Blog number 1551.ಶೂದ್ರ ದಲಿತ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಹವ್ಯಕ ಬ್ರಾಹ್ಮಣ ಮುಖಂಡ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಅಡುಗೆ ಮನೆಯಲ್ಲಿ ಹೋಳಿಗೆ ಊಟ ಬಡಿಸಿದ ನೆನಪು.
#ಒಂದು ಘಟನೆ ನೆನಪಾಯಿತು
(23-ಮೇ-2017)
ಆಗ ನಾನು ಸಾಗರ ತಾಲ್ಲೂಕನ ಯುವ ಕಾಂಗ್ರೇಸನ ಅಧ್ಯಕ್ಷ ಹುದ್ದೆಯ ಆಕಾ೦ಕ್ಷಿ ಆಗಿದ್ದೆ ಆದರೆ ನಾಯಕರು ನನ್ನನ್ನ ಪ್ರದಾನ ಕಾಯ೯ದಶಿ೯ಯಾಗಿ ಎಲ್. ಟಿ.ತಿಮ್ಮಪ್ಪರನ್ನ ಅದ್ಯಕ್ಷರನ್ನಾಗಿ ನೇಮಿಸಿದ್ದರು.
ನಾವೆಲ್ಲ ಅತ್ಯುತ್ಸವದಿಂದ ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತಗಳಲ್ಲಿ ಸಂಘಟನೆಗಾಗಿ ಪ್ರವಾಸ ಹಮ್ಮಿಕೊಂಡಿದ್ದೆವು.
ಇಂತಹ ಸಂದಭ೯ದಲ್ಲಿ ಅಧ್ಯಕ್ಷರಾಗಿದ್ದ ಎಲ್.ಟಿ. ತಿಮ್ಮಪ್ಪರ ಮನೇಲಿ ಮಧ್ಯಾಹ್ನದ ಊಟ ನಿಗದಿ ಆಗಿತ್ತು, ನಮಗೆಲ್ಲ ಇರಸು ಮುರುಸು ಅಧ್ಯಕ್ಷರ ತಂದೆ ಮಾಜಿ ಶಾಸಕರು ಹಾಗೂ ಹವ್ಯಕ ಬ್ರಾಹ್ಮಣ ಮುಖಂಡರು ಅವರ ಮನೆಯಲ್ಲಿನ ಮಡಿ ನಮಗೆ ಅಪಥ್ಯ ಅವರಿಗೆ ಶೂದ್ರರಿಂದ ಮೈಲಿಗೆ ಅಂತ ನಾವೆಲ್ಲ ಆ ಬೋಜನ ಕೂಟ ನಿರಾಕರಿಸಿದೆವು ಆದರೆ ಯುವ ಕಾಂಗ್ರೇಸ್ ಅಧ್ಯಕ್ಷರು ನಮ್ಮ ಅನುಮಾನ ನಿರಾಕರಿಸಿ ತಮ್ಮ ಮನೇಲಿ ಅಂತಹದ್ದೇನಿಲ್ಲ ಬರಲೇ ಬೇಕು ಅಂತ ಹಠ ಹಿಡಿದರು.
ಆ ಮದ್ಯಾಹನ ಅವರ ಮನೇಲಿ ನಮಗೆಲ್ಲ ಅವರ ಅಡುಗೆ ಮನೇಲಿ ಕೂರಿಸಿ ಊಟ ಹಾಕಿ ತಮ್ಮಲ್ಲಿ ಜಾತಿಯತೆ ಆಚರಣೆ ಇಲ್ಲ ಅಂತ ತೋರಿಸಿದ್ದರು.
ಅವತ್ತು ಇವತ್ತಿನ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ತೀ.ನಾ.ಶ್ರೀನಿವಾಸ್, ನಗರಸಭಾ ಸದಸ್ಯರಾದ ಮಂಜು, ಮೈಖೆಲ್ ಎಲ್ಲಾ ಇದ್ದರು.
ಅವತ್ತಿನ ಯುವ ಕಾಂಗ್ರೇಸ್ ಅಧ್ಯಕ್ಷರು ಈಗ ಸಾಗರ ತಾಲ್ಲೂಕಿನ ಅಧ್ಯಕ್ಷರಾಗಿದ್ದಾರೆ.
Comments
Post a Comment