Blog number 1543. ತುಂಬೆ ಸುಬ್ರಾಯರು ಸಾಗರ ತಾಲ್ಲೂಕಿನ ಕಟ್ಟಾ ಕಾಂಗ್ರೇಸ್ ಮುಖಂಡರು, ಅಡಿಕೆ ಬೆಳೆ ಮೌಲ್ಯವರ್ಧನೆಗೆ ಕಾರಣಕರ್ತರು, ಹವ್ಯಕ ಬ್ರಾಹ್ಮಣ ಮುಖಂಡರು ಅವರ ಬಗ್ಗೆ ಜಿಗಳೆಮನೆ ಗಣಪತಿ ಭಟ್ ಅವರ ನೆನಪಿನ ಲೇಖನ ಓದಿ
#ನನ್ನ_ಲೇಖನ_ಸರಣಿ_ಭಾಗ_20_ರ_ಪರಿಣಾಮ
#ಬದರಿನಾರಾಯಣ್_ಅಯ್ಯಂಗಾರ್_ಆದರಿಸಿದ_ಸರಣಿ .
ತುಂಬೆ ಸುಬ್ರಾಯರೆಂಬ ಉಕ್ಕಿನ ಮನುಷ್ಯ, ಸ್ಥಳಿಯರ ನ್ಯಾಯ ಪಂಚಾಯಿತಿದಾರರು, ಕೈ ಬಾಯಿ ಸ್ವಚ್ಚವಾಗಿಟ್ಟುಕೊಂಡ, ಸಿದ್ಧಾಂತಕ್ಕೆ ತಕ್ಕನಾಗಿ ಬಾಳಿ ಬದುಕಿದ ಅವರು ಬದರಿನಾರಾಯಣ ಅಯ್ಯಂಗಾರರ ಜೀವದ ಗೆಳೆಯರಾಗಿದ್ದರು.
ಈ ಲೇಖನ ಓದಿ ಒಂದು ಕಾಲದ ಆರ್.ಎಸ್.ಎಸ್. ಪೂರ್ಣಾವಧಿ ಕಾರ್ಯಕತ೯ರಾಗಿದ್ದ, ಬರಹಗಾರ ಚಿಂತಕ ಮತ್ತು ತಮ್ಮ ಸ್ವಜಾತಿ ಮಠದ ಅನ್ಯಾಯದ ವಿರುದ್ದ ಸಮರ ಸಾರಿ ಜೈಲು ವಾಸ ಆದರೂ ಇನ್ನೂ ಹೆಚ್ಚಿನ ಧ್ವನಿ ಎತ್ತಿರುವ ಜಿಗಳೆ ಮನೆ ಗಣಪತಿ ಭಟ್ಟರು ಬರೆದ ಈ ಲೇಖನ ಮತ್ತು ಈ ಲೇಖನ ಬರೆಯಲು ನನ್ನ ಸರಣಿ ಲೇಖನ ಕಾರಣ ಅಂದಿದ್ದಾರೆ.
ಅವರ ಊರ ಶಾಲಾ ಕಾಯ೯ಕ್ರಮದಲ್ಲಿ ತುಂಬೆ ಸುಬ್ರಾಯರು ತನ್ನ 3 ಶಪಥ ಉಲ್ಲೇಖಿಸಿ ಭಾಷಣ ಮಾಡಿದಾಗ ಮೊದಲನೆಯದ್ದೇ ಬದರಿನಾರಾಯಣರನ್ನು ಮಂತ್ರಿ ಮಾಡುವುದು, ಎರಡನೆಯದ್ದು ಯಡ ಜಿಗಳೆ ಮನೆಗೆ ಪ್ರೌಡ ಶಾಲೆ, ಹಕ್ಕರೆ ತನಕ ಸುಸಜ್ಜಿತ ರಸ್ತೆ ಅಂದಿದ್ದನ್ನು ನೆನಪಿಸಿದ್ದಾರೆ ಅವರ 3 ಶಪಥವೂ ಈಡೇರಿದೆ.
ಸೋಷಿಯಲ್ ಮೀಡಿಯಾದಿಂದ ಏನೆಲ್ಲ ಪರಸ್ಪರ ವಿಚಾರ ವಿನಿಮಯ ಸಾಧ್ಯ ಎಂಬುದಕ್ಕೆ ಇದೊಂದು ಉದಾಹರಣೆ ಮತ್ತು ಅಚ್ಚರಿ ಕೊಡ.
https://arunprasadhombuja.blogspot.com/2021/05/20.html
ಜಿಗಳೆಮನೆ ಗಣಪತಿ ಭಟ್ಟರ ಲೇಖನ : -
ಸಾಗರದಲ್ಲೊಂದು ಮೆಡಿಕಲ್ ಅಥವಾ ಕನಿಷ್ಠ ಇಂಜಿನಿಯರಿಂಗ್ ಕಾಲೇಜನ್ನಾದರೂ ಸ್ಥಾಪಿಸಬೇಕೆಂಬ ದೂರದರ್ಶಿತ್ವದಿಂದ ಚಿಂತಿಸಿ ತುಂಭೆ ಆರ್ ಸುಬ್ರಾವ್ ಆವರು ಮಠದ ಹೆಸರಿನಲ್ಲಿ ಸಾಗರದ ಕಾಲೇಜಿನ ಹತ್ತಿರ ಎಂಟುಜನರೊಡನೆ ತಮ್ಮದೊಂದು ಪಾಲು ಹಣ ಹಾಕಿ ಜಮೀನು ಕೊಂಡಿಟ್ಟರು.
