Blog number 2169. ಈ ವರ್ಷದ ಮೊದಲ ಮುಂಗಾರು ಮಳೆಯಲ್ಲಿ ಬೆಳಗಿನ ವಾಕಿಂಗ್ ಅರ್ಥಮಾಡಿ ಕೊಳ್ಳಲಾಗದ ಭೂಮಿ ಒಳಗಿನ ವಿಜ್ಞಾನ
#ಇವತ್ತಿನ_ಬೆಳಗು_ಮುಂಗಾರು_ಮಳೆಯ_ಸಿಂಚನದಿಂದ
#ನಾನು_ಮತ್ತು_ನನ್ನ_ಪ್ರೀತಿಯ_ಶಂಭೂರಾಮ_ಒದ್ದೆ_ಒದ್ದೆ
#ಸುಮಾರು_8_ತಿಂಗಳಿಂದ_ಪಾಟ್_ಗಳಿಗೆ_ನೀರುಣಿಸುವ_ಕೆಲಸ_ಮುಕ್ತಾಯ
#ಈ_ವರ್ಷದ_ತಾಪಮಾನ_ಮಲೆನಾಡಿನ_ಇತಿಹಾಸದಲ್ಲೇ_ಮೊದಲು
#ಪರಿಸರದ_ವಿಸ್ಮಯ_ಗಮನಿಸಿದ್ದೀರಾ?
#ನನಗೆ_ಅರ್ಥವಾಗದ_ಭೂಮಿ_ಒಳಗಿನ_ನೀರಿನ_ಚಲನೆಯ_ವಿಜ್ಞಾನ.
https://youtu.be/AWZ4NZkrP6E?feature=shared
ಇವತ್ತು ಬೆಳಿಗ್ಗೆ ಮೋಡ ಕವಿದ ವಾತಾವರಣ ಮಳೆ ಬರುವ ಸಾಧ್ಯತೆ ಅನ್ನಿಸಿದರೂ ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನಿಗೆ ಒಂದು ಗಂಟೆ ಅವಧಿ ಅವಕಾಶ ಕಲ್ಪಿಸುವು ನಿರೀಕ್ಷೆ ಹುಸಿ ಆಗಿ ನಾವಿಬ್ಬರೂ ಮುಂಗಾರು ಮಳೆಗೆ ಸಂಪೂರ್ಣವಾಗಿ ಒದ್ದೆ ಆದೆವು.
ನಾಳೆಯಿಂದ ಮಳೆಗಾಲದ ವಾಕಿಂಗ್ ಗೆ ಬೇಕಾದ ಪರಿಕರಗಳ ಜೊತೆ ವಾಕಿಂಗ್ ಪ್ರಾರಂಬಿಸ ಬೇಕು ಇವತ್ತಿನ ಮಳೆ ಶಂಭೂರಾಮನಿಗೆ ಹೆಚ್ಚು ಖುಷಿ ತಂದಿದೆ.
ಕಳೆದ ವರ್ಷ 2023 ರ ಅಕ್ಟೋಬರ್ ತಿಂಗಳ ಮಧ್ಯದಲ್ಲೇ ನನ್ನ ವಾಕಿಂಗ್ ಪಾತ್ ಅಕ್ಕಪಕ್ಕದ ಹೂವಿನ ಗಿಡಗಳು ಮಳೆ ಇಲ್ಲದೆ ಬಾಡಲು ಪ್ರಾರಂಬಿಸಿದಾಗ ನಾನು ನಿತ್ಯ ನೀರುಣಿಸುವ ಕೆಲಸ ಪ್ರಾರಂಬಿಸಿದೆ.
ಸಾಮಾನ್ಯವಾಗಿ ಜನವರಿ ಮಧ್ಯದಿಂದ ಅಥವ ತಿಂಗಳ ಕೊನೆಯಿಂದ ಮೇ ತಿಂಗಳ ತನಕ ನೀರು ಕೊಡುತ್ತಿದ್ದೆ ಆದರೆ ಈ ವರ್ಷದ ಹವಾಮಾನದಲ್ಲಿ ಅನೇಕ ರೀತಿಯ ವ್ಯತ್ಯಾಸಗಳು ನೋಡಿದೆ.
ವಿಪರೀತ ತಾಪಮಾನದ ಏರಿಕೆ ಮಲೆನಾಡಿನ ಇತಿಹಾಸದಲ್ಲೇ ಅತ್ಯಂತ ಹೆಚ್ಚು 45 ಡಿಗ್ರಿಗೆ ತಲುಪಿದ್ದು ನನ್ನ ಮನೆ ಊಷ್ಣ ಮಾಪಕದಲ್ಲಿ ದಾಖಲಾಗಿತ್ತು.
ಈ ವರ್ಷ ಮಲೆನಾಡಲ್ಲಿ ಮಾರಾಟ ಆದ ಫ್ಯಾನ್ ಗಳ ಸಂಖ್ಯೆ ಅಗಣಿತ, ಪ್ಯಾನ್ ಗಾಳಿ ಸಾಕಾಗದೆ ಅತಿ ಹೆಚ್ಚು ಏರ್ ಕೂಲರ್ ಗಳೂ ಮಾರಾಟವಾಗಿದೆ ಮುಂದಿನ ವರ್ಷ ಇದೇ ರೀತಿ ತಾಪಮಾನ ಆದರೆ ಏರ್ ಕಂಡಿಷನರ್ ಗಳು ನಮ್ಮ ಹಳ್ಳಿಯ ಪ್ರತಿ ಮನೆಗಳನ್ನ ಪ್ರವೇಶಿಸಲಿದೆ.
