Skip to main content

Blog number 875, ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದಲ್ಲಿ ಅಮೂರ್ತ ವೇಳೆಯಲ್ಲಿ ನನ್ನ ಮದುವೆ ಆಗಿ 33 ವರ್ಷ ಆಗಲಿದೆ, ಮದುವೆ ಮಾಡಿಸಿದವರು ಪ್ರದಾನ ಅರ್ಚಕರಾದ ವಿಶ್ವ ಹಿಂದೂ ಪರಿಷತ್ ಸಂತ ಸಮಾವೇಶದ ಸಂಚಾಲಕರಾದ ನರಸಿಂಹಮೂರ್ತಿ ಆಯ್ಯಂಗಾರರು

#ಶಿವಮೊಗ್ಗದ_ಕೋಟೆ_ಆಂಜನೇಯ_ದೇವಸ್ಥಾನ.

#ಕೆಳದಿ_ಅರಸರ_ಶಿವಮೊಗ್ಗ_ಕೋಟೆಯ_ಆಂಜನೇಯ

#ಇಲ್ಲಿನ_ಅರ್ಚಕರಾಗಿದ್ದ_ನರಸಿಂಹಮೂರ್ತಿ_ಅಯ್ಯಂಗಾರ್

#ನನ್ನ_ಮದುವೆ_ಮಾಡಿಸಿದವರು.

