Blog number 1538. ನಿಮಗೆ ಬೇಕಾದ ಪ್ಲೋರ್ ಕ್ಲೀನಿಂಗ್ ಪಿನಾಲ್ ನೀವೇ ತಯಾರಿಸಿಕೊಳ್ಳಿ ಕಡಿಮೆ ಧರದಲ್ಲಿ ಅತ್ಯುತ್ತಮ ಗುಣಮಟ್ಟದ ಪಿನಾಲ್ .
https://youtu.be/5QRliK0DK3I
#ನಿಮ್ಮ_ಬಳಕೆಯ_ಪ್ಲೋರ್_ಕ್ಲೀನರ್_ಪಿನಾಲ್_ನೀವೇ_ತಯಾರಿಸಿ.
#ಒಂದು_ಲೀಟರ್_ಆಸಲಿ_ಬೆಲೆ_ಕನಿಷ್ಟ_16_ರಿಂದ_ಗರಿಷ್ಟ_35_ರೂಪಾಯಿ_ಮಾತ್ರ
#ಮಾರುಕಟ್ಟೆಯಲ್ಲಿ_ಲೀಟರ್_120ರ_ತನಕ_ಇದೆ.
#ಅತ್ಯುತ್ತಮ_ಗುಣಮಟ್ಟದ_ಪ್ಲೋರ್_ಕ್ಲೀನಿಂಗ್_ಪಿನಾಲ್_ನಮ್ಮ_ಸಂಸ್ಥೆಗೆ_ನಾವೇ_ತಯಾರಿಸಿ_ಕೊಳ್ಳುತ್ತೇವೆ.
ನಮ್ಮ ಸಂಸ್ಥೆ ಮತ್ತು ನಮ್ಮ ಮನೆಗಳಲ್ಲಿ ಇರುವ ಶೌಚಾಲಯಗಳ ಸಂಖ್ಯೆ 66 ಮುಂದಿನ ದಿನಗಳಲ್ಲಿ ಹೆಚ್ಚುವರಿ 25 ಸೇರಿದರೆ ಹತ್ತಿರ ಹತ್ತಿರ 90 ದಾಟುತ್ತದೆ ಮತ್ತು ರೂಂ ಗಳು 36, ಕಲ್ಯಾಣ ಮಂಟಪ ರೆಸ್ಟೋರಾಂಟ್ ಹಾಲ್ ಗಳು ಮನೆಯ ರೂಂ ಗಳು ಇವುಗಳ ಸ್ವಚ್ಚತೆ ನಿರ್ವಹಣೆಗೆ ಪ್ರತಿ ನಿತ್ಯ 5 ಲೀಟರ್ ಪ್ಲೋರ್ ಕ್ಲೀನಿಂಗ್ ಪೆನಾಲ್ ಬೇಕು, ಮದುವೆಗಳಿದ್ದರೆ 10 ರಿಂದ 15 ಲೀಟರ್ ಬೇಕು.
ಬ್ಲಾಕ್ ಪಿನಾಲ್ ನಿತ್ಯ 1 ಲೀಟರ್ ಬೇಕೇ ಬೇಕು ಇದೆಲ್ಲ 12 ವರ್ಷದಿಂದ ಸರಬರಾಜು ಮಾಡುತ್ತಿದ್ದ ವ್ಯಕ್ತಿ ದುರಾಸೆಯಿಂದ ಕಳಪೆ ಪಿನಾಲ್ ಸರಬರಾಜು ಮಾಡಿ ಮೋಸ ಮಾಡುವ ಜೊತೆ ಜಗಳಗಂಟನಾದರಿಂದ ಅನಿವಾರ್ಯವಾಗಿ ನಾವೇ ನಮಗೆ ಬೇಕಾದ ಪಿನಾಲ್ ತಯಾರಿಸಿ ಕೊಳ್ಳುತ್ತಿದ್ದೇವೆ.
ಪ್ಲೋರ್ ಕ್ಲೀನಿಂಗ್ ಪಿನಾಲ್ ತಯಾರಿಸುವುದು ಸುಲಭ ಇದಕ್ಕೆ ಬೇಕಾಗುವ ಕಂಪೌಂಡ್ ( ಕ್ಲೀನಿಂಗ್ ಮತ್ತು ಸುಲಭವಾಗಿ ಹರಡುವ ಕೆಮಿಕಲ್ ) ಒಂದು ಲೀಟರ್ ಗೆ 120 ರೂಪಾಯಿ ಇದೆ ಇದಕ್ಕೆ 60 ರಿಂದ 120 ರೂಪಾಯಿ ಬೆಲೆಯ ನಿಮಗೆ ಬೇಕಾದ ಪ್ಲೇವರ್ ಸೇರಿಸಿ ಅದಕ್ಕೆ 15 ಲೀಟರ್ ನೀರು ಚೆನ್ನಾಗಿ ಬೆರೆಸಿದರೆ ನೀರು 15 ಲೀಟರ್ + ಕಂಪೌಂಡ್ ಒಂದು ಲೀಟರ್ ಸೇರಿ ಒಟ್ಟು 16 ಲೀಟರ್ ಪ್ಲೋರ್ ಕ್ಲೀನಿಂಗ್ ಪಿನಾಲ್ ಅಭ್ಯವಿದೆ.
ನಿನ್ನೆ ಸುಮಾರು 80 ಲೀಟರ್ ಪ್ಲೋರ್ ಕ್ಲೀನಿಂಗ್ ಪಿನಾಲ್ ನನ್ನ ಮಗ ಮತ್ತು ನನ್ನ ಆಪ್ತ ಸಿಬ್ಬಂದಿ ಕಣ್ಣೂರಿನ ನಾಗರಾಜ್ ಅರ್ಧ ಗಂಟೆಯ ಶ್ರಮದಲ್ಲಿ ತಯಾರಿಸಿದ ವಿಡಿಯೊ ಇಲ್ಲಿದೆ.
Comments
Post a Comment