Blog number 2176. ದೇಶದ ಅತ್ಯಂತ ಎತ್ತರದ ಜಲಪಾತ ಕುಂಚಿಕಲ್ ಪಾಲ್ಸ್ ಬಗ್ಗೆ ಖ್ಯಾತ ಲೇಖಕ ಮುಷ್ತಾಕ್ ಹೆನ್ನಾ ಬೈಲು ಕೆಲವು ನೆನಪು ಹಂಚಿದ್ದಾರೆ
#ಮುಷ್ತಾಕ್_ಹೆನ್ನಾಬೈಲು_ಖ್ಯಾತ_ಲೇಖಕರು
#ಈ_ಜಲಪಾತದ_ಸಮೀಪದಲ್ಲಿ_ಅವರ_ಬಾಲ್ಯ
#ಅವರ_ತಂದೆ_ಅರಣ್ಯ_ಇಲಾಖೆಯ_ನೌಕರಿಯಲ್ಲಿದ್ದರು
#ಮಗ_ಮುಷ್ತಾಕ್_ಮತ್ತು_ಅವರ_ಗೆಳೆಯರು
#ಕುಂಚಿಕಲ್_ವಾಲ್ಸ್_ನೋಡಲು_ಹೋಗುತ್ತಾರೆಂಬ_ಆತಂಕ_ಅವರಿಗೆ
#ಈ_ಜಲಪಾತ_ನಮ್ಮ_ದೇಶದ_ಅತ್ಯಂತ_ಎತ್ತರದ_ಜಲಪಾತ
#ಮತ್ತು_ಅಪಾಯಕಾರಿ_ಸ್ಥಳದ_ಜಲಪಾತ
#ಇವತ್ತು_ಮುಷ್ತಾಕ್_ಹೆನ್ನಾಬೈಲು_ಈ_ಬಗ್ಗೆ_ಕೆಲ_ನೆನಪು_ಹಂಚಿದ್ದಾರೆ
ಗ್ರಾಮೀಣ ಜನರು ಈ ಫಾಲ್ಸ್ ಅನ್ನು ಕುಂಚಿಕಲಬ್ಬಿ ಫಾಲ್ಸ್ ಅಂತ ಕರೆಯುತ್ತಾರೆ, ವಾರಾಹಿ ನದಿಯ ನೀರನ್ನು ಹೊಸಂಗಡಿ ಪವರ್ ಹೌಸ್ ಗೆ 1988 ರಲ್ಲಿ ಆರಂಭವಾದ ವಾರಾಹಿ ಭೂಗರ್ಭ ವಿದ್ಯುದಾಗಾರಕ್ಕೆ ತಿರುಗಿಸಿ ದಿಕ್ಕು ಬದಲಿಸಲಾಗಿತ್ತು.
ವಾರಾಹಿ ನದಿಯ ಅರ್ಧಕ್ಕಿಂತಲೂ ಹೆಚ್ಚಿನ ನೀರು ಈ ಪವರ್ ಪ್ರಾಜೆಕ್ಟ್ ಗೆ ಹೋಗುತ್ತದೆ,ಈಗ ಅಲ್ಲಿಂದ ಧುಮುಕುವ ನೀರಿನ ಪ್ರಮಾಣ ಆ ಕಾಲಕ್ಕೆ ಹೋಲಿಸಿದರೆ ಕೇವಲ 30 ರಿಂದ 40% ಅಷ್ಟೇ.
ವಾರಾಹಿ ನದಿಯ ಸಂಪೂರ್ಣ ನೀರು ಪೂರ್ಣ ಪ್ರಮಾಣದಲ್ಲಿ ಈ ಫಾಲ್ಸ್ ಮೂಲಕ ಧುಮುಕುತ್ತಿದ್ದ ಕಾಲದಲ್ಲಿ ಸುತ್ತಮುತ್ತಲಿನ 25 ರಿಂದ 30 ಕಿಲೋಮೀಟರ್ ದೂರದ ಹಳ್ಳಿಗಳಿಗೆ ಈ ಜಲಪಾತದಲ್ಲಿ ನೀರು ಧುಮುಕುವ ಶಬ್ದ ಕೇಳುತ್ತಿತ್ತು.
88ನೇ ಇಸ್ವಿಯಲ್ಲಿ ಪವರ್ ಪ್ರಾಜೆಕ್ಟ್ ಗೆ ನೀರು ತಿರುಗಿಸಿ ಪ್ರಮಾಣ ಕಡಿಮೆಯಾದಾಗ ಏಕಾಏಕಿ ನೀರು ಧುಮುಕುವ ಶಬ್ದ ನಿಂತಾಗ ಸುತ್ತಲಿನ ನದಿ ತೀರಕ್ಕಿಂತ ದೂರ ವಾಸಿಸುವ ಬಹುತೇಕ ಹಳ್ಳಿಗಳವರು ವಾರಾಹಿ ನದಿ ಬತ್ತಿ ಹೋಗಿದೆ ಎಂದೇ ಭಾವಿಸಿಕೊಂಡಿದ್ದರು.
ಅಜ್ಜ ಮುತ್ತಾತನ ಕಾಲದಿಂದಲೂ ಧುಮುಕುತ್ತಿದ್ದ ನೀರು ಒಮ್ಮೆಗೆ ನಿಂತು ಹೋಗಿದ್ದು ಪ್ರಳಯಕಾಲದ ಮುನ್ಸೂಚನೆ ಎಂದೇ ಬಹಳಷ್ಟು ಜನ ಭಾವಿಸಿದ್ದರು.
ಈ ತಪ್ಪು ಗ್ರಹಿಕೆಗೆ ಕಾರಣವಾಗಿದ್ದು ಪವರ್ ಪ್ರಾಜೆಕ್ಟ್ ಗೆ ನೀರು ತಿರುಗಿಸಿದ್ದು ಗೊತ್ತಾಗದ ಕಾರಣಕ್ಕೆ,ಈ ಫಾಲ್ಸ್ ಗೆ ಸಂಬಂದ ಪಟ್ಟಂತೆ ಬಹಳಷ್ಟು ರೋಚಕ ವಿಷಯಗಳಿವೆ.. ಸರ್ 🙏🏻
Comments
Post a Comment