Blog number 2174. ವರ್ಷಂಪ್ರತಿ ಜನ ಜಾಗೃತಿಗಾಗಿ ಕರಪತ್ರ ಮುದ್ರಿಸಿ ಹಂಚುತ್ತಿದ್ದನ್ನು 2014ರಿಂದ ನಿಲ್ಲಿಸಿದೆ ಮಳೆ ನೀರು ಇಂಗಿಸಲು ಸಣ್ಣ ಸಣ್ಣ ಇಂಗುಗುಂಡಿ ನಿರ್ಮಿಸಲು ಪ್ರೋತ್ಸಾಹಿಸಲು ಮುದ್ರಿಸಿದ ಅಂತಹ ಒಂದು ಕರ ಪತ್ರ ಇಲ್ಲಿದೆ.
#ಹತ್ತು_ವರ್ಷದ_ಹಿಂದಿನ_ತನಕ_ಜನಜಾಗೃತಿಗಾಗಿ_ಕರಪತ್ರ_ಮುದ್ರಿಸಿ_ಹಂಚುತ್ತಿದ್ದೆ
#ಇಲ್ಲಿ_ಪೋಸ್ಟ್_ಮಾಡಿದ_ಅಂತಹ_ಕರಪತ್ರ_ನೀರು_ಇಂಗಿಸುವ_ಜನಜಾಗೃತಿ_ಕರಪತ್ರ
#ಮಲೆನಾಡಿನಲ್ಲಿ_40x60_ನಿವೇಶನದಲ್ಲಿ_ಮಳೆ_ಬೀಳುವ_ಪ್ರಮಾಣ_11_ಲಕ್ಷ_ಲೀಟರ್
#ಇದನ್ನು_ಭೂಮಿಗೆ_ಇಂಗಿಸಿದರೆ_ನಿಮ್ಮ_ಬಾವಿ_ಬತ್ತಿ_ಹೋಗಲು_ಸಾಧ್ಯವೇ_ಇಲ್ಲ
#ಚಿಕ್ಕದಾದ_ಮೂರು_ಅಡಿ_ಉದ್ದ_ಒಂದೂವರೆ_ಅಡಿ_ಅಗಲ_ಒಂದೂವರೆ_ಅಡಿ_ಆಳದ
#ಇಂಗು_ಗುಂಡಿ_ನಿರ್ಮಾಣದ_ಕರ_ಪತ್ರಗಳು.
ಮುಂಗಾರು ಪ್ರಾರಂಭ ಆಗಿದೆ ಮಳೆ ನೀರು ಕೊಯ್ಲು ಯಾರು ಬೇಕಾದರು ಪ್ರಾರಂಭಿಸಬಹುದು ಇದೇನು ದೊಡ್ಡ ಕೆಲಸವಲ್ಲ ಆದರೆ ಇದು ನೀಡುವ ಲಾಭ ಸಣ್ಣದಲ್ಲ, ಇದು ನನ್ನ ಸ್ವಯಂ ಅನುಭವ.
40x60 ಅಡಿ ನಿವೇಶನದಲ್ಲಿ ಮಳೆ ನೀರು ಬೀಳುವ ಪ್ರಮಾಣ ಮಲೆನಾಡಿನಲ್ಲಿ ಹನ್ನೊಂದು ಲಕ್ಷ ಲೀಟರ್ ಇದನ್ನ ಭೂಮಿಗೆ ಇಂಗಿಸಿದರೆ ನಿಮ್ಮ ಬಾವಿ ನೀರು ಬತ್ತಿ ಹೋಗಲು ಸಾಧ್ಯವೇ ಇಲ್ಲ.
ನಮ್ಮ ಸಂಸ್ಥೆಯ ಉಪಯೋಗಿಸದ ಗೋಬರ್ ಗ್ಯಾಸ್ ಸ್ಥಾವರದ ಬಾವಿಯ ಕಟ್ಟಡದ ಕಲ್ಲುಗಳನ್ನು ತೆರವು ಮಾಡಿ ಅದಕ್ಕೆ ಹಂತ ಹಂತವಾಗಿ ವಿವಿಧ ಗಾತ್ರದ ಕಲ್ಲುಗಳು ಮರಳು ತುಂಬಿಸಿ ಅದಕ್ಕೆ ನಮ್ಮ ಸುಮಾರು 10 ಗುಂಟೆ ಜಾಗದ ಅಂದರೆ 11 ಸಾವಿರ ಚದರಡಿ ಪ್ರದೇಶದ ಮಳೆ ನೀರು ಇಂಗಿಸುವ ಕೆಲಸ ಕಳೆದ 10 ವರ್ಷದಿಂದ ನಿರಂತರವಾಗಿ ನಡೆದಿದೆ.
#ಕರಪತ್ರ_ಮುದ್ರಿಸಿ_ಹಂಚುತ್ತಿದ್ದ_ಹಳೇ_ಕಾಲದ_ನೆನಪು.
#ನೀರು_ಇಂಗಿಸಲು_ಪ್ರೋತ್ಸಾಹಿಸುವ_ಕಾರ್ಯ.
2014ರ ನಂತರ ಇಂತಹ ಸಾಹಸ ಕೈ ಬಿಟ್ಟೆ ಕಾರಣ ನನ್ನ ರಾಜಕಾರದ ನಿವೃತ್ತಿ.... ಅದಕ್ಕೂ ಮೊದಲು ವರ್ಷಕ್ಕೆ ಒಂದೆರೆಡು ಬಾರಿ ಆದರೂ ಜನಪರವಾದ ಕರಪತ್ರ ಮುದ್ರಿಸಿ ಹಂಚುತ್ತಿದ್ದೆ.
ಬ್ರಾಡ್ ಗೇಜ್ ಗಾಗಿ, ತುಮರಿ ಸೇತುವೆಗಾಗಿ, ಹಂದಿಗೋಡು ಕಾಯಿಲೆ ಬಗ್ಗೆ, ಮಲೆನಾಡು ಗಿಡ್ಡ ತಳಿ ಉಳಿಸಿ ಅಂತ, ಬಗರ್ ಹುಕುಂ ಗಾಗಿ, ಯಶಸ್ವಿನಿ ಯೋಜನೆ, ಈಸೂರು ಸ್ಮರಣೆಗಾಗಿ... ಹೀಗೆ ಅನೇಕ ಕರಪತ್ರಗಳು.
ಈ ಕರಪತ್ರದಲ್ಲಿ ಅಚ್ಚಿಸಿರುವುದು 3 ಅಡಿ ಉದ್ದ X ಒಂದೂವರೆ ಅಡಿ ಅಗಲ X ಒಂದೂವರೆ ಅಡಿ ಆಳದ ಅತ್ಯಂತ ಚಿಕ್ಕದಾದ,ಅತ್ಯಂತ ಕಡಿಮೆ ವೆಚ್ಚದ ಮತ್ತು ಮನೆ ಮನೆಗಳಲ್ಲಿ ನಿರ್ಮಿಸಿಕೊಂಡು ಇಂತಹ ಒಂದು ಇಂಗು ಗುಂಡಿಯಿಂದ ವಾರ್ಷಿಕ ಕನಿಷ್ಟ 25 ಸಾವಿರ ಲೀಟರ್ ನೀರು ಇಂಗಿಸುವ ಬಗ್ಗೆ ಪ್ರಚಾರ ಮಾಡಿದ ಕರಪತ್ರ ಇದು.
ಜನಪರ ಸಂಘಟನೆಗಳು ಸಂಘ ಸಂಸ್ಥೆಗಳು ಈ ಕರಪತ್ರವನ್ನು ಅವರ ಸಂಘಟನೆಯ ಹೆಸರಲ್ಲಿ ಮುದ್ರಿಸಿ ಹಂಚುವ ಕೆಲಸ ಕೂಡ ಮಾಡಬಹುದು.
Comments
Post a Comment