ಇರಲಿಲ್ಲ, ಆಗ ಗಾಂದೀ ನೋಡಲು ಅವರ ಮಾತು ಕೇಳಲು ಲಕ್ಷಾಂತರ ಜನ ಸ್ವಯ೦ ಪ್ರೇರಿತರಾಗಿ ಸೇರುತ್ತಿದ್ದರು ಮತ್ತು ಅವರ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕುತ್ತಿದ್ದರು.
ರಾಜಕೀಯ ಪಕ್ಷಗಳು ತಮಗೆ ಜನಪ್ರಿಯತೆ ಇದೆ ಅಂತ ತೋರಿಸಲು ಹಣ - ಬಿರಿಯಾನಿ - ಹೆಂಡ-ವಾಹನ - ಟೀ ಶರ್ಟ್ - ಟೋಪಿ ಕೊಟ್ಟು ಜನಪ್ರಿಯ ಸಿನಿಮಾ - ಸೀರಿಯಲ್ ನಿರೂಪಕರನ್ನು ಕರೆಸಿ ಅವರಿಂದ ಜೈಕಾರ ಹಾಕಿಸುವುದು ಮತ್ತು ನಾಯಕರುಗಳು ಅವರೆದರು ಕೋಣನ ಮುಂದೆ ಕಿಂದರಿ ಬಾರಿಸುವುದು ಅದಕ್ಕೆ ಕೊಟ್ಟ ಕೂಲಿಯ ಪ್ರತಿಫಲವಾಗಿ ಚಪ್ಪಾಳೆ ..ಟ್ರಾಪಿಕ್ ಜಾಮ್, ನಾಳೆ ಇವರೇ ಬೇರೆ ಗೆಟಪ್ ನಲ್ಲಿ ಬೇರೆ ಪಕ್ಷದ ಸಮಾವೇಶ ಇದೊಂದು ತರ ಅಪಹಾಸ್ಯ.
ಆದ್ದರಿಂದ ಅವಶ್ಯವಿರುವ ಮತ್ತು ಅರಿವಿರುವ 10 ಜನರು ಸೇರಿ ಸಭೆ ನಡೆಸಿ ಲಕ್ಷಾಂತರ ಜನರಿಗೆ ತಲುಪಿಸುವ ಸಾಮಾಜಿಕ ಜಾಲ ತಾಣ ಬಳಸಿಕೊಳ್ಳುವ ಕಾಲ ಇದು.
ಪತ್ರಿಕೆಯಲ್ಲಿ ಟಿವಿಯಲ್ಲಿ ಇದು ವರದಿ ಆಗುವುದು ಬೇಕಾಗಿಲ್ಲ, ಜನರಿಗೆ ಅವುಗಳ ಮೇಲೆ ವಿಶ್ವಾಸವೂ ಇಲ್ಲ ಅವೆಲ್ಲ ಜಾಹಿರಾತು ಹಣಕ್ಕಾಗಿ ನಡೆಯುವ ದಂದೆ ಅಷ್ಟೆ.
🙏
Comments
Post a Comment