Skip to main content

Blog number 1505. ಆನಂದಪುರಂ ಇತಿಹಾಸ ಭಾಗ-10 ನವೀಕರಣದ ನೆಪದಲ್ಲಿ ಕಳೆದು ಹೋದ ಶಿವಮೊಗ್ಗ ಮೆಗಾನ್ ಆಸ್ಪತ್ರೆ ಎದುರಿನ ದಾನಿಗಳ ವಿವರ ತಾಮ್ರ ಪಲಕ. ಬದರಿನಾರಾಯಣ ಅಯ್ಯಂಗಾರರು ವಕೀಲಿ ವೃತ್ತಿ ತೊರೆಯಲು ಆ ಒಂದು ಘಟನೆ ಕಾರಣವಾಯಿತು.

#ಆನಂದಪುರಂ_ ಇತಿಹಾಸ_ಭಾಗ_10.

#ಬದರಿನಾರಾಯಣ್_ಅಯ್ಯಂಗಾರರು_ಶಿವಮೊಗ್ಗದಲ್ಲಿ_ಪ್ರಾರಂಬಿಸಿದ_ವಕೀಲ_ವೃತ್ತಿ

  #ವಕೀಲಿ_ವೃತ್ತಿ_ತೊರೆಯಲು_ಕಾರಣ_ಆದ_ಆ_ಪ್ರಕರಣ

#ಶಿವಮೊಗ್ಗದ_ಮೆಗ್ಗಾನ್_ಆಸ್ಪತ್ರೆ_ನಿಮಾ೯ಣಕ್ಕೆ_ದೊಡ್ಡ_ಮೊತ್ತದ_ದೇಣಿಗೆ_ನೀಡಿದ_ರಾಮಕೃಷ್ಣ_ಅಯ್ಯಂಗಾರರು

#ದೇಣಿಗೆ_ನೀಡಿದ_ಅಮೂಲ್ಯ_ದಾಖಲೆ_ವಿವರದ_ತಾಮ್ರದ_ಫಲಕ_ಈಗ_ಎಲ್ಲಿದೆ?


  ರಾಮ ಕೃಷ್ಣ ಆಯ್ಯಂಗಾರರ ಶ್ರೀಮ೦ತಿಕೆ, ಸಮಾಜದಲ್ಲಿ ಅವರು ಪಡೆದ ಘನತೆ ಗೌರವಗಳು ಅವರ ಮಕ್ಕಳಲ್ಲಿ ಅಹಂಕಾರ ಅಥವ ದುರ್ಜಟಗಳಿಗೆ ಕಾರಣವಾಗದ್ದು ಸೋಜಿಗ.
  ಅಯ್ಯಂಗಾರರ ಕುಟುಂಬದಲ್ಲಿ ಕಾಫಿ ಟೀ ಬಳಕೆ ಯಾವತ್ತೂ ಇರಲಿಲ್ಲ, ಬೆಳಿಗ್ಗೆ 9 ಕ್ಕೆ ತೆಳು ಮಜ್ಜಿಗೆ ನಂತರ ಸ್ನಾನ ಪೂಜೆ ನಂತರ ಉಪಹಾರ, ಬದರಿನಾರಾಯಣ ಅಯ್ಯಂಗಾರರು ಮಾತ್ರ ರಾಜಕಾರಣಿ ಆದ್ದರಿಂದ ಅಪರೂಪಕ್ಕೆ ಕಾಫಿ ಸೇವಿಸುತ್ತಿದ್ದರು.
    ಆ ಕಾಲದಲ್ಲಿ ಶಿವಮೊಗ್ಗದಲ್ಲಿ ಬ್ರಿಟಿಷ್ ವೈದ್ಯ ಮೆಗ್ಗಾನ್ ರ ಹೆಸರಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಲು ಮಹಾರಾಜರು ಯೋಜಿಸುತ್ತಾರೆ, ಆಗ ಮೈಸೂರು ಮಹಾರಾಜರ ಕನಸು ನನಸು ಮಾಡಲು ಜಿಲ್ಲಾ ಪ್ರಮುಖರು ಕೈಜೋಡಿಸಲು ಮುಂದಾಗುತ್ತಾರೆ ಮತ್ತು ಆ ಕಾಲದಲ್ಲೇ ಆನಂದಪುರದಲ್ಲಿ ರಾಮಕೃಷ್ಣ ಅಯ್ಯಂಗಾರರು ತಮ್ಮ ಪತ್ನಿ ಸ್ಮರಣಾಥ೯ ಸಾರ್ವಜನಿಕರಿಗೆ ಆಸ್ಪತ್ರೆ ನಿರ್ಮಿಸಿದ್ದರಿಂದ ಅವರೊಡನೆ ಚರ್ಚಿಸುತ್ತಾರೆ ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಆ ಕಾಲದಲ್ಲಿ ಅತ್ಯಂತ ದೊಡ್ಡ ಮೊತ್ತದ ದೇಣಿಗೆ (ಹತ್ತು ಸಾವಿರ) ನೀಡಿದ್ದರು ಆ ಕಾಲದಲ್ಲಿ ಮೆಗ್ಗಾನ್ ಆಸ್ಪತ್ರೆಯ ಎದರು ತಾಮ್ರದಲ್ಲಿ ಬರೆದ ದೇಣಿಗೆ ನೀಡಿದವರ ವಿವರ ಪಟ್ಟಿ ಇತ್ತು ಇತ್ತೀಚೆಗೆ ಆಸ್ಪತ್ರೆಯ ನವೀಕರಣದಲ್ಲಿ ಈ ಅಮೂಲ್ಯವಾದ  ಮಾಹಿತಿಯ ತಾಮ್ರದ ಬೋರ್ಡ್ ಯಾರೋ ಗುಜರಿಗೆ ತಾಮ್ರದ ಈ ಬೋರ್ಡ್ ಹಣದಾಸೆಗೆ ಮಾರಿಕೊಂಡಿದ್ದಾರೆಂದು ಹೇಳುತ್ತಾರೆ ಇದನ್ನು ಹುಡುಕುವ ಯಾವ ಪ್ರಯತ್ನವೂ ಜಿಲ್ಲಾ ರಾಜಕೀಯ ಪ್ರಮುಖರು ಮಾಡದಿರವುದು ದುರಾದೃಷ್ಟ.
  ಬದರಿನಾರಾಯಣ ಆಯ್ಯಂಗಾರರು ಪ್ರಾಥಮಿಕ ಶಿಕ್ಷಣ ಆನಂದಪುರಂ ನಲ್ಲಿ ಮಾಡುತ್ತಾರೆ ನಂತರ ತುಮಕೂರಿನಲ್ಲಿ ವಕೀಲಿ ಶಿಕ್ಷಣ ಪಡೆಯುತ್ತಾರೆ, ವಿದ್ಯಾಥಿ೯ ಜೀವನದಲ್ಲೇ ಕ್ವಿಟ್ ಇಂಡಿಯಾ ಚಳವಳಿ ಶಿವಮೊಗ್ಗದಲ್ಲಿ ಭಾಗವಹಿಸಿ ಜೈಲು ಅನುಭವಿಸುತ್ತಾರೆ.
  ದೇಶ ಪ್ರೇಮ, ನ್ಯಾಯದ ಪರ ಮತ್ತು ದೈವ ಭಕ್ತಿ ಅವರಲ್ಲಿ ಹುಟ್ಟಿನಿಂದ ಬಂದಿರುತ್ತದೆ ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರ೦ಭಿಸಿ ಪ್ರಖ್ಯಾತರಾಗುತ್ತಾರೆ ಆ ಸಂದರ್ಭದಲ್ಲೇ ನಡೆದ ಒಂದು ಘಟನೆ ಅವರಿಗೆ ತಮ್ಮ ವೃತ್ತಿ ತೊರೆಯಲು ಕಾರಣ ಆಗುತ್ತದೆ.
   
