#ಮುಂದುವರಿದ_ಭಾಗ_2.
#ಸಾಗರದ_ಟಿಡಿಕೆ_ಪಂಡಿತ್_ಪೂರ್ಣ_ಹೆಸರು_ಕಮಲಾಕ್ಷ_ಪಂಡಿತ್
#ಕರ್ಮಚಾರಿ_ಪತ್ರಿಕೆ_ಸಂಪಾದಕರು
#ಸಮಾಜವಾದಿ_ಶಾಂತವೇರಿ_ಗೋಪಾಲಗೌಡ_ಎಸ್_ಎಸ್_ಕುಮುಟಾ_ಪಿ_ಪುಟ್ಟಯ್ಯರ_ಒಡನಾಡಿ
#ಕನ್ನಡ_ಸಮಾಜವಾದಿ_ಯುವಜನ_ಸಭೆಯ_ಮೊದಲ_ರಾಜ್ಯ_ಸಮ್ಮೇಳನ_ಯಶಸ್ವಿಗೆ_ಕಾರಣಕರ್ತರು.
#ಮೈಸೂರು_ರಾಜ್ಯದ_ಮೊದಲ_ಕನ್ನಡ_ಸಮಾವೇಶ
#ಹಿರಿಯ_ಸಮಾಜವಾದಿ_ಶಿವಮೊಗ್ಗದ_ಪ್ರಕೃತಿ_ಮುದ್ರಣಾಲಯದ_ಪಿ_ಪುಟ್ಟಯ್ಯ_ಪಂಡಿತರ_ಬಗ್ಗೆ_ಹೇಳಿದ್ದು.
ಕನ್ನಡ ಯುವಜನ ಸಭಾ ಸಮಾಜವಾದಿ ಪಕ್ಷದ ಅಂಗ ಸಂಸ್ಥೆಯೇ ಆಗಿತ್ತು, ಇದರ ರಾಜ್ಯ ಅಧ್ಯಕ್ಷರು ಆ.ನ.ಕೃ ಆಗಿದ್ದರು ಪ್ರದಾನ ಕಾಯ೯ದರ್ಶಿ ಕೋಣಂದೂರು ಲಿಂಗಪ್ಪನವರು, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಪಿ.ಪುಟ್ಟಯ್ಯನವರು.
ಆಗ ಪಿ. ಪುಟ್ಟಯ್ಯ, ಎಸ್.ಎಸ್.ಕುಮಟಾ ಮತ್ತು ಟಿ.ಡಿ.ಕೆ ಪಂಡಿತರು ತ್ರಿಮೂರ್ತಿಗಳಂತ ಗೆಳೆಯರು, ಟಿ.ಡಿ.ಕೆ. ಪಂಡಿತರು ಕಾಂಗ್ರೇಸ್ ಪಕ್ಷದ ಒಲವು ಉಳ್ಳವರಾದರೂ ಸಮಾಜವಾದಿ ಗೆಳೆಯರ ಜೊತೆ ಹೆಚ್ಚು ಒಡನಾಟ ಉಳ್ಳವರಾಗಿ ಆಗಿನ ಶಾಸಕರಾದ ಶಾಂತವೇರಿ ಗೋಪಾಲಗೌಡರ ನಿಕಟ ಸಂಪರ್ಕದಲ್ಲಿದ್ದರು ಅಂತ ಪುಟ್ಟಯ್ಯನವರು ಹೇಳುತ್ತಾರೆ.
ಈ ಸಂದರ್ಭದಲ್ಲಿ ಅಂದಾಜು 1955 ರಿಂದ 1957 ರಲ್ಲಿ ಸಾಗರದಲ್ಲಿ ಕನ್ನಡ ಯುವ ಜನ ಸಭಾದಿಂದ ಅನೇಕ ಕಾರ್ಯಕ್ರಮ ಈ ತ್ರಿಮೂರ್ತಿಗಳಿಂದ ನಡೆಯುತ್ತದೆ.
