Skip to main content

Blog number 2181. ಸಜ್ಜನ ರಾಜಕಾರಿಣಿ ಬಿ. ಸ್ವಾಮಿ ರಾವ್ ತಮ್ಮ 94 ನೇ ವಯಸ್ಸಿನಲ್ಲಿ ನಾನು ಹೇಳುವುದೆಲ್ಲ ಸತ್ಯ ಎಂಬ ಜೀವನ ವೃತ್ತಾಂತದಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಮೈಲಿಕಲ್ಲುಗಳನ್ನು ದಾಖಲಿಸಿದ್ದಾರೆ ಈ ಪುಸ್ತಕದ ಮೊದಲ 60 ಪುಟಗಳ ಓದಿನಿಂದ ನಾನು ಗ್ರಹಿಸಿದ ಮೊದಲ ಭಾಗ ಇಲ್ಲಿದೆ

#ನಾನು_ಹೇಳುವುದೆಲ್ಲ_ಸತ್ಯ

#ಬಿ_ಸ್ವಾಮಿರಾವ್_ಜೀವನ_ವೃತ್ತಾಂತ

#ಪುಸ್ತಕದ_ಮೊದಲ_60_ಪುಟಗಳ_ಓದಿನಿಂದ

#ನಾನು_ಗ್ರಹಿಸಿದ್ದು

#ಹೊಸನಗರ_ವಿಧಾನಸಭಾ_ಕ್ಷೇತ್ರ_ಈಗಿಲ್ಲ

#ಈ_ಕ್ಷೇತ್ರದ_ಮಾಜಿ_ಶಾಸಕರಾಗಿದ್ದವರು_ಬಿ_ಸ್ವಾಮಿರಾವ್

#ಸ್ವಾಮಿರಾವ್_ಜೀವನ_ವೃತ್ತಾಂತ

#ಪತ್ರಕರ್ತರಾದ_ಶ್ರೀಕಂಠ_ಹೆಚ್_ಆರ್_ಪ್ರಕಟಿಸಿದ್ದಾರೆ.


