Blog number 1524.ಶುಕ್ರವಾರ ಸಂಜೆ (12 - ಮೇ 2023) ನನ್ನ ಅತಿಥಿ ಖ್ಯಾತ ಸಾಹಿತಿ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರು.
#ಚುನಾವಣಾ_ಪಲಿತಾಂಶದ_ಹಿಂದಿನ_ದಿನ_ಅರವಿಂದಚೊಕ್ಕಾಡಿ_ಬಂದಿದ್ದರು.
#ಅವರಿಗೆ_ನಮ್ಮ_ತಾಲ್ಲೂಕಿನವರಾದ_ಆರ್_ಟಿ_ವಿಠ್ಠಲಮೂರ್ತಿ_ಪುಸ್ತಕ_ನೀಡಿದೆ
#ಅವರು_ಈ_ಬಾರಿಯ_ವಿಧಾನಸಭಾ_ಚುನಾವಣಾ_ಪಲಿತಾಂಶಗಳಿಗೆ_ಹೆಚ್ಚು_ಪರಿಣಾಮಕಾರಿ_ಆಗಲಿರುವ
#ಕಾಂಗ್ರೇಸ್_ಗ್ಯಾರಂಟಿ_ಕಾರ್ಡ್_ಬಗ್ಗೆ_ಮಾತಾಡಿದರು.
#ಬಿಟ್ಟಿ_ಬಾಗ್ಯ_ಎಂದು_ಗೇಲಿ_ಮಾಡುವುದು_ಸರಿಯಾ?
#ನಮ್ಮ_ಮಲ್ಲಿಕಾವೆಜ್_ನೀರುಳ್ಳಿದೋಸೆ_ಮತ್ತು_ಅವರಿಷ್ಟದ_ಕೋಥಾಸ್_ಪಿಲ್ಟರ್_ಕಾಫಿ_ಜೊತೆ_ಚರ್ಚೆ:
#ಮೇ_20_ಶನಿವಾರ_ಶಿವಮೊಗ್ಗದ_ಪ್ರತಿಷ್ಟಿತ_ಕರ್ನಾಟಕ_ಸಂಘದಲ್ಲಿ_ತಿಂಗಳ_ಅತಿಥಿ_ಅರವಿಂದ_ಚೊಕ್ಕಾಡಿ.
ಸಾಗರದ ಒಂದು ಕಾಲದ ಕಾಂಗ್ರೇಸ್ ಮುಖಂಡರು ಮತ್ತು ಅನ್ನಾವರ ಅಡಿಕೆ ಕಂಪನಿ ಚೇರ್ಮನ್ ರಾಗಿದ್ದವರು, ಆ ಕಾಲದಲ್ಲಿ 1952ರಲ್ಲಿ ಸಮಾಜವಾದಿ ಪಕ್ಷದಶಾಂತವೇರಿ ಗೋಪಾಲಗೌಡರ ಎದುರು ಸೋತಿದ್ದ ಕಾಂಗ್ರೇಸ್ ಪಕ್ಷದ ಆನಂದಪುರಂನ ಬದರಿನಾರಾಯಣ ಅಯ್ಯಂಗಾರರನ್ನು 1957 ರಲ್ಲಿ ಗೆಲ್ಲಿಸುವಲ್ಲಿ ಚಾಣಕ್ಯರಾಗಿದ್ದ ತುಂಬೆ ಸುಬ್ರಾಯರ ಮಗಳ ಮಗ ಪ್ರೋಪೆಸರ್ ನರಹರಿ ಕರಾವಳಿಯ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು ಅವರ ಮಗನ ಮದುವೆಯ ರಿಸೆಪ್ಷನ್ ಶನಿವಾರ ಸಾಗರದಲ್ಲಿ(13 ಮೇ 2023) ಇತ್ತು ಅಲ್ಲಿಗೆ ಭಾಗವಹಿಸಲು ಅರವಿಂದ ಚೊಕ್ಕಾಡಿ ಬರುತ್ತಾರೆ ನೀವು ಬನ್ನಿ ಅಂತ ನರಹರಿ ಅವರು ಆಹ್ವಾನಿಸಿದ್ದರು.
