#ಕಳೆದ_2018ರ_ವಿಧಾನಸಭಾ_ಚುನಾವಣೆಯಲ್ಲಿ_ಶಿವಮೊಗ್ಗದಲ್ಲಿ_ಮೋದಿ_ಪ್ರಚಾರ_ಸಭೆ.
#ಪ್ರದಾನಿ_ಅವತ್ತು_ಜಿಲ್ಲೆಯ_ಅವರ_ಪಕ್ಷದ_ಅಭ್ಯರ್ಥಿಗಳನ್ನು_ಪರಿಚಯ_ಮಾಡಲಿಲ್ಲದ_ಬೇಸರ_ಅಭ್ಯರ್ಥಿಗಳಿಗಾಗಿತ್ತು.
#ಆ_ಚುನಾವಣೆಯಲ್ಲಿ_ಜಿಲ್ಲೆಯಿಂದ_ಆರು_ಶಾಸಕರು_ಆಯ್ಕೆ
#ಈ_ಬಾರಿಯ_2023ರ_ವಿಧಾನಸಭಾ_ಚುನಾವಣಾ_ಪ್ರಚಾರ_ಸಭೆ_ನಾಳೆ_ಅಯನೂರಿನಲ್ಲಿ (7-ಮೇ -2023)
#ಈ_ಭಾರಿ_ಬಿಜೆಪಿಯಿಂದ_ಎಷ್ಟು_ಶಾಸಕರು_ಆಯ್ಕೆ_ಆಗಬಹುದು?
#ಈ_ಬಾರಿಯ_ಜಿಲ್ಲೆಯ_ಬಿರುಬೇಸಿಗೆಯಲ್ಲಿ_ಪ್ರದಾನಿ_ಪ್ರಚಾರ_ಸಭೆಯಲ್ಲಿ_ಸಬಿಕರಿಗೆ_ನೀರಿನ_ಬಾಟಲಿಗೆ_ಅವಕಾಶವಿಲ್ಲ.
#ಈ_ಭಾರಿ_ಅವರ_ಪಕ್ಷದ_ಅಭ್ಯರ್ಥಿಗಳನ್ನು_ಪ್ರತ್ಯೇಕವಾಗಿ
#ಸಬೆಗೆ_ಪರಿಚಯಿಸಿ_ಮೋದಿ_ಮತ_ಕೇಳುತ್ತಾರಾ?
#ಶಿವಮೊಗ್ಗ_ಜಿಲ್ಲೆಯ_ಕಾಗೋಡು_ರೈತ_ಹೋರಾಟ_ದಲಿತ_ಹೋರಾಟ_ರೈತ_ಹೋರಾಟಗಳ_ಬಗ್ಗೆ
#ಈ_ಬಾರಿ_ಪ್ರದಾನಿಗೆ_ಮಾಹಿತಿ_ನೀಡುತ್ತಾರ?
#ಜಿಲ್ಲೆಯ_ಅರಣ್ಯಭೂಮಿ_ಬಗರ್_ಹುಕುಂ_ಶರಾವತಿ_ಮುಳುಗಡೆ_ಸಂತ್ರಸ್ಥರ_ಸಮಸ್ಯೆ
#ಹಂದಿಗೋಡು_ನಿಗೂಡ_ಕಾಯಿಲೆ_ಮಂಗನಕಾಯಿಲೆ_ಅಡಿಕೆ_ರೋಗ_ಬಾದೆ_ವಿದೇಶಿ_ಅಡಿಕೆ_ರಬ್ಬರ್_ಆಮದು_ನಿಷೇದಿಸುವ_ಬಗ್ಗೆ
#ಪ್ರದಾನಿಗೆ_ಅಭ್ಯರ್ಥಿಗಳು_ಮನವಿ_ನೀಡುವ_ದೈರ್ಯ_ತೋರುವರಾ ?
