Blog number 873, 30 ನಂಬರ್ ಬ್ರಾಂಡ್ ಬೀಡಿ ಉಧ್ಯಮದ ಕಥೆ, ಸಂಸ್ಥಾಕ ಬಿ. ಮಂಜುನಾಥ ಪೈಯರ ಸಾದನೆ ಇವತ್ತೂ ಸ್ವಯ೦ ಉದ್ಯೋಗ ಮಾಡುವವರಿಗೆ ದಾರಿ ದೀಪ ಆಗಿರುವ ಆತ್ಮವಿಶ್ವಾಸದ ಪಥ.
#ಭಾರತ್_ಬೀಡಿ_ವರ್ಕ್ಸನ_30_ನಂಬರ್_ಬೀಡಿ.
#ವಿಶ್ವದಾದ್ಯಂತ_ಬೀಡಿ_ಪ್ರಿಯರಿದ್ದಾರೆ.
#ಅಮೆರಿಕಾದಲ್ಲಿ_ನಮ್ಮ_ಬೀಡಿಗೆ_ಹೆಸರು_ಕನ್ವೆನ್ಷ್ನಲ್_ಸಿಗರೇಟು
ನಮ್ಮ ದುಮುಗಣ್ಣ ನನ್ನ ರೋಲ್ ಮಾಡಲ್ (ಡುಮಿಂಗ್ ರೆಬೆಲೋ) ನಮ್ಮ ಮನೆ ಮಗನಂತೆ ಇದ್ದವರು, ಸಿನಿಮಾ ಟಾಕೀಸಿನಲ್ಲಿ ಗೇಟ್ ಕೀಪರ್ ಆಗಿದ್ದರು.
ರಾತ್ರಿ ವಾಸ್ತವ್ಯ ಊಟ ನಮ್ಮ ಮನೆಯಲ್ಲಿ ಅದಕ್ಕೆ ಪ್ರತಿಫಲವಾಗಿ ಬೆಳಿಗ್ಗೆ ಬೇಗನೆ ಎದ್ದು ಸರ್ಕಾರಿ ಬಾವಿಯಿಂದ ನೀರು ತಂದು ಸ್ನಾನದ ಮನೆ ಹಂಡೆ ತುಂಬಿಸಿ, ಹಂಡೆ ಒಲೆ ಉರಿಸುತ್ತಿದ್ದರು ಅದಕ್ಕೆ ಬೇಕಾಗುವ ಕಟ್ಟಿಗೆ ಚಕ್ಕೆ ಅವರೇ ಕೊಡಲಿಯಿಂದ ಮಾಡಿಕೊಳ್ಳುತ್ತಿದ್ದರು.
ಅವರಿಗೆ ಇಡೀ ಮನೆಯಲ್ಲಿ ಒಡಾಡಲು ಅನುಮತಿ ಇದ್ದರೂ ಅಡುಗೆ ಮನೆ ಪ್ರವೇಶ ಮಾತ್ರ ನನ್ನ ಅಜ್ಜಿ ಕೊಟ್ಟಿರಲಿಲ್ಲ ಆದ್ದರಿಂದ ಮಧ್ಯಾಹ್ನ ಎಲ್ಲರೂ ಮಲಗಿದಾಗ ದುಮುಗಣ್ಣ ಬೀಡಿ ಒಂದನ್ನು ನನ್ನ ಕೈಗೆ ಕೊಟ್ಟು ಅದನ್ನು ಅಡುಗೆ ಮನೆಯ ಒಲೆಯಲ್ಲಿ ಉಳಿದಿರುತ್ತಿದ್ದ ಕಟ್ಟಿಗೆ ಬೆಂಕಿಯಲ್ಲಿ ಹಚ್ಚಿ ಕೊಡುವ ಕೆಲಸ.
ಅಷ್ಟೇ ಅಲ್ಲ ಬೀಡಿ ಬಾಯಲ್ಲಿ ಇಟ್ಟು ಅದರ ತುದಿ ಕಟ್ಟಿಗೆಯ ಬೆಂಕಿಯಲ್ಲಿ ತಾಗಿಸಿ ಉಸಿರು ಎಳೆದು ಹಚ್ಚಿ ಕೊಡುವ ಕೆಲಸ ನಮ್ಮದು, ಇದು ನಿಷಿದ್ದವಾದ್ದರಿಂದಲೇ ನಮಗೆ ಈ ಸಾಹಸ ಗುಟ್ಟಾಗಿ ಮಾಡಲು ಉತ್ಸಾಹ ಅಷ್ಟುಕ್ಕೂ ದುಮಿ೦ಗಣ್ಣರಿಗೆ ಈ ಮೂಲಕ ಸಹಾಯ ಮಾಡಲು ಪ್ರೇರಣೆ ನಾನು ಆನಂದಪುರಂ ಸಂತೆಯಿಂದ ತಂದ ಸಿನಿಮಾ ನೋಡುವ ಬೂತ ಕನ್ನಡಿ ಡಬ್ಬಿಗೆ ತುಂಡಾದ ಸಿನಿಮಾ ರೋಲಿನ ತುಂಡು ತಂದು ಕೊಡುವುದು ದುಮುಗಣ್ಣ.
ನಮ್ಮ ತಂದೆ ಆ ಕಾಲದಲ್ಲಿ 30 ನಂಬರ್ ಬೀಡಿ ಪ್ರಿಯರು ಅವರ ಬೀಡಿ ಕದ್ದು ದುಮುಗಣ್ಣನಿಗೆ ಹಚ್ಚಿಕೊಟ್ಟು ಸಂತೋಷ ಪಡುವಕಾಲ.