ಆವರು ಆ ಕಾಲದಲ್ಲಿ ಮೂರು ಸಂಕಲ್ಪ ಮಾಡಿದ್ದನ್ನು ಮಾಧ್ಯಮಿಕ ಶಾಲಾ ಕಾರ್ಯಕ್ರಮ ದಲ್ಲಿ ಭಾಷಣ ಮಾಡುವಾಗ ಹೇಳಿದ್ದರು.ಎ ಆರ್ ಬದರಿನಾರಾಯಣ ಅವರನ್ನು ಮಂತ್ರಿ ಮಾಡುವುದು, ಯಡಜಿಗಳೇಮನೆಯಲ್ಲಿ ಒಂದು ಪ್ರೌಡ ಶಾಲೆ ಸ್ಥಾಪಿಸುವುದು, ಸಾಗರದಿಂದ ತುಂಭೆ ಯವರೆಗೆ ಒಂದು ಒಳ್ಳೆಯ ರಸ್ತೆ ಮಾಡಿಸುವುದು. ಅವರು ಈ ಎಲ್ಲಾ ಸಂಕಲ್ಪ ಪೂರೈಸಿದ್ದರು.ಅಂತಹದೇ ಒಂದು ಸಂಕಲ್ಪ ಈ ಮೆಡಿಕಲ್ ಕಾಲೇಜ್ ಆಗಿದ್ದಿರ ಬೇಕು.
ತುಂಭೆಯಂತಹ ದುರ್ಗಮ ಬೆಟ್ಟ ಗುಡ್ಡಗಳ ಸಂದಿನಲ್ಲಿ ಇದ್ದ ಮನುಷ್ಯ ತಾನು ಒಬ್ಬನನ್ನು ಮಂತ್ರಿ ಮಾಡುವ ಸಂಕಲ್ಪ ವನ್ನು ಮೊದಲೇ ಬಹಿರಂಗ ಪಡಿಸಿ ಸಾಧಿಸಿ ತೋರಿಸಿದ್ದರು.ಇದು ಆಗಿ ಹೋಗುವ ಮಾತು ಎಂದು ಯಾರೂ ಒಪ್ಪಲು ಸಾಧ್ಯ ಇರಲಿಲ್ಲ.ಆ ಒಂದು ಕತೃತ್ವ ಶಕ್ತಿ ದಾಡ್ಯತೆ ಅವರಿಗಿತ್ತು.ಕೈಯಲ್ಲಿ ಯಾವ ಅಧಿಕಾರ ಇಲ್ಲದಿದ್ದರೂ ತುಂಭೆ ಸುಬ್ರಾಯ ರನ್ನು ಕರೆದು ಪಂಚಾಯತಿ ಮಾಡಿಸ್ತನೆ ಎಂದರೆ ಕೋರ್ಟ್ ಗೆ ಹೋಗ್ತೆ ನೆ ನೋಡು ಎಂಬಂತೆ ಜನ ಭಾವಿಸುತ್ತಿದ್ದರು.ಅಷ್ಟು ಪವರ್ ಪುಲ್ ವ್ಯಕ್ತಿತ್ವ.ಸ್ವಯಂಮೇವಾ ಮೃಗೆಂದ್ರತಾ ಎಂದರೆ ಸ್ವಸಾಮರ್ಥ್ಯದಿಂದ ರಾಜತ್ವ ಪಡೆದವರು.
ಇಂತಹ ಮಹನೀಯ ಮೆಡಿಕಲ್ ಕಾಲೇಜು ಸ್ಥಾಪಿಸಲು 3600 ರೂಗೆ ಕೊಂಡಿಟ್ಟ ಜಾಗ ಇವತ್ತು 21 ಕೋಟಿ ರೂಪಾಯಿ ಬೆಲೆಗೆ ಮಾರಲು ಪ್ರಚಾರ ಪತ್ರ ಹೊರಬಿದ್ದಿದೆ..ಐದು ಕೋಟಿ 20 ಲಕ್ಷ ರೂಪಾಯಿ ಆ ಜಮೀನಿನ ಮೇಲೆ ಕರ್ನಾಟಕ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆಂದು ಆರ್ಟಿಸಿ ಯಲ್ಲಿ ದಾಖಲಾಗಿದೆ.
