Blog number 1531. ಶಿವಮೊಗ್ಗ ಅಬ್ಬಲಗೆರೆ ESSAR ಪೆಟ್ರೋಲ್ ಬಂಕ್ ಶುಭಾರಂಭ ಮಾಲಿಕರು ನನ್ನ ಅತ್ಯಾಪ್ತ ಹಂದಿಗೋಳ ಸಾಹೇಬರು (16- ಮೇ -2019)
ಇವತ್ತು ಶಿವಮೊಗ್ಗ ಸಮೀಪದ ಅಬ್ಬಲಗೆರೆಯಲ್ಲಿ ನನ್ನ ನೆಚ್ಚಿನ ಹಿರಿಯ ಗೆಳೆಯರಾದ ಹಂದಿಗೋಳ ಸಾಹೇಬರು ESSAR ಪೆಟ್ರೋಲ್ ಪಂಪ್ ಪ್ರಾರ೦ಬಿಸಿದ್ದಾರೆ.
ಒಂಕಾರ್ ಪೂಯೆಲ್ಸ್ ಹೆಸರಿನ ಈ ಬಂಕ್ ನ್ನ ಶಿವಮೊಗ್ಗದ ಹಾಲಿ ಶಾಸಕರು ಮಾಜಿ ಉಪಮುಖ್ಯಮ೦ತ್ರಿಗಳಾದ ಈಶ್ವರಪ್ಪ ಉದ್ಘಾಟಿಸಿದ್ದಾರೆ.
ಸಾಗರ ತಾಲ್ಲೂಕಿನ ಬೀಮನ ಕೋಣೆಯ ಭೂ ಅಭಿವೃದ್ಧಿ ಬ್ಯಾoಕ್ನಲ್ಲಿ ವ್ಯವಸ್ಥಾಪಕರಾಗಿದ್ದಾಗ ನಮಗೆಲ್ಲ ಸಾಲ ಸೌಲಭ್ಯ ನೀಡಿ ನಮ್ಮ ಕೃಷಿ ಮತ್ತು ವಾಣಿಜ್ಯ ವ್ಯವಹಾರಗಳಿಗೆ ತುಂಬಾ ಸಹಾಯ ಮಾಡಿದ್ದರು.
ಸೊರಬ, ಶಿಕಾರಿಪುರ ಭೂ ಅಭಿವೃದ್ಧಿ ಬ್ಯಾಂಕ್ ಲ್ಲಿ ಕೂಡ ಒಳ್ಳೆ ಹೆಸರು ಪಡೆದು ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಂತರ ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರಾಗಿ ನಂತರ ಬೆಂಗಳೂರು ಕೇಂದ್ರ ಬ್ಯಾ೦ಕಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಈಗ ಈ ಹೊಸ ಉದ್ದಿಮೆ ಸ್ಥಾಪಿಸಿದ್ದಾರೆ, ಒಂದು ವಿಶೇಷ ಎಂದರೆ ಆ ಕಾಲದಲ್ಲಿ ಇವರ ಸಹೊದ್ಯೋಗಿ ನಾಗಪ್ಪ ಇವಾಗಲೂ ಇವರ ಆಪ್ತರು ಅವರೂ ಇವತ್ತು ಅಲ್ಲಿ ಸಿಕ್ಕಿದರು.
ಹಂದಿಗೋಳ ಸಾಹೇಬರ ನೂತನ ಉದ್ದಿಮೆ ಯಶಸ್ವಿಯಾಗಲಿ ದೇವರು ಅವರಿಗೆ ಆಯುರಾರೋಗ್ಯ, ಆಯುಸ್ಸು, ಐಶ್ವಯ೯ ದಯಪಾಲಿಸಲಿ ಎಂದು ಹಾರೈಸಿ ಬಂದೆ.
Comments
Post a Comment