#ಶಾಸಕರು_ಸಂಸದರು_ವಿದಾನಪರಿಷತ್_ಸದಸ್ಯರು_ಮತ್ತು_ವಿದ್ಯಾ_ಮಂತ್ರಿಗಳಾಗಿದ್ದ_ಆನಂದಪುರಂನ #ಎ_ಆರ್_ಬದರಿನಾರಾಯಣ್_ಅಯ್ಯಂಗಾರ್_ಒಂದು_ನೆನಪು #19_ಮತ್ತು_20ನೇ_ಶತಮಾನದ_ಆನಂದಪುರದ_ಪ್ರತಿಷ್ಠಿತ_ಕುಟುಂಬದ_ಕಥೆ_21_ನೇ_ಶತಮಾನಕ್ಕೆ_ಮರೆತು_ಹೋಗಿದೆ. ಭಾಗ - 1 #ಶಿವಮೊಗ್ಗ_ಜಿಲ್ಲೆಯ_ಆನಂದಪುರದ_ಅಯ್ಯಂಗಾರ್_ಕುಟುಂಬದ_ನೆನಪುಗಳು. ಆನಂದಪುರಂನ ಆಸ್ಪತ್ರೆ, ಪಶು ವೈದ್ಯ ಶಾಲೆ, ಶಾಲಾ ಕಾಲೇಜು, ಬ್ಯಾಂಕ್ ನಿಮಾ೯ತರು. ಶಾಸಕ, ಸಂಸದ ಮತ್ತು ವಿದ್ಯಾ ಮಂತ್ರಿ ಆದ ಇವರ ಕುಟುಂಬದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್. 1952ರ ಪ್ರಥಮ ಚುನಾವಣಾ ರಾಜಕೀಯದಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸ್ಪದಿ೯ಸಿದ್ದ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾಗಿದ್ದ ರಾಮ ಕೃಷ್ಣ ಅಯ್ಯಂಗಾರ ಪುತ್ರ, ವಕೀಲರು, ಸ್ಟಾತಂಂತ್ರ ಹೋರಾಟಗಾರರಾಗಿದ್ದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಸಮಾಜವಾದಿ ಪಾರ್ಟಿಯ ಕಾಗೋಡು ಚಳವಳಿಯ ನಾಯಕ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ. ಸ್ವಾತಂತ್ರ ನಂತರದ ಮೊದಲ ಚುನಾವಣೆ ಸೋಲಿನ ಪಲಿತಾಂಶದಿಂದ ನೊಂದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮೃತರಾಗ...