#ಕೆಳದಿ_ಅರಸರ_ಬಗ್ಗೆ_ಕನ್ನಡದ
#ಪ್ರಖ್ಯಾತ_ಸಾಹಿತಿಗಳಾದ
#ಕುವೆಂಪು_ಮಾಸ್ತಿ_ಜೆಪಿ_ರಾಜರತ್ನಂ
#ಸಾಹಿತ್ಯ_ಪುಸ್ತಕಗಳು_ಪ್ರಕಟವಾಗಿ_ಪ್ರಸಿದ್ದಿ_ಪಡೆದಿತ್ತು
#ಕೆಳದಿ_ರಾಜಕುಮಾರ_ಚೆನ್ನ_ಬಸವ_ನಾಯಕ_ಕಾದಂಬರಿ
#ಮಾಸ್ತಿ_ವೆಂಕಟೇಶ_ಅಯ್ಯಂಗಾರರಿಗೆ_ಪ್ರಶಸ್ತಿ_ತಂದಿತ್ತು
#ಕುವೆಂಪು_ಬರೆದ_ರಾಣಿ_ವೀರಮ್ಮಾಜಿಯ_ರಕ್ತಾಕ್ಷಿ_ನಾಟಕ_ಪಠ್ಯವಾಗಿತ್ತು
#ಜೆ_ಪಿ_ರಾಜರತ್ನಂ_ಬರೆದ_ಕೆಳದಿ_ರಾಣಿ_ವೀರಮ್ಮಾಜಿ_ಪ್ರಸಿದ್ದ_ಕಾದಂಬರಿ_ಆಗಿದೆ.
ನಮ್ಮ ಸಾಗರ ತಾಲೂಕಿನ ಕೆಳದಿ ಅರಸರ ಇತಿಹಾಸದ ಬಗ್ಗೆ ಈಗ ಹೆಚ್ಚು ಹೆಚ್ಚು ಮಾಹಿತಿಗಳು ಬರುತ್ತಿದೆ ಮತ್ತು ಅದನ್ನು ಹೆಚ್ಚು ಜನಗಳು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.
ಕೆಳದಿ ಅರಸರ ಮೂರನೆ ರಾಜದಾನಿ ಹೈದರಾಲಿ ಆರು ತಿಂಗಳ ಕಾಲ 21 ಬಾರಿ ಯುದ್ಧ ಮಾಡಿ ಕೊನೆಗೆ ರಾಣಿ ವೀರಮ್ಮಾಜಿ ಬಗ್ಗೆ ಅಪ ಪ್ರಚಾರ ಹರಿಬಿಟ್ಟು ಬಿದನೂರಿನ ಕೋಟೆ ಒಳಗೇ ಅವಳ ನಂಬಿಕಸ್ತರೇ ಅವಳಿಗೆ ಮೋಸ ಮಾಡುವ ಮೂಲಕ ವೀರಮ್ಮಾಜಿ ಬಿದನೂರು ಕೋಟೆ ಒಳಗಿನ ಅರಮನೆಗೆ ಅಗ್ನಿ ಹಾಕಿ ಪಲಾಯಾನ ಮಾಡುತ್ತಾಳೆ.
ಆಕೆಯ ಪುತ್ರ ಚೆನ್ನಬಸವ ನಾಯಕನನ್ನ ಉದ್ದೇಶಪೂರ್ವಕವಾಗಿ ಪಟ್ಟಾಬಿಶೇಕ ಮಾಡಲು ಅವಳು ಬಿಡುವುದಿಲ್ಲ ಅನ್ನುವ ವದಂತಿ ಕೂಡ ಹುಟ್ಟುಹಾಕಿರುತ್ತಾರೆ ಜೊತೆಗೆ ವಿಧವೆಯಾದ ಸುಂದರ ಸ್ತ್ರೀ ರಾಣಿ ವೀರಮ್ಮಾಜಿ ನಿಂಬಯ್ಯ ಎಂಬ ಸೈನಿಕನ ಜೊತೆ ಅನೈತಿಕ ಸಂಬಂದ ಹೊಂದಿದಳು ಎಂಬ ಸುದ್ದಿ ರಾಣಿ ವೀರಮ್ಮಾಜಿಯ ಸೈನ್ಯದ ಒಗ್ಗಟ್ಟಿಗೆ ಮಾರಕವಾಗುತ್ತದೆ.
ರಾಜಕುಮಾರ ಚೆನ್ನ ಬಸವ ನಾಯಕ ಛದ್ಮ ವೇಶ ದರಿಸಿ ಅನೇಕ ದಂಗೆಗಳನ್ನ ನಡೆಸಿದ ಬೂದಿ ಬಸಪ್ಪ ಎಂಬುದು ಪ್ರಜೆಗಳು ನಂಬುತ್ತಾರೆ.
ಕೆಳದಿ ರಾಣಿ ವೀರಮ್ಮಾಜಿಯ ಕುರಿತು ಕುವೆಂಪು ಅವರು ಬರೆದ ನಾಟಕ #ರಕ್ತಾಕ್ಷಿ ಪ್ರಸಿದ್ಧ ನಾಟಕವಾಗಿ ಅನೇಕ ರಂಗ ಪ್ರಯೋಗಗಳೂ ಆಗಿ ಸರ್ಕಾರ ಪಠ್ಯ ಪುಸ್ತಕದಲ್ಲೂ ಸೇರಿಸಿತ್ತು.
Comments
Post a Comment