  1989 - ಆಗಸ್ಟ್ -23 ರಂದು ನನ್ನ ಮದುವೆ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯಲ್ಲಿ ನಿಗದಿ ಆಗಿತ್ತು, ವಿವಾಹ ಆಹ್ವಾನ ಪತ್ರಿಕೆ ಇಲ್ಲ, ಕೆಲವೇ ಕೆಲವು ಆಪ್ತರ ಸಾಕ್ಷಿಯಾಗಿ ನನ್ನ ಮದುವೆ.
  ಇದಕ್ಕೂ ಒ0ದು ವರ್ಷ ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಮನೆಯಲ್ಲಿ ಯಾರಿಗೂ ತಿಳಿಸದೆ ವಿವಾಹ ನೊಂದಾವಣೆ ಮಾಡಿಸಿದ್ದೆ.
   ನನಗೆ ಗಾರ್ಡಿಯನ್ ಆಗಿ ಸಾಗರದ ತೀ.ನಾ. ಶ್ರೀನಿವಾಸ್ (ನಂತರರ ಸಾಗರ ಪುರಸಭೆ ಅಧ್ಯಕ್ಷರಾದರು - ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ನನ್ನ ಪತ್ನಿಗೆ ಗಾರ್ಡಿಯನ್ ಆಗಿ ಅವಳ ಸಹೋದರಿಯ ಬಾಡಿಗೆ ಮನೆ ಮಾಲಿಕರಾದ ಶ್ರೀ ಮತಿ ಮುತ್ತು ಮೇರಿಯಮ್ಮ ಸಹಿ ಮಾಡಿದ್ದರು.
  ವಿವಾಹ ನೊಂದಾವಣೆ ಮಾಡಿದ್ದು ನನ್ನ ಪತ್ನಿಗೆ ಮುಂದೆ ಮದುವೆಗೆ ಏನಾದರೂ ಅಡೆತಡೆ ಬಂದರೂ ನಮ್ಮ ವಿವಾಹ ಖಾತ್ರಿ ಎಂದು ದೃಡೀಕರಿಸಲು ಮತ್ತು ಇದು ರಹಸ್ಯವಾಗಿಡಬೇಕೆಂಬುದು ನಮ್ಮ ಉದ್ದೇಶ ಆದರೆ ನಮ್ಮ ವಿವಾಹ ನೊಂದಾವಣಿಯನ್ನು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಸಾಗರದ ಸಬ್ ರಿಜಿಸ್ಟ್ರಾರ್ ಆಫೀಸಿನ ನೋಟೀಸ್ ಬೋರ್ಡಿಗೆ ಹಾಕುತ್ತಾರಂತ ಗೊತ್ತಿರಲಿಲ್ಲ.
  ಪಕ್ಕದ ಟ್ರಜರಿಯಲ್ಲಿ ಉದ್ಯೋಗಿ ಆಗಿದ್ದ ನನ್ನಣ್ಣನ ಶಾಲಾ ಸಹಪಾಠಿ ಅಣ್ಣಪ್ಪನವರು ನನ್ನಣ್ಣನಿಗೆ ತಿಳಿಸಿದಾಗ, ನನ್ನಣ್ಣ ಅದನ್ನು ನೋಡಿ ಬಂದು ನಮ್ಮ ತಂದೆಗೆ ತಿಳಿಸಿದ ನಂತರ ನಮ್ಮ ರಹಸ್ಯ ವಿವಾಹ ನೊಂದಾವಣಿ ವಿಷಯ ಜಗಜ್ಜಾಹೀರ ಆಯಿತು.
  ಅದಾಗಿ ಒಂದು ವರ್ಷದ ನಂತರ ದೇವಾಲಯದಲ್ಲಿ ತಾಳಿ ಕಟ್ಟಿ ಮದುವೆ ಆಗಲು ನಮ್ಮ ತಂದೆ ಒಪ್ಪಿಗೆ ನೀಡಿದರು, ಅವರ ಗೆಳೆಯರ ಮಗಳೆ ಇವರ ಸೊಸೆ ಆದರೂ ನಮ್ಮ ತಂದೆಗೆ ಬ್ರಾಹ್ಮಣ ಶಾಪ ಒಳ್ಳೆಯದಲ್ಲ ಎಂಬ ಭಯದಿಂದ ವಿಳಂಬವಾಗಿ ಒಪ್ಪಿಗೆ ನೀಡಿದರು.
   ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪ್ರದಾನ ಅಚ೯ಕರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು ಅವತ್ತು ಮಹೂರ್ತ ಇಟ್ಟುಕೊಟ್ಟ ಸಮಯ ಮೀರಿದ ಮೇಲೆ ನಮ್ಮ ದಿಬ್ಬಣ (ಕೆಲವೇ ಜನರದ್ದು) ದೇವಾಲಯ ತಲುಪಿತು,ಕಾರಣ ನಮ್ಮ ತಂದೆ ರಾತ್ರಿ ಬರಲು ಒಪ್ಪಿದವರು ಬೆಳಿಗ್ಗೆ ಬರುವುದಿಲ್ಲ ಎಂದು ಹಠ ಹಿಡಿದದ್ದು.ನಾನು ಮಾತ್ರ ನೀವು ಬರದಿದ್ದರೆ ನಾನು ಮದುವೆ ಆಗುವುದಿಲ್ಲ ಎಂಬ ಸೆಂಟಿಮೆಂಟಲ್ ಸೀನ್ ಎಲ್ಲಾ ಸುಖಾಂತ್ಯ ಆಗುವಾಗ ಭರಪೂರ ಮಳೆಯಿಂದ ಮಹೂರ್ತ ತಪ್ಪಿ ಹೋಯಿತು.