ಇಷ್ಟೆಲ್ಲ ತಾಪಮಾನ ಏರಿಕೆಯಿಂದ ಮಲೆನಾಡಿನಲ್ಲಿ ಕೆರೆ ಬಾವಿಗಳು ಮಾತ್ರ ಬತ್ತಲಿಲ್ಲ ಯಾಕೆ?... ಆದರೆ ಅನೇಕ ಬೋರ್ ವೆಲ್ ಗಳು ಮಾತ್ರ ಕೈಚೆಲ್ಲಿದ್ದು ಯಾಕೆ?... ಇದು ಅರ್ಥವಾಗದ ವಿಷಯ.
ನನ್ನ ಮನೆ ಮತ್ತು ಸಂಸ್ಥೆಯ ಅವರಣದ ಮಳೆ ನೀರು ನಾನು ಸಂಪೂರ್ಣ ಮರುಪೂರಣ ಮಾಡುತ್ತೇನೆ, ನಮ್ಮಲ್ಲಿ ಒಂದು ಬೋರ್ ವೆಲ್ ಒಂದೂವರೆ ಇಂಚು ನೀರು ನೀಡುತ್ತದೆ ಮತ್ತು ಎರೆಡು ತೆರೆದ ಬಾವಿಗಳು ಇದೆ ಇದರ ಪಕ್ಕದಲ್ಲೇ ಗೋಬರ್ ಗ್ಯಾಸ್ ಗುಂಡಿ ಕಾರ್ಯನಿರ್ವಹಿಸದೆ ನಿಂತಿದ್ದು ಅದನ್ನು ಶಿಲೆ ಕಲ್ಲಿನಿಂದ ಕಟ್ಟಿಸಿದ್ದರು ನಮ್ಮ ತಂದೆ.
ನಾನು ಅದಕ್ಕೆ ಕಟ್ಟಿದ್ದ ಸೈಜು ಕಲ್ಲು ತೆಗೆಸಿದೆ, ಆ ಗುಂಡಿ ನೆಲದಿಂದ 8 ಅಡಿ ಆಳದವರೆಗೆ ಗಟ್ಟಿ ಮ್ಯಾಂಗನೀಸ್ ಅಂಶದ ಜಂಬಿಟ್ಟಿಗೆ ತೆಗೆದು ಮಾಡಿದ ಗುಂಡಿ ಆದ್ದರಿಂದ ಅದನ್ನು ನಾನು ಬೋಲ್ಡರ್ಸ್ - ಸೋಲಿಂಗ್ - 40 mm ಜಲ್ಲಿ - ನಂತರ 20 mm - ಅದರ ಮೇಲೆ ಮರಳು ಸಾಣಿಸಿ ಉಳಿದ ಊರುಟು ಮರಳು ಕಲ್ಲು- 6 mm ಜಲ್ಲಿ ಇದೆಲ್ಲದರ ಮೇಲೆ ಮರಳು ಹಂತ ಹಂತವಾಗಿ ಹಾಕಿ ಸುತ್ತಲೂ ಕಲ್ಲಿನ ಎತ್ತರದ ಕಟ್ಟೆ ಕಟ್ಟಿ ಮಳೆ ನೀರು ಇಂಗುವಂತೆ ಮಾಡಿದ್ದೇನೆ.
ಭೂಮಿ ತನ್ನ ಸಾಮರ್ಥ್ಯದ ಇಂಗುವಿಕೆ ದಾರಣೆ ಮುಗಿದ ಮೇಲೆ ಉಹೂಂ ... ಒಂದು ಹನಿಯನ್ನು ಒಳತೆಗೆದು ಕೊಳ್ಳುವುದಿಲ್ಲ... ಆಗ ಇಂಗದ ಹೆಚ್ಚುವರಿ ನೀರು ತನ್ನಿಂದ ತಾನೇ ಕೆರೆಗೆ ಹೋಗುವಂತೆ ಮಾಡಿದ್ದೇನೆ.
ಇದು ಕಳೆದ 12 ವರ್ಷದಿಂದ ನಡೆಯುತ್ತಿದೆ ಆದರೂ ನಮ್ಮ ಎರಡು ತೆರೆದ ಬಾವಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯ ಕೊನೆಯಲ್ಲಿ ನೀರು ನೀಡಲು ಸಾಧ್ಯವಾಗುತ್ತಿರಲಿಲ್ಲ ಆದರೆ ಈ ವರ್ಷದ ಬಿರು ಬೇಸಿಗೆಯ ಆಶ್ಚರ್ಯ.. ನಮ್ಮ ತೆರೆದ ಬಾವಿಗಳು ಬೋರ್ ವೆಲ್ ಗೆ ಸರಿಸಮನಾಗಿ ಪೈಪೋಟಿಯಿಂದ ನೀರು ನೀಡಿದೆ.
ಭೂಮಿ ಒಳಗಿನ ವಿಜ್ಞಾನ ನನಗೆ ಅರ್ಥವಾಗುತ್ತಿಲ್ಲ, ಕಡಿಮೆ ಮಳೆ ಮತ್ತು ವಿಪರೀತ ತಾಪ ಮಾನ ನಮ್ಮ ಬಾವಿಗಳು ಕೈ ಕೊಡುತ್ತದೆಂದು ಬಾವಿಸಿದ್ದು ಹುಸಿ ಆಯಿತು ನಿರಂತರ ನೀರು ಇಂಗುವಿಕೆ ಇಂತ ಆಪತ್ಕಾಲದಲ್ಲಿ ತನ್ನ ಚಮತ್ಕಾರ ತೋರಿಸಿತು.
Comments
Post a Comment