2018ರ ಚುನಾವಣಾ ಪ್ರಚಾರಸಭೆಗೆ ಶಿವಮೊಗ್ಗಕ್ಕೆ ಪ್ರದಾನಿ ಮೋದಿ ಬರುತ್ತಾರೆಂಬ ವಿಷಯವೇ ದೊಡ್ಡ ಸಂಭ್ರಮ ಸಡಗರ ಸುದ್ದಿ ಆಗಿತ್ತು ನನ್ನ ನೆನಪು ಸರಿ ಇದ್ದರೆ ಈ ಪ್ರಚಾರ ಸಭೆ ದಿನಾಂಕ 6- ಮೇ -2018 ಇರಬಹುದು, ನಾಳೆ 7-ಮೇ -2023 ರ ಭಾನುವಾರ ಶಿವಮೊಗ್ಗ ಜಿಲ್ಲೆಯ ಅಯನೂರಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರದಾನಿಗಳ ಚುನಾವಣಾ ಪ್ರಚಾರ ಸಭೆ ವ್ಯವಸ್ಥೆ ಆಗಿದೆ.
ಈ ಬಿರು ಬೇಸಿಗೆಯ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ತಾಪಮಾನ ಹಿಂದಿನ ಎಲ್ಲಾ ವರ್ಷಕ್ಕಿಂತ ಹೆಚ್ಚು ಆದರೆ ಪ್ರದಾನಿ ಪ್ರಚಾರ ಸಭೆಗೆ ಮೊಬೈಲ್ ಫೋನ್ ಒಯ್ಯಬಹುದಂತೆ ಆದರೆ ನೀರಿನ ಬಾಟಲ್ ಮಾತ್ರ ಯಾವ ಕಾರಣಕ್ಕೂ ಪ್ರವೇಶ ಇಲ್ಲವಂತೆ ಇದ್ಯಾವ ಸೆಕ್ಯುರಿಟಿ ಮುಂಜಾಗೃತೆ ಗೊತ್ತಿಲ್ಲ.
ಎರೆಡು ತಿಂಗಳ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಲ್ಲೂ ನೀರಿನ ಬಾಟಲ್ ಒಯ್ಯುವಂತೆ ಇರಲಿಲ್ಲ ಅಲ್ಲಿ ಒಳಗಡೆ ದೊಡ್ಡ ಪ್ರಮಾಣದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದೆ ಸಭಿಕರು ಹೈರಾಣಾಗಿದ್ದರು.
ಕಳೆದ ವಿದಾನ ಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವತ್ತಿನ ಅವರ ಭಾಷಣದಲ್ಲಿ ಹೈಲೈಟ್ ಆದ ಜೋಗ ಜಲಪಾತ, ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಳದಿ ಅರಸರು, ಶರಾವತಿ ನದಿಗೆ ತುಮರಿ ಸೇತುವೆ, ತುಂಗಾ ಪಾನ, ಸಂಸ್ಕೃತ ಗ್ರಾಮ ಮತ್ತೂರುಗಳ ಜೊತೆ ಜಿಲ್ಲೆಯ ಶಾಪವಾದ ಮಂಗನ ಕಾಯಿಲೆ, ಔಷದಿಯೇ ಕಂಡು ಹಿಡಿಯದ ಹಂದಿಗೋಡು ಕಾಯಿಲೆ, ಜಿಲ್ಲೆಯಲ್ಲಿ ಹುಟ್ಟಿದ ರೈತ -ದಲಿತ ಚಳವಳಿ, ಕಾಗೋಡು ರೈತ ಹೋರಾಟಗಳ ಮಾಹಿತಿ ಬಹುಶಃ ಪ್ರದಾನಿಗಳಿಗೆ ಗೊತ್ತೇ ಇರಲಿಲ್ಲ ಅವುಗಳ ಉಲ್ಲೇಖವಿಲ್ಲದ ಅವರ ಭಾಷಣದಲ್ಲಿ ಇದು ದೊಡ್ಡ ಕೊರತೆ ಅನ್ನಿಸಿತ್ತು.