ಇವರು ಒಂದು ಕೇಸಿನಲ್ಲಿ ಗೆಲ್ಲುತ್ತಾರೆ ನಿಜಕ್ಕೂ ಅಪರಾದ ಮಾಡಿದವನನ್ನ ತಮ್ಮ ವೃತ್ತಿ ಚಾತುಯ೯ದಿಂದ ಖುಲಾಸೆ ಮಾಡುತ್ತಾರೆ ಆದರೆ ನಿರಪರಾದಿ ಇದರಿಂದ ಶಿಕ್ಷೆಗೆ ಗುರಿ ಆಗಿ ಜೈಲಿಗೆ ಹೋಗುವ ಪ್ರಸಂಗ ಇದು, ನಿರಪರಾದಿ ಬದರಿನಾರಾಯಣರ ಎದುರು ಬಂದಾಗ ದುಃಖದಲ್ಲಿ "ವಕೀಲರೆ ನೀವು ನೀರಪರಾಧಿ ಆದ ನನಗೆ ಜೈಲು ಶಿಕ್ಷೆ ಕೊಡಿಸಿ ಜೈಲು ಸೇರಬೇಕಾದ ಅಪರಾದಿನ ಖುಲಾಸೆ ಮಾಡಿಸಿದ್ದು ನ್ಯಾಯನಾ? ದೇವರು ಮೆಚ್ಚುತ್ತಾನ " ಎಂಬ ಮಾತು ಬದರಿನಾರಾಯಣರ ಹೃದಯಕ್ಕೆ ಚುಚ್ಚಿ ಘಾಸಿ ಮಾಡುತ್ತದೆ ಆಕ್ಷಣದಲ್ಲೇ ನಿರ್ದರಿಸಿ ಬಿಡುತ್ತಾರೆ  "ನಾಳೆಯಿಂದ ನಾನು ವಕೀಲಿ ವೃತ್ತಿ ಮಾಡುವುದಿಲ್ಲ" ಅಂತ ಅನೇಕ ಸಹದ್ಯೋಗಿಗಳು ಸಮಾದಾನ ಮಾಡಿದರೂ ಅವರ ತೀಮಾ೯ನ ಅಚಲವಾಗುತ್ತದೆ ಮಗನ ಈ ನಿರ್ದಾರ ತಂದೆ ರಾಮಕೃಷ್ಣ ಅಯ್ಯಂಗಾರರು ವಿರೋದಿಸುವುದಿಲ್ಲ.

#ನಾಳೆ_ಭಾಗ_11.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...