ಹಿಂದಿ ಚಿತ್ರ ನಟ ಜಾಕಿ ಶ್ರಾಫ್ ಕುದುರೇ ಮುಖದಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಗಣೇಶ್ ಬೀಡಿ ಸೇದುತ್ತಾ ಇದ್ದದ್ದು ನೋಡಿ ಆಶ್ಚಯ೯ ಪಟ್ಟಿದ್ದೆ ಯಾಕೆಂದರೆ ಬೀಡಿ ಜನ ಸಾಮನ್ಯರ ಬ್ರಾಂಡ್ ಸಿಗರೇಟು ಸೆಲೆಬ್ರಿಟಿ ಬ್ರಾಂಡ್ ಎ೦ದೇ ಜನರ ಬಾವನೆ.
ತಂಬಾಕಿನ ಪ್ರಡಿ ಬೀಡಿ ಎಲೆಯಲ್ಲಿ (ತೆಂಡು) ಕಟ್ಟಿ ನಂತರ ಅದಕ್ಕೆ ಭಟ್ಟಿಯಲ್ಲಿ ಹದವಾಗಿ ಬೇಯಿಸಿ ತಯಾರಿಸುತ್ತಾರೆ.
17ನೇ ಶತಮಾನದಲ್ಲಿ ಭಾರತಕ್ಕೆ ತಂಬಾಕು ಪರಿಚಯವಾಗಿ ಅದರ ಕೃಷಿ ಪ್ರಾರಂಭವಾದ ಮೇಲೆ ಬೀಡಿಯ ದೂಮಪಾನ ಪ್ರಾರಂಭವಾಯಿತು.
1930 ರಿಂದ ಸ್ವದೇಶಿ ವಸ್ತು ಬಳಕೆಯ ಪ್ರಚಾರದಲ್ಲಿ ಸಿಗರೇಟು ವಿದೇಶಿ ಬೀಡಿ ಸ್ಟದೇಶಿ ಎಂಬಲ್ಲಿಗೆ ಬೀಡಿ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ಸಿಕ್ಕಿತು.
1930 ರಲ್ಲಿ ಕಾರ್ಕಳದ ವೆಂಕಟರಮಣ ದೇವಸ್ಥಾನದ ಎದರು ಸಣ್ಣ ಬಾಡಿಗೆ ಮಳಿಗೆಯಲ್ಲಿ ಬಿ.ಮಂಜುನಾಥ ಪೈ ಎಂಬ ಉತ್ಸಾಹಿ ಯುವಕ ರಾತ್ರಿಯೆಲ್ಲ ಬೀಡಿ ಕಟ್ಟಿ ಹಗಲಿನಲ್ಲಿ ಕಾರ್ಕಳ ಮತ್ತು ಸುತ್ತಮುತ್ತ ಬೀಡಿ ವ್ಯಾಪಾರ ಶುರು ಮಾಡುತಾರೆ ಆಗ ಅವರ ಬಂಡವಾಳದ ಮೂಲ ಧನ 30 ರೂಪಾಯಿ ಮತ್ತು ಒಂದು ಸೈಕಲ್ ಮಾತ್ರ.
1954 ರಲ್ಲಿ ಇವರ ಮಗ ಗಣಪತಿ ಪೈ ಸೇರಿಕೊಳ್ಳುತ್ತಾರೆ.
2020 ಮಾಚ್೯ ಕೊನೆಯಲ್ಲಿ ಇವರ ವಹಿವಾಟು ವಾರ್ಷಿಕ 500 ಕೋಟಿ, ಪ್ರತಿ ದಿನ ಉತ್ಪಾದಿಸುವ ಬೀಡಿ 6 ಕೋಟಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 50 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ ಆಯಿತು.
ಇಡೀ ಭಾರತ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿ 30 ನಂಬರ್ ಬೀಡಿ ಸಂಸ್ಥಾಪಕ ಬಿ. ಮಂಜುನಾಥ ಪೈ ಅವರ ಚಿತ್ರದ ಬ್ರಾಂಡ್ ನಿಂದ ಪ್ರಸಿದ್ಧಿ ಪಡೆದಿದೆ.
30 ನಂಬರ್ ಬೀಡಿ 2030 ರಲ್ಲಿ ಶತಮಾನೋತ್ಸವ ಆಚರಿಸಲಿದೆ ಈಗಾಗಲೇ ಈ ಸಂಸ್ಥೆ ಭಾರತ್ ಬೀಡಿ ವಕ್ಸರ್ಸ ಜೊತೆಗೆ ಕಾರ್ಕಳದಲ್ಲಿ ಎರೆಡು ವಿದ್ಯಾ ಸಂಸ್ಥೆ ಮತ್ತು ಕಲ್ಚರಲ್ ಸೆಂಟರ್ ನಡೆಸುತ್ತಿದೆ.
ಈ ಸಂಸ್ಥೆಯ ಭಾರತ್ ಮಾಲ್, ಬುಕ್ ಮಾರ್ಟ್, ಭಾರತ್ ಪ್ರಿಂಟರ್, ಬಾರತ್ ಆಟೋ ಕಾರ್,. ಭಾರತ್ ಬಿಲ್ಡರ್, ಭಾರತ್ ಎಕ್ಸಪೋರ್ಟ್ ಯಶಸ್ವಿಯಾಗಿ ನಡೆಯುತ್ತಿದೆ.
Comments
Post a Comment