  ದಿನಾಂಕ 10 - ಮೇ - 2024 ರಂದು ಸಜ್ಜನ ಮಾಜಿ ಶಾಸಕರಾಗಿದ್ದ ಹೊಸನಗರದ ಸ್ವಾಮಿರಾವ್ ಮತ್ತು ಹೊಸನಗರದ ಉತ್ಸಾಹಿ ಪತ್ರಕರ್ತ ಹೆಚ್.ಆರ್. ಶ್ರೀಕಂಠ ನನ್ನ ಆಫೀಸಿಗೆ ಬಂದು #ನಾನು_ಹೇಳುವುದೆಲ್ಲ_ಸತ್ಯ ಎಂಬ ಸ್ವಾಮಿ ರಾವ್ ಅವರ ಜೀವನ ವೃತ್ತಾಂತ ಪತ್ರಕರ್ತರಾದ ಶ್ರೀಕಂಠ ಬರೆದು ಪ್ರಕಟಿಸಿದ್ದು 94ರ ವಯೋವೃದ್ದರಾದ ಸ್ವಾಮಿ ರಾವ್ ಅವರ ಸ್ವ ಹಸ್ತಾಕ್ಷರದಿಂದ ನೀಡಿದ್ದರು.
250 ಪುಟಗಳ ಈ ಪುಸ್ತಕದ ಮೊದಲ 60 ಪುಟಗಳ ಓದಿನಲ್ಲಿ ನನ್ನ ತಿಳುವಳಿಕೆಗೆ ದಕ್ಕಿದ್ದನ್ನ ಇಲ್ಲಿ ದಾಖಲಿಸಿದ್ದೇನೆ ಮುಂದಿನ ಭಾಗಗಳಲ್ಲಿ ಉಳಿದ ಪುಟಗಳ ಓದು ವಿವರ ವಿಮರ್ಶೆ ಬರೆಯುತ್ತೇನೆ.
  #ಶಿವಮೊಗ್ಗ_ಜಿಲ್ಲೆಯ_ಸ್ವಾತಂತ್ರ್ಯ_ನಂತರದ_ಮೊದಲ_ಚುನಾವಣೆಯಿಂದ_ಈವರೆಗೆ
    ಶಿವಮೊಗ್ಗ ಜಿಲ್ಲೆಯ ರಾಜ ಕಾರಣದಲ್ಲಿ ಆಸಕ್ತಿ ಇರುವವರು ಸ್ವಾಮಿರಾಯರ ಈ ಜೀವನ ವೃತ್ತಾಂತ ತಪ್ಪದೇ ಓದಲೇ ಬೇಕು ಯಾಕೆಂದರೆ 1952ರಂದು ಸ್ವಾತಂತ್ರ್ಯ ನಂತರದ ಮೊದಲ ಮಹಾ ಚುನಾವಣೆಯಿಂದ ಮೊನ್ನೆ ನಡೆದ 2024ರ ಲೋಕ ಸಭಾ ಚುನಾವಣೆಯ ತನಕ ಸ್ವಾಮಿರಾಯರು ನೋಡಿದ್ದಾರೆ.
  ಅವರ ಈ ಜೀವನ ವೃತ್ತಾಂತ ಪುಸ್ತಕ ಅವರ ಪೂಜ್ಯ ತಂದೆ 
ಮೈಸೂರು ರೆಪ್ರಸೆಂಟಿಟೀವ್ ಅಸೆಂಬ್ಲಿ ಪ್ರತಿನಿದಿ ಆಗಿದ್ದ ಕುಂಬತ್ತಿ ಬೈರನಾಯಕರಿಗೆ ಅರ್ಪಿಸಿದ್ದಾರೆ.
  ತೀಥ೯ಹಳ್ಳಿ ಕಮಾನು ಸೇತುವೆ ಉದ್ಘಾಟನೆಗೆ ಜಯಚಾಮರಾಜೇಂದ್ರ ಒಡೆಯರ್ ಬಂದಾಗ ತಂದೆ ಜೊತೆ ಎತ್ತಿನಗಾಡಿಯಲ್ಲಿ ಹೋಗಿದ್ದು, ಹೊಸನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಆಚರಿಸಿದ ಮೊದಲ ಸ್ವಾತಂತ್ಯ್ರ ದಿನಾಚರಣೆ, ಕಾಲೇಜು ವ್ಯಾಸಂಗದಲ್ಲಿ ಪೂರ್ಣಚಂದ್ರ ತೇಜಸ್ವಿ ಓಡನಾಟ, ಅವತ್ತಿನ ಟಾಂಗಾ ಸವಾರಿ, ಚಲನ ಚಿತ್ರ ನಟಿ ಕಲ್ಪನಾ ಜೊತೆ ಊಟ, ಜಾತಿ ಕಾರಣ ಸುಳ್ಳು ಹೇಳಿ  ಬಾಡಿಗೆ ಮನೆ ಪಡೆದು ವ್ಯಾಸಂಗ ಅದಕ್ಕೆ ಅವರ ಹೆಸರಿನ ಮುಂದಿನ ರಾವ್ ಕಾರಣವಾಗಿದ್ದು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಇವರ ಇಂಟರ್ ಮೀಡಿಯೇಟ್ ಕ್ಲಾಸ್ ಮೇಟ್ ಕೆ. ಹೆಚ್. ಶ್ರೀನಿವಾಸ್ ಉಪನ್ಯಾಸಕರಾಗಿ ಬಂದದ್ದು, ಇದೇ ರೀತಿ ಇಂಟರ್ ಮೀಡಿಯೇಟ್ ನಲ್ಲಿ ಇವರಿಗಿಂತ ಒಂದು ವರ್ಷ ಕಿರಿಯರಾದ ಲಂಕೇಶರೂ ಮೈಸೂರಿನಲ್ಲಿ ಇವರಿಗೆ ಉಪನ್ಯಾಸಕರಾಗಿದ್ದು, ಸ್ವಾಮಿ ರಾವ್ ಆ ಕಾಲದಲ್ಲಿ ಪತ್ರಿಕೋದ್ಯಮ ಪದವಿಗೆ ಸೇರಿದ್ದು, ಇವರ ರೂಂ ಮೇಟ್ ಆಗಿದ್ದವರು ಧರ್ಮಪ್ಪ ( ಸಾಗರ ಶಾಸಕರಾದರು).
   ಆ ಕಾಲದ ಹಿಂದೂ ಮಹಾ ಸಭಾದ ಭೂಪಾಳಂ  ಚಂದ್ರಶೇಖರಯ್ಯ ಅವರ ಮಲೆನಾಡು ವಾರ್ತೆ ಪತ್ರಿಕೆ ಅವರ ಶರಾವತಿ ಮುಳುಗಡೆ ಸಂತ್ರಸ್ಥರ ಪರ ಹೋರಾಟ, 1962ರಲ್ಲಿ ಭೂಪಾಳಂ ಪ್ರೋತ್ಸಾಹದಿಂದ ಶಾಂತವೇರಿ ಗೋಪಾಲಗೌಡರ ವಿರುದ್ದ ಸ್ಪರ್ದಿಸಿ ಸೋತ ಬಗ್ಗೆ, ಆಗ ಇವರ ಚಿನ್ಹೆ ಆನೆ ಗೌಡರದ್ದು ಆಲದ ಮರ.
     ಆಗ ಸ್ವಾಮಿ ರಾವ್ ಅವರ ಚುನಾವಣಾ ಪ್ರಚಾರ ವಾಹನ ಸಾಗರದ #ಛಾಯಾ_ಹೋಟೆಲ್_ಬೀಮಣ್ಣರ ಪೋರ್ಡ್ ಕಾರ್, ಕಾರಿನ ಸಾರಥೀಯೂ ಬೀಮಣ್ಣ ಮತ್ತು ಬಾಷಣಕಾರರೂ ಬೀಮಣ್ಣರಾಗಿದ್ದರು.
   ಚುನಾವಣಾ ಪ್ರಚಾರದಲ್ಲಿ ಮೇಲ್ವರ್ಗದ ಮನೆಗಳಲ್ಲಿ ಹಿಂದುಳಿದ ವರ್ಗದ ಸ್ವಾಮಿ ರಾವ್ ಊಟ ಉಪಹಾರ ಮಾಡಿದ ತಟ್ಟೆ ಲೋಟ ತೊಳೆದಿಟ್ಟು ಬರಬೇಕಾದ ಆ ದಿನಗಳ ನೆನಪು, 1983ರ ವಿಧಾನ ಸಭಾ ಚುನಾವಣೆಯ ಹಿಂದಿನ ಐದು ಚುನಾವಣೆಗಳ ಸತತ ಸೋಲಿನ ರುಚಿ, ಶಾಂತವೇರಿ ಗೋಪಾಲಗೌಡರಿಂದ ಸಮಾಜವಾದಿ ಪಾರ್ಟಿ ಸೇರಿದ್ದು, ಶರಾವತಿ ಮುಳುಗಡೆ ಪ್ರದೇಶದ ಟಿಂಬರ್ ಗುತ್ತಿಗೆ ಗುತ್ತಿಗೆದಾರಾಗಿ ಬಂದ ಮುಖ್ಯಮಂತ್ರಿ ನಿಜಲಿಂಗಪ್ಪರ ಅಳಿಯ ಸೋಮಶೇಖರ್ ಹೊಸನಗರದ ಶಾಸಕರಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿ ಆದ ಸ್ವಾಮಿ ರಾವ್, ಮದುವೆ, ಇವರ ತಂದೆ ಇಹಲೋಕ ಯಾತ್ರೆ ಮುಗಿಸಿದ್ದು, ದೀವರ ಸಂಪ್ರದಾಯದ ಶವ ಸಂಸ್ಕಾರ ಚಿತೆಯಲ್ಲಿ ಮಾಡದೆ ಮಣ್ಣಿನಲ್ಲಿ ಹೂಳಬೇಕು, ಸಮಾದಿ ಮಾಡಬೇಕೆಂಬ ಅವರ ಅಂತಿಮ ಆಸೆ ನೆರವೇರಿಸಿದ್ದನ್ನ ದಾಖಲಿಸಿದ್ದಾರೆ.