   ಶಿವಮೊಗ್ಗದಲ್ಲಿ ನನ್ನ ಪತ್ನಿ ಅವಳ ಸಹೋದರಿಯ ಮನೆಯಲ್ಲಿ ಮದುವೆ ಮಹೂರ್ತ ಕಳೆದರೂ ಬರದಿರುವುದು ನೋಡಿ (ಆ ಕಾಲದಲ್ಲಿ ಈಗಿನ ರೀತಿ ಸಂಪರ್ಕ ಪೋನು ಇರಲಿಲ್ಲ) ಅವಳು ಅವಳ ಸಹೋದರಿಯರು ಮತ್ತು ಮನೆ ಮಾಲಿಕರು ಏನೋ ಅನಾಹುತ ಅಂತ ಬಾವಿಸಿದ್ದರು.
 ವಿಳಂಬವಾಗಿ ದೇವಾಲಯ ತಲುಪಿದ ನಮಗೆ ಪ್ರದಾನ ಅರ್ಚಕರಾದ ನರಸಿಂಹ ಮೂರ್ತಿ ಅಯ್ಯಂಗಾರರು, ಮಹೂರ್ತ ಇಲ್ಲದ ಸಮಯದಲ್ಲಿ ವಿವಾಹ ಮಾಡಬಾರದಾಗಿ ಇದರಿಂದ ದಂಪತಿಗಳಿಗೆ ಒಳ್ಳೆಯದಾಗದೆಂದು  ತಿಳಿಸಿದರು. ಆಗ ನಾನು ವಿನಂತಿಸಿದೆ "ಏನಾದರೂ ನಾನು ಎದುರಿಸುತ್ತೇನೆ ಇವತ್ತು ಮದುವೆ ಆಗದಿದ್ದರೆ ಮುಂದಿನ ದಿನ ನಿಗದಿಗೆ ಅನೇಕ ವಿಘ್ನ ಖಂಡಿತಾ" ಅಂತ ವಿವರಿಸಿದೆ. ಆಮೇಲೆ ಅವರು ಎಲ್ಲದಕ್ಕೂ ಕೋಟೆ ಆಂಜನೇಯನೇ ನಿಮ್ಮನ್ನು ಕಾಪಾಡಲಿ ಎಂದು ಒಪ್ಪಿದರು.
  ನನ್ನಣ್ಣ ಹೋಗಿ ಹೆಣ್ಣಿನ ಕಡೆಯವರ ದಿಬ್ಬಣ ಕರೆತಂದ. ಮಹೂರ್ತ ಇಲ್ಲದ ಅಮೂರ್ತದಲ್ಲಿ ನಾನು ತಾಳಿ ಕಟ್ಟಿ ಮದುವೆ ಆದೆ, ಮುಂದಿನ ಆಗಸ್ಟ್ ಗೆ 33 ವರ್ಷ ಆಗಲಿದೆ.
  2019 ರ ನನ್ನ ಮಗಳ ಮದುವೆಯಲ್ಲಿ ನನ್ನ ವಿವಾಹದಲ್ಲಿ (1989) ಭಾಗವಹಿಸಿದವರಿಗೆಲ್ಲ ಉಡುಗರೆ ನೀಡಿ ಆಹ್ವಾನಿಸಿದ್ದೆ.
  ಮೊನ್ನೆ ಶಿವಮೊಗ್ಗ ವೈದ್ಯರ ಬಳಿ ಹೋದಾಗ ಸುಮಾರು 32 ವರ್ಷದ ನಂತರ ಕೋಟೆ ಆಂಜನೇಯ ದೇವರಿಗೆ ಕೈ ಮುಗಿಯುವಾಗ ಇದೆಲ್ಲ ನೆನಪಾಯಿತು.
  ಆಗ ಕೋಟೆ ಆಂಜನೇಯ ದೇವಸ್ಥಾನದ ಪ್ರದಾನ ಅರ್ಚಕರಾಗಿದ್ದ ನರಸಿಂಹ ಮೂರ್ತಿ ಅಯ್ಯಂಗಾರರು ವಿಶ್ವ ಹಿಂದೂ ಪರಿಷತ್ ನಲ್ಲಿ ಪ್ರಮುಖರಾಗಿ #ಸಂತರ_ಸಮಾವೇಶಗಳನ್ನು ನಡೆಸಿ ಪ್ರಖ್ಯಾತರಾಗಿದ್ದರು ಈಗ ಅವರಿಲ್ಲ.
  ಮೊನ್ನೆ ದೇವಾಲಯದಲ್ಲಿ ಅವರ ಪುತ್ರ ಅನಂತರಾಮ ಅಯ್ಯಂಗಾರರು ಸಿಕ್ಕಿದರು ಪರಿಚಯ ಮಾಡಿಕೊಂಡು ಅವರ ಪಾದಕ್ಕೆ ವಂದಿಸಿ ಆಶ್ರೀವಾದ ಪಡೆದೆವು.
  ದಾಂಪತ್ಯ ಜೀವನದ 33 ವರ್ಷ ಬೇವು -ಬೆಲ್ಲದಂತೆ ಕಳೆದು ಹೋಯಿತು ಅವತ್ತಿನ ದಿನದಲ್ಲಿ ನನ್ನ ಮದುವೆಗೆ ಸಾಕ್ಷೀ ಅದವರು ಅನೇಕರು ಈಗ ಇಲ್ಲ, ಅವರೆಲ್ಲರೂ ನೆನಪಾದರು.
  ಇನ್ನೊಂದು ವಿಷಯ ಅವತ್ತು ತಾಳಿ ಕಟ್ಟಿದ ನಂತರ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಸಸ್ಯಹಾರ ಮತ್ತು ಮಾ೦ಸಹಾರದ ಊಟ ನನ್ನ ಮದುವೆಗೆ ಬಂದವರಿಗೆ ಮಾಡಿಸಿದ್ದೆ.
  ಅವತ್ತು ಅಮೂಹರ್ತದಲ್ಲಿ  ಶಿವಮೊಗ್ಗದ ಕೋಟೆ ಆಂಜನೇಯನ ಎದುರು ತಾಳಿ ಕಟ್ಟಿದ ನಮಗೆ ಕೋಟೆ ಆಂಜನೇಯನೇ ಕಾಪಾಡೆಂದು ಪ್ರಾರ್ಥಿಸಿದ್ದ ನರಸಿಂಹಮೂರ್ತಿಯವರ ಪ್ರಾರ್ಥನೆಯಂತೆ ಕೋಟೆ ಆಂಜನೇಯ ಕಾಪಾಡಿದ್ದಾನೆ ಮುಂದಿನ ವೃದ್ಧಾಶ್ರಮ ಕೂಡ ಕಾಪಾಡದಿರಲಾರ ಎಂದು ಆಶಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...