Blog number 2200. ಏಳು ವರ್ಷದ ಹಿಂದಿನ ಚಿತ್ರ, ಶಿವಮೊಗ್ಗದ ಪತ್ರಕರ್ತ ಮಿತ್ರರು ನಮ್ಮ ಊರಿನ ಸಮೀಪದ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಶಂಕುಸ್ಥಾಪನೆ ವರದಿಗೆ ಬಂದವರು ನನ್ನ ಜೊತೆ ನನ್ನ ಹಳೆ ಲಾಡ್ಜ್ ಎದುರು ತೆಗೆದ ಪೋಟೋದಲ್ಲಿ.
#ಎಷ್ಟು_ಬೇಗ_7_ವರ್ಷ_ಆಯಿತು
#ನಮ್ಮ_ಊರ_ಸಮೀಪದ_ಕೃಷಿ_ವಿಶ್ವವಿದ್ಯಾಲಯ
#ಶಂಕುಸ್ಥಾಪನೆ_ವರದಿಗೆ_ಆಗಮಿಸಿದ್ದ
#ಶಿವಮೊಗ್ಗದ_ಪತ್ರಕರ್ತ_ಮಿತ್ರರ_ಜೊತೆ
#ನನ್ನ_ಹಳೇ_ಲಾಡ್ಜ್_ಎದರು_ತೆಗೆದ_ಪೋಟೋ
ಅವತ್ತು 17 ಜೂನ್ 2017 ನಮ್ಮ ಆನಂದಪುರಂ ವಾಸಿಗಳಿಗೆ ತುಂಬಾ ಸಂತೋಷದ ದಿನ ಅವತ್ತು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಸಮೀಪದ ಇರುವಕ್ಕಿಯಲ್ಲಿ ಕೃಷಿ ವಿಶ್ವ ವಿದ್ಯಾಲಯದ ಶಂಕು ಸ್ಥಾಪನ ಕಾಯ೯ಕ್ರಮದ ಸಂಭ್ರಮ.
ಆಗಿನ ಕೃಷಿ ಸಚಿವ ಕೃಷ್ಣ ಬೈರೇಗೌಡರಿಂದ ಜೊತೆಯಲ್ಲಿ ಸ್ಥಳೀಯ ಶಾಸಕ ಮಂತ್ರಿ ಕಾಗೋಡು ತಿಮ್ಮಪ್ಪ.
ಈ ಕೃಷಿ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಆಗಿದ್ದವರು ಚಿಂಡಿ ವಾಸುದೇವ ರಾವ್ ನಮ್ಮ ಶಿಲ್ಲೆಯ ಶಿಕಾರಿಪುರ ತಾಲೂಕಿನ ಗಾಮದವರು.
ಅವರು ನನಗೆ ಕಾರ್ಯಕ್ರಮದ ಅತಿಥಿಗಳಿಗೆ ವೇದಿಕೆ ಮೇಲೆ ಪಿಂಗಾಣಿ ಕಪ್ ಮತ್ತು ಸಾಸರ್ ನಲ್ಲಿ ಸಕ್ಕರೆ ಇಲ್ಲದ ಕಾಫಿ ಟಿ ಮತ್ತು ಸಕ್ಕರೆ ಜೊತೆಗೆ ಬಿಸ್ಕೇಟ್ ನೀಡುವುದು ಮತ್ತು ಮಂತ್ರಿ ಮಹೋದಯರಿಗೆ ಮತ್ತು ವೇದಿಕೆ ಅತಿಥಿಗಳಿಗೆ ಅಲ್ಲಿಯೇ ಮಧ್ಯಾಹ್ನದ ಊಟ ಅದೂ ಶುದ್ಧ ಮಲೆನಾಡಿನ ಸಾಂಪ್ರದಾಯಿಕ ಊಟ ಹೋಳಿಗೆ ಮಾವಿನ ಹಣ್ಣಿನ ರಸಾಯನದ ಜೊತೆ ನೀಡಲು ವಿನಂತಿಸಿದ್ದರು.
ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಐಪಿ ಗಳಿಗಾಗಿ ಸುಮಾರು 300 ಜನರಿಗೆ ನಮ್ಮ #ಶ್ರೀಕೃಷ್ಣ_ಸರಸ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದ್ದೆ.
ಅವತ್ತು ಅವರ ಒತ್ತಾಯ ..ನಿಮ್ಮ ಊರಿಗೆ ಕೃಷಿ ವಿಶ್ವ ವಿದ್ಯಾಲಯ ತಂದಿದ್ದೇನೆ ನೀವು ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಉಪಾಧ್ಯಕ್ಷರು ಮತ್ತು ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ಆಗಿದ್ದವರು ನೀವು ಸಹಕರಿಸದಿದ್ದರೆ ಇನ್ಯಾರು ಸಹಕರಿಸುತ್ತಾರೆ" ಅಂತ ನನ್ನ ಹಳೇ ಲಾಡ್ಜ್ ಆಫೀಸಲ್ಲಿ ಕುಳಿತು ಸೆಂಟಿಮೆಂಟಲು ಮಾತನ್ನ ಆಡಿದ್ದರು.
ಅವರ ಇನ್ನೊಂದು ಸಲಹೆ ಹೊಸದಾದ ದೊಡ್ಡ ಲಾಡ್ಜ್ ಕಟ್ಟಿ ಅಂತ,ಸರ್ ಈ ಹಳ್ಳಿಯಲ್ಲಿ ಸಾಲ ಮಾಡಿ ಅಷ್ಟು ದೊಡ್ಡ ಲಾಡ್ಜ್ ಕಟ್ಟಿದರೆ ಯಶಸ್ವಿ ಆಗುವುದು ಕಷ್ಟ ಅಂತ ನನ್ನ ವಾದ ಆದರೆ ಅವರು ಯೋಚಿಸ ಬೇಡಿ ಕೃಷಿ ವಿದ್ಯಾಲಯ ಪ್ರಾರಂಭ ಆದರೆ ನಿಮ್ಮ ಊರಿನ ಚಿತ್ರಣವೇ ಬದಲಾಗುತ್ತೆ ಅಂದಿದ್ದರು.
ಅವರ ವಿನಂತಿಯಂತೆ ಶುದ್ಧ ರುಚಿಕರ ಮಲೆನಾಡಿನ ಸಂಪ್ರದಾಯದ ಊಟ ಅವತ್ತು ವ್ಯವಸ್ಥೆ ಮಾಡಿದ್ದೆ ಈ ಶಂಕುಸ್ಥಾಪನೆ ಕಾರ್ಯಕ್ರಮದ ವರದಿಗೆ ಬಂದಿದ್ದ ಶಿವಮೊಗ್ಗದ ಪತ್ರಕರ್ತ ಮಿತ್ರರ ಜೊತೆ ಅವತ್ತು ನಮ್ಮ ಹಳೇ ಲಾಡ್ಜ್ ಎದರು ತೆಗೆದ ಫೋಟೋ 7 ವರ್ಷ ಎಷ್ಟು ಬೇಗ ಕಳೆದು ಹೋಯಿತು ಅನ್ನುತ್ತಿದೆ.
ಈ ಚಿತ್ರದಲ್ಲಿ ಯಾರ್ಯಾರು ಇದ್ದಾರೆ ನೋಡಿ
Comments
Post a Comment