Blog Number 2210. ಮುಳುಗಿದ ಎಸ್.ಎಸ್. ಗೇರುಸೊಪ್ಪಾ ಬ್ರಿಟೀಷ್ ಹಡುಗಿನಿಂದ ತೆಗೆದ ಬೆಳ್ಳಿ ಗಟ್ಟಿಗಳಿಂದ ನಾಣ್ಯಗಳನ್ನ ಟಂಕಿಸಿ ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಡಲಾಗಿದೆ.
#ಎಸ್_ಎಸ್_ಗೇರುಸೊಪ್ಪಾ
#ಎರಡನೆ_ಮಹಾಯುದ್ದದಲ್ಲಿ_ಮುಳುಗಿದ_ಹಡಗು
#ಅದರಲ್ಲಿದ್ದ_200_ಟನ್_ಬೆಳ್ಳಿಗಟ್ಟಿಗಳು
#ಮುಳುಗಿದ_ಬೆಳ್ಳಿ_ತೆಗೆದ_ಅಮೆರಿಕಾದ_ಒಡಿಸ್ಸಿ_ಮೆರಿನ್_ಎಕ್ಸಪ್ಲೋರೇಷನ್_ಕಂಪನಿ
#ಈ_ರೀತಿ_ಸಮುದ್ರದಿಂದ_ತೆಗೆದ_ಬೆಳ್ಳಿಯಿಂದ_ನಾಣ್ಯ_ಟಂಕಿಸಿದೆ
#ಇತಿಹಾಸದ_ಆಸಕ್ತರು_ಖರೀದಿಸುತ್ತಾರೆ
#ಆನ್_ಲೈನ್_ನಲ್ಲಿ_ಲಭ್ಯವಿದೆ.
1941 ರಲ್ಲಿ ಮುಳುಗಿದ ಬ್ರಿಟನ್ ಸರ್ಕಾರದ ಹಡುಗಿನ ಹೆಸರು S.S.GERUSOPPA ಬ್ರಿಟಿಷರು ಜೋಗ್ ಜಲಪಾತವನ್ನು ಗೇರುಸೊಪ್ಪ ಜಲಪಾತವೆಂದೇ ಕರೆಯುತ್ತಿದ್ದರು ಈ ಪ್ರದೇಶ ಗೇರುಸೊಪ್ಪೆ ಸಂಸ್ಥಾನಕ್ಕೆ ಸೇರಿತ್ತು.
ಇಲ್ಲಿ ಆಳಿದ ಪ್ರಖ್ಯಾತ ಜೈನರ ರಾಣಿ ಚೆನ್ನಬೈರಾದೇವಿ ಅವಳು ಯುರೋಪಿನ ದೇಶದೊಂದಿಗೆ ನೇರವಾಗಿ ಕಾಳು ಮೆಣಸಿನ ವ್ಯವಹಾರ ನಡೆಸುತ್ತಿದ್ದರಿಂದ ಪೋರ್ಚ್ಗೀಸರು ಅವಳಿಗೆ ನೀಡಿದ ಬಿರುದು #ರೀನಾ_ಡಾ_ಪಿಮೆಂಟಾ ಅಂದರೆ ಕಾಳು ಮೆಣಸಿನ ರಾಣಿ.
ಅವಳ ಈ ವ್ಯವಹಾರಗಳು ಬೆಳ್ಳಿಯ ಗಟ್ಟಿಯೊಂದಿಗೆ (ಬಾರ್ ಗಳೊಂದಿಗೆ) ವಿನಿಮಯ ಮಾಡಿಕೊಳ್ಳುತ್ತಿದ್ದಳು ಮತ್ತು ಈ ರೀತಿ ಸಂಗ್ರಹವಾದ ಅಪಾರ ಸಂಪತ್ತು ಗುಪ್ತವಾಗಿ ನಿದಿಯಾಗಿ ಇಟ್ಟಿದ್ದಳು ಇದು ಯುರೋಪಿನವರಿಗೆ ಕಣ್ಣು ಕುಕ್ಕುತ್ತಿತ್ತು.
ಈ ನಿದಿಯ ಕೆಲ ಬಾಗ ಬ್ರಿಟಿಷರು ಕೈವಶ ಆಯಿತು ಎಂಬ ಸುದ್ದಿಗಳನ್ನ ಪುರಸ್ಕರಿಸುವಂತೆ ಗೇರುಸೊಪ್ಪ ಸಂಸ್ಥಾನದ ಹೆಸರಿನಲ್ಲಿಯೇ ಬ್ರಿಟಿಷರ ಹಡುಗು ಒಂದು ಇದ್ದಿದ್ದು ಆ ಹಡಗು ಎರಡನೆ ಮಹಾ ಯುದ್ದ ಕಾಲದಲ್ಲಿ ಜರ್ಮನ್ ರು ಹೊಡೆದು ಊರುಳಿಸುವುದು ಸುಮಾರು 70 ವರ್ಷದ ನಂತರ ಮುಳುಗಿದ ಹಣಗಿನ ಅವಶೇಷ ಪತ್ತೆ ಮಾಡಲಾಯಿತು ಈ ಹಡಗು ಟೈಟಾನಿಕ್ ಹಡುಗು ಮುಳುಗಿದ ಆಳಕ್ಕಿಂತ ಹೆಚ್ಚು ಆಳದಲ್ಲಿ ಮುಳುಗಿದ್ದು ಅದರಿಂದ 200 ಟನ್ ಬೆಳ್ಳಿ ಗಟ್ಟಿ ಹೊರ ತೆಗೆಯಲಾಯಿತು ಆ ಬೆಳ್ಳಿ ಗಟ್ಟಿಯಿಂದ ವಿವಿದ ಆಕಾರ ಮತ್ತು ತೂಕದ ನಾಣ್ಯ ಮತ್ತು ಸಣ್ಣ ಬಾರ್ ಗಳನ್ನ ಟಂಕಿಸಿ ಆನ್ ಲೈನ್ ಮುಖಾಂತರ ಮಾರಾಟ ಮಾಡುತ್ತಿದ್ದಾರೆ.
Comments
Post a Comment