Blog number 868. ಪ್ರಸಕ್ತ ಅದ್ಭುತ ಹಾಡುಗಾರ ಶಿವಾರ ಉಮೇಶ್ ಬರುತ್ತಾರೆಂದರೆ ಜನಸಾಗರ, ನಾಡಿನ ಕವಿಗಳ ಕವನ ಕಾವ್ಯಕ್ಕೆ ಇವರ ಧ್ವನಿ ಮತ್ತು ಇವರೇ ಸ್ಥಳದಲ್ಲಿ ರಚಿಸಿ ಹಾಡುವ ಹಾಡಿಗೆ ಇಡೀ ಸಭೆಯೆ ಮಂತ್ರ ಮುಗ್ದವಾಗುವ ಪರಿಯೇ
#ಅದ್ಬುತ_ಹಾಡುಗಾರ
#ಒಮ್ಮೆ_ಕೇಳಿದರೆ_ಮತ್ತೆ_ಕೇಳಬೇಕೆಂಬ_ಧ್ವನಿ.
ಶಿವಾರ ಉಮೇಶ್ ಮಂಡ್ಯ ತಾಲ್ಲೂಕಿನ ಶಿವಾರದವರು, ಇವರ ಹೊನ್ನ ಕರ್ಣಿಕ ಸಾಂಸ್ಕೃತಿಕ ಟ್ರಸ್ಟ್ ತುಂಬಾ ಪ್ರಖ್ಯಾತವಾಗಿದೆ ಇವರ ತಂಡಕ್ಕೆ ಈಗ ಬಹು ಬೇಡಿಕೆ.
ಇವರ ದ್ವನಿಯೇ ಜೀವಾಳ, ಕನ್ನಡದ ಬಾವಗೀತೆ - ಜನಪದ ಗೀತೆ - ಭಕ್ತಿ ಗೀತೆ ಅಷ್ಟೇಕೆ ನಾಡಿನ ಎಲ್ಲಾ ಕವಿಗಳ ಕಾವ್ಯ - ಕವನಗಳೂ ಇವರ ಧ್ವನಿಯಲ್ಲಿ ಇಂಪಾದ ಹಾಡಾಗುತ್ತದೆ.
ಇವರ ಕಾರ್ಯಕ್ರಮ ಇದೆ ಅಂದರೆ ಹತ್ತಾರು ಕಿಮಿ ನಿಂದ ಸಾವಿರಾರು ಜನರು ಬಂದು ಸೇರುತ್ತಾರೆ, ಇವರ ಕಾರ್ಯಕ್ರಮ ಮುಕ್ತಾಯ ಮಾಡಲು ಬಿಡುವುದಿಲ್ಲ ಇಡೀ ಸಭೆ ಮಂತ್ರಮುಗ್ಧ ಮಾಡಿಸುವ ಶಿವಾರ ಉಮೇಶರಿಗೆ ಉಮೇಶರೇ ಸಾಟಿ.
ಇವರ ಧ್ವನಿಗೆ ಸಂಗೀತ ಉಪಕರಣಗಳೂ ಇದ್ದರೂ ಇವರ ಧ್ವನಿಗೆ ಜನ ಮರಳು ಆಗುತ್ತಾರೆ, ಇವರು ಹೋಗುವ ಊರು ಅಲ್ಲಿನ ವ್ಯಕ್ತಿ ಸಭೆ ಎಲ್ಲಾ ಸೇರಿಸಿ ಸ್ಥಳದಲ್ಲೆ ಇವರೇ ಕಟ್ಟಿ ಹಾಡುವ ಹಾಡಿಗೆ ತಲೆದೂಗುವ ಜನರ ನೋಡಬೇಕು.
Comments
Post a Comment