ಆನಂದಪುರಂ ಇತಿಹಾಸ ಭಾಗ_8
#ಆನಂದಪುರ೦ಗೂ_ಶೃಂಗೇರಿಮಠಕ್ಕೂ_ಇದ್ದ_ದೀಘ೯_ಸಂಬಂದ
#ಆನಂದಪುರಂದಿಂದ_ಪ್ರತಿ_ವರ್ಷ_ಎರೆಡು_ಟನ್_ಶ್ರೀಗಂದ_ಶೃಂಗೇರಿಗೆ
#ಇದಕ್ಕಾಗಿ_ಆನಂದಪುರಂನಲ್ಲಿ_2000_ಎಕರೆ_ಕಾಡು_ಅಯ್ಯಂಗಾರ್_ಕುಟುಂಬಕ್ಕೆ_ಮೈಸೂರು_ರಾಜರು_ನೀಡಿದ್ದರು.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಅಯ್ಯಂಗಾರರ ಕುಟುಂಬದಿಂದ ಜಿಪಿಎ ಹೊಂದಿದ ಟಿಂಬರ್ ವ್ಯಾಪಾರಿ ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೌತಮಪುರ ಮತ್ತು ಸಂಪಳ್ಳಿ ಭಾಗದಲ್ಲಿನ 2000 ಎಕರೆ ಕಾಡು ತನ್ನ ಮಾಲಿಕತ್ವದಲ್ಲಿದೆ ಅಲ್ಲಿನ ಮರ ಕಡಿತಲೆ ಮಾಡುತ್ತಾರಂತ 1998 ರಲ್ಲಿ ಸುದ್ದಿ ಹರಡಿತ್ತು.
ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಿಳಿದದ್ದು ಈ ಮಹತ್ವದ ವಿಚಾರ ಮತ್ತು ಏನೇ ಆದರೂ ಅರಣ್ಯ ಇಲಾಖೆ 2000 ಎಕರೆ ಟಿಂಬರ್ ಮಾಫಿಯಾ ಕೈಗೆ ಹೋಗುವುದಿಲ್ಲ ಎಂಬ ಅಭಯ
ಆಗ ಶಿವಮೊಗ್ಗದ ಸಂಯುಕ್ತ ಕರ್ನಾಟಕದ ಜಿಲ್ಲಾ ವರದಿಗಾರ ತಿಮ್ಮಪ್ಪ ಮತ್ತು ನಾನು ಅರಣ್ಯ ಇಲಾಖೆ ACF ಲಕ್ಷ್ಮೀನಾರಾಯಣ್ ಅವರ ಜೀಪಲ್ಲಿ ಸಂಪಳ್ಳಿ ಕಾಡಿಗೆ ಬೇಟಿ ನೀಡಿದ್ದೆವು, ತಿಮ್ಮಪ್ಪ ಈ ಬಗ್ಗೆ ಸಂಯುಕ್ತ ಕನಾ೯ಟಕದಲ್ಲಿ ವಿಸ್ತಾರ ವರದಿ ಮಾಡಿದ್ದರು, ನಂತರ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲೂ ವಿಷಯ ಪ್ರಸ್ತಾಪಿಸಿ 2000 ಎಕರೆ ಅರಣ್ಯ ರಕ್ಷಣೆಗೆ ಧ್ವನಿ ಮೂಡಿಸಿದ್ದು ಈಗ ನೆನಪು.