ಹಿಂದಿನ ದಿನ ಶುಕ್ರವಾರ ಬೆಳಿಗ್ಗೆ 10 ಕ್ಕೆ ಅರವಿಂದ ಚೊಕ್ಕಾಡಿ ಅವರು ಮದ್ಯಾಹ್ನ 3ಕ್ಕೆ ಆನಂದಪುರಂನಲ್ಲಿ ನೀವಿದ್ದರೆ ಮಾತಾಡಿ ಸೊರಬ ತಾಲ್ಲೂಕಿನ ಮುಟಗುಪ್ಪೆಯ ನರಹರಿ ಅವರ ಮನೆಗೆ ಹೋಗುವುದಾಗಿ ತಿಳಿಸಿದಾಗ ಶಿವಮೊಗ್ಗದ ನನ್ನ ಪ್ರಯಾಣ ರದ್ದು ಮಾಡಿ ಅವರಿಗಾಗಿ ಕಾಯುತ್ತಿದ್ದೆ.
4 ಗಂಟೆಗೆ ಅವರು ನನ್ನ ಕಛೇರಿ ತಲುಪಿದರು ಅವರ ಜೊತೆ ನರಹರಿ ಅವರ ಶ್ರೀಮತಿಯವರ ಆಪ್ತರಾದ ಮಂಗಳೂರಿನ ಶ್ರೀಮತಿ ಅನುಪಮ ಅವರು ಬಂದಿದ್ದರು, ಅರವಿಂದ ಚೊಕ್ಕಾಡಿ ಅವರಿಗೆ ನಮ್ಮ #ಮಲ್ಲಿಕಾ_ವೆಜ್ ರೆಸ್ಟೋರಾಂಟ್‌ನ ಪಿಲ್ಟರ್ ಕಾಫಿ ಯಾವತ್ತೂ ಪ್ರಿಯ ಆದ್ದರಿಂದ ನೀರುಳ್ಳಿ ದೋಸೆ ಜೊತೆ ಕಾಫಿಯ ಅತಿಥ್ಯದ ಜೊತೆ ಅವರಿಗೆ ಮತ್ತು ಶ್ರೀಮತಿ ಅನುಪಮ ಅವರಿಗೆ ಮಲೆನಾಡಿನ ಸಂಪ್ರದಾಯಿಕ ಜೋನಿ ಬೆಲ್ಲ ನೀಡಿದೆ.
ಅರವಿಂದ ಚೊಕ್ಕಾಡಿ ಅವರಿಗೆ ಖ್ಯಾತ ಪತ್ರಕರ್ತ ಆರ್.ಟಿ. ವಿಠ್ಠಲ ಮೂರ್ತಿ ಅವರ #ಇದೊಂತರ_ಆತ್ಮಕಥೆ ಪುಸ್ತಕ ಮತ್ತು ಶ್ರೀಮತಿ ಅನುಪಮ ಅವರಿಗೆ ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ನೀಡಿದೆ.
ಮರುದಿನವೇ (13 -ಮೇ -2023 ಶನಿವಾರ) ವಿಧಾನಸಭಾ ಚುನಾವಣೆ ಪಲಿತಾಂಶ ಇದ್ದಿದ್ದರಿಂದ ಅವರ ಅಭಿಪ್ರಾಯ ಕೇಳಿದೆ ಅವರು ವ್ಯಕ್ತಪಡಿಸಿದ್ದು ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮ ಬೀರಬಹುದು ಮತ್ತು ಬಿಟ್ಟಿ ಬಾಗ್ಯ ಎಂಬ ವಾಕ್ಯದಲ್ಲಿ ಅಡಗಿರುವ ಗೇಲಿ ಸರಿ ಅಲ್ಲ ಅಂದಿದ್ದರು.
ಶನಿವಾರದ ಪಲಿತಾಂಶ ಕಾಂಗ್ರೇಸ್ ಪಕ್ಷಕ್ಕೆ 136 ಶಾಸಕರನ್ನು ನೀಡಿದೆ.
ಶನಿವಾರ ಸಂಜೆ ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಂದರ್ ರಾಜ್ ಗೋಕರ್ಣದಿಂದ ಪುತ್ರನ ಕುಟುಂಬದ ಜೊತೆ ಬಂದಾಗ ಬರುವ ಮೇ 20 ನೇ ತಾರೀಖು ಶನಿವಾರ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿ ಅವರಿಗೆ ಆಹ್ವಾನಿಸಿರುವ ಬಗ್ಗೆ ಅವರು ಸಾಹಿತ್ಯ ಮತ್ತು ಜೀವನ ದೃಷ್ಟಿ ಎಂಬ ಉಪನ್ಯಾಸ ನೀಡುತ್ತಾರೆಂದು ತಿಳಿಸಿದ್ದಾರೆ.
Comments
Post a Comment