  ಖ್ಯಾತ ಗಾಯಕ ಕಾಳಿಂಗ್ ರಾವ್ ಅವರನ್ನ ಹೊಸನಗರದ ಭೂ ಅಭಿವೃದ್ಧಿ ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆಗೆ ಬಿ.ಎಸ್.ವಿಶ್ವನಾಥರು ಕರೆ ತಂದಿದ್ದು, ನಂತರ ಒಂದು ದಿನ ಕಾಳಿಂಗ್ ರಾವ್ ಇವರ ಮನೆಗೆ ಅತಿಥಿ ಆಗಿ ಬಂದ ಘಟನೆ ಅವತ್ತು ಸಂಜೆ ಅವರು ಹಾಡಿದ ಬಾರಯ್ಯ ಬೆಳದಿಂಗಳೇ ... ನಮ್ಮೂರ ಹಾಲಿನಂಥ ಬೆಳದಿಂಗಳೇ ....
    1967ರಲ್ಲಿ ಸಮಾಜವಾದಿ ಪಕ್ಷದಿಂದ ಹೊಸನಗರದಿಂದ ಸ್ವಾಮಿ ರಾವ್, ಸಾಗರದಿಂದ ಕಾಗೋಡು, ಸೊರಬದಿಂದ ಬಂಗಾರಪ್ಪ, ಶಿವಮೊಗ್ಗದಿಂದ ವೈ.ಆರ್.ಪರಮೇಶ್ವರಪ್ಪ, ತೀರ್ಥಹಳ್ಳಿಯಿಂದ ಶಾಂತವೇರಿ ಗೋಪಾಲಗೌಡರು, ಚೆನ್ನಗಿರಿಯಿಂದ ಜೆ.ಹೆಚ್.ಪಟೇಲರು ಸ್ಪರ್ದಿಸಿದ್ದಾಗ ಪ್ರಚಾರಕ್ಕೆ ಲೋಹಿಯಾ, ಜಾರ್ಜ್ ಪರ್ನಾಂಡೀಸರು ಬಂದಿದ್ದು ಸ್ಮರಿಸಿದ್ದಾರೆ.
  ರಿಪ್ಪನ್ ಪೇಟೆ ಶಾಲಾ ಮೈದಾನದ ಪ್ರಚಾರ ಸಭೆಗೆ ಬಾರೀ ಸಂಖ್ಯೆಯಲ್ಲಿ ಸೇರಿದ್ದ ಸಭಿಕರು ಆದರೆ ನಾಲ್ಕೈದು ಗಂಟೆ ಕಳೆದರೂ ಬಾರಾದ ಗೋಪಾಲ ಗೌಡರು ಆಗ ಶಾಂತವೇರಿ ಅಭಿಮಾನಿ ರಿಪ್ಪನ್ ಪೇಟೆಯ ಸುಕುಮಾರ್ ದೂರದ ಕಮ್ಮರಡಿಗೆ ಹೋಗಿ ಗೌಡರನ್ನ ಕರೆತಂದು ಸಭೆ ಮುಗಿಯುವಾಗ ಮಧ್ಯರಾತ್ರಿ 2 ಆಗಿತ್ತಂತೆ ಅದನ್ನು ದಾಖಲಿಸಿದ್ದಾರೆ.
    ಗೇಣಿದಾರರ ಹೋರಾಟದಲ್ಲಿ ಕಂಕಳಲೆ ಗೌಡರು ಬಂದೂಕಿನಿಂದ ಸುಡಲು ಬಂದ ಪ್ರಕರಣ, 1967ರಲ್ಲಿ ಸಾಗರದಲ್ಲಿ 749 ಮತಗಳಿಂದ ಕಾಗೋಡು ಕೆ.ಹೆಚ್.ಶ್ರೀನಿವಾಸರ ಎದರು ಪರಾಭವಗೊಂಡರೆ ಹೊಸನಗರದಲ್ಲಿ ಸ್ವಾಮಿರಾವ್ ಸೋಮಶೇಖರ್ ಎದರು 750 ಮತಗಳಿಂದ ಪರಾಭವಗೊಂಡರು.
  ಹೊಸನಗರ ತಾಲೂಕಿನ ಶರಾವತಿ ಮುಳುಗಡೆ ಸಂತ್ರಸ್ತರ ಪರಿಹಾರದ ವ್ಯಾಜ್ಯಗಳನ್ನು ಆಗಿನ ಖ್ಯಾತ ವಕೀಲರಾಗಿದ್ದ ಬಂಗಾರಪ್ಪರಿಗೆ ಕೊಡಿಸಿದ ನೆನಪು ಮಾಡಿದ್ದಾರೆ.
