Skip to main content

Posts

Showing posts with the label 12 may 2023

Blog number 1524.ಶುಕ್ರವಾರ ಸಂಜೆ (12 - ಮೇ 2023) ನನ್ನ ಅತಿಥಿ ಖ್ಯಾತ ಸಾಹಿತಿ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರು.

#ಚುನಾವಣಾ_ಪಲಿತಾಂಶದ_ಹಿಂದಿನ_ದಿನ_ಅರವಿಂದಚೊಕ್ಕಾಡಿ_ಬಂದಿದ್ದರು. #ಅವರಿಗೆ_ನಮ್ಮ_ತಾಲ್ಲೂಕಿನವರಾದ_ಆರ್_ಟಿ_ವಿಠ್ಠಲಮೂರ್ತಿ_ಪುಸ್ತಕ_ನೀಡಿದೆ #ಅವರು_ಈ_ಬಾರಿಯ_ವಿಧಾನಸಭಾ_ಚುನಾವಣಾ_ಪಲಿತಾಂಶಗಳಿಗೆ_ಹೆಚ್ಚು_ಪರಿಣಾಮಕಾರಿ_ಆಗಲಿರುವ #ಕಾಂಗ್ರೇಸ್_ಗ್ಯಾರಂಟಿ_ಕಾರ್ಡ್_ಬಗ್ಗೆ_ಮಾತಾಡಿದರು. #ಬಿಟ್ಟಿ_ಬಾಗ್ಯ_ಎಂದು_ಗೇಲಿ_ಮಾಡುವುದು_ಸರಿಯಾ? #ನಮ್ಮ_ಮಲ್ಲಿಕಾವೆಜ್_ನೀರುಳ್ಳಿದೋಸೆ_ಮತ್ತು_ಅವರಿಷ್ಟದ_ಕೋಥಾಸ್_ಪಿಲ್ಟರ್_ಕಾಫಿ_ಜೊತೆ_ಚರ್ಚೆ: #ಮೇ_20_ಶನಿವಾರ_ಶಿವಮೊಗ್ಗದ_ಪ್ರತಿಷ್ಟಿತ_ಕರ್ನಾಟಕ_ಸಂಘದಲ್ಲಿ_ತಿಂಗಳ_ಅತಿಥಿ_ಅರವಿಂದ_ಚೊಕ್ಕಾಡಿ.    ಸಾಗರದ ಒಂದು ಕಾಲದ ಕಾಂಗ್ರೇಸ್ ಮುಖಂಡರು ಮತ್ತು ಅನ್ನಾವರ ಅಡಿಕೆ ಕಂಪನಿ ಚೇರ್ಮನ್ ರಾಗಿದ್ದವರು, ಆ ಕಾಲದಲ್ಲಿ 1952ರಲ್ಲಿ ಸಮಾಜವಾದಿ ಪಕ್ಷದಶಾಂತವೇರಿ ಗೋಪಾಲಗೌಡರ ಎದುರು ಸೋತಿದ್ದ ಕಾಂಗ್ರೇಸ್ ಪಕ್ಷದ  ಆನಂದಪುರಂನ ಬದರಿನಾರಾಯಣ ಅಯ್ಯಂಗಾರರನ್ನು 1957 ರಲ್ಲಿ ಗೆಲ್ಲಿಸುವಲ್ಲಿ ಚಾಣಕ್ಯರಾಗಿದ್ದ ತುಂಬೆ ಸುಬ್ರಾಯರ ಮಗಳ ಮಗ ಪ್ರೋಪೆಸರ್ ನರಹರಿ ಕರಾವಳಿಯ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು ಅವರ ಮಗನ ಮದುವೆಯ ರಿಸೆಪ್ಷನ್ ಶನಿವಾರ ಸಾಗರದಲ್ಲಿ(13 ಮೇ 2023) ಇತ್ತು ಅಲ್ಲಿಗೆ ಭಾಗವಹಿಸಲು ಅರವಿಂದ ಚೊಕ್ಕಾಡಿ ಬರುತ್ತಾರೆ ನೀವು ಬನ್ನಿ ಅಂತ ನರಹರಿ ಅವರು ಆಹ್ವಾನಿಸಿದ್ದರು.     ಹಿಂದಿನ ದಿನ ಶುಕ್ರವಾರ ಬೆಳಿಗ್ಗೆ 10...