Blog number 2169. ಈ ವರ್ಷದ ಮೊದಲ ಮುಂಗಾರು ಮಳೆಯಲ್ಲಿ ಬೆಳಗಿನ ವಾಕಿಂಗ್ ಅರ್ಥಮಾಡಿ ಕೊಳ್ಳಲಾಗದ ಭೂಮಿ ಒಳಗಿನ ವಿಜ್ಞಾನ
#ಇವತ್ತಿನ_ಬೆಳಗು_ಮುಂಗಾರು_ಮಳೆಯ_ಸಿಂಚನದಿಂದ #ನಾನು_ಮತ್ತು_ನನ್ನ_ಪ್ರೀತಿಯ_ಶಂಭೂರಾಮ_ಒದ್ದೆ_ಒದ್ದೆ #ಸುಮಾರು_8_ತಿಂಗಳಿಂದ_ಪಾಟ್_ಗಳಿಗೆ_ನೀರುಣಿಸುವ_ಕೆಲಸ_ಮುಕ್ತಾಯ #ಈ_ವರ್ಷದ_ತಾಪಮಾನ_ಮಲೆನಾಡಿನ_ಇತಿಹಾಸದಲ್ಲೇ_ಮೊದಲು #ಪರಿಸರದ_ವಿಸ್ಮಯ_ಗಮನಿಸಿದ್ದೀರಾ? #ನನಗೆ_ಅರ್ಥವಾಗದ_ಭೂಮಿ_ಒಳಗಿನ_ನೀರಿನ_ಚಲನೆಯ_ವಿಜ್ಞಾನ. https://youtu.be/AWZ4NZkrP6E?feature=shared ಇವತ್ತು ಬೆಳಿಗ್ಗೆ ಮೋಡ ಕವಿದ ವಾತಾವರಣ ಮಳೆ ಬರುವ ಸಾಧ್ಯತೆ ಅನ್ನಿಸಿದರೂ ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನಿಗೆ ಒಂದು ಗಂಟೆ ಅವಧಿ ಅವಕಾಶ ಕಲ್ಪಿಸುವು ನಿರೀಕ್ಷೆ ಹುಸಿ ಆಗಿ ನಾವಿಬ್ಬರೂ ಮುಂಗಾರು ಮಳೆಗೆ ಸಂಪೂರ್ಣವಾಗಿ ಒದ್ದೆ ಆದೆವು. ನಾಳೆಯಿಂದ ಮಳೆಗಾಲದ ವಾಕಿಂಗ್ ಗೆ ಬೇಕಾದ ಪರಿಕರಗಳ ಜೊತೆ ವಾಕಿಂಗ್ ಪ್ರಾರಂಬಿಸ ಬೇಕು ಇವತ್ತಿನ ಮಳೆ ಶಂಭೂರಾಮನಿಗೆ ಹೆಚ್ಚು ಖುಷಿ ತಂದಿದೆ. ಕಳೆದ ವರ್ಷ 2023 ರ ಅಕ್ಟೋಬರ್ ತಿಂಗಳ ಮಧ್ಯದಲ್ಲೇ ನನ್ನ ವಾಕಿಂಗ್ ಪಾತ್ ಅಕ್ಕಪಕ್ಕದ ಹೂವಿನ ಗಿಡಗಳು ಮಳೆ ಇಲ್ಲದೆ ಬಾಡಲು ಪ್ರಾರಂಬಿಸಿದಾಗ ನಾನು ನಿತ್ಯ ನೀರುಣಿಸುವ ಕೆಲಸ ಪ್ರಾರಂಬಿಸಿದೆ. ಸಾಮಾನ್ಯವಾಗಿ ಜನವರಿ ಮಧ್ಯದಿಂದ ಅಥವ ತಿಂಗಳ ಕೊನೆಯಿಂದ ಮೇ ತಿಂಗಳ ತನಕ ನೀರು ಕೊಡುತ್ತಿದ್ದೆ ಆದರೆ ಈ ವರ್ಷದ ಹವಾಮಾನದಲ್ಲಿ ಅನೇಕ ರೀತಿಯ ವ್ಯತ್ಯಾಸಗಳು ನೋಡಿದೆ. ವಿಪರೀತ ತಾಪಮಾನದ ಏರಿಕೆ ಮಲೆನಾಡಿನ ಇತಿಹಾಸದಲ್ಲೇ...