Blog number 862, ಪಶ್ಚಿಮ ಘಟ್ಟದ ಜನವಸತಿ ಕೇಂದ್ರಗಳು ವಿಸ್ತಾರವಾದಂತೆ ಒ0ದು ಕಾಲದಲ್ಲಿ ಸಮೃದ್ಧವಾಗಿದ್ದ ಕವಳಿಕಾಯಿ ಪೂದೆಗಳು ಕಣ್ಮರೆ ಆಗಲು ಕಾರಣವೇನು? ನೈಸಗಿ೯ಕವಾಗಿ ದೊರೆಯುವ ಕವಳಿಕಾಯಿ ಮತ್ತು ರಸವತ್ತಾದ ಕಪ್ಪು ದ್ರಾಕ್ಷಿಯಂತ ಕವಳಿ ಹಣ್ಣಿನ ಮೌಲ್ಯವರ್ಧನೆ ಆಗಬೇಕಾಗಿದೆ.
#ಪರಿಸರ_ಮಾಲಿನ್ಯ_ಇದಕ್ಕೆ_ಕಾರಣವಾ?
#ಒಂದು_ಕಾಲದಲ್ಲಿ_ಹಳ್ಳಿಯ_ಸುತ್ತಲು_ಗುಡ್ಡಗಾಡಿನಲ್ಲಿ_ಯಥೇಚ್ಚವಾಗಿದ್ದ_ಕವಳಿ_ಗಿಡ_ಈಗಿಲ್ಲ.
#ಕವಳಿಕಾಯಿ_ಖಾದ್ಯ_ದ್ರಾಕ್ಷಿಹಣ್ಣಿನಂತ_ಕವಳಿಕಾಯಿ_ಈಗ_ನೆನಪು_ಮಾತ್ರ.
#ಕವಳಿ_ಕಾಯಿ_ಮತ್ತು_ಹಣ್ಣಿನ_ಮೌಲ್ಯವರ್ಧನೆ_ಆಗಬೇಕಾಗಿದೆ.
80-90ರ ದಶಕದಲ್ಲಿ ಉತ್ತರ ಕನ್ನಡದ ಕರಾವಳಿಯ ಸಂತೆಗಳಲ್ಲಿ ಕವಳಿಕಾಯಿ - ಹಣ್ಣು ಮಾರಾಟ ಮಾಡುತ್ತಿದ್ದ ಹಾಲಕ್ಕಿ ಮಹಿಳೆಯರು, ಗೋವಾದಲ್ಲಿ ಇದನ್ನು ಮಾರುವ ಕುಣುಬಿ ಮಹಿಳೆಯರು ಮತ್ತು ಬಯಲು ಸೀಮೆಯಲ್ಲಿ ಲಂಬಾಣಿ ಮಹಿಳೆಯರ ನೋಡಿದಾಗ ನಮಗೆಲ್ಲ ಸೋಜಿಗ ಯಾಕೆಂದರೆ ಆಗಿನ ದಿನದಲ್ಲಿ ನಮ್ಮ ಊರ ಕೊನೆಯ ಮನೆ ದಾಟಿದರೆ ಕವಳಿಕಾಯಿಯ ಸಾವಿರಾರು ಪೊದೆಗಳು ಇದ್ದವು, ಯಾರೂ ಮಾರಾಟ ಮಾಡುತ್ತಿರಲಿಲ್ಲ ಮತ್ತು ಖರೀದಿಸುವವರು ಇರಲಿಲ್ಲ.
ನಾವೆಲ್ಲ ಉಪ್ಪಿನ ಪೊಟ್ಟಣದ ಜೊತೆ ತರಹೇವಾರಿ ಕವಳಿಕಾಯಿ ಜಗಿದು ಚುಳ್ಳನಿಸುವ ದವಡೆ ದಂತದಿಂದ ಸಂಜೆ ಊರಿಗೆ ಬರುತ್ತಿದ್ದೆವು.
ಆದರೆ ಈಗ ಕವಳಿ ಗಿಡ ಯಾಕೆ ನಶಿಸಿದೆ? ಯಾರಿಗೂ ಗೊತ್ತಿಲ್ಲ! ಇದನ್ನು ಬೇರಾವುದೇ ಉದ್ದೇಶಕ್ಕೆ ಬಳಕೆ ಇದ್ದರೆ ಈ ಸಸ್ಯ ನಶಿಸುತ್ತಿದೆ ಅಂತ ಭಾವಿಸಬಹುದಿತ್ತು ಅಂತದ್ದು ಯಾವುದೂ ಇಲ್ಲ ಆದರೆ ಈಗ ಕವಳಿ ಕಾಯಿ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ.
ನನ್ನ ಗೆಳೆಯರಾದ #ಘ೦ಟಿನಕೊಪ್ಪದ_ಗಜೇಂದ್ರ ಮತ್ತು #ಗೇರುಬೀಸಿನ_ಚನ್ನಪ್ಪ ಈ ವರ್ಷದ ಕವಳಿ ಪಸಲು ನೀಡಿದ್ದಾರೆ.