ಶಂಕರಾಚಾಯ೯ರಿಂದ ಸ್ಥಾಪಿಸಲ್ಪಟ್ಟು ಹಿಂದೂ ಧರ್ಮದ ದಕ್ಷಿಣ ಭಾರತದ ಪ್ರಮುಖ ಕೇಂದ್ರ, ಈ ಭಾಗದಲ್ಲಿ ಆಡಳಿತ ಮಾಡಿದ ಎಲ್ಲಾ ಅರಸರ ರಾಜಾಶ್ರಯ ಪಡೆದ ದಾರ್ಮಿಕ ಕೇಂದ್ರ ಹಾಗಾಗಿ ಶೃಂಗೇರಿ ಶಾರದಾಂಬಾ ದೇವಾಲಯ ಮತ್ತು ಮಠದಲ್ಲಿನ ನಿತ್ಯ ಪೂಜೆಗೆ ಶ್ರೀ ಗಂದವನ್ನು ಪ್ರತಿ ವರ್ಷ ಎರೆಡು ಟನ್ ಅಂದರೆ 2000 ಕೇಜಿ ಪಶ್ಚಿಮ ಘಟ್ಟದ ಅರಣ್ಯದಲ್ಲಿ ಸಂಗ್ರಹಿಸಿ ಶೃಂಗೇರಿಗೆ ತಲುಪಿಸುವ ಜವಾಬ್ದಾರಿಯನ್ನು ಆ ಕಾಲದಲ್ಲಿ ದಟ್ಟ ಅರಣ್ಯ ಹೊಂದಿದ್ದ ಮತ್ತು ಶ್ರೀ ಗಂಧ ಹೇರಳವಾಗಿದ್ದ ಆನಂದಪುರಂ ನ ಗೌತಮಪುರ ಮತ್ತು ಸಂಪಳ್ಳಿ ಭಾಗದ 2000 ಎಕರೆಯನ್ನು ದೈವ ಭಕ್ತರೂ, ಜಮೀನ್ದಾರರು ಮತ್ತು ಕೊಡುಗೈ ದಾನಿ ಜನಾನುರಾಗಿ ಆಗಿದ್ದ ಹಾಗೂ ಮೈಸೂರು ಅರಸರಿಗೆ ಆಪ್ತರಾಗಿದ್ದ ಅಯ್ಯಂಗಾರರ ಕುಟುಂಬಕ್ಕೆ ಮೈಸೂರು ಅರಸರು ನೀಡಿ ಆದೇಶ ಮಾಡಿದ್ದರು.
ಅನೇಕ ವರ್ಷ ಆನಂದಪುರಂ ನಿಂದ ಶೃಂಗೇರಿ ಮಠಕ್ಕೆ ಶ್ರೀಗಂದ ತಪ್ಪದೇ ಪೂಜೆಗೆ ಸಮರ್ಪಣೆ ಆಗಿದೆ, ಇದು ಆನಂದಪುರಂ ಗೂ ಶೃಂಗೇರಿ ಮಠಕ್ಕೂ ಇದ್ದ ಒಂದು ದೀಘ೯ ಕಾಲಿಕ ಐತಿಹಾಸಿಕ ಧಾರ್ಮಿಕ ಸಂಬಂದವಾಗಿತ್ತು ಆದರೆ ಇದು ಜನಮಾನಸದಿಂದ ಮರೆತ ಘಟನೆ ಕೂಡ.
ಸ್ವಾತಂತ್ರ್ಯ ನಂತರ ರಾಜರ ಆದೇಶ ನೇಪತ್ಯಕ್ಕೆ ಹೋದರು ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಶಾಸಕ, ಸಂಸದ ಮತ್ತು ಮಂತ್ರಿ ಮುಂತಾದ ಪ್ರಭಾವಿ ಸ್ಥಾನ ಪಡೆದರೂ ಅಯ್ಯಂಗಾರ್ ಕುಟುಂಬ 2000 ಎಕರೆ ಕಾಡು ನಾಶ ಮಾಡಿ ಲಾಭ ಮಾಡಿಕೊಳ್ಳಲಿಲ್ಲ.
ಮೈಸೂರು ಅರಸರ ಆದೇಶ, ಶೃಂಗೇರಿ ಮಠದ ಸೇವೆ ಮತ್ತು ಪ್ರಜಾಪ್ರಭುತ್ವ ಸರ್ಕಾರಗಳ ನೀತಿಗೆ ಚ್ಯುತಿ ಬಾರದಂತೆ ಘನವೆತ್ತ ಆದರ್ಶ ಜೀವನ ನಡೆಸಿದ ಅಯ್ಯಂಗಾರರ ಕುಟುಂಬದ ಬಗ್ಗೆ ಹೆಮ್ಮೆ ಇದೆ.
Comments
Post a Comment