Blog number 877, ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಗೆ ಕಪ್ಪು ಚುಕ್ಕೆ ಆದ ಭಾರತ್ ಕಿಸಾನ್ ಯುನಿಯನ್ ಮುಖಂಡರಾದ ರಾಕೇಶ್ ಟಿಕಾಯಿತರ ಮೇಲೆ ಪತ್ರಿಕಾಗೋಷ್ಟಿಯಲಿ ಮಾಡಿದ ಹಲ್ಲೆ.
#ಕರ್ನಾಟಕ_ರಾಜ್ಯದ_ಸಾಂಸ್ಕೃತಿಕ_ಶ್ರೀಮಂತಿಕೆಗೆ_ಕಪ್ಪು_ಚುಕ್ಕೆ.
#ಪ್ರಜಾಪ್ರಭುತ್ವಕ್ಕೆ_ಅಪಹಾಸ್ಯ_ಮಾಡುವಂತ_ಘಟನೆಗಳು_ಮರುಕಳಿಸದಿರಲಿ.
#ನಮ್ಮ_ದೇಶದ_ಬೃಹತ್_ಸಂಘಟನೆಯ_ನೇತಾರರಿಗೆ_ಆದ_ನೋವಿಗೆ_ವಿಷಾದವಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಶಾಹಿಯನ್ನು ವಿರೋದಿಸುವ ಜನಸಾಮಾನ್ಯನು ಸಮಾಜದಲ್ಲಿ ನಿರ್ಬೀತಿಯಿಂದ ಬದುಕುವ ವಾತಾವರಣ ಸೃಷ್ಟಿಯಾದರೆ ಅದೇ ನಿಜ ಪ್ರಜಾಪ್ರಭುತ್ವ ಅಂತ ವ್ಯಾಖ್ಯಾನಿಸುತ್ತಾರೆ.
ಅದರಲ್ಲೂ ಕರ್ನಾಟಕ ರಾಜ್ಯ ದೇಶದ ಬೇರೆಲ್ಲ ರಾಜ್ಯಕ್ಕಿಂತ ಹೆಚ್ಚು ಸುಸಂಸ್ಕೃತರು ಇರುವ ಸಾಂಸ್ಕೃತಿಕ ಸಿರಿವಂತರ ನಾಡು ಎಂಬ ಪ್ರತೀತಿ ಇದೆ.
ಆದರೆ ಇವತ್ತು ದೇಶದ ಅತಿದೊಡ್ಡ ರೈತ ಸಂಘಟನೆ ಬಾರತ್ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ರನ್ನೆ ಗುರಿಯಾಗಿಸಿ ಹಲ್ಲೆ ಮಾಡಿ ಕಪ್ಪು ಮಸಿ ಬಳಿದ ಘಟನೆ ಖಂಡನೀಯ.
ಈ ದುಷ್ಟ ಕೆಲಸಕ್ಕೆ ಅವರು ಕನ್ನಡದ ಹೆಸರು ಮತ್ತು ದೇಶದ ಪ್ರಧಾನಿ ಮೋದಿ ಹೆಸರು ಬಳಸಿದ್ದಾರೆ ಹಾಗಂತ ಈ ದುಷ್ಕೃತ್ಯಕ್ಕೆ ಇಡೀ ರಾಜ್ಯದ ಕನ್ನಡಿಗರು ಹೊಣೆಯಲ್ಲ ಹಾಗೆಯೇ ದೇಶದ ಪ್ರಧಾನಿ ಅಥವ ಅವರ ಪಕ್ಷವೂ ಕೂಡ ಹೊಣೆಯಲ್ಲ ಆದರೆ ಇದು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಗೆ ಒ0ದು ಕಪ್ಪು ಚುಕ್ಕೆ ಮಾತ್ರ.
ಈಗ ಅನೇಕರ FB ವಾಲ್ ನಲ್ಲಿ ದೊಡ್ಡ ದೊಡ್ಡ ಜನ ಬರೆದು ಕೊಂಡಿದ್ದು ನೋಡಿ ಅದರಲ್ಲಿ ಈ ಕಿಡಿಗೇಡಿತನವನ್ನು ಪ್ರಶಂಸಿಸುವ, ಈ ವಿಕೃತ ಕಾರ್ಯಕ್ಕೆ ಬೆಂಬಲಿಸುವ ವಿಜೃಂಬಣೆ ನೋಡಿ ಅಸಹ್ಯ ಅನ್ನಿಸುತ್ತದೆ, ಇದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕಾದ ಕೆಲ ಶಿಕ್ಷಕರೂ ಇನ್ನೂ ಹೆಚ್ಚು ಕಪ್ಪು ಬಳಿಯಬೇಕಾಗಿತ್ತೆಂದು ರೋದಿಸಿದ್ದಾರೆ.
ಗಾಂಧೀಜಿ - ನೆಹರೂ, ಕವಿಗಳೂ - ಸಾಹಿತಿಗಳೂ, ಪತ್ರಕರ್ತರೂ - ನಟರುಗಳೂ ಈಗ ರೈತ - ಕಾರ್ಮಿಕ - ದಲಿತ ಹೋರಾಟಗಾರರು ಈ ರೀತಿ ಹಲ್ಲೆ- ಅವಮಾನಗಳಿಂದ ಅವರ ವಿಚಾರ ಮಂಡನೆಯೇ ಮಾಡದಂತೆ ಭಯದ ವಾತಾವರಣ ಸೃಷ್ಟಿಸುವ - ಬೆಂಬಲಿಸುವ ಇಂತಹ ಘಟನೆಗಳಿಂದ ಜನರ ಹಕ್ಕು ಮೊಟಕು ಮಾಡುವ ಪ್ರಯತ್ನ ಸರಿಯಲ್ಲ.
Comments
Post a Comment