ಉಪ್ಪಿನಕಾಯಿಗೆ ಬಳಸಿ ಉಳಿದದ್ದು ಮಂದನ ಗೊಜ್ಜು ಮಾಡಿದೆ ಇಲ್ಲಿ ಇನ್ನೊಂದು ಹೇಳಬೇಕು ಕವಳಿಕಾಯಿ ಮಂದನ ಗೊಜ್ಜು ಮಾವಿನ ಮಂದನ ಗೊಜ್ಜಿಗಿಂತ ಹೆಚ್ಚು ಬಿನ್ನ ರುಚಿ.
ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಮತ್ತು ಭಾರತ ನೇಪಾಳ ಮತ್ತು ಶ್ರೀಲಂಕಾದಲ್ಲಿ ಇದು ನೈಸರ್ಗಿಕ ಬೆಳೆ ಆದರೂ ಇದರ ವಾಣಿಜ್ಯ ಬಳಕೆ ಇನ್ನೂ ಪ್ರಾರ೦ಬ ಆಗಿಲ್ಲ.
ಕ್ಯಾರಿಸ್ಸಾ ಕರಂಡಾಸ್ ಎಂಬ ಬಟೋನಿಕಲ್ ಹೆಸರಿನ ಈ ಕವಳಿ ಕಾಯಿ ಮತ್ತು ಕವಳಿ ಹಣ್ಣಿನ ಮೌಲ್ಯ ವರ್ಧನೆ ಕೆಲಸ ಮುಂದಿನ ದಿನಗಳಲ್ಲಿ ಆಗಬೇಕಾಗಿದೆ ಮತ್ತು ಈ ಸಸ್ಯ ಜನ ಸಾಂದ್ರತೆ ಪ್ರದೇಶದಿಂದಲೇ ನೈಸಗಿ೯ಕವಾಗಿ ದೂರವಾಗುವ ನಿಜಕಾರಣದ ಸಂಶೋದನೆಯೂ ಆಗಬೇಕಾಗಿದೆ.
ಕವಳಿಕಾಯಿ ಮಂದನ ಗೊಜ್ಜು ಸುಲಭ ರೆಸಿಪಿ
ಒಂದು ಕಪ್ ಕವಳಿಕಾಯಿ ತೊಳೆದು ಒಂದು ಕಪ್ ನೀರು - 2 ಹಸಿ ಮೆಣಸು ಹಾಕಿ ಬೇಯಿಸುವುದು ನಂತರ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿ ಬದಿಗೆ ಇಡಿ.
ಬಾಣಲೆಯಲ್ಲಿ 3 ರಿಂದ 4 ಚಮಚ ಕೊಬ್ಬರಿ ಎಣ್ಣೆ ಬಿಸಿ ಮಾಡಿ, ಒಂದು ಚಮಚ ಸಾಸಿವೆ ಸಿಡಿಸಿ ನಂತರ ಅರ್ಧ ಚಮಚ ಮೆಂತೆ ಸೇರಿಸಿ, 4 ಖಾರದ ಹಸಿ ಮೆಣಸು ಸಣ್ಣಗೆ ತುಂಡರಿಸಿ ಹಾಕಿ, ಒ0ದು ಚಮಚ ಕಡಲೆ ಬೇಳೆ, ಉದ್ದಿನ ಬೇಳೆ ಒಂದು ಚಮಚ, 10 ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿ ಹಾಕಿ, ಕಾಲು ಚಮಚ ಇಂಗು, ಕಾಲು ಚಮಚ ಅರಿಶಿಣ, ಒಂದು ಎಸಳು ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಇದಕ್ಕೆ ಮಿಕ್ಸಿ ಮಾಡಿದ ಪೇಸ್ಟ್ ಸೇರಿಸಿ, ಅರ್ಧದಿಂದ ಮುಕ್ಕಾಲು ಕಪ್ ನೀರು ಸೇರಿಸಿ, ನಿಮ್ಮ ರುಚಿಗೆ ತಕ್ಕ ಉಪ್ಪು - ಬೆಲ್ಲ ಸೇರಿಸಿ, 3ರಿಂದ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಇಳಿಸಿ.
ಬಿಸಿ ಅನ್ನದ ಜೊತೆ ಕವಳಿಕಾಯಿಯ ಈ ಮಂದನ ಗೊಜ್ಜು ಜೊತೆಗೆ ಕೊಬ್ಬರಿ ಎಣ್ಣೆ ಅಥವ ತುಪ್ಪ ಸೇರಿಸಿ ಕಲಸಿಕೊಂಡು ಊಟ ಮಾಡಿ ಅಭಿಪ್ರಾಯ ತಿಳಿಸಿ.
Comments
Post a Comment