Blog number 851, ಕಾಫಿ ಉಲ್ಲಾಸ ನೀಡುವ ಖಿನ್ನತೆ ದೂರ ಮಾಡುವ ಪೇಯ, ಸ್ಟ್ರಾಂಗ್ ಪಿಲ್ಟ್ ರ್ ಕಾಪಿ ಸಕ್ಕರೆ ಇಲ್ಲದೆ ಕಡಿಮೆ ಹಾಲಿನೊಂದಿಗೆ ಸೇವಿಸಿದರೆ ಮಾತ್ರ.
#ಪಿಲ್ಟರ್_ಕಾಫಿಯ_ಘಮಘಮ_ಪರಿಮಳ.
#ಕಾಫಿ_ನೀಡುವ_ಉತ್ತೇಜನ_ಕಳೆಯುವ_ಜಡತೆ.
ನಾನು ಬಳಸುವುದು ಕೋಥಾಸ್ ಕಾಫಿ ಪುಡಿ ಮತ್ತು ನಮ್ಮ #ಮಲ್ಲಿಕಾ_ವೆಜ್ ರೆಸ್ಟೋರೆಂಟ್ ನಲ್ಲಿ ಕೂಡ ಇದೆ ಕಾಫಿ ಪುಡಿ ಅಲ್ಲಿ ತಮಿಳುನಾಡಿನ ಜೆಮಿನಿ ಕಾಫಿ ಪಿಲ್ಟರ್ ಆಟೋಮ್ಯಾಟಿಕ್ ಆಗಿ ನೀರು ಬಿಸಿ ಮಾಡಿಕೊಂಡು ಬೆರೆಸಿಕೊಂಡು ಒಂದೇ ಗುಣಮಟ್ಟದ ಪಿಲ್ಟರ್ ಕಾಫಿ ಡಿಕಾಕ್ಷನ್ ತಯಾರಿಸುತ್ತದೆ.
ಮನೇನಲ್ಲಿ ಬೆಂಗಳೂರಿಂದ ಕಾಫಿ ಬೋಡ್೯ ನಿಂದ ತಂದ ಸಣ್ಣ ಪಿಲ್ಟರ್ ನಮ್ಮ ಬಳಕೆಗೆ.
ಕೆಲವರು ಲೈಟ್ ಕಾಫಿ, ಹಾಲು ಜಾಸ್ತಿ, ಸಕ್ಕರೆ ಜಾಸ್ತಿ ಇರುವುದು ಕುಡಿಯುತ್ತಾರೆ ಆದರೆ ನಿಜವಾದ ಕಾಫಿ ಅಂದರೆ ಸ್ಟ್ರಾ೦ಗ್ ಕಾಫಿ, ಸಕ್ಕರೆ ಇಲ್ಲದ್ದು ಮತ್ತು ಹಾಲು ಕಡಿಮೆ ಇರುವುದು.
ಯಾಕೆಂದರೆ ಕಾಫಿ ಹುಡಿಯಲ್ಲಿರುವ ಉತ್ತೇಜಕ ಅಂಶ ಈ ರೀತಿ ಕಾಫಿಯಲ್ಲಿ ಮಾತ್ರ ಇರುತ್ತದೆ, ಮೊದ ಮೊದಲು ಕುಡಿಯುವಾಗ ಕಹಿ ಅನ್ನಿಸುತ್ತದೆ, ರುಚಿ ಅನ್ನಿಸುವುದಿಲ್ಲ ಆದರೆ ಇಂತಹ ಕಾಫಿ ಕುಡಿದು 20 ನಿಮಿಷದ ನಂತರ ನಿಮ್ಮ ದೇಹ ಮತ್ತು ಮನಸ್ಸಿನ ಜಡತ್ವ ಕಿತ್ತೋಗೆದು ನೀಡುವ ಉಲ್ಲಾಸ ನಿಮಗೆ ಇಂತಹ ಕಾಫಿಯಿಂದ ಮಾತ್ರ ಸಾಧ್ಯ.
ಕಾಫಿ ಮನಸ್ಸಿನ ಆತಂಕ, ಖಿನ್ನತೆ ಕೂಡ ಕೆಲ ಕಾಲ ಶಮನ ಮಾಡುತ್ತದೆ ಆದ್ದರಿಂದ ಇದರಲ್ಲಿರುವ ಕೆಫಿನ್ ಕಾಫಿ ಕುಡಿಯುವ ವ್ಯಸನಿ (Addiction) ಮಾಡುವುದು ಸುಳ್ಳಲ್ಲ.
Comments
Post a Comment