ಚುನಾವಣಾ ಪ್ರಚಾರ ಸಭೆಯಲ್ಲಿ ಉಪಸ್ಥಿತರಿದ್ದ ಅವರ ಪಕ್ಷದ ಅಭ್ಯರ್ಥಿಗಳ ಹೆಸರು ಕ್ಷೇತ್ರಗಳನ್ನು ಪ್ರದಾನಿಗಳು ಉಚ್ಚರಿಸದೇ ಇದ್ದದ್ದು ಅವತ್ತು ಅಭ್ಯರ್ಥಿಗಳಿಗೆ ಬಿಸಿ ತುಪ್ಪ ಆಗಿತ್ತು.
ಆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು ಭದ್ರಾವತಿಯಲ್ಲಿ ಮಾತ್ರ ಕಾಂಗ್ರೇಸ್ ನ ಸಂಗಮೇಶ್ವರ್ ಗೆದ್ದಿದ್ದರು, ಕಾಂಗ್ರೇಸ್ ಪಕ್ಷದ ಅಧಿಕಾರದಲ್ಲಿ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಸೋತಿದ್ದರು.
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ.ಅಭ್ಯರ್ಥಿಗಳಾಗಿದ್ದ ಯಡೂರಪ್ಪ ಮತ್ತು ಈಶ್ವರಪ್ಪರಿಗೆ ಈ ಬಾರಿ ಟಿಕೇಟು ನಿರಾಕರಿಸಲಾಗಿದೆ
ಪ್ರದಾನಿಗಳ ಶಿವಮೊಗ್ಗ ಜಿಲ್ಲೆಯ ಎರಡನೇ ವಿಧಾನಸಭಾ ಚುನಾವಣೆ ಈ ಹಿಂದಿನಂತೆ ಉತ್ಸವ ಸಡಗರ ಸಂಭ್ರಮ ಕಾಣುತ್ತಿಲ್ಲ, ಆಡಳಿತ ವಿರೋಧಿ ಅಲೆಯಲ್ಲಿ ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರದಲ್ಲಿ ಸಮೀಕ್ಷೆಗಳು ಬಿಜೆಪಿಗೆ 2, ಜೆಡಿಎಸ್ 2 ಮತ್ತು ಕಾಂಗ್ರೇಸ್ 3 ಎನ್ನುತ್ತಿದೆ ಈ ಚಿತ್ರಣ ಪ್ರದಾನಿಗಳ ಬೇಟಿಯಿಂದ ಬದಲಾದೀತೆಂಬ ನಿರೀಕ್ಷೆ ಆ ಪಕ್ಷದಲ್ಲಿದೆ.
ಜಿಲ್ಲೆಯ ವಿಧಾನ ಸಭಾ ಬಿಜೆಪಿ ಅಭ್ಯರ್ಥಿಗಳಲ್ಲಿ ನನ್ನ ಸವಿನಯ ವಿನಂತಿ ಏನೆಂದರೆ ನೀವೆಲ್ಲರೂ ಸೇರಿ ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಶರಾವತಿ ಸಂತ್ರಸ್ಥರ ಭೂ ಸಮಸ್ಯೆ, ಬಗರ್ ಹುಕುಂ ರೈತರ ಅರಣ್ಯ ಭೂಮಿ ಒತ್ತುವರಿ, ಅಡಿಕೆ ಬೆಳೆಯ ರೋಗ, ವಿದೇಶಿ ಅಡಿಕೆ - ರಬ್ಬರ್ ಆಮದು ನಿಷೇದ, ಔಷದಿಯೇ ಕಂಡು ಹಿಡಿಯದ ಹಂದಿಗೋಡು ನಿಗೂಡ ಕಾಯಿಲೆ, ಮಂಗನ ಕಾಯಿಲೆಗಳ ಬಗ್ಗೆ ಪ್ರದಾನಿಗಳಿಗೆ ಒಂದು ಮನವಿ ನೀಡುವ ದೈರ್ಯ ಮಾಡಬಾರದೇಕೆ ?.
2018ರ ಪ್ರದಾನಿ ಪ್ರಚಾರ ಸಭೆಯ ಬಗ್ಗೆ ನನ್ನ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ https://arunprasadhombuja.blogspot.com/2023/05/blog-number-1498-2018-6-2018.html
Comments
Post a Comment