ಆ ಮಹಾನುಭಾವರ ಸಂತಾನದವರೇ, ಅವರ ಪ್ರೀಯ ಅನುಯಾಯಿಗಳೇ, ಅವರೊರಿನ ಗ್ರಾಮಸ್ಥರೇ ಇಂತಹ ಅಮೂಲ್ಯ ಅಸ್ತಿಯನ್ನು ಮಾರಾಟ ಮಾಡಲು ಬೆಂಬಲಿಸುತ್ತಿದ್ದಾರೆಂದು ಹೇಳಲು ಖೇದವಾದರೂ ಅನಿವಾರ್ಯ. ಒಡಲಾಳದ ಸಂಕಟ ಹೇಳಿಸುತ್ತದೆ.ಊರು ಮನೆಯಲ್ಲಿ ನಿಷ್ಟುರಕ್ಕೆ ಎಡೆ ಮಾಡಿಕೊಡುವ ಈ ಮಾತು ನನ್ನಿಂದ ಬರಬಾರದಿತ್ತು.ಆದರೂ ಬಂದಿದೆ.ನೀರಿಗಿಳಿದವನಿಗೆ ಚಳಿಯೇನು, ಮಳೆ ಏನು?
ನಿಮ್ಮ ಹಿರಿಯರು ಮಾಡಿ ಇಟ್ಟ ಆಸ್ತಿ ಹೀಗೆ ಮಾರುವುದು ನಿಮ್ಗೆ ಇಷ್ಟವಾ ಎಂದು ಅವರ ಸಂತಾನಕ್ಕೆ ಸಂಬಂಧಿಸಿದವರನ್ನು ವಿಚಾರಿಸಲಾಯಿತು.ಅದಕ್ಕೆ ಅವರು ಹೇಳಿದ್ದು "ಗುರುಗಳು ಇಲ್ಲಿ ಕೊಟ್ಟರೆ ಮತ್ತೊಂದು ಕಡೆ ತೆಗೆದುಕೊಳ್ಳುತ್ತಾರೆ".
ಎಲ್ಲಿ ತೆಗೆದುಕೊಳ್ಖುತ್ತಾರೆ ಎಂದು ಕೊಂಡರೂ ಸಾಗರದಲ್ಲಿ ಮೆಡಿಕಲ್ ಕಾಲೇಜಿನ ಕನಸು ಕಂಡವರ ಇಚ್ಚೆ ನೆನಸಾಗುತ್ತದೆಯಾ.ಈ ಜಾಗಕೊಳ್ಳಲು ತಮ್ಮ ಪಾಲುಧಾರಿಕೆ ನೀಡಿದ ಎಲ್ ಟಿ ಹೆಗಡೆ,ಗೊರಮನೆ ಅಜ್ಜ ಮುಂತಾದವರು ಇನ್ನೂ ಜೀವಂತರಾಗಿದ್ದು ಅಸಹಾಯಕತೆಯಿಂದ ಕೈ ಕೈ ಹೊಸಕಿ ಕೊಳ್ಳುತ್ತಿದ್ದಾರೆ.
ಸಿಂಹದ ಹೊಟ್ಟೆಯಲ್ಲಿ ನರಿ ಹುಟ್ಟುವುದಿಲ್ಲ ಎನ್ನುತ್ತಾರೆ.ಸಿಂಹದ ಹೊಟ್ಟೆಯಲ್ಲಿ ಸಿಂಹವಂತೂ ಹುಟ್ಟಿಲ್ಲ ಎಂಬುದು ನನಗೆ ಖಾತ್ರಿ ಇದೆ.ಇದ್ದರೆ ಸ್ವಯಂ ಪ್ರಕಾಶಮಾನವಾಗಿರಲೇ ಬೇಕಾಗಿತ್ತು.ಹಿರಿಯರ ಅಸ್ತಿಯನ್ನು ಅಭಿವೃದ್ಧಿ ಮಾಡಲಾಗದಿದ್ದರೂ ಯಥಾಸ್ಥಿತಿ ಕಾಪಾಡುವಷ್ಟಕ್ಕಾದರೂ ಬೆಂಬಲಿಸುತ್ತಿದ್ದರು.ಅದನ್ನು ಹಾಳು ಮಾಡುವವರಿಗೆ ತಾವೇ ಮುಂದೆನಿಂತು ಬೆಂಬಲಿಸುವ ಕಾರ್ಯವಂತು ನಡೆಯಲು ಬಿಡುತ್ತಿರಲಿಲ್ಲ.
ಮಾಜಿ ಜಿಲ್ಲಾ ಪರಿಷತ್ತು ಸದಸ್ಯರಾದ ಅರುಣ್ ಪ್ರಸಾದ್ ಅವರು ಅವರ ಲೇಖನದಲ್ಲಿ ತುಂಭೆ ಸುಬ್ರಾಯ ರನ್ನು ನೆನಪಿಸಿ ನನ್ನ ಭಾವೋದ್ರೇಕ ಲೇಖನಕ್ಕೆ ಕಾರಣರಾಗಿದ್ದಾರೆ
Comments
Post a Comment