   ಬಂಗಾರಪ್ಪ ಸಮಾಜವಾದಿ ಪಕ್ಷ ಸೇರಿದ್ದು ಚುನಾವಣೆ ಗೆದ್ದಿದ್ದು 1972 ರಲ್ಲಿ ಬಂಗಾರಪ್ಪರ ವಿರುದ್ದ ಜನ ವಿರೋದ ಉಂಟಾಗಿದ್ದು, ಪಕ್ಷದ ಟಿಕೇಟಿಗೆ ಪ್ರಯಾಸ ಪಟ್ಟಿದ್ದು ಅದೇ ಸಂದರ್ಭದಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಗೋಪಾಲಗೌಡರ ಕ್ಷೀಣಿಸಿದ ಆರೋಗ್ಯ ಆಗ ಅಭ್ಯರ್ಥಿ ಆಯ್ಕೆ ಕಸರತ್ತು ಸ್ವಾಮಿ ರಾವ್ ಹೆಗಲಿಗೆ, ಅನೇಕರನ್ನ ಮನ ಒಲಿಸಲು ಸ್ವಾಮಿ ರಾವ್ ವಿಫಲವಾದದ್ದು, ಡಾ ವಿಷ್ಣು ಮೂರ್ತಿ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಚುನಾವಣೆ ಸ್ಪರ್ಧೆಗೆ ಒಪ್ಪದಿದ್ದ ಬಗ್ಗೆ ಅಂತಿಮವಾಗಿ ಕೋಣಂದೂರು ಲಿಂಗಪ್ಪ ಅಭ್ಯರ್ಥಿ ಆಗಿ ಶಾಸಕರಾಗಿದ್ದು ಆಗ ಇವರ ಪ್ರಯತ್ನಕ್ಕೆ ಕಾಗೋಡು ಕೋಣಂದೂರು ಲಿಂಗಪ್ಪರ ಜಾತಿ ಓಟು 500 ಕೂಡ ಇಲ್ಲ ಎಂಬ ತಗಾದೆ ತೆಗೆದದ್ದು, ಗೋಪಾಲಗೌಡರ ಮಪ್ಲರ್ ಮಾಡಿದ ಕಮಾಲ್ ದಾಖಲಿಸಿದ್ದಾರೆ.
  ರಮೇಶ್ ಬಂದಗದ್ದೆ ಒಡನಾಟ, ಸಾಗರದ ಮಾರಿಗುಡಿ ಸಮೀಪದ ಶಿವಾಜಿ ರಸ್ತೆ ಸಮಾಜವಾದಿ ರಸ್ತೆ ಎಂದು ಪ್ರಸಿದ್ದಿ ಪಡೆದಿದ್ದನ್ನ, ಆಗ ಸಾಗರದ ಸಮಾಜವಾದಿ ಪಕ್ಷದ ಮುಖಂಡರಾದ ಪ್ರಭಾಕರ ಕಾಳೆ, ಸಾಗರ ಪ್ರೆಸ್ ಪಿ.ಪ್ರಭಾಕರ್, ಮನೋಭೂಮಿ ಶೆಟ್ಟರು, ಬಿ.ಎಸ್.ಚಂದ್ರಶೇಖರ್, ಎಸ್.ಎಸ್.ಕುಮುಟಾ, ಜಿ.ಆರ್. ಜಿ. ನಗರ್, ಯಳಗಳಲೆ ಹುಚ್ಚಪ್ಪ, ಕೆ.ವಿ.ಸುಬ್ಬಣ್ಣ, ಬಿ.ಆರ್. ಜಯಂತ್, ಪತ್ರಕರ್ತ ಎ. ಡಿ. ರಾಮಚಂದ್ರ, ಗುರುರಾಜ, ಪಂಡಿತರು, ಬೇದೂರು ವೆಂಕಟಗಿರಿ ಭಟ್ಟರು, ಮನೆಘಟ್ಟದ ಎಂ.ಸಿ. ಚೌಡಪ್ಪ , ಎಂ.ಸಿ.ನಾಗಪ್ಪ, ಪ್ರಪುಲ್ಲಾ ಮದುಕರ್ ಮುಂತಾದವರನ್ನ ನೆನಪಿಸಿದ್ದಾರೆ.
   ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಒಳಗುಟ್ಟುಗಳನ್ನ ಸ್ವಾಮಿ ರಾವ್ ಯಥಾವತ್ತಾಗಿ ದಾಖಲಿಸಿದ್ದಾರೆ ರಾಜಕಾರಣದಲ್ಲಿರುವ ಶಿವಮೊಗ್ಗ ಜಿಲ್ಲೆಯವರು ತಪ್ಪದೇ ಈ ಪುಸ್ತಕ ಓದಬೇಕು ಇದು ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಚರಿತ್ರೆ ಕೂಡ ಆಗಿದೆ.
(ನಾಳೆ ಮುಂದಿನ 60 ಪುಟಗಳು)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...