ಸಾಗರದಲ್ಲಿ ರಾಜ್ಯ ಮಟ್ಟದ ಮೊದಲ ಕನ್ನಡ ಸಮಾವೇಶ ಸಾಗರದ ಗಾಂಧಿ ಮಂದಿರದಲ್ಲಿ ಇವರೆಲ್ಲ ಸೇರಿ ಆಯೋಜಿಸುತ್ತಾರೆ,ಈ ಸಮಾವೇಶದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಆ.ನ.ಕೃ ವಹಿಸಲು ಆಮಂತ್ರಿಸುತ್ತಾರೆ.
ಆಗ ಕನ್ನಡ ಯುವ ಜನ ಸಭಾ ಕನ್ನಡ ಸ್ಥಾನಮಾನಕ್ಕಾಗಿ ಮತ್ತು ಮೈಸೂರು ರಾಜ್ಯದ ಭಾಷೆ ಕನ್ನಡ ಆಗಬೇಕು ಎಂಬ ಹೋರಾಟ ಕ್ರಮೇಣ ತಮಿಳು ಭಾಷಾ ವಿರೋಧಿ ಆಗಿ ಬದಲಾಗುವ ವಿಚಾರ ಆ.ನ ಕೃ ಅವರಿಗೆ ಸರಿ ಬರುವುದಿಲ್ಲ. ಅವರ ಮಾತೃ ಭಾಷೆ ತಮಿಳು ಆಗಿರುವುದರಿಂದ ಅವರು ಸಾಗರದ ರಾಜ್ಯ ಸಮಾವೇಶಕ್ಕೆ ಕೊನೆಯ ಕ್ಷಣದಲ್ಲಿ ಭಾಗವಹಿಸಲು ನಿರಾಕರಿಸುತ್ತಾರೆ ಮತ್ತು ಅಂತರ ಕಾಪಾಡಿಕೊಳ್ಳುತ್ತಾರೆ.
ಆಗ ಮೈಸೂರಿನಲ್ಲಿ ಉಪನ್ಯಾಸಕರಾಗಿದ್ದ ಕೆ.ಹೆಚ್.ಶ್ರೀನಿವಾಸ್ ಗೋಪಾಲಕೃಷ್ಣ ಅಡಿಗರನ್ನ ರಾಜ್ಯ ಸಮಾವೇಶದ ಅಧ್ಯಕ್ಷತೆಗೆ ಒಪ್ಪಿಸಿ ಕರೆತರುತ್ತಾರೆ.
ಸಮಾವೇಶದ ವೇದಿಕೆ, ಬ್ಯಾನರ್, ಕರಪತ್ರಗಳ ವಿನ್ಯಾಸ ತಯಾರಿ ಎಲ್ಲಾ ಟಿ.ಡಿ.ಕೆ. ಪಂಡಿತರದ್ದು,ಸ್ವಾಗತ - ನಿರೂಪಣೆ ಎಸ್.ಎಸ್. ಕುಮಟಾರದ್ದು
ಈ ಸಮಾವೇಶದಲ್ಲಿ ಕೆ.ಹೆಚ್ ಶ್ರೀನಿವಾಸರ ಭಾಷಣ ಹೆಚ್ಚು ಆಕರ್ಷಿತವಾಗಿತ್ತು ಈ ಸಮಾವೇಶದಿಂದಲೇ ಕೆ.ಹೆಚ್. ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಶಾಸಕರಾಗಲು ಮೆಟ್ಟಿಲಾಯಿತು ಮತ್ತು ಪ್ರತಿಷ್ಟಿತ ವಿದ್ಯಾ ಸಂಸ್ಥೆ ಲಾಲ್ ಬಹದ್ದೂರ್ ಕಾಲೇಜ್ ಪ್ರಾರಂಭಕ್ಕೆ ಕಾರಣ ಆಯಿತು ಈ ಸಮಾವೇಶದಲ್ಲಿ ಆಗ ಯುವಕರಾಗಿದ್ದ ಕಾಗೋಡು ತಿಮ್ಮಪ್ಪ ಕೂಡ ಭಾಗವಹಿಸಿದ್ದರು ಅಂತ ಪುಟ್ಟಯ್ಯ ನೆನಪಿಸಿಕೊಂಡರು.
